ವಿರಾಟ್ ಕೊಹ್ಲಿ ಮತ್ತು ಎಬಿಡಿ ವಿಲಿಯರ್ಸ್ ಇವರನ್ನು ಐಪಿಎಲ್ ನಿಂದ ಬ್ಯಾನ್ ಮಾಡಿ ಎಂದು ಕೆ. ಎಲ್.ರಾಹುಲ್ ಹೇಳಿದ್ದಕ್ಕೆ ಕಾರಣ ಏನೆಂದು ನಾವು ಇಲ್ಲಿ ತಿಳಿಯೋಣ.
ಆರ್ ಸಿ ಬಿ ತಂಡದ ವಿರಾಟ್ ಕೊಹ್ಲಿ ಮತ್ತು ವಿಕೆಟ್ ಕೀಪರ್ ನ್ನು ಐಪಿಎಲ್ ಕ್ರಿಕೆಟಿನಿಂದ ಬ್ಯಾನ್ ಮಾಡಿ ಎಂದು ಇನ್ನೊಂದು ತಂಡದ ನಾಯಕ ಕೆ ಎಲ್ ರಾಹುಲ್ ಹೇಳಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರಾಹುಲ್ ಅವರು ಬ್ರಾಂಡ್ ಪ್ರಮೋಷನ್ ಗೆ ಇನ್ಸ್ಟಾಗ್ರಾಮ್ ನಲ್ಲಿ ಅಭಿಮಾನಿಗಳು ಲೈವ್ ಚಾಟ್ ನಡೆಸಿದ್ದರು. ಆಗ ನೀವು ಐಪಿಎಲ್ ನಲ್ಲಿ ಯಾವುದಾದರೂ ಒಂದು ನಿಯಮ ಬದಲಿಸುವುದಿದ್ದರೆ ಯಾವ ನಿಯಮವನ್ನು ಬದಲಿಸುತ್ತೀರಿ” ಎಂದು ಕೇಳಿದಾಗ ನಕ್ಕು ವಿರಾಟ್ ಅವರು ರಾಹುಲ್ ಅವರನ್ನು ಮುಂದಿಟ್ಟರು.
ಪ್ರತಿಕ್ರಿಯೆ ನೀಡಿದ ರಾಹುಲ್ ಅವರು ನಾನು ಯೋಚಿಸಬಹುದಾದ ಒಂದು ನಿಯಮ ಎಂದರೆ 100ಮೀಟರ್ ಗಿಂತ ಹೆಚ್ಚು ದೂರದಲ್ಲಿ ಸಿಕ್ಸರ್ ಹೊಡೆದಾಗ ಅದಕ್ಕೆ ಹೆಚ್ಚಿನ ರನ್ ನೀಡಬೇಕು. ಹಾಗೆಯೇ ವಿರಾಟ್ ಕೊಹ್ಲಿ ಮತ್ತು ಎ ವಿ ಡಿ ವಿಲಿಯರ್ಸ್ ಅವರನ್ನು ಬ್ಯಾನ್ ಮಾಡುವೆ. ಈಗಾಗಲೇ ಟೂರ್ನಿಯಲ್ಲಿ ಅತಿ ಹೆಚ್ಚು ದಾಖಲೆಗಳನ್ನು ಬರೆದಿದ್ದಾರೆ. 5000ರಕ್ಕೂ ಅಧಿಕ ರನ್ ಗಳನ್ನು ಗಳಿಸಿದ್ದಾರೆ. ಇವರಿಬ್ಬರೂ ಜೊತೆಗೆ ದಾಖಲೆಯಾಗಿ 3000ಕ್ಕೂ ಹೆಚ್ಚು ರನ್ ಗಳನ್ನು ಗಳಿಸಿದ್ದಾರೆ.
ಐಪಿಎಲ್ ಇತಿಹಾಸದಲ್ಲಿ 10 ಸೆಂಚುರಿಗಳನ್ನು ಹೊಡೆದಿರುವ ಏಕೈಕ ಜೋಡಿ ಇದಾಗಿದೆ.ಕೊಲ್ಕತ್ತಾ ನ್ಯೆಟ್ ರೈಡರ್ಸ್ ವಿರುದ್ಧ ಕೊನೆಯ ಮ್ಯಾಚ್ ನಲ್ಲಿ ಡಿ ವಿಲಿಯರ್ಸ್ ಅವರು 33 ಎಸೆತಗಳಲ್ಲಿ 73ರನ್ ಗಳನ್ನು ಗಳಿಸಿದ್ದಾರೆ.ಬರೀ ಇವರೇ ಆಡಿದರೆ ಹೇಗೆ ಇನ್ನುಳಿದ ಯುವ ಆಟಗಾರರಿಗೂ ಅವಕಾಶ ಸಿಗಲಿ” ಎಂದಿದ್ದಾರೆ. ಅಕ್ಟೋಬರ್ 15 2020 ರ ಮ್ಯಾಚ್ ನ ಬಗ್ಗೆ ಕೊಹ್ಲಿ ಮಾತನಾಡಿದಾಗ ಇದಕ್ಕೆ ಉತ್ತರಿಸಿದ ರಾಹುಲ್ “ನಾವು ಈ ಟೂರ್ನಿಯಲ್ಲಿ ಗೆದ್ದಿರುವುದು ಆರ್ ಸಿ ಬಿ ವಿರುದ್ಧ ಮಾತ್ರ.ಇಂದಿನ ಪಂದ್ಯದಲ್ಲೂ ಆರ್ ಸಿ ಬಿ ಯವರು ಒಂದೆರಡು ಕ್ಯಾಚ್ ಬಿಟ್ಟರೆ ಉತ್ತಮ ಆಗಿರುತ್ತದೆ”ಎಂದಿದ್ದಾರೆ.