ಕೊರೊನಾ ವೈರಸ್ ಇಡೀ ದೇಶವನ್ನೆ ನಲುಗುವಂತೆ ಮಾಡಿದೆ. ಈಗ ಇದರ ಕುರಿತಾಗಿ ಕೋಡಿಹಳ್ಳಿ ಮಠದ ಶ್ರೀ ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿ ಅವರು ಭವಿಷ್ಯ ನುಡಿದಿದ್ದಾರೆ. ಕೊರೊನಾ ಹಳೇ ರೋಗ. ಮುಂದೆ ಗಾಳಿಯಿಂದ ಮತ್ತೊಂದು ರೋಗ ಬರಲಿದೆ ಎಂದು ಕೋಡಿಹಳ್ಳಿ ಶ್ರೀ ಭವಿಷ್ಯ ನುಡಿದಿದ್ದಾರೆ. ಏನಿದು ಮತ್ತೆ ಗಾಳಿಯಿಂದ ಇನ್ನೊಂದು ರೋಗ? ಕೋಡಿಹಳ್ಳಿ ಶ್ರೀಗಳು ಏನೆಂದು ಭವಿಷ್ಯ ನುಡಿದಿದ್ದಾರೆ ಎನ್ನುವುದನ್ನು ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.

ಕೊರೊನಾ ಮಹಾಮಾರಿಯಿಂದ ಭಾರತಕ್ಕೆ ಹೆಚ್ಚಿನ ಅಪಾಯವಾಗದಿದ್ದರೂ ಈ ಹೆಮ್ಮಾರಿಯ ಹಾವಳಿಗೆ ಸಿಲುಕಿ ಇಡೀ ಒಂದು ದೇಶವೇ ಅಳಿದು ಹೋಗಲಿದೆ. ವಿಪರೀತ ಮಳೆ, ಭೂಕಂಪ, ಸಮುದ್ರಗಳು ರೌದ್ರಾವತಾರ ತೋರಲಿವೆ ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ. ಕೊರೊನಾ ಇನ್ನಷ್ಟು ಹೆಚ್ಚಾಗುವ ಭೀತಿ ಇದೆ. ಕೊರೊನಾ ಗಾಳಿಯಿಂದ ಬರುವ ರೋಗವಲ್ಲ. ಮುಂದೆ ಗಾಳಿಯಿಂದ ಒಂದು ರೋಗ ಬರಲಿದೆ ಎಂದು ಹಾಸನ ಜಿಲ್ಲೆಯ ಕೋಡಿಮಠ ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ. ಕೊರೊನಾ ಹೊಸ ರೋಗ ಅಲ್ಲ. ಅದು ಹಳೇ ರೋಗ. ಮೊದಲು ಗಂಟಲು ರೋಗ ಎಂದು ಬರುತ್ತಿತ್ತು. ಈಗ ಕೊರೊನಾ ಅಂತಾ ಹೆಸರು ಬಂದಿದೆ. ಇದು ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಶ್ರೀಗಳು ಹೇಳಿದರು. ಮನುಷ್ಯ ಸ್ವಚ್ಛತೆ ಮರೆತ ಹಿನ್ನಲೆಯಲ್ಲಿ ಈ ರೋಗ ಹೆಚ್ಚಾಗಲಿದ್ದು ಆಷಾಢ ಮತ್ತು ಕಾರ್ತೀಕ ಮಾಸದಲ್ಲಿ ದೇಶದ ಗ್ರಾಮೀಣ ಪ್ರದೇಶದಲ್ಲಿ ಕೊರೊನಾ ಹೆಚ್ಚಾಗುವುದು ಎಂದು ಶ್ರೀಗಳು ಭವಿಷ್ಯ ನುಡಿದಿದ್ದಾರೆ.

ಶ್ರೀಮಂತ ಮಣಿಪುರದ ರಾಜನಿಗೆ ಮಗ ಹುಟ್ಟಿ ಸಮುದ್ರ ರಾಜ್ಯಭಾರ ಮಾಡುತ್ತಿದ್ದರೇ, ಯುದ್ಧವಿಲ್ಲದೆ ಸಾಮ್ರಾಜ್ಯ ಸರ್ವನಾಶವಾದಿತು ನೋಡಾ ಎಂದ ಸ್ವಾಮೀಜಿ ಅವರು ಯಾವುದೇ ಯುದ್ಧಗಳಿಲ್ಲದೆ ಸಮಾಜ ಸರ್ವನಾಶವಾಗುವ ಕಾಲವಿದು ಎಂದು ಸ್ವಾಮೀಜಿ ಭವಿಷ್ಯ ನುಡಿದರು. ದೇಶ ಹಾಗೂ ರಾಜ್ಯ ರಾಜಕೀಯದಲ್ಲಿ ವಿಪ್ಲವ ಆಗಲಿದೆ ದೇಶ ಹಾಗೂ ರಾಜ್ಯ ರಾಜಕೀಯದಲ್ಲಿ ವಿಪ್ಲವ ಆಗಲಿದೆ. ಇದಕ್ಕೆ ಬರುವ ಜನವರಿವರೆಗೆ ಸಮಯವಿದೆ ಎಂದು ಕೋಡಿಮಠದ ಶ್ರೀಗಳು ಭವಿಷ್ಯವಾಣಿ ನುಡಿದಿದ್ದಾರೆ. ಪರೋಕ್ಷವಾಗಿ ರಾಜ್ಯ ಮತ್ತು ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಆಗಲಿದೆ ಎಂದು ಹೇಳಿದ ಸ್ವಾಮೀಜಿ ಈಗಾಗಲೇ ಅಮೆರಿಕ ಸೇರಿದಂತೆ ಜಗತ್ತಿನ ಬಹುತೇಕ ಕಡೆ ರಾಜಕೀಯ ಬದಲಾವಣೆ ಆಗುತ್ತಿವೆ. ಇದೇ ರೀತಿ ನಮ್ಮ ರಾಜ್ಯ ಹಾಗೂ ದೇಶದಲ್ಲಿ ಕೂಡಾ ರಾಜಕೀಯ ವಿಪ್ಲವ ಆಗಲಿದೆ ಎಂದು ಸ್ವಾಮೀಜಿ ಭವಿಷ್ಯ ನುಡಿದರು. ಸಿಎಂ ಬಿಎಸ್​ವೈ ಭವಿಷ್ಯದ ಬಗ್ಗೆ ಕೇಳಿದ ಪ್ರಶ್ನೆಗೆ ಒಬ್ಬೊಬ್ಬರ ಬಗ್ಗೆ ಹೇಳಲ್ಲ ಎಂದು ಶ್ರೀಗಳು ಉತ್ತರಿಸಿದರು.

ಕೊರೊನಾ ಸೋಂಕಿನಿಂದಾಗಿ ದೇಶ-ವಿದೇಶಗಳಲ್ಲಿ ಹೊಸ ಶಾಸನಗಳು ರಚನೆಯಾಗಲಿದ್ದು, ಸೋಂಕಿಗೆ ಪ್ರಕೃತಿಯಿಂದಲೇ ಮದ್ದು ದೊರೆಯಲು ಸಾಧ್ಯ ಎಂದು ಕೋಡಿಮಠದ ಶ್ರೀಗಳು ಪುನರುಚ್ಛರಿಸಿದ್ದಾರೆ .

Leave a Reply

Your email address will not be published. Required fields are marked *