ಡಾಕ್ಟರ್ ವಿಷ್ಣುವರ್ಧನ್ ಅಭಿನಯದ ಸಿಂಹಾದ್ರಿಯ ಸಿಂಹ ಚಿತ್ರದ ಪ್ರೇರಣೆಯಿಂದಾಗಿ ನಂಜನಗೂಡು ತಾಲೂಕಿನ ಹುಳಿಮಾವು ಪಂಚಾಯಿತಿ ವ್ಯಾಪ್ತಿಯ ಬೊಕ್ಕಹಳ್ಳಿ ಗ್ರಾಮದ ಯುವಕರಿಂದ ಸೇರಿ ಭಿಕ್ಷುಕನನ್ನು ಗ್ರಾಮ ಪಂಚಾಯಿತಿ ಚುನಾವಣೆ ಅಖಾಡಕ್ಕೆ ಇಳಿಸಿದ್ದಾರೆ. ಈ ಗ್ರಾಮದ ನಿವಾಸಿ ಅಂಕ ನಾಯಕ ಎಂಬುವರಿಂದ ಚುನಾವಣೆ ನಾಮಪತ್ರ ಸಲ್ಲಿಕೆ ಮಾಡಿಸಲಾಗಿದೆ. ವಿಶೇಷ ಚೇತನರಾದ ಅಂಕ ನಾಯಕ ಊರು ಊರು ಸುತ್ತುತ್ತಾ ಹೊಟ್ಟೆ ಪಾಡಿಗಾಗಿ ಊರೂರು ಸುತ್ತುತ್ತಾ ಅಲೆದಾಡುತ್ತಿದ್ದ. ಗ್ರಾಮದ ಬಸ್ ನಿಲ್ದಾಣ ಮತ್ತು ಅಲ್ಲಲ್ಲಿ ಭಿಕ್ಷೆ ಬೇಡಿಕೊಂಡು ಅಲ್ಲಿಯೆ ವಾಸಮಾಡುತ್ತಾ ಜೀವನ ಸಾಗಿಸುತ್ತಾ ಇದ್ದ. ಕಳೆದ ಸಲದ ಚುನಾವಣೆಯಲ್ಲಿ ನಾಯಕರು ಯಾವುದೇ ರೀತಿಯ ಅಭಿವೃದ್ಧಿ ಕೆಲಸವನ್ನು ಮಾಡದೆ ಇರುವ ಕಾರಣಕ್ಕಾಗಿ ಈ ಗ್ರಾಮದ ಯುವಕರೆಲ್ಲ ಸೇರಿ ಅಂಕ ನಾಯಕನನ್ನು ಚುನಾವಣೆಗೆ ನಿಲ್ಲಿಸಿದ್ದಾರೆ.
ಈ ಹಿಂದೆ ಚುನಾವಣೆಗೆ ನಿಂತು ಗೆದ್ದುಬಂದ ಯಾವುದೇ ಅಭ್ಯರ್ಥಿಯೂ ಸಹ ಒಳಚರಂಡಿ ಸೇರಿದಂತೆ ಯಾವುದೇ ಮೂಲಭೂತ ಸೌಕರ್ಯಗಳು ಸೌಲಭ್ಯಗಳನ್ನು ಸರಿಯಾಗಿ ಒದಗಿಸದೆ, ಸೌಲಭ್ಯಗಳನ್ನು ಒದಗಿಸುವಲ್ಲಿ ವಿಫಲರಾಗಿದ್ದರು. ಹಾಗಾಗಿ ಈ ಹಿನ್ನೆಲೆಯಲ್ಲಿ ಈ ಬಾರಿ ಭಿಕ್ಷುಕ ಅಂಕ ನಾಯಕ ಎಂಬ ವ್ಯಕ್ತಿಯನ್ನು ಸಿಂಹಾದ್ರಿಯ ಸಿಂಹ ಚಿತ್ರದಲ್ಲಿ ವಿಷ್ಣುವರ್ಧನ್ ಅವರು ಭಿಕ್ಷುಕನನ್ನು ಚುನಾವಣೆಗೆ ನಿಲ್ಲಿಸಿ ಅವನನ್ನೇ ಗೆಲ್ಲಿಸಿ ಅಧಿಕಾರಕ್ಕೆ ತಂದ ಘಟನೆಯನ್ನು ನೆನೆದು ಬೊಕ್ಕಹಳ್ಳಿ ಗ್ರಾಮದ ಯುವಕರೆಲ್ಲ ಸೇರಿ ಈ ನಿರ್ಧಾರ ಮಾಡಿದ್ದು ಈ ಬಾರಿಯ ಚುನಾವಣೆಯಲ್ಲಿ ಅಂಕನಾಯಕನನ್ನೆ ಗೆಲ್ಲಿಸಲು ನಿಶ್ಚಯಿಸಿದ್ದಾರೆ.
ಮೂಲತಃ ವಿಕಲಚೇತನರಾಗಿರುವ ಅಂಕನಾಯಕ ಅವಿವಾಹಿತ ಕೂಡಾ ಹೌದು. ಗ್ರಾಮದಲ್ಲಿ ಭಿಕ್ಷೆ ಬೇಡುತ್ತಾ ಜೀವನ ಸಾಗಿಸುತ್ತಾ ಇದ್ದ ಅಂಕ ನಾಯಕನನ್ನು ಗ್ರಾಮದ ಅಭಿವೃದ್ಧಿಯ ದೃಷ್ಟಿಯಿಂದ ಯುವಕರು ಈ ಬಾರಿಯ ಚುನಾವಣೆಗೆ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಿ ನಿಲ್ಲಿಸಿದ್ದಾರೆ. ಅಂಕ ನಾಯಕನಿಗೆ ಪ್ರತಿಸ್ಪರ್ಧಿಯಾಗಿ ಇನ್ನೊಬ್ಬರು ನಿಂತಿದ್ದು ಸಿನಿಮೀಯ ರೀತಿಯಲ್ಲಿ ಗ್ರಾಮದ ಯುವಕರೆಲ್ಲ ಅಂಕ ನಾಯಕನ ಪರವಾಗಿ ಪ್ರಚಾರಕ್ಕೆ ನಿಂತಿದ್ದಾರೆ.