ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ನವೆಂಬರ್ ಒಂದರಂದು ವಿಧಾನಸೌಧದ ಎದುರುಗಡೆ ತೆರೆದ ವೇದಿಕೆಯಲ್ಲಿ ರಾಜ್ಯದ ಮುಖ್ಯಮಂತ್ರಿಗಳಾಗಿರುವ ಬಸವರಾಜ ಬೊಮ್ಮಾಯಿ ಸೇರಿದಂತೆ ರಜನಿಕಾಂತ್ ಹಾಗೂ ಜೂನಿಯರ್ ಎನ್ಟಿಆರ್ ಅವರ ಸಮ್ಮುಖದಲ್ಲಿ ಅಶ್ವಿನಿ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವ ಮೂಲಕ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನಗೌರವವನ್ನು ಸಂಪನ್ನಗೊಳಿಸಲಾಗಿದೆ. ನಿಜಕ್ಕೂ ಕೂಡ ಇದು ಅಪ್ಪು ಅಭಿಮಾನಿಗಳಿಗೆ ಸೇರಿದಂತೆ ಕನ್ನಡಿಗರಿಗೆ ಅರ್ಥಪೂರ್ಣ ಕರ್ನಾಟಕ ರಾಜ್ಯೋತ್ಸವವಾಗಿತ್ತು.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ಸಿನಿಮಾ ರಂಗದಲ್ಲಿ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಮಾಡಿರುವ ಮಹತ್ತರ ಸಾಧನೆಯನ್ನು ಗುರುತಿಸಿ ರಾಜ್ಯ ಸರ್ಕಾರ ಈ ಪ್ರಶಸ್ತಿಯನ್ನು ಮರಣೋತ್ತರವಾಗಿ ಪುರಸ್ಕರಿಸಿದೆ. ಚಿನ್ನದ ಪದಕವನ್ನು ಅಶ್ವಿನಿ ಪುನೀತ್ ರಾಜಕುಮಾರ್ ಅವರ ಕೊರಳಿಗೆ ಹಾಕುವ ಮೂಲಕ ಕರ್ನಾಟಕ ರತ್ನ ಪುರಸ್ಕಾರವನ್ನು ನೀಡಲ. ಈ ಸಂದರ್ಭದಲ್ಲಿ ಮಳೆ ಕೂಡ ಬಂದಿತ್ತಾದರೂ ಕೂಡ ನೆರೆದಿರುವ ಸಹಸ್ರಾರು ಅಭಿಮಾನಿಗಳು ಮಳೆಯಲ್ಲಿಯೇ ಅಪ್ಪು ಅವರಿಗೆ ಸಿಗುತ್ತಿರುವ ಈ ಗೌರವವನ್ನು ಕಣ್ತುಂಬಿಸಿಕೊಂಡು ಭಾವುಕರಾದರು.

ಇನ್ನು ನಟಸಾರ್ವಭೌಮ ಡಾಕ್ಟರ್ ರಾಜಕುಮಾರ್ ಅವರಿಗೂ ಕೂಡ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡುವ ಸಂದರ್ಭದಲ್ಲಿ ಮಳೆ ಬಂದಿತ್ತು ಎಂಬುದನ್ನು ವೇದಿಕೆಯಲ್ಲಿ ನೆರೆದಿದ್ದ ಪ್ರತಿಯೊಬ್ಬರೂ ಗಣ್ಯರು ಕೂಡ ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುತ್ತಾರೆ. ಇನ್ನು ಕರ್ನಾಟಕ ರತ್ನ ಪ್ರಶಸ್ತಿಯನ್ನು ಪಡೆದುಕೊಳ್ಳಲು ರಾಜ್ ಕುಟುಂಬದ ಪ್ರತಿಯೊಬ್ಬ ಸದಸ್ಯರು ಕೂಡ ವೇದಿಕೆಯ ಮೇಲೆ ಇದ್ದರು ಆದರೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಹಿರಿಯಮಗಳಾಗಿರುವ ದೃತಿ ಮಾತ್ರ ಜರ್ಮನಿಯಲ್ಲಿ ಇದ್ದರು. ಹೀಗಿದ್ದರೂ ಕೂಡ ದೃತಿ ಅವರಿಗೂ ಕೂಡ ಜರ್ಮನಿಯಲಿ ಸರ್ಪ್ರೈಸ್ ಕಾದಿತ್ತು.

ಹೌದು ಮಿತ್ರರೇ, ವಿದ್ಯಾಭ್ಯಾಸದ ಹಿನ್ನೆಲೆಯಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಪ್ರಧಾನ ಕಾರ್ಯಕ್ರಮಕ್ಕೆ ದ್ರತಿ ಅವರು ಬರಲು ಸಾಧ್ಯವಾಗಲಿಲ್ಲ. ಆದರೆ ಅಲ್ಲಿ ಜರ್ಮನಿಯಲ್ಲಿ ಕೂಡ ಟಿವಿ ಫಲಕಗಳ ಮೇಲೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರಿಗೆ ಕರ್ನಾಟಕ ರತ್ನ ಪ್ರಶಸ್ತಿ ಪುರಸ್ಕಾರ ಮಾಡಿರುವ ಫಲಕಗಳು ಕಂಡುಬಂದಿದ್ದವು ಇದು ದೃತಿ ಅವರಿಗೂ ಕೂಡ ಆಶ್ಚರ್ಯದ ಜೊತೆಗೆ ಸಂತಸವನ್ನು ಕೂಡ ಉಂಟು ಮಾಡಿತು ಎಂಬುದಾಗಿ ತಿಳಿದು ಬಂದಿದೆ. ವಿದೇಶದ ಜರ್ಮನಿಯಲ್ಲಿ ಕೂಡ ಅಪ್ಪು ಅವರ ಜನಪ್ರಿಯತೆ ಪಸರಿಸಿರುವುದು ನಿಜಕ್ಕೂ ಕೂಡ ಕನ್ನಡಿಗರಾದ ನಮಗೆ ಹೆಮ್ಮೆ ತರುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!