ತೋಟಗಾರಿಕೆ ಇಲಾಖೆ ಸಣ್ಣ ಮತ್ತು ದೊಡ್ಡ ರೈತರಿಗೆ ಸಹಾಯ ಧನವನ್ನು ನೀಡುತ್ತಿದೆ ತೆಂಗು ಲಿಂಬು ಸೀತಾಫಲ ಹೀಗೆ ಅನೇಕ ಬೆಳೆಯನ್ನು ಬೆಳೆಯಲು ಸರಕಾರದ ಯೋಜನೆ ಅಡಿ ತೋಟಗಾರಿಕೆ ಇಲಾಖೆಯಿಂದ ಸಹಾಯ ಧನ ನೀಡುತ್ತಿದೆ ಹಾಗೆಯೇ ಕ್ರಿಯಾ ಯೋಜನೆಗೆ ಅನುಗುಣವಾಗಿ ಸಣ್ಣ ಮತ್ತು ದೊಡ್ಡ ರೈತರಿಗೆ ಸಹಾಯಧನ ನೀಡುತ್ತಿದೆ ಅಷ್ಟೇ ಅಲ್ಲದೆ ಬೆಳೆ ಯನ್ನು ಬೆಳೆಯಲು ಬೀಜಗಳು ತೋಟಗಾರಿಕೆ ಇಲಾಖೆಯಲ್ಲಿ ಲಭ್ಯವಿದ್ದರೆ ರೈತರಿಗೆ ತೋಟಗಾರಿಕೆ ಇಲಾಖೆ ನೀಡುತ್ತದೆ

ಹಾಗೆಯೆ ಇಲ್ಲವಾದರೆ ಗುಣಮಟ್ಟದ ಸಸಿ ಅಥವಾ ಬೀಜಗಳನ್ನು ನೆಡ ಬಹುದು ಕೆಲಸಗಾರರ ಕೂಲಿ ಸಹ ಉದ್ಯೋಗ ಖಾತ್ರಿಯ ಯೋಜನೆ ಅಡಿ ಹಣವನ್ನು ಅಕೌಂಟ್ ಗೆ ತೋಟಗಾರಿಕೆ ಇಲಾಖೆ ನೀಡುತ್ತದೆ ನಾವು ಈ ಲೇಖನದ ಮೂಲಕ ಸಣ್ಣ ಮತ್ತು ದೊಡ್ಡ ರೈತರಿಗೆ ತೋಟಗಾರಿಕೆ ಇಲಾಖೆ ನೀಡುವ ಸಹಾಯ ಧನ ಹಾಗೂ ಸಹಾಯಧನ ಪಡೆಯಲು ಲಗತ್ತಿಸುವ ದಾಖಲೆಗಳ ಬಗ್ಗೆ ತಿಳಿದುಕೊಳ್ಳೋಣ.

ಕುಟುಂಬಗಳು ಬೆಳೆಯುತ್ತ ಹೊಂದಂತೆ ಸಣ್ಣ ಸಣ್ಣ ಹಿಡುವಳಿ ಹೊಂದಿರುವರು ಹೆಚ್ಚಾಗುತ್ತಾರೆ ಸಣ್ಣ ಹಿಡುವಳಿಯಲ್ಲಿ ನೀರಾವರಿ ಸೌಲಭ್ಯ ಒದಗಿಸಿ ತೆಂಗು ಲಿಂಬೆ ಸೀತಾಫಲ ಹೀಗೆ ಪ್ರತಿಯೊಬ್ಬರಿಗೂ ಬೆಳೆಯನ್ನು ಬೆಳೆಯಬೇಕು ಎಂಬ ಆಸೆ ಇರುತ್ತದೆ ಆದರೆ ಸರಕಾರದ ಯೋಜನೆ ಬಗ್ಗೆ ಜನರಿಗೆ ತಿಳಿಯುವುದಿಲ್ಲ ತೋಟಗಾರಿಕೆ ಇಲಾಖೆಯಿಂದ ಸಹಾಯಧನ ನೀಡುತ್ತಿದೆ ಆದರೆ ಸಹಾಯ ಧನ ಪಡೆಯಲು ನಮೂನೆ ಆರಾರ ಫಾರ್ಮ್ ಅನ್ನು ತೆಗೆದುಕೊಳ್ಳಬೇಕು

ಆ ನಮೂನೆಯಲ್ಲಿ ಕೆಲಸಗಾರರ ಹೆಸರು ಜಾಬ್ ಕಾರ್ಡ್ ನಂಬರ್ ಬರೆದು ಸಂಭಂದ ಪಟ್ಟ ಗ್ರಾಮ ಪಂಚಾಯತಿಯ ಪಿಡಿಯೋ ಅವರ ಹತ್ತಿರ ಸಹಿ ಮಾಡಿಸಿಕೊಳ್ಳಬೇಕು ನಂತರ ತೋಟಗಾರಿಕೆ ಇಲಾಖೆಗೆ ನಮೂನೆ ಆರು ಹಾಗೂ ರೇಷನ್ ಕಾರ್ಡ್ ಸಹ ನೀಡಬೇಕು ಹಾಗೆಯೇ ಕುಟುಂಬದ ಒಬ್ಬ ಸದಸ್ಯನಿಗೆ ಮಾತ್ರ ಸಿಗುತ್ತದೆ ಹೇಗೆ ಆಧಾರ ಕಾರ್ಡ್ ಬೇಕಾಗುತ್ತದೆ ಹಾಗೆಯೇ ನೀರಿನ ಬಳಕೆ ಪತ್ರ ಬೇಕಾಗುತ್ತದೆ ನೀರಿನ ಬಳಕೆ ಪತ್ರವನ್ನು ಸಂಭಂದ ಪಟ್ಟ ಗ್ರಾಮ ಲೆಕ್ಕಾಧಕಾರಿಗಳ ಹತ್ತಿರ ತೆಗೆದುಕೊಳ್ಳಬೇಕು.

ಹಾಗೆಯೇ ಇಪ್ಪತ್ತು ರೂಪಾಯಿಯ ಸ್ಟ್ಯಾಂಪ್ ಪೇಪರ್ ಅಲ್ಲಿ ಹೇಳಿಕೆ ಘೋಷಣೆ ಬರೆದ ಸಹಿ ಮತ್ತು ನೊಟ್ರಿ ಮಾಡಿಸಬೇಕು ಸ್ಟ್ಯಾಂಪ್ ಪೇಪರ್ ಅಲ್ಲಿ ಫಸ್ಟ್ ಪಾರ್ಟಿ ಅರ್ಜಿದಾರರ ಹೆಸರು ಇರಬೇಕು ಮತ್ತು ಸೆಕೆಂಡ್ ಪಾರ್ಟಿ ಹೆಸರು ತೋಟಗಾರಿಕೆ ಇಲಾಖೆ ಎಂದು ಇರಬೇಕು ಜೆರಾಕ್ಸ್ ಅಂಗಡಿಯಲ್ಲಿ ಸಿಗುವ ಅರ್ಜಿ ನಮೂನೆಯನ್ನು ತೆಗೆದುಕೊಳ್ಳಬೇಕು ಅದನ್ನು ಸಹ ಸಂಪೂರ್ಣವಾಗಿ ಭರ್ತಿ ಮಾಡಬೇಕು ಬ್ಯಾಂಕ್ ಅಕೌಂಟ್ ನ ಪ್ರತಿ ಸಹ ಬೇಕಾಗುತ್ತದೆ

ಜಮೀನಿನ ರೆಕಾರ್ಡ್ಸ್ ಬೇಕಾಗುತ್ತದೆ ಈ ಮೇಲಿನ ಎಲ್ಲ ದಾಖಲೆಗಳನ್ನು ತೆಗೆದುಕೊಂಡು ಹೋಗಿ ತಾಲೂಕಿನ ತೋಟಗಾರಿಕೆ ಕಚೇರಿಗೆ ಸಲ್ಲಿಸಬೇಕು ತೋಟಗಾರಿಕೆ ಇಲಾಖೆಯ ಕ್ಷೇತ್ರ ಪ್ರತಿನಿಧಿಯೂ ಅರ್ಜಿಯನ್ನು ಪರಿಶೀಲಿಸಿ ಅಧಿಕಾರಿಯ ಅನುಮೋದನೆ ಪಡೆದುಕೊಂಡು ಕ್ರಿಯಾ ಯೋಜನೆ ಸಿದ್ಧಪಡಿಸಿಕೊಳ್ಳುತ್ತಾರೆ.

ನಂತರ ಇಲಾಖೆಯ ಕಂಪ್ಯೂಟರ್ ಅಲ್ಲಿ ದಾಖಲಿಸಿದ ಮೇಲೆ ಅದರ ಪ್ರಕ್ರಿಯೆ ಶುರುವಾಗುತ್ತದೆ ನಂತರ ಕ್ಷೇತ್ರ ಪ್ರತಿನಿಧಿಯೂ ಸ್ಥಳಕ್ಕೆ ಬಂದು ಜಿ ಪಿ ಎಸ್ ಮಾಡುತ್ತಾರೆ ಹಣ ಬಿಡುಗಡೆಯೂ ಕ್ರಿಯಾ ಯೋಜನೆಗೆ ತಕ್ಕಂತೆ ಬಿಡುಗಡೆ ಮಾಡಲಾಗುತ್ತದೆ ಅಂದರೆ ಹೊಲದ ವಿಸ್ತೀರ್ಣ ಸಣ್ಣ ರೈತ ಹಾಗೂ ದೊಡ್ಡ ರೈತರ ಮೇಲೆ ಅವಲಂಬನೆಯಾಗಿ ಇರುತ್ತದೆ ಲಭ್ಯವಿದ್ದರೆ ತೋಟಗಾರಿಕೆ ಇಲಾಖೆಯವರೆ ಬೀಜಗಳನ್ನು ನೀಡುತ್ತಾರೆ ಇಲ್ಲದಿದ್ದರೆ ಗುಣಮಟ್ಟದ ಸಸಿ ಅಥವಾ ಬೀಜಗಳನ್ನು ನೆಡ ಬಹುದು

ಕೆಲಸಗಾರರ ಕೂಲಿ ಸಹ ಉದ್ಯೋಗ ಖಾತ್ರಿಯ ಯೋಜನೆ ಅಡಿ ಹಣವನ್ನು ಅಕೌಂಟ್ ಗೆ ಬರುತ್ತದೆ ಸಂಪೂರ್ಣ ಉದ್ಯೋಗ ಖಾತ್ರಿಯ ಯೋಜನೆ ಅಡಿ ತೋಟಗಾರಿಕೆ ಇಲಾಖೆ ಮಾಡುವ ಯೋಜನೆ ಇದಾಗಿದೆ ಕ್ರಿಯಾ ಯೋಜನೆಯ ವಾರ್ಷಿಕ ಹಣದ ಲಭ್ಯತೆಯ ಅನುಗುಣವಾಗಿ ಈ ಯೋಜನೆ ಕಾರ್ಯ ನಿರ್ವಹಿಸುತ್ತದೆ ದೊಡ್ಡ ರೈತರು ವಂತಿಕೆ ಪಾಲನ್ನು ಹಾಕುವುದು ಕಡ್ಡಾಯವಾಗಿ ಇರುತ್ತದೆ ಈ ಮೂಲಕ ತೋಟಗಾರಿಕೆ ಇಲಾಖೆಯಿಂದ ಸಹಾಯ ಧನ ಸಿಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!