Achievement in agriculture: ಕೃಷಿ ಇದು ನಮ್ಮ ದೇಶದ ಒಂದು ಅವಿಭಾಜ್ಯ ಅಂಗ ಎಂದು ಹೇಳಬಹುದು. ನಮ್ಮ ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ. ಎಲ್ಲರೂ ಹೆಚ್ಚಾಗಿ ಉದ್ಯೋಗಕ್ಕಾಗಿ ಬೆಂಗಳೂರನ್ನು ಹಿಡಿಯುತ್ತಾರೆ. ಅಲ್ಲಿಯೇ ಸೆಟಲ್ ಆಗುತ್ತಾರೆ. ಆದರೆ ಇಲ್ಲಿ ಒಬ್ಬ ದಂಪತಿಗಳು ಬೆಂಗಳೂರಿನಲ್ಲಿ ಕೆಲಸವನ್ನು ತಾವಾಗೇ ಬಿಟ್ಟು ಬಂದು ಹಳ್ಳಿಯಲ್ಲಿ ಕೃಷಿಯನ್ನು ಮಾಡಿ ಜೀವನ ನಡೆಸುತ್ತಿದ್ದಾರೆ. ಅಂತಹ ಅಪರೂಪದವರ ಬಗ್ಗೆ ನಾವು ಇಲ್ಲಿ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಈ ದಂಪತಿಗಳು ಮೊದಲು ಬೆಂಗಳೂರಿನಲ್ಲಿ ಕೆಲಸವನ್ನು ಬಿಟ್ಟು ಬಂದು ತೀರ್ಥಹಳ್ಳಿಯಲ್ಲಿ ಕೃಷಿಯನ್ನು ಆರಂಭಿಸಿದರು. ಮೊದಲು ಕುರಿ ಸಾಕಾಣಿಕೆಯನ್ನು ಆರಂಭಿಸಿದರು. ಇದರಿಂದ ಒಳ್ಳೆಯ ಯಶಸ್ಸು ಕಂಡ ನಂತರ ತರಕಾರಿ ಮತ್ತು ಹೂವಿನ ಬೆಳೆಗಳನ್ನು ಬೆಳೆಯಲು ಶುರು ಮಾಡಿದರು. ಹಾಗೆಯೇ ವಿವಿಧ ರೀತಿಯ ಅರಣ್ಯ ಗಿಡಗಳನ್ನು ಸಹ ಬೆಳೆಯುತ್ತಿದ್ದಾರೆ. ಇದರ ಜೊತೆ ಕೋಳಿ ಫಾರಂ ಕೂಡ ಶುರು ಮಾಡಿದ್ದಾರೆ. ಇದಕ್ಕೆ 5000ಕೋಳಿ ಮರಿ ಹಿಡಿಯುವ ಫಾರಂ ಶೆಡ್ ನ್ನು ತಯಾರಿ ಮಾಡಿಕೊಂಡಿದ್ದಾರೆ. ಎಲ್ಲಾ ಖರ್ಚುಗಳನ್ನು ತೆಗೆದು ಇದರಿಂದ ತಿಂಗಳಿಗೆ 40,000 ದಿಂದ 50,000 ರೂಪಾಯಿ ಆದಾಯ ಆಗುತ್ತದೆ.
ಹಾಗೆಯೇ ಮಾರಿಗೋಲ್ಡ್ ಜಾತಿಯ ಸೇವಂತಿಗೆ ಗಿಡವನ್ನು ಕಾಲು ಎಕರೆಗೆ ಸುಮಾರು 5000ಗಿಡವನ್ನು ಹಾಕಿದ್ದಾರೆ. ಸುಮಾರು ಮೂರು ತಿಂಗಳ ನಂತರ ಹೂವು ಬಿಡಲು ಶುರುವಾಗುತ್ತದೆ. ಇದರ ಜೊತೆಗೆ ಚೆಂಡು ಹೂವನ್ನು ಕೂಡ ಹಾಕಿದ್ದಾರೆ. ಕಾಲು ಎಕರೆಗೆ ಒಂದುವರೆ ಟನ್ ಹೂವು ಸಿಗುತ್ತದೆ. ಇದರಿಂದ ಖರ್ಚುಗಳನ್ನು ತೆಗೆದು ಸುಮಾರು ಒಂದು ಲಕ್ಷ ಆದಾಯವಾಗುತ್ತದೆ. ಹಾಗೆಯೇ 5ಗುಂಟೆ ಜಾಗದಲ್ಲಿ ತರಕಾರಿಗಳನ್ನು ಬೆಳೆದಿದ್ದಾರೆ. ಕಟಾವು ಮಾಡುವ ಸಮಯದಲ್ಲಿ ಗ್ರಾಹಕರಿಗೆ ವಾಟ್ಸಾಪ್ ಮಾಡಲಾಗುತ್ತದೆ. ಅವರೇ ಬಂದು ತೆಗೆದುಕೊಂಡು ಹೋಗುತ್ತಾರೆ. ಹಾಗೆಯೇ ಒಂದು ಎಕರೆ ಜಮೀನಿನಲ್ಲಿ ಪಚ್ ಬಾಳೆಯನ್ನು ಹಾಕಿದ್ದಾರೆ.
ಹಾಗೆಯೇ ಅಡಿಕೆ, ಕಾಳುಮೆಣಸು, ವೆನಿಲ್ಲಾ ಸಹ ಬೆಳೆದಿದ್ದಾರೆ. ನಂತರದಲ್ಲಿ ಒಂದು ಫ್ಲೋಟ್ ನಲ್ಲಿ ತೆಂಗು, ಚಿಕ್ಕು, ಮಾವು, ಲಿಂಬು ಮತ್ತು ಕಾಳುಮೆಣಸು ಹಾಕಿದ್ದಾರೆ. ಹಾಗೆಯೇ ಗದ್ದೆಯನ್ನು ಮಾಡಿ ಆಹಾರ ಬೆಳೆಯಾದ ಭತ್ತವನ್ನು ಬೆಳೆದಿದ್ದಾರೆ. ಇದನ್ನು ಮನೆಗೂ ಸಹ ಬಳಸುತ್ತಾರೆ. ಹಾಗೆಯೇ ಹೆಚ್ಚಾಗಿದ್ದನ್ನು ವಾಟ್ಸಾಪ್ ಮಾಡಿ ಮಾರಾಟ ಮಾಡುತ್ತಾರೆ. ಇವರ ಈ ಶ್ರಮದಿಂದ ತಿಳಿಯುವುದೇನೆಂದರೆ ಯಾವುದನ್ನೇ ಆಗಲಿ ಸಾಧ್ಯ ಎಂದು ಮಾಡಿದರೆ ಅದು ಸಾಧ್ಯವಾಗುತ್ತದೆ. ಯೋಚನೆ ಮಾಡಿ ಹೆದರಬಾರದು ಮತ್ತು ಧೈರ್ಯವಾಗಿ ಮುನ್ನುಗ್ಗಬೇಕು.