ಕರ್ನಾಟಕ ಲೋಕ ಸೇವಾ ಆಯೋಗದಿಂದ ನೂತನ ಅಧಿಸೂಚನೆ ಬಿಡುಗಡೆಯಾಗಿದೆ. ಭೂಮಾಪಕ ಉದ್ಯೋಗಕ್ಕೆ ನೇಮಕಾತಿ ಆರಂಭವಾಗಿದೆ . ಮಹಿಳಾ ಮತ್ತು ಪುರುಷ ಅರ್ಹ ವ್ಯಕ್ತಿಗಳು ಅರ್ಜಿ ಸಲ್ಲಿಕೆ ಮಾಡಬಹುದು. ಕರ್ನಾಟಕ ರಾಜ್ಯದ ಎಲ್ಲಾ ಜಿಲ್ಲೆಯವರು ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬೇಕು.

ಹುದ್ದೆಗಳು :-
ಇಲಾಖೆ :- ಭೂಮಾಪನ  ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಇಲಾಖೆ.
ಹುದ್ದೆಯ ಹೆಸರು :- ಭೂಮಾಪಕರು.
ಹುದ್ದೆಯ ಸಂಖ್ಯೆ :- 364
ವೃಂದ :- ಗ್ರೂಪ್ ‘ ಸಿ ‘ ಉಳಿಕೆ ಮೂಲ ವೃಂದ.
ವೇತನ ಶ್ರೇಣಿ :- ಪ್ರತಿ ತಿಂಗಳಿಗೆ ₹23,500 – ₹47650.

ದಿನಾಂಕಗಳು :-
ಅರ್ಜಿ ಸಲ್ಲಿಕೆ ಮಾಡಲು ಪ್ರಾರಂಭದ ದಿನಾಂಕ : 11/03/2024.
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ : 10/04/2024.

ಪರೀಕ್ಷೆ ದಿನಾಂಕ :-
ಕನ್ನಡ ಭಾಷೆ ಪರೀಕ್ಷೆ – 20/07/2024
ಸ್ಪರ್ಧಾತ್ಮಕ ಪರೀಕ್ಷೆ – 21/04/2024

ವಿದ್ಯಾರ್ಹತೆ :- ಭಾರತದಲ್ಲಿ ಕಾನೂನು ರೀತ್ಯಾ, ಸ್ಥಾಪಿತವಾದ ಯಾವುದೇ ವಿಶ್ವವಿದ್ಯಾಲಯದಲ್ಲಿ ಬಿ.ಇ. ( ಸಿವಿಲ್ ) / ಅಥವಾ ಬಿ.ಟೆಕ್. ( ಸಿವಿಲ್ )  ಅಥವಾ ಸಿವಿಲ್ ಎಂಜಿನಿಯರಿಂಗ್ ಡಿಪ್ಲೋಮಾದಲ್ಲಿ ಉತ್ತೀರ್ಣರಾಗಿ ಇರ್ಬೇಕು. ಅಥವಾ ಪದವಿ ಪೂರ್ವ ಶಿಕ್ಷಣ ( ಪಿಯುಸಿ ) ಅಥವಾ ಕೇಂದ್ರ ಶಿಕ್ಷಣ ಮಂಡಳಿ ಜರಗಿಸುವ 12ನೇ ತರಗತಿ ( ಸಿ.ಬಿ.ಎಸ್.ಸಿ. ಅಥವಾ ಐ.ಸಿ.ಎಸ್.ಸಿ. ) ಇವುಗಳ ವಿಜ್ಞಾನ ವಿಭಾಗದಲ್ಲಿ ಉತ್ತೀರ್ಣರಾಗಿ ಇರ್ಬೇಕು ಹಾಗೆ ಗಣಿತ ವಿಷಯದಲ್ಲಿ ಶೇಕಡ 60ಕ್ಕಿಂತ ಕಡಿಮೆ ಇಲ್ಲದಂತೆ ಅಂಕ ಗಳಿಸಿರಬೇಕು. ಅಥವಾ ಕರ್ನಾಟಕ ರಾಜ್ಯ ಸರ್ಕಾರದ ವೃತ್ತಿ ಶಿಕ್ಷಣ ಇಲಾಖೆ ನಡೆಸುವ ‘ ಲ್ಯಾಂಡ್ ಅಂಡ್ ಸಿಟಿ ಸರ್ವೆಯ ಪದವಿ ಪೂರ್ವ ಡಿಪ್ಲೊಮಾದಲ್ಲಿ ಉತ್ತೀರ್ಣರಾಗಿರಬೇಕು.ಅಥವಾ ಕರ್ನಾಟಕ ಸರ್ಕಾರದ ಉದ್ಯೋಗ ಮತ್ತು ತರಬೇತಿ ಇಲಾಖೆ ನಡೆಸುವ ” ಐ.ಟಿ.ಐ ಇನ್ ಸರ್ವೇ ಟ್ರೇಡ್’ನಲ್ಲಿ. ” ಉತ್ತೀರ್ಣರಾಗಿರಬೇಕು.

ಶುಲ್ಕ :-

  • ಸಾಮಾನ್ಯ ಅರ್ಹತೆ ಅಭ್ಯರ್ಥಿಗಳಿಗೆ : ₹600/-
  • ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳು : ₹300/-
  • ಮಾಜಿ ಸೈನಿಕ ಅಭ್ಯರ್ಥಿಗಳು : ₹50/-
  • ಪ. ಜಾತಿ / ಪ. ಪಂ, ಪ್ರವರ್ಗ1 ಮತ್ತು ಅಂಗವಿಕಲ ಅಭ್ಯರ್ಥಿಗಳಿಗೆ : ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
    ಶುಲ್ಕವನ್ನು ಆನ್’ಲೈನ್ ಮೂಲಕ ಸಲ್ಲಿಸಬೇಕು.

ಸ್ಪರ್ಧಾತ್ಮಕ ಪರೀಕ್ಷಾ ವಿಧಾನ :-
ಕರ್ನಾಟಕ ಸಾಮಾನ್ಯ ಸೇವೆಗಳು ( ಭೂಮಾಪನ, ಕಂದಾಯ ವ್ಯವಸ್ಥೆ ಶಾಖೆ ) ನೇಮಕಾತಿ ನಿಯಮಗಳು 1990 ತಿದ್ದುಪಡಿ ನಿಯಮ 2009 ಮತ್ತು 2013ರ ಪ್ರಕಾರ ಗ್ರೂಪ್ ಸಿ ಹುದ್ದೆಗಳಿಗಾಗಿ ನಡೆಸಲಾಗುವ ಸ್ಪರ್ಧಾತ್ಮಕ ಪರೀಕ್ಷೆಯ ಎರಡು ಪತ್ರಿಕೆಗಳನ್ನು ಒಳಗೊಂಡಿರುತ್ತದೆ. ಪ್ರತಿಯೊಂದು ಪತ್ರಿಕೆಯ ಗರಿಷ್ಠ 200 ಅಂಕಗಳೊಂದಿಗೆ ವಸ್ತುನಿಷ್ಠ, ಬಹು ಆಯ್ಕೆ ಮಾದರಿಯಲ್ಲಿ ಇರುತ್ತದೆ. ಎರಡು ಪತ್ರಿಕೆಗಳಿಗೆ ಸೇರಿ 4 ಗಂಟೆಗಳ ಪರೀಕ್ಷಾ ಸಮಯ ಇರುತ್ತದೆ.

ಸಂಸ್ಥೆಯ ಹೆಸರು :- ಕರ್ನಾಟಕ ಪಬ್ಲಿಕ್ ಸರ್ವೀಸ್.
ಕಮಿಷನ್ :- ( KPSC )
ಪೋಸ್ಟ್ ಸಂಖ್ಯೆ :- 364
ಉದ್ಯೋಗ ಸ್ಥಳ :- ಕರ್ನಾಟಕ
ಪೋಸ್ಟ್ ಹೆಸರು :- ಲ್ಯಾಂಡ್ ಸರ್ವೇಯರ್ .

KPSC ಹುದ್ದೆಗಳು  :-
ಭೂಮಾಪಕ  ( HK ) 100 ಪೋಸ್ಟ್ಗಳು.
ಭೂಮಾಪಕ  ( RPC ) 264 ಪೋಸ್ಟ್ಗಳು.

ವಯೋ ಮಿತಿ :-ಕರ್ನಾಟಕ ಲೋಕಸೇವಾ ಆಯೋಗದ ನೇಮಕಾತಿ ಅಧಿಸೂಚನೆಯ ಪ್ರಕಾರ, ಅರ್ಹರು 10/04/2024ರಂತೆ ಕನಿಷ್ಠ  18 ವರ್ಷಗಳು ಮತ್ತು ಗರಿಷ್ಠ 35 ವರ್ಷಗಳನ್ನು ಹೊಂದಿರಬೇಕು.

ವಯೋ ಮಿತಿ ಸಡಿಲಿಕೆ :-
ಪ್ರವರ್ಗ 2ಎ, 2ಬಿ, 3ಎ, 3ಬಿ ಗೆ ಸೇರಿದ ಅಭ್ಯರ್ಥಿಗಳಿಗೆ : 3 ವರ್ಷಗಳು.
ಪ. ಜಾತಿ / ಪ. ಪಂ, ಪ್ರವರ್ಗ1 ಅಭ್ಯರ್ಥಿಗಳಿಗೆ : 5 ವರ್ಷಗಳು.

PWD / ವಿಧವೆ ಅಭ್ಯರ್ಥಿಗಳಿಗೆ : 10 ವರ್ಷಗಳು.
ದಾಖಲೆಗಳು :-ಅರ್ಜಿ ಸಲ್ಲಿಕೆ ಮಾಡಲು ಅರ್ಹ ವ್ಯಕ್ತಿಯ ಇತ್ತೀಚಿನ ಪಾಸ್ಪೋರ್ಟ್ ಗಾತ್ರದ ಭಾವಚಿತ್ರ,  ಆಧಾರ್ ಕಾರ್ಡ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರ, ಶೈಕ್ಷಣಿಕ ದಾಖಲೆಗಳು ಬೇಕಾಗುತ್ತದೆ.

ಅರ್ಜಿ ಸಲ್ಲಿಕೆ ಮಾಡುವ ಲಿಂಕ್ :https://kpsc.kar.nic.in/notification.html

Leave a Reply

Your email address will not be published. Required fields are marked *