ಕೊರೋನ ವೈರಸ್ ಹೆಚ್ಚಾಗುತ್ತಿರುವ ಕಾರಣ ಬಹಳಷ್ಟು ಜನರು ಅನೇಕ ಸಮಸ್ಯೆಗಳಲ್ಲಿ ಸಿಲುಕಿಕೊಂಡು ಒದ್ದಾಡುತ್ತಿದ್ದಾರೆ. ಕೆಲವು ಸಿನಿಮಾ ನಟ, ನಟಿಯರು ತಮ್ಮದೆ ಆದ ಫೌಂಡೇಶನ್ ಮೂಲಕ ಬಹಳಷ್ಟು ಜನರಿಗೆ ಸಹಾಯ ಮಾಡುತ್ತಿದ್ದಾರೆ. ನಮ್ಮೆಲ್ಲರ ಪ್ರೀತಿಯ ಕಿಚ್ಚ ಸುದೀಪ್ ಅವರು ಕೂಡ ಬಹಳ ಜನರಿಗೆ ಸಹಾಯ ಮಾಡಿದ್ದಾರೆ. ಅದರಲ್ಲಿ ಸೌಮ್ಯ ಎಂಬುವವರು ತಮಗೆ ಮಾಡಿದ ಸಹಾಯದ ಬಗ್ಗೆ ವೀಡಿಯೊ ಮೂಲಕ ಸುದೀಪ್ ಅವರಿಗೆ ಧನ್ಯವಾದ ತಿಳಿಸಿದ್ದಾರೆ. ಹಾಗಾದರೆ ಸೌಮ್ಯ ಅವರು ಸುದೀಪ್ ಸರ್ ಅವರ ಬಗ್ಗೆ ಏನು ಹೇಳಿದ್ದಾರೆ ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಸೌಮ್ಯ ಎನ್ನುವವರು ನಿಮಗೆ ಹೇಗೆ ಥಾಂಕ್ಸ್ ಹೇಳಬೇಕು ಎಂದು ಗೊತ್ತಾಗುತ್ತಿಲ್ಲ. ನನ್ನ ಪರಿಸ್ಥಿತಿ ಬಹಳ ಕೆಟ್ಟದಾಗಿತ್ತು ನನ್ನ ಗಂಡನಿಗೆ ಬಹಳ ಹುಷಾರಿರಲಿಲ್ಲ, ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು. 15 ದಿನ ಅಡ್ಮಿಟ್ ಆದ ನಂತರ ಡಿಸ್ಚಾರ್ಜ್ ಮಾಡಿದರು ಮನೆಗೆ ಕರೆದುಕೊಂಡು ಬರಲಾಯಿತು, ಈಗಾಗಲೆ ಬಹಳ ಹಣ ಖರ್ಚಾಯಿತು. ಮನೆಗೆ ಬಂದ ನಂತರ ಕೊರೋನ ವೈರಸ್ ತಗುಲಿ ಸೌಮ್ಯ ಅವರಿಗೆ, ಅವರ ತಾಯಿ, ಗಂಡನಿಗೆ ಪೋಸಿಟಿವ್ ಬಂತು, ಮನೆಯಲ್ಲಿ ಎರಡುವರೆ ವರ್ಷದ ಮಗಳಿದ್ದಳು. ಸೌಮ್ಯ ಅವರು ತಮ್ಮ ಗಂಡನನ್ನು ಮತ್ತೆ ಅಡ್ಮಿಟ್ ಮಾಡುವ ಪರಿಸ್ಥಿತಿ ಬಂತು. ಮೊದಲು ಚಿಕಿತ್ಸೆ ಪಡೆದ ಆಸ್ಪತ್ರೆಗೆ ಹೋದರೆ ಅಲ್ಲಿ ಸೇರಿಸಿಕೊಳ್ಳಲಿಲ್ಲ, ಅದು ಕೋವಿಡ್ ಆಸ್ಪತ್ರೆ ಆಗಿರಲಿಲ್ಲ ಪ್ರೈವೇಟ್ ಆಸ್ಪತ್ರೆ ಆಗಿತ್ತು. ಅಲ್ಲಿ ಸೇರಿಸಬೇಕಾದರೆ ರೆಮ್ ಡಿಸಿವರ್ ಇಂಜೆಕ್ಷನ್ ತೆಗೆದುಕೊಂಡು ಬಂದರೆ ಸೇರಿಸಿಕೊಳ್ಳುತ್ತೇವೆ ಎಂದು ಹೇಳಿದರು, ಎಲ್ಲಾ ಕಡೆ ಕೇಳಿದರೂ ಇಂಜೆಕ್ಷನ್ ಸಿಗಲಿಲ್ಲ ಆನಂತರ 20,000 ರೂಪಾಯಿ ಕೊಟ್ಟು ಇಂಜೆಕ್ಷನ್ ತೆಗೆದುಕೊಳ್ಳಲಾಯಿತು. ನಂತರ ಅಡ್ಮಿಟ್ ಮಾಡಿದರು ಡಾಕ್ಟರ್ 50,000 ರೂಪಾಯಿ ಕಟ್ಟಲು ಹೇಳಿದರು ಹಣ ಹೊಂದಿಸುವುದು ಕಷ್ಟವಾಯಿತು ಆದರೂ ಹೇಗೊ ಹಣ ಹೊಂದಿಸಲಾಯಿತು ಮತ್ತೆ 2 ಇಂಜೆಕ್ಷನ್ ಬೇಕು ಎಂದು ಹೇಳಿದರು, ಇಂಜೆಕ್ಷನ್ ಗೆ ಒಂದುವರೆ ಲಕ್ಷ ಖರ್ಚಾಯಿತು.
ಎರಡು ದಿನದ ನಂತರ ಡಿಸ್ಚಾರ್ಜ್ ಮಾಡುತ್ತೇವೆ ಎಂದು ಹೇಳಿದರು. ಒಂದು ಲಕ್ಷದ ಮೂವತ್ತು ಸಾವಿರ ರೂಪಾಯಿ ಕಟ್ಟಬೇಕಿತ್ತು ನಮ್ಮ ಹತ್ತಿರ ಹಣ ಇರಲಿಲ್ಲ, ಫ್ಯಾಮಿಲಿ ಫ್ರೆಂಡ್ಸ್ ಹತ್ತಿರ ಕೇಳಿದರೆ ಅಷ್ಟು ಹಣ ಕೊಡಲು ಆಗುವುದಿಲ್ಲ ಎಂದು ಹೇಳಿದರು. ನಾನು 10 ವರ್ಷದಿಂದ ಸುದೀಪ್ ಸರ್ ಅವರ ಅಭಿಮಾನಿ, ಅವರು ಬಹಳ ಜನರಿಗೆ ಸಹಾಯ ಮಾಡಿರುವುದನ್ನು ನೋಡಿದ್ದೆ. ಮೊದಲು ಮಾನವನಾಗು ಟ್ರಸ್ಟ್ ನ ಕಿಟ್ಟಿ ಸರ್ ಅವರಿಗೆ ಕರೆ ಮಾಡಿದೆ, ಕಿಟ್ಟಿ ಸರ್ ಸುದೀಪ್ ಅವರಿಗೆ ಹೇಳಿದಾಗ ಅವರಿಗೆ ಸಹಾಯ ಮಾಡಿ ಎಂದು ಹೇಳಿದರು. ಕಿಟ್ಟಿ ಸರ್ ಅವರು ನನಗೆ ಬಹಳ ಸಹಾಯ ಮಾಡಿದರು. ಏನು ವಿಚಾರಿಸದೆ ಸುದೀಪ್ ಸರ್ ಅವರು ಸಹಾಯ ಮಾಡಲು ಒಪ್ಪಿಕೊಂಡರು ಆಸ್ಪತ್ರೆಯ ಖರ್ಚನ್ನು ಸುದೀಪ್ ಸರ್ ಅವರು ಪೇ ಮಾಡಿಸಿದ್ದಾರೆ, ನಿಮಗೆ ಧನ್ಯವಾದಗಳು. ಯಾವ ಜನ್ಮದಲ್ಲಿ ಏನು ಪುಣ್ಯ ಮಾಡಿದ್ದೇನೊ ಈ ಜನ್ಮದಲ್ಲಿ ನಿಮ್ಮ ಅಭಿಮಾನಿಯಾಗಿ ಹುಟ್ಟಿದ್ದೇನೆ. ನನ್ನ ಆಯಸ್ಸು ದೇವರು ನಿಮಗೆ ಕೊಡಲಿ, ಮುಂದಿನ ಜನ್ಮದಲ್ಲಿಯೂ ನಿಮ್ಮ ಅಭಿಮಾನಿಯಾಗಿ ಹುಟ್ಟುತ್ತೇನೆ. ಪ್ರತಿದಿನ ನಿಮ್ಮ ಹೆಸರನ್ನು ಹೇಳಿಕೊಂಡು ಮನೆಯಲ್ಲಿ ದೀಪ ಹಚ್ಚುತ್ತೇನೆ. ನನ್ನ ಕಷ್ಟಕಾಲದಲ್ಲಿ ಸಹಾಯ ಮಾಡಿದ ಸುದೀಪ್ ಸರ್ ಅವರಿಗೆ ನಾನು ಋಣಿಯಾಗಿರುತ್ತೇನೆ. ನನ್ನ ಗಂಡ ಹುಷಾರಾಗಿ ಮನೆಗೆ ಬರಲು ನೀವೆ ಕಾರಣ ನಿಮ್ಮ ಸಹಾಯವನ್ನು ನಾನು ಮರೆಯುವುದಿಲ್ಲ, ನಿಮಗೆ ಋಣಿಯಾಗಿರುತ್ತೇನೆ ಇಷ್ಟು ಹೇಳಲು ನನ್ನಿಂದ ಸಾಧ್ಯ ಎಂದು ಹೇಳುತ್ತಾ ಸೌಮ್ಯ ಅವರು ಕಣ್ಣೀರು ಹಾಕಿದ್ದಾರೆ. ಸೌಮ್ಯ ಅವರಿಗೆ ಸಹಾಯ ಮಾಡಿದಂತಹ ನಟ ಸುದೀಪ್ ಅವರನ್ನು ಮೆಚ್ಚಲೇಬೇಕು. ಸುದೀಪ್ ಅವರು ಹೆಚ್ಚಿನ ಸಹಾಯ ಮಾಡಲು ದೇವರು ಶಕ್ತಿ ಕೊಡಲಿ ಎಂದು ಆಶಿಸೋಣ.