ಬಹಳಷ್ಟು ಜನರು ಮಂಡಿ ನೋವನ್ನು ಎದುರಿಸುತ್ತಿದ್ದಾರೆ. ವಯಸ್ಸಾದಂತೆ ಮಂಡಿ ನೋವು ಸಹಜ. ಕೆಲವರಿಗೆ ಕ್ಯಾಲ್ಶಿಯಂ ಪ್ರಮಾಣ ಕಡಿಮೆ ಆದಾಗಲೂ ಮಂಡಿ ನೋವು, ಕಾಲು ನೋವು, ಕೈ ನೋವು ಬರುತ್ತದೆ. ಮಂಡಿ ನೋವಿಗೆ ಮನೆಯಲ್ಲೆ ಸುಲಭವಾಗಿ ದಿನನಿತ್ಯ ಬಳಸುವ ಸಾಮಗ್ರಿಗಳನ್ನು ಉಪಯೋಗಿಸಿ ಪೇಸ್ಟ್ ಮಾಡಿಕೊಂಡು ಮಸಾಜ್ ಮಾಡಿ ಮಂಡಿ ನೋವನ್ನು ನಿವಾರಣೆ ಮಾಡಿಕೊಳ್ಳಬಹುದು. ಈ ಮನೆ ಮದ್ದನ್ನು ತಯಾರಿಸಿ ಮಸಾಜ್ ಮಾಡುವ ವಿಧಾನವನ್ನು ಈ ಲೇಖನದ ಮೂಲಕ ತಿಳಿಯೋಣ.
ದೇಹದಲ್ಲಿ ಕ್ಯಾಲ್ಶಿಯಂ ಪ್ರಮಾಣ ಕಡಿಮೆ ಆದಾಗ ಮಂಡಿ ನೋವು ಬರುತ್ತದೆ. ಕೆಲವರಿಗೆ ಸಂಧಿಗಳಲ್ಲಿ ಕಾರ್ಟಿಲೆಜ್ ಜಲ್ ಕಡಿಮೆ ಆದಾಗ ಮಂಡಿ ನೋವು ಬರುತ್ತದೆ. ಮೂಳೆಗಳ ಒತ್ತಡ, ಗಾಯಗಳಾದಾಗಲೂ ಮಂಡಿ ನೋವು ಬರುತ್ತದೆ. ಬಹಳಷ್ಟು ಜನರು ಪೇನ್ ಕ್ಯುಲರ್ ತೆಗೆದುಕೊಳ್ಳುತ್ತಾರೆ ಇದರಿಂದ ಅಡ್ಡ ಪರಿಣಾಮ ಉಂಟಾಗುತ್ತದೆ. ಮನೆ ಮದ್ದು ತಯಾರಿಸಲು ಬೇಕಾಗುವ ಸಾಮಗ್ರಿಗಳು ಶುಂಠಿ, ಅರಿಶಿಣ, ಬೆಲ್ಲ. ಮೊದಲು ಶುಂಠಿಯನ್ನು ಮಿಕ್ಸಿಯಲ್ಲಿ ಗ್ರೈಂಡ್ ಮಾಡಿಕೊಳ್ಳಬೇಕು ಇದನ್ನು ಸ್ಪೂನ್ ಇಟ್ಟು ಪ್ರೆಸ್ ಮಾಡಿ ಅದರ ರಸವನ್ನು ಫಿಲ್ಟರ್ ಮಾಡಿಕೊಳ್ಳಬೇಕು. ಶುಂಠಿಯಲ್ಲಿ ಆಂಟಿ ಇಂಪ್ಲಮೆಟರಿ ಪ್ರಾಪರ್ಟಿ ಬಹಳ ಇದೆ ಇದರಿಂದ ಮಂಡಿ ನೋವು ಕಡಿಮೆ ಆಗಲು ಸಹಾಯಕವಾಗಿದೆ.
ಶುಂಠಿ ರಸಕ್ಕೆ ಸ್ವಲ್ಪ ಅರಿಶಿಣ ಹಾಕಿ ಮಿಕ್ಸ್ ಮಾಡಿ ಇದಕ್ಕೆ ಒಂದು ಸ್ಪೂನ್ ಬೆಲ್ಲ ಸೇರಿಸಿ ಪೇಸ್ಟ್ ಮಾಡಬೇಕು ನೋವು ಇರುವ ಜಾಗಕ್ಕೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಬೇಕು ಮೊದಲು ಬಲಗಡೆಯಿಂದ 20 ಸಲ ಮತ್ತು ಎಡಗಡೆಯಿಂದ 20 ಸಲ ಮಸಾಜ್ ಮಾಡಬೇಕು. ಈ ಪೇಸ್ಟ್ ಅನ್ನು ಸೊಂಟ ನೋವು, ಕಾಲು ನೋವು, ಕೈ ನೋವಿಗೂ ಬಳಸಬಹುದು. ದೇಹದಲ್ಲಿ ಕ್ಯಾಲ್ಶಿಯಂ ಪ್ರಮಾಣ ಕಡಿಮೆ ಆದಾಗ ಒಂದು ಸ್ಪೂನ್ ಮೆಂತೆ ಕಾಳನ್ನು ನೀರಿನಲ್ಲಿ ನೆನೆಸಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು ಹೀಗೆ ಪ್ರತಿದಿನ ಕುಡಿಯುತ್ತಾ ಬಂದರೆ ದೇಹದಲ್ಲಿ ಕ್ಯಾಲ್ಶಿಯಂ ಹೆಚ್ಚುತ್ತದೆ. ಸುಲಭವಾಗಿ ಮನೆಯಲ್ಲೆ ಮನೆ ಮದ್ದನ್ನು ತಯಾರಿಸಿ ಮಸಾಜ್ ಮಾಡುವ ಮೂಲಕ ಮಂಡಿ ನೋವನ್ನು ಕಡಿಮೆ ಮಾಡಿಕೊಳ್ಳಬಹುದು. ಮಂಡಿ ನೋವು ಇರುವುದರಿಂದ ಕೆಲಸ ಮಾಡಲು, ನಡೆದಾಡಲು ಕಷ್ಟವಾಗುತ್ತದೆ. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಮಂಡಿ ನೋವನ್ನು ಸುಲಭವಾಗಿ ನಿವಾರಿಸಿಕೊಳ್ಳಿ.
