Karnataka govt house scheme: ರಾಜ್ಯದ ಬಡವರಿಗೆ ಉಚಿತ ಮನೆ ಕಟ್ಟಿಸಿ ಕೊಡುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಒಂದು ಲಕ್ಷ ವಸತಿ ಯೋಜನೆ ಸಾಕಷ್ಟು ಪ್ರಮುಖವಾಗಿದೆ. ಇದರ ಫಲಾನುಭವಿಗಳು ಯಾರಾಗಬಹುದು ಇದನ್ನು ಹೇಗೆ ಪಡೆದುಕೊಳ್ಳಬಹುದು ಎಂಬುದನ್ನು ಇಂದಿನ ಲೇಖನಿಯಲ್ಲಿ ತಿಳಿದುಕೊಳ್ಳೋಣ ಬನ್ನಿ.

ಇದರ ಅರ್ಹತೆಗಳನ್ನು ಮೊದಲಿಗೆ ತಿಳಿದುಕೊಳ್ಳುವುದಾದರೆ (BPL Card) ಬಿಪಿಎಲ್ ಕಾರ್ಡ್ ಅನ್ನು ಹೊಂದಿರುವ ಕರ್ನಾಟಕದ ನಾಗರಿಕರಿಗೆ ಮಾತ್ರ ಇದು ಅನ್ವಯವಾಗುತ್ತದೆ. 87 ಸಾವಿರಕ್ಕಿಂತಲೂ ಕಡಿಮೆ ಆದಾಯವನ್ನು ವಾರ್ಷಿಕವಾಗಿ ಹೊಂದಿರುವ ಹಾಗೂ ಬೆಂಗಳೂರಿನಲ್ಲಿ ಕನಿಷ್ಠ ಐದು ವರ್ಷ ನೆಲೆಸಿರುವ ನಾಗರಿಕರಿಗೆ ಇದು ಅನ್ವಯವಾಗುತ್ತದೆ. ಅರ್ಜಿಯನ್ನು ಸಲ್ಲಿಸುವವರು ಸ್ವಂತ ಮನೆಯನ್ನು ಹೊಂದಿರಬಾರದು.

ಅಗತ್ಯ ಇರುವ ದಾಖಲೆಗಳನ್ನು ಗಮನಿಸುವುದಾದರೆ ಆದಾಯ ಪ್ರಮಾಣ ಪತ್ರ ಆಧಾರ್ ಕಾರ್ಡ್ ಹಾಗೂ ವಾಸ ಸ್ಥಳ ಪ್ರಮಾಣ ಪತ್ರ ಕೂಡ ಬೇಕಾಗಿರುತ್ತದೆ. ಈ ಯೋಜನೆಯ ಮುಖ್ಯ ಉದ್ದೇಶ ಅತ್ಯಂತ ಹಗ್ಗದ ಬೆಲೆಯಲ್ಲಿ ಬಡ ಜನರಿಗೆ ಬೆಂಗಳೂರಿನ ಪ್ರದೇಶದಲ್ಲಿ ವಸತಿಯನ್ನು ನಿರ್ಮಾಣ ಮಾಡಿಕೊಡುವುದು. ಈ ಯೋಜನೆಯ ಫಲಾನುಭವಿಗಳ ಪಟ್ಟಿಯನ್ನು ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಆಗಿರುವ ashraya.karnataka.govt.in ನಲ್ಲಿ ತಿಳಿದುಕೊಳ್ಳಬಹುದಾಗಿದೆ.

ಈ ಯೋಜನೆಯ ಫಲಾನುಭವಿಗಳು ಆಗಬೇಕೆಂದುಕೊಂಡಿರುವವರು ಈ ಅಧಿಕೃತ ವೆಬ್ಸೈಟ್ನಲ್ಲಿ ಅರ್ಜಿಯನ್ನು ಸಲ್ಲಿಸಬೇಕಾಗಿದೆ. ಅರ್ಜಿಯಲ್ಲಿ ಕೇಳಿರುವಂತಹ ದಾಖಲೆಗಳನ್ನು ತುಂಬಿದ ನಂತರ ಸಬ್ಮಿಟ್ ಮಾಡಬೇಕು. ಇದರ ಸ್ಟೇಟಸ್ ಗಳನ್ನು ತಿಳಿದುಕೊಳ್ಳಲು ಮೊದಲಿಗೆ ಇದರ ಈಗಾಗಲೇ ಮೇಲೆ ನೀಡಿರುವಂತಹ ವೆಬ್ಸೈಟ್ ಅಧಿಕೃತ ಲಿಂಕ್ ಅನ್ನು ಕ್ಲಿಕ್ ಮಾಡಬೇಕು. ನಿಮ್ಮ ಜಿಲ್ಲೆ ಹಾಗೂ ಫಲಾನುಭವಿ ಕೋಡ್ ಅನ್ನು ದಾಖಲಿಸಬೇಕು. ನಂತರ ಸಬ್ಮಿಟ್ ಹಾಗೂ ಕ್ಲಿಕ್ ಮಾಡಬೇಕು.

ಬೆಂಗಳೂರು ನಗರದಲ್ಲಿ ಮನೆಯನ್ನು ಹೊಂದಬೇಕು ಎನ್ನುವ ಹಾಗೂ ಹೊಂದಿಲ್ಲದೆ ಇರುವ ಬಡವರಿಗೆ ಮುಖ್ಯಮಂತ್ರಿಗಳ ಈ ಯೋಜನೆ ಖಂಡಿತವಾಗಿಯೂ ಪ್ರಯೋಜನಕಾರಿ ಆಗಿರುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಈ ಬಗ್ಗೆ ನಿಮ್ಮ ಅಭಿಪ್ರಾಯ ಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ ಹಾಗೂ ನೀವೂ ಕೂಡ ಈ ಯೋಜನೆ ಫಲಾನುಭವಿಗಳಾಗಬೇಕು ಎನ್ನುವ ಆಸೆ ಇದ್ದರೆ ಕೂಡಲೇ ಸರ್ಕಾರದ ಅಧಿಕೃತ ಸಂಬಂಧಪಟ್ಟ ವೆಬ್ಸೈಟ್ ಗಳಿಗೆ ಭೇಟಿ ನೀಡಿ ನೀವೂ ಕೂಡ ಇದರ ಲಾಭವನ್ನು ಪಡೆದುಕೊಳ್ಳಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!