ನಿಮ್ಮ ದೇಹದಲ್ಲಿ ಯಾವ ಅಂಗ ಮುಖ್ಯ ಎಂದು ಕೇಳಿದರೆ ಹೇಳುವುದು ಕಷ್ಟ. ಏಕೆಂದರೆ ಆರೋಗ್ಯವಾಗಿ ಬದುಕಲು ಪ್ರತಿಯೊಂದು ಅಂಗಗಳೂ ಸರಿಯಾಗಿ ಕಾರ್ಯ ನಿರ್ವಹಿಸಬೇಕು. ಆ ಪೈಕಿ ಕೆಲ ಅಂಗಗಳು ಇಡೀ ದೇಹವನ್ನೇ ನಿಯಂತ್ರಿಸುತ್ತಿರುತ್ತವೆ. ಅದರಲ್ಲಿ ಕಿಡ್ನಿಯೂ ಒಂದು. ಕಿಡ್ನಿ ನಮ್ಮ ದೇಹದಲ್ಲಿನ ರಕ್ತ ಶುದ್ಧೀಕರಣ ಮಾಡಲು, ಅನುಪಯುಕ್ತ ಉತ್ಪನ್ನಗಳನ್ನು ಬೇರ್ಪಡಿಸಲು, ಹಾರ್ಮೋನ್ ಉತ್ಪಾದಿಸಲು, ಸಮತೋಲನ ಕಾಪಾಡಲು ಮತ್ತು ರಕ್ತದೊತ್ತಡ ಕಾಪಾಡಲು ಅತ್ಯಂತ ಸಹಕಾರಿ ಅಂಗ. ಆದ್ದರಿಂದ ನಾವು ಇಲ್ಲಿ ಕಿಡ್ನಿಯ ಸಮಸ್ಯೆಗಳ ಪರಿಹಾರದ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಆಯುರ್ವೇದದ ಪ್ರಕಾರ ಶುಂಠಿ ಕಿಡ್ನಿಯ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯವಾದ ಪಾತ್ರವನ್ನು ನಿರ್ವಹಿಸುತ್ತದೆ. ಇದು ದೇಹದಲ್ಲಿ ಇರುವ ವಿಷಕಾರಿ ಅಂಶಗಳನ್ನು ಹೊರ ಹಾಕುತ್ತದೆ. ಆದ್ದರಿಂದ ಆಹಾರದಲ್ಲಿ ಶುಂಠಿಯನ್ನು ಸೇವನೆ ಮಾಡಬೇಕು. ಹಾಗೆಯೇ ಒಂದು ಚಮಚ ಮೆಂತ್ಯೆಯನ್ನು ರಾತ್ರಿ ನೆನೆಸಿ ಬೆಳಗ್ಗೆ ತಿನ್ನುವುದರಿಂದ ಕಿಡ್ನಿಯಲ್ಲಿನ ಕಲ್ಲು ಕರಗುತ್ತದೆ. ಹಾಗೆಯೇ ಕಿಡ್ನಿಯು ಆರೋಗ್ಯವಾಗಿ ಇರುತ್ತದೆ. ಹಾಗೆಯೇ ಒಂದು ತಿಂಗಳುಗಳ ಕಾಲ ಮೆಂತೆ ನೆನೆಸಿದ ನೀರನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಕಿಡ್ನಿಯ ಕಲ್ಲು ದೂರವಾಗುತ್ತದೆ.
ಹಾಗೆಯೇ ಕಲ್ಲಂಗಡಿ ಹಣ್ಣು ಕಿಡ್ನಿಯ ಆರೋಗ್ಯವನ್ನು ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಇದು ನೀರಿನಿಂದ ಕೂಡಿದ್ದು ಮೂತ್ರಪಿಂಡಗಳಲ್ಲಿರುವ ವಿಷಕಾರಿ ವಸ್ತುಗಳನ್ನು ಹೊರ ಹಾಕುತ್ತದೆ. ಹಾಗೆಯೇ ದ್ರಾಕ್ಷಿಯನ್ನು ಸೇವನೆ ಮಾಡುವುದರಿಂದ ಕೂಡ ಕಿಡ್ನಿಗೆ ಬಹಳ ಒಳ್ಳೆಯದು. ಹಾಗೆಯೇ ಹುರುಳಿಯ ಸೇವನೆ ಮಾಡುವುದರಿಂದ ಕಿಡ್ನಿಯಲ್ಲಿನ ಹರಳುಗಳು ಹೊರ ಹೋಗುತ್ತವೆ ಮತ್ತು ಕರಗುತ್ತವೆ. ಇದೂ ಕೂಡ ಒಂದು ಅತ್ಯುತ್ತಮ ರಾಮಬಾಣ ಎಂದು ಹೇಳಬಹುದು. ಆದಷ್ಟು ಮನೆಮದ್ದನ್ನು ಮಾಡುವುದು ಒಳ್ಳೆಯದು.
ಹೆಚ್ಚಿನವರಿಗೆ ನೀರನ್ನು ಕಮ್ಮಿ ಕುಡಿಯುವ ಅಭ್ಯಾಸವಿರುತ್ತದೆ. ಎರಡು ಗ್ಲಾಸ್ ಗಿಂತ ಕಡಿಮೆ ನೀರು ಕುಡಿಯುವವರೂ ಇರುತ್ತಾರೆ. ಬಾಯಾರಿಕೆ ಆಗುವುದಿಲ್ಲ ಮತ್ತೆ ಹೆಚ್ಚು ನೀರು ಕುಡಿಯುವುದು ಹೇಗೆ ಅನ್ನುವುದೇ ಅವರ ಸಮಸ್ಯೆಯಾಗಿರುತ್ತದೆ. ಬಾಯಾರಿಕೆಯಾದಾಗ ನೀರು ಕುಡಿಯುತ್ತೇವೆ ಅಂದರೆ ಹೆಚ್ಚು ನೀರು ಕುಡಿಯಲು ಸಾಧ್ಯವಾಗುವುದಿಲ್ಲ. ನೀರನ್ನು ಕುಡಿಯುವ ಅಭ್ಯಾಸ ಬೆಳೆಸಿಕೊಳ್ಳಬೇಕು. ಮೂತ್ರ ವಿಸರ್ಜನೆಗೆ 2-3 ಗಂಟೆಗಳಗೊಮ್ಮೆ ಹೋಗಬೇಕು. ಮೂತ್ರ ಬಂದರೆ ತಡೆ ಹಿಡಿಯುವ ಪ್ರಯತ್ನ ಮಾಡಬಾರದು. ಮೂತ್ರವನ್ನು ತಡೆ ಹಿಡಿಯುವುದರಿಂದ ಕಿಡ್ನಿ ಸ್ಟೋನ್ಸ್ ಬರಬಹುದು.