ಸರ್ಕಾರವು ಬಡವರಿಗೆ ಹಲವು ರೀತಿಯ ಯೋಜನೆಯ. ಮೂಲಕ ಅವರಿಗೆ ಸಂಪಾದನೆಗೆ ದಾರಿ ಮಾಡಿ ಕೊಡುತ್ತಿದೆ. ಬಡತನ ರೇಖೆಗಿಂತ ಕೆಳಗಿರುವವರು ಯಾವುದಾದರು ಸಣ್ಣ ಪ್ರಮಾಣದ ವ್ಯವಹಾರ ಪ್ರಾರಂಭ ಮಾಡುವ ಮನಸ್ಸು ಇದ್ದವರಿಗೆ ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಕೆಲವು ಸೌಲಭ್ಯ ಸಿಗುತ್ತಿವೆ. ಅದೆನೆಂದು ನಾವು ತಿಳಿಯೋಣ.

ಕರ್ನಾಟಕ ಸರ್ಕಾರದ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ ನಿಯಮಿತ ಅವರ ವತಿಯಿಂದ ಸಹಾಯಧನ ನೀಡಲು ಹಲವಾರು ಯೋಜನೆಯನ್ನು ರೂಪಿಸಲಾಗಿದೆ. ಸಹಾಯಧನದ ಅವಶ್ಯಕತೆ ಇರುವವರು ಯಾವ ಯೋಜನೆ ಎಂದು ನೋಡಿಕೊಂಡು ಅಲ್ಪಸಂಖ್ಯಾತರು ಅರ್ಜಿ ಸಲ್ಲಿಸಬಹುದು. ಯೋಜನೆಯ ಒಂದು ಉದಾಹರಣೆ ಎಂದರೆ ಗಂಗಾ ಕಲ್ಯಾಣ ಯೋಜನೆಗೆ ಅರ್ಜಿ ಹಾಕಿದರೆ ಉಚಿತವಾಗಿ ಹೊಲದಲ್ಲಿ ಬೊರ್ವೆಲ್ ತೆಗೆಸಬಹುದು.

ಸರ್ಕಾರದಿಂದ ಇದಕ್ಕಾಗಿ ಸಹಾಯಧನ ಸಿಗುತ್ತದೆ. ನಿಗಮದ ಕಡೆಯಿಂದ ಗೂಡ್ಸ್ ಮತ್ತು ಟ್ಯಾಕ್ಸಿ ಓಡಿಸಲು ಸಹಾಯಧನ ಸಿಗುತ್ತದೆ. ಈಗಾಗಲೇ ಇರುವ ವ್ಯವಹಾರವನ್ನು ಅಭಿವೃದ್ಧಿ ಪಡಿಸಿಕೊಳ್ಳಲು ಅಥವಾ ಹೊಸದಾಗಿ ವ್ಯವಹಾರಗಳನ್ನು ಪ್ರಾರಂಭಿಸಲು ಸಹಾಯಧನ ಸಿಗುತ್ತದೆ. ಹಸು, ಕೋಳಿ, ಎಮ್ಮೆ, ಮೇಕೆ ಮುಂತಾದ ಸಾಕು ಪ್ರಾಣಿಗಳನ್ನು ಸಾಕಲು ಪಶುಸಂಗೋಪನೆ ಯೋಜನೆಯ ಮುಖಾಂತರ ಸಹಾಯಧನ ಪಡೆಯಬಹುದು. ಕೃಷಿಕರಾಗಿದ್ದಲ್ಲಿ ಕೃಷಿ ಯಂತ್ರಗಳ ಖರೀದಿಗೆ ಸಹಾಯಧನ ಸಿಗುತ್ತದೆ.

ಯಾವ ಯೋಜನೆ ಅವಶ್ಯಕತೆ ಇದೆ ನೋಡಿ ಅದಕ್ಕೆ ಅರ್ಜಿ ಸಲ್ಲಿಸಿದರೆ, ನಿಮ್ಮ ಹೆಸರು ಆಯ್ಕೆ ಮಾಡಿದರೆ ನಿಮ್ಮ ಬ್ಯಾಂಕ್ ಖಾತೆಗೆ ಸಹಾಯಧನ ನೇರವಾಗಿ ಜಮಾವಣೆಗೊಳ್ಳುತ್ತದೆ. ಅಲ್ಪ ಸಂಖ್ಯಾತರ ಪಟ್ಟಿಯಲ್ಲಿ ಬರುವ ಮುಸ್ಲಿಂ, ಕ್ರಿಶ್ಚಿಯನ್, ಬೌದ್ಧ, ಸಿಖ್, ಜೈನರು ಇವರೆಲ್ಲ ಈ ಅರ್ಜಿಯನ್ನು ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಬೇಜಾದ ದಾಖಲೆಗಳು ಹೀಗಿವೆ‌. ಬಿಪಿಎಲ್ ರೇಷನ್ ಕಾರ್ಡ್, ಆಧಾರ್ ಕಾರ್ಡ್, ಜಾತಿ ಪ್ರಮಾಣಪತ್ರ, ಬ್ಯಾಂಕ್ ದಾಖಲೆಗಳು, ಇವು ಸಾಮಾನ್ಯವಾಗಿ ಎಲ್ಲವುದಕ್ಕೂ ಬೇಕಾಗುವ ದಾಖಲೆ. ಗೂಡ್ಸ್ ಹಾಗೂ ಟ್ಯಾಕ್ಸಿ ಸಹಾಯಧನ ಬೇಕಾದಲ್ಲಿ ಡಿಎಲ್ ಮತ್ತು ಬ್ಯಾಡ್ಜ್ ದಾಖಲೆಬೇಕು. ಗಂಗಾ ಕಲ್ಯಾಣ ಯೋಜನೆ ಬೇಕಾದಲ್ಲಿ ಜಮೀನಿನ ಪಹಣಿ ಪತ್ರಿಕೆಯ ದಾಖಲೆ ಅವಶ್ಯಕತೆ ಇರುತ್ತದೆ. ಆನ್ಲೈನ್ ಅರ್ಜಿ ಸಲ್ಲಿಸುವ ವೆಬ್ ಸೈಟ್ ಹೀಗಿದೆ. http://kmdc.Karnataka.gov.in . ಡಿಸೆಂಬರ್ 10 ರ ವರೆಗೂ ಅರ್ಜಿ ಸಲ್ಲಿಸಲು ಅವಕಾಶ ಇರುತ್ತದೆ. ಡಿಸೆಂಬರ್ ಹತ್ತರ ಒಳಗಾಗಿ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಅರ್ಜಿಯ ಪ್ರಿಂಟೌಟ್ ಜೊತೆಗೆ ದಾಖಲೆಗಳನ್ನು ಹೊಂದಿಸಿ, ತಾಲೂಕಿನ ಅಥವಾ ಜಿಲ್ಲೆಯಲ್ಲಿರುವ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಕಛೇರಿಯಲ್ಲಿ ಕೊಡಬೇಕು. ಕಛೇರಿಯಲ್ಲಿ ಅರ್ಜಿಯನ್ನು ಸಲ್ಲಿಸುವ ಕೊನೆಯ ದಿನಾಂಕ ಡಿಸೆಂಬರ್ 21, 2020 ಆಗಿರುತ್ತದೆ.

ಅವಧಿ ಮೀರುವುದರೊಳಗೆ ಅರ್ಜಿ ಸಲ್ಲಿಸಿ, ಯೋಜನೆಗಳ ಸದುಪಯೋಗ ಪಡೆದುಕೊಳ್ಳಿ. ಸ್ವಂತ ವ್ಯವಹಾರ ಮಾಡುವವರಿಗೆ, ಕೃಷಿ ಮಾಡುವವರಿಗೆ ಉತ್ತಮ ಸುವರ್ಣವಕಾಶ ಸಿಕ್ಕಿದೆ. ಯೋಜನೆಯ ಬಗೆಗೆ ಸರಿಯಾದ ಮಾಹಿತಿ ತಿಳಿದುಕೊಂಡು ಯಾವ ಯೋಜನೆಯ ಅವಶ್ಯಕತೆ ಇದೆ ಅದನ್ನು ಸಮರ್ಪಕವಾಗಿ ಬಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!