ಜೂನ್ ತಿಂಗಳಿನಲ್ಲಿ ಕರ್ಕಾಟಕ ರಾಶಿಯಲ್ಲಿ ಜನಿಸಿದವರ ಗ್ರಹಗತಿ ಹೇಗಿರುತ್ತದೆ ಅದಕ್ಕೆ ಅನುಗುಣವಾದ ರಾಶಿ ಭವಿಷ್ಯ ಹೇಗಿರುತ್ತದೆ ಹಾಗೂ ಈ ತಿಂಗಳಿನಲ್ಲಿ ಅವರಿಗೆ ಯಾವೆಲ್ಲಾ ವಿಷಯದಲ್ಲಿ ಲಾಭವಿದೆ, ನಷ್ಟವೇನು ಜೊತೆಗೆ ಕರ್ಕಾಟಕ ರಾಶಿಯವರು ಜೂನ್ ತಿಂಗಳಲ್ಲಿ ಏನೆಲ್ಲ ಎಚ್ಚರಿಕೆ ವಹಿಸಬೇಕು ಹಾಗೂ ರೈತರಿಗೆ ಮಳೆ ಸಂಬಂಧಿತ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ

2024 ಜೂನ್ ಒಂದರಂದು ಕುಜ ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ. ಜೂನ್ 12 ರಂದು ಶುಕ್ರ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾನೆ. ಜೂನ್ 14 ರಂದು ರವಿ ಮತ್ತು ಬುಧ ಗ್ರಹಗಳು ಕೂಡ ಮಿಥುನ ರಾಶಿಗೆ ಪ್ರವೇಶ ಮಾಡುತ್ತಾರೆ. 29ನೆ ತಾರೀಖಿನಂದು ಬುಧ ಕಟಕ ರಾಶಿಗೆ ಪ್ರವೇಶ ಮಾಡುತ್ತಾನೆ. ಕರ್ಕಾಟಕ ರಾಶಿಯವರ ಶತ್ರುಗಳು ಇವರ ಏಳ್ಗೆಯನ್ನು ನೋಡಿ ಉರಿದುಕೊಳ್ಳುತ್ತಾರೆ ಆದರೂ ಅವರಿಂದ ಏನು ಮಾಡಲು ಸಾಧ್ಯವಾಗುವುದಿಲ್ಲ ಅಂದರೆ ಶತ್ರುಕಾಟದಿಂದ ಕರ್ಕಾಟಕ ರಾಶಿಯವರು ಜೂನ್ ತಿಂಗಳಿನಲ್ಲಿ ಹೊರ ಬರುತ್ತಾರೆ. ಮಾಡಿದ ಸಕಲ ಕಾರ್ಯಗಳು ಎಲ್ಲವೂ ಯಶಸ್ವಿಯಾಗುತ್ತದೆ ಎಲ್ಲ ಅಡ್ಡಿ ಆತಂಕಗಳು ನಿವಾರಣೆಯಾಗಿ ಉತ್ತಮ ಬೆಳವಣಿಗೆಯನ್ನು ಕಾಣುತ್ತಾರೆ. ಆಗಬೇಕಾದ ಸಮಯಕ್ಕೆ ಸರಿಯಾದ ರೀತಿಯಲ್ಲಿ ಕೆಲಸ ಕಾರ್ಯಗಳು ಆಗುತ್ತದೆ ಮೇಲಾಧಿಕಾರಿಗಳಿಂದ ಇವರಿಗೆ ಪ್ರಶಂಸೆ ಸಿಗುತ್ತದೆ.

ಕ್ರೀಡಾಪಟುಗಳಿಗೆ ಶುಭವಾಗುತ್ತದೆ ಕರ್ಕಾಟಕ ರಾಶಿಯ ಕಲಾವಿದರಿಗೆ ಹೊಸ ರೀತಿಯ ಉತ್ತಮ ಅವಕಾಶಗಳು ಲಭ್ಯವಾಗುತ್ತದೆ, ವ್ಯವಹಾರಿಕ ವಾತಾವರಣದಲ್ಲಿ ಸಂತೋಷ ಕಂಡುಬರುತ್ತದೆ. ಸಂಸಾರಿಕ ಜೀವನದಲ್ಲಿ ಇರುವ ಅಡೆತಡೆಗಳು ನಿವಾರಣೆಯಾಗುತ್ತದೆ. ವಾಹನಗಳನ್ನು ಖರೀದಿ ಮಾಡುತ್ತಾರೆ. ಕರ್ಕಾಟಕ ರಾಶಿಯವರು ಮಧ್ಯವರ್ತಿಯಾಗಿ ಯಾರಿಗೊ ಯಾರಿಂದ ಹಣ ಕೊಡಿಸುವುದು ಅಥವಾ ವಿವಾದವನ್ನು ಬಗೆಹರಿಸಲು ಹೋಗಿ ಇಕ್ಕಟ್ಟಿಗೆ ಸಿಲುಕಿಕೊಳ್ಳಬಹುದು ಹೀಗಾಗಿ ಎಚ್ಚರಿಕೆಯಿಂದ ಇರಬೇಕು. ತಮ್ಮ ಕೆಲಸವೇನು ಅದನ್ನು ನೋಡಿಕೊಂಡು ನೆಮ್ಮದಿಯಿಂದ ಇರುವುದು ಒಳ್ಳೆಯದು ಬೇರೆಯವರಿಗೆ ಒಳ್ಳೆಯದನ್ನು ಮಾಡಲು ಹೋಗಿ ತಾವೆ ಸಿಲುಕಿಕೊಳ್ಳಬಹುದು. ಕರ್ಕಾಟಕ ರಾಶಿಯ ವಿದ್ಯಾರ್ಥಿಗಳಿಗೆ ಶುಭವಾಗುತ್ತದೆ ಪ್ರಗತಿಯನ್ನು ಹೊಂದುತ್ತಾರೆ, ಕರ್ಕಾಟಕ ರಾಶಿಯವರ ಸಹೋದ್ಯೋಗಿಗಳಿಂದ ಈ ತಿಂಗಳಿನಲ್ಲಿ ಸಹಕಾರ ಸಿಗುತ್ತದೆ. ವ್ಯವಹಾರ ಮಾಡುತ್ತಿರುವವರಿಗೆ ಲಾಭವಾಗುತ್ತದೆ ಕಿರಿಕಿರಿಯಿಂದ ದೂರವಾಗುತ್ತಾರೆ, ಹೊಸದಾಗಿ ವ್ಯಾಪಾರ ಪ್ರಾರಂಭಿಸುವವರಿಗೆ ಈ ಸಮಯ ಉತ್ತಮವಾಗಿದೆ.

ಕರ್ಕಾಟಕ ರಾಶಿಯ ಕೆಲಸದಲ್ಲಿರುವವರಿಗೆ ವರ್ಗಾವಣೆ ಬೇಕೆಂದರೆ ಸಿಗುತ್ತದೆ ಬಡ್ತಿ ಸಿಗುತ್ತದೆ, ಮನೆಗೆ ಅವಶ್ಯ ಇರುವ ವಸ್ತುಗಳನ್ನು ಖರೀದಿಸುತ್ತಾರೆ, ತೀರ್ಥಕ್ಷೇತ್ರಗಳಿಗೆ ಭೇಟಿ ಕೊಡುತ್ತಾರೆ. ನಿರೀಕ್ಷಿಸಿದಕ್ಕಿಂತ ಹೆಚ್ಚಿನ ಧನ ಲಾಭವಾಗುತ್ತದೆ. 1,11,13,24,25 ಈ ದಿನಾಂಕಗಳು ಶುಭದಾಯಕವಾಗಿವೆ. ಕರ್ಕಾಟಕ ರಾಶಿಯಲ್ಲಿ ಜನಿಸಿದವರ ಸಮಸ್ಯೆಗಳಿಗೆ ಪರಿಹಾರವಾಗಿ ಮೊದಲಿಗೆ ಸಾಮಾಜಿಕ ಪರಿಹಾರವೆಂದರೆ ಪ್ರಕೃತಿಯ ಮಡಿಲಲ್ಲಿ ಇರುವ ನಾವು ಪ್ರಕೃತಿಯನ್ನು ಉಳಿಸೋಣ ಹಾಗೂ ಬೆಳೆಸೋಣ. ಮನೆಯ ಮುಂದೆ ಕುಡಿಯಲು ನೀರಿನ ವ್ಯವಸ್ಥೆ ಮಾಡಿದರೆ ಪ್ರಾಣಿ ಪಕ್ಷಿಗಳು ನೀರನ್ನು ಕುಡಿದು ಹರಸುತ್ತಾರೆ. ಆಧ್ಯಾತ್ಮಿಕ ಪರಿಹಾರವೆಂದರೆ ಕರ್ಕಾಟಕ ರಾಶಿಯವರು ಪ್ರತಿದಿನ ರಾಜರಾಜೇಶ್ವರಿ ಸ್ತವ ಸ್ತೋತ್ರವನ್ನು ಪಠಣ ಮಾಡಬೇಕು. ಒಮ್ಮೆ ಜನ್ಮಜಾತಕವನ್ನು ಪರಿಶೀಲಿಸಿದಾಗ ಅದಕ್ಕೆ ಸಂಬಂಧಪಟ್ಟ ಪರಿಹಾರ ಕ್ರಮವನ್ನು ಮಾಡಿಕೊಳ್ಳುವುದು ಉತ್ತಮ.

ಈ ವರ್ಷದ ಮುಂಗಾರು ಮಳೆಯ ದಿನಾಂಕಗಳನ್ನು ನೋಡುವುದಾದರೆ ಜೂನ್ ಒಂದರಿಂದ 7 ನೆ ತಾರೀಖಿನವರೆಗೆ ರೋಹಿಣಿ ಮಳೆ ಇರುತ್ತದೆ, ರೋಹಿಣಿ ಮಳೆಯು ಸಾಧಾರಣವಾಗಿ ಇರುತ್ತದೆ, ಎಲ್ಲ ಕಡೆ ಈ ಮಳೆ ಬರುವುದಿಲ್ಲ. ಜೂನ್ 7 ರಿಂದ 21ನೆ ತಾರೀಖಿನವರೆಗೆ ಮೃಗಶಿರ ಮಳೆಯು ಸಾಧಾರಣವಾಗಿರುತ್ತದೆ ಹೆಚ್ಚಿನ ಪ್ರಮಾಣದಲ್ಲಿ ಬರುತ್ತದೆ. ಜೂನ್ ತಿಂಗಳಿನ ಯಾವ ಯಾವ ದಿನಾಂಕದಂದು ಮಳೆ ಇರುತ್ತದೆ ಎಂದು ನೋಡುವುದಾದರೆ 1, 2,5, 6, 9, 10, 11, 13,14, 15,16, 23,24,25,26,27,28,29 ಈ ದಿನಾಂಕಗಳಂದು ಮಳೆಯನ್ನು ನಿರೀಕ್ಷೆ ಮಾಡಬಹುದು. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

ನಿಮ್ಮ ಭವ್ಯ ಭವಿಷ್ಯದ ದಾರಿದೀಪಶ್ರೀ ಕ್ಷೇತ್ರ ಕಾಳಿಕಾ ದುರ್ಗಾ ಜ್ಯೋತಿಷ್ಯ ಪ್ರಧಾನ ತಾಂತ್ರಿಕ ಪೀಠ ಪ್ರಧಾನ ಗುರುಗಳು ಹಾಗೂ ದೈವಿಕ ಅರ್ಚಕ ಮನೆತನದವರು ಪ್ರಧಾನ್ ತಾಂತ್ರಿಕ್: ವಿದ್ವಾನ್ ಶ್ರೀ ಶ್ರೀ ರಘುನಂದನ್ ಗುರುಗಳು 9606655519 ಗುರೂಜಿಯವರು ಅಸ್ಸಾಂಮಿನ ಅಧಿದೇವತೆ ಶ್ರೀ ಕಾಮಕ್ಯದೇವಿ ಹಾಗೂ ಕೊಳ್ಳೇಗಾಲದ ಚೌಡಿ ಪ್ರಯೋಗ ಮತ್ತು ಕೇರಳದ ವಿಶಿಷ್ಟ ಅನುಷ್ಠಾನ ಪೂಜೆಗಳಿಂದ ನಿಮ್ಮ ಸಕಲ ಕಷ್ಟ ಕಾರ್ಪಣ್ಯಗಳನ್ನು ನಿಮ್ಮ ಧ್ವನಿ ತರಂಗದ ಮೂಲಕ ಅರಿತು ಅಷ್ಟಮಂಗಳ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ಕೇವಲ 21 ಗಂಟೆಗಳಲ್ಲಿ ಶಾಶ್ವತವಾದ ಪರಿಹಾರ ಮತ್ತು ಉತ್ತಮ ಮಾರ್ಗದರ್ಶನ ಪಡೆದುಕೊಳ್ಳಿ 9606655519

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!