ನಮ್ಮ ಶರೀರದಲ್ಲಿ ಕಿಡ್ನಿ ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ. ಏಕೆಂದರೆ ಇದು ಶರೀರದ ವಿಷಪದಾರ್ಥಗಳನ್ನು ಸೋಸುತ್ತದೆ. ಇದು ಆರೋಗ್ಯವಾಗಿರಲು ಮುಖ್ಯ ಕಾರಣ. ಹಾಗೆಯೇ ಇದು ಕೆಂಪು ರಕ್ತಕಣಗಳನ್ನು ಹೆಚ್ಚಿಸುತ್ತದೆ. ಕಿಡ್ನಿ ಸರಿಯಾಗಿ ಕೆಲಸ ಮಾಡದಿದ್ದರೆ ಮೂತ್ರಪಿಂಡದ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ನಾವು ಇಲ್ಲಿ ಕಿಡ್ನಿಯಲ್ಲಿ ಅಪಾಯ ಇದ್ದರೆ ಉಂಟಾಗುವ ಲಕ್ಷಣಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಮೊದಲನೆಯದಾಗಿ ಕಿಡ್ನಿಯ ಸಮಸ್ಯೆ ಇರುವವರು ಯಾವಾಗಲೂ ಬಲಹೀನರಂತೆ ಇರುತ್ತಾರೆ. ಇದರಿಂದ ರಕ್ತಹೀನತೆ ಸಮಸ್ಯೆ ಉಂಟಾಗುತ್ತದೆ. ಕೆಂಪು ರಕ್ತಕಣಗಳು ಕಡಿಮೆ ಆಗುತ್ತವೆ. ಇದರಿಂದ ಮೆದುಳು ಕೆಲಸ ಮಾಡದೇ ಸುಸ್ತಾದ ರೀತಿ ಕಾಣುತ್ತಾರೆ. ಕಿಡ್ನಿ ಸರಿಯಾಗಿ ಕೆಲಸ ಮಾಡುತ್ತದೆಯೋ ಇಲ್ಲವೋ ಎಂದು ತಿಳಿಯಲು ಮೂತ್ರದ ಬಣ್ಣವನ್ನು ನೋಡಬೇಕು. ಹಳದಿ ಬಣ್ಣದ ಮೂತ್ರ ಇದ್ದರೆ ದೇಹದಲ್ಲಿ ರಕ್ತ ಇರುತ್ತದೆ. ಗೋಧಿಬಣ್ಣ ಅಥವಾ ಕೆಂಪುಬಣ್ಣದಲ್ಲಿ ಇದ್ದರೆ ಮೂತ್ರಪಿಂಡಗಳು ಪ್ರಮಾದದಲ್ಲಿ ಇದೆ ಎಂದು ಅರ್ಥ.
ಹಾಗೆಯೇ ಹೊಟ್ಟೆನೋವು ಹೆಚ್ಚಾಗಿ ಕಂಡು ಬರುತ್ತದೆ. ಹೆಚ್ಚಾಗಿ ಕಣ್ಣುಗಳು ಉರಿಯುತ್ತವೆ. ಹಾಗೆಯೇ ನಿದ್ರಾಹೀನತೆ ಸಮಸ್ಯೆ ಕೂಡ ಆಗುತ್ತದೆ. ಚರ್ಮವನ್ನು ಕೆರೆದಾಗ ಚರ್ಮ ಒಣಗಿದರೆ ಕಿಡ್ನಿಯ ಸಮಸ್ಯೆ ಇದೆ ಎಂದು ತಿಳಿಯಬಹುದು. ಹಾಗೆಯೇ ಕಿಡ್ನಿಗಳು ಇರುವ ಬೆನ್ನು ಪ್ರಾಂತ್ಯದಲ್ಲಿ ಚುಚ್ಚಿದ ರೀತಿ ಅನುಭವ ಆಗುತ್ತದೆ. ಹಾಗೆಯೇ ಕಾಲುಗಳಲ್ಲಿ ಹೆಚ್ಚಾಗಿ ನೋವು ಕಾಣಿಸಿಕೊಳ್ಳುತ್ತದೆ. ಬೆನ್ನಿನಲ್ಲಿ ಸಹ ನೋವು ಕಾಣಿಸಿಕೊಳ್ಳುತ್ತದೆ. ನಾಲಿಗೆಯ ಮೇಲೆ ರುಚಿ ನೋಡುವ ಲಕ್ಷಣವೂ ಇರುವುದಿಲ್ಲ. ಹಾಗೆಯೇ ಕೈಗಳು ಮತ್ತು ಕಾಲುಗಳು ಊತಕ್ಕೆ ಶುರುವಾಗುತ್ತವೆ.
ಯಾರಾದರೂ ಉಸಿರಾಡುವಾಗ ತುಂಬಾ ಕಷ್ಟಪಟ್ಟರೆ ಅಂತಹವರಿಗೂ ಕಿಡ್ನಿ ಸಮಸ್ಯೆ ಇರುತ್ತದೆ. ಹಾಗೆಯೇ ಜ್ಞಾಪಕ ಶಕ್ತಿ ಕಡಿಮೆ ಆಗುತ್ತದೆ. ಹೆಚ್ಚಾಗಿ ಚಳಿ ಆಗುತ್ತದೆ. ಇವೆಲ್ಲ ಲಕ್ಷಣಗಳು ಇದ್ದರೆ ಕಿಡ್ನಿಯನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಒಳ್ಳೆಯದು. ಯಾರೇ ಆಗಲಿ ದಿನಕ್ಕೆ ನಾಲ್ಕರಿಂದ ಐದು ಲೀಟರ್ ನಷ್ಟು ನೀರನ್ನು ಕುಡಿಯಬೇಕು. ಇದರಿಂದ ಕಿಡ್ನಿಯ ಯಾವುದೇ ಸಮಸ್ಯೆ ಬರುವುದಿಲ್ಲ. ಹಾಗೆಯೇ ಕಿಡ್ನಿಗೆ ಸಂಬಂಧಿಸಿದ ಆಹಾರಗಳನ್ನು ಸೇವನೆ ಮಾಡಬೇಕು.