Ultimate magazine theme for WordPress.

ಆಸ್ತಿ ಮಾರಾಟ ಮತ್ತು ಖರೀದಿಗೆ ಸರ್ಕಾರದಿಂದ ಹೊಸ ರೂಲ್ಸ್

0 41

New Rules from Govt for Sale and Purchase of Property: ಇದೇ ಹೊಸ ವರ್ಷದೊಂದು ಸರ್ಕಾರ ಆಸ್ತಿ ಮಾರಾಟ ಮತ್ತು ಖರೀದಿಗೆ ಹೊಸ ರೂಲ್ಸ್ ಅನ್ನು ಜಾರಿಗೆ ತಂದಿದ್ದು ಆಸ್ತಿ ನೋಂದಣಿಯಾದ ಏಳು ದಿನದೊಳಗೆ ಖರೀದಿದಾರರ ಹೆಸರಿಗೆ ಖಾತೆ ಮತ್ತು ಪಹಣಿ ಕಡ್ಡಾಯಗೊಳಿಸಲಾಗುವುದು ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರ ಜೊತೆ ಮಾತನಾಡಿದ ಕಂದಾಯ ಸಚಿವರು (Revenue Minister) ಖಾತೆ ಮಾಡಲು ಅವಕಾಶ ಕಲ್ಪಿಸುವ ಮತ್ತೊಂದು ಜನಸ್ನೇಹಿ ತೀರ್ಮಾನವನ್ನ ರಾಜ್ಯ ಸರ್ಕಾರ ಕೈಗೊಂಡಿದೆ ನೋಂದಣಿಯಾದ ಆಸ್ತಿ ನೀಡಲು ಸದ್ಯಕ್ಕೆ ಕನಿಷ್ಠ 34 ದಿನಗಳ ಕಾಲ ಕಾಲಾವಕಾಶ ಇದೆ ಇದನ್ನು ಕನಿಷ್ಠ ಏಳು ದಿನಕ್ಕೆ ಇಳಿಸಲು ನಿರ್ಧರಿಸಲಾಗಿದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ದರು

ಆಸ್ತಿ ನೋಂದಣಿ ಮಾಡಿಸಿಕೊಂಡಿದ್ದವರು ಖಾತೆ ಪಡೆಯಲು ತಿಂಗಳುಗಟ್ಟಲೆ ಕಚೇರಿಗೆ ಅಲೆಯುವುದನ್ನು ತಪ್ಪಿಸಲು ಈ ತೀರ್ಮಾನವನ್ನು ಮಾಡಲಾಗಿದೆ ಇದರಿಂದ ಆಸ್ತಿಗಳ ಸೌಲಭ್ಯ ಪಡೆಯಲು ಜನರಿಂದ ಬಹಳಷ್ಟು ಅನುಕೂಲವಾಗಲಿದೆ ರಾಜ್ಯದಲ್ಲಿ ಲಕ್ಷಾಂತರ ಕಂದಾಯ ಅಧಿವೇಶನಗಳನ್ನು, ಭೂ ಪರಿವರ್ತನೆಯ ವ್ಯಾಪ್ತಿಗೆ ತರಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ.

ಭೂ ಪರಿವರ್ತನೆ ವಿಧೇಯಕ ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಕಂದಾಯ ಜಾಗಗಳಲ್ಲಿನ ಅನಧಿಕೃತ ಮನೆ ನಿವೇಶನ ಮತ್ತಿತರ 40 ಲಕ್ಷಕ್ಕೂ ಅಧಿಕ ಆಸ್ತಿಗಳನ್ನು ಸಕ್ರಮ ಮಾಡಲು ಸರ್ಕಾರ ನಿರ್ಧರಿಸಿದೆ ಭೂ ಪರಿವರ್ತನೆಯ ಪಾರದರ್ಶಕತೆಗಾಗಿ ಸರ್ಕಾರ ಸುಗ್ರೀವಾಜ್ಞೆಯ ಮೂಲಕ ಜಾರಿ ಮಾಡಲಾಗುತ್ತಿರುವ ನೂತನ ವ್ಯವಸ್ಥೆಯಲ್ಲಿ ಕಂದಾಯ ನಿವೇಶನಗಳ ಆಸ್ತಿಗಳ ಸಕ್ರಮಕ್ಕೂ ಅನುವು ಮಾಡಿಕೊಡಲು ಸರ್ಕಾರ ಚಿಂತನೆಯನ್ನು ನಡೆಸಿದೆ.

ಅಷ್ಟೇ ಅಲ್ಲದೆ ಯೋಜನಾ ಪ್ರಾಧಿಕಾರ ವ್ಯಾಪ್ತಿಗೆ ಒಳಪಟ್ಟು ಕೃಷಿ ಭೂಮಿ ಮತ್ತು ಕೃಷಿಯೇತರ ಚಟುವಟಿಕೆಗಳಿಗೆ ಬಳಸಿಕೊಳ್ಳಲು ಭೂ ಸಕ್ರಮ ಮಾಡಲು ಮುಂದಾಗಿರುವ ಸರ್ಕಾರ ಸಾರ್ವಜನಿಕರ ಅನುಕೂಲಕ್ಕಾಗಿ ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲಾಗುತ್ತಿದೆ.ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರದ ಕುರಿತು ವಿದಾಯಕ ಮಂಡಿಸಲು ನಿರ್ಧರಿಸಲಾಗಿದೆ ಇದರಿಂದ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಲಕ್ಷಾಂತರ ಕಂದಾಯ ನಿವೇಶನಗಳನ್ನು ಭೂ ಪರಿವರ್ತನೆಯ ವ್ಯಾಪ್ತಿಗೆ ತರಲು ಸರ್ಕಾರ ಏಣೆ ಆಗಲಿದೆ.

ಇದನ್ನೂ ಓದಿ..BPL ಕಾರ್ಡ್ ಇರುವ ಕುಟುಂಬಗಳಿಗೆ ಹೊಸಮನೆ ಕಟ್ಟಲು ಸರ್ಕಾರದಿಂದ 4 ಲಕ್ಷದವರೆಗೆ ಸಹಾಯಧನ ಇದರ ಸಂಪೂರ್ಣ ಮಾಹಿತಿ ಇಲ್ಲಿದೆ

ಕೃಷಿ ಭೂಮಿಯನ್ನ ಕೃಷಿಯೇತರ ಉದ್ದೇಶಕ್ಕಾಗಿ ಭೂ ಪರಿವರ್ತನೆ ಮಾಡಿಸಿಕೊಳ್ಳದ ಇಂತಹ ನಿವೇಶನಗಳ ಭೂದಂಡ ಶುಲ್ಕದೊಂದಿಗೆ ಪರಿವರ್ತನೆ ಸಾಧ್ಯವಾದರೆ ಜನರಿಗೆ ಅನುಕೂಲವಾಗುತ್ತದೆ ಎಂಬುದು ಸರ್ಕಾರದ ಚಿಂತನೆಯಾಗಿದೆ.

Leave A Reply

Your email address will not be published.