ಕರ್ನಾಟಕ ಅರಣ್ಯ ಇಲಾಖೆಯಲ್ಲಿ 2020 ನೇ ಸಾಲಿನ ಅರಣ್ಯ ಇಲಾಖೆಯಲ್ಲಿ ಒಟ್ಟೂ ಖಾಲಿ ಇರುವಂತಹ ವಿವಿಧ ರೀತಿಯ 3085 ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇದಕ್ಕೆ ಅರ್ಜಿಯನ್ನು ಸಲ್ಲಿಸುವುದರ ಕುರಿತಾಗಿ ಹೇಗೆ ಅರ್ಜೀಯನ್ನು ಸಲ್ಲಿಸಬೇಕು? ಯಾವ ಮೂಲಕ ಅರ್ಜೀಯನ್ನು ಸಲ್ಲಿಸಬೇಕು? ಯಾರೆಲ್ಲ ಅರ್ಜಿಯನ್ನು ಸಲ್ಲಿಸಬಹುದು ? ಬೇಕಾಗಿರುವ ಅರ್ಹತೆಗಳು ಹಾಗೂ ಇದಕ್ಕೆ ಅರ್ಜಿಯನ್ನು ಸಲ್ಲಿಸಲು ಬೇಕಾಗಿರುವ ದಾಖಲಾತಿಗಳು ಎನು ಅನ್ನೋದನ್ನ ವಿವರವಾಗಿ ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ಅರ್ಜಿಯನ್ನು ಆಹ್ವಾನಿಸಿದ ಇಲಾಖೆಯ ಹೆಸರು ಕರ್ಣಾಟ ಅರಣ್ಯ ಇಲಾಖೆ ನೇಮಕಾತಿ. ಕರ್ನಾಟಕ ಅರಣ್ಯ ಇಲಾಖೆಯಲ್ಲಿ ಸಧ್ಯ ಐದು ಬಗೆಯ ಹುದ್ದೆಗಳು ಖಾಲಿ ಇದ್ದು, ಈ ಐದು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆ ಐದು ಹುದ್ದೆಗಳನ್ನು ಯಾವುದು ಅಂತಾ ನೋಡುವುದಾದರೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ, ವಲಯ ಅರಣ್ಯಾಧಿಕಾರಿ, ಉಪ ವಲಯ ಅರಣ್ಯಾಧಿಕಾರಿ, ಅರಣ್ಯ ರಕ್ಷಕ ಹಾಗೂ ಅರಣ್ಯ ವೀಕ್ಷಕ ಈ ಐದು ಬಗೆಯ ಹುದ್ದೆಗಳಲ್ಲಿ ಒಟ್ಟೂ 3085 ಹುದ್ದೆಗಳು ಖಾಲಿ ಇದ್ದು ಇವುಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಇನ್ನು ಇದಕ್ಕೆ ಅರ್ಜಿ ಸಲ್ಲಿಸುವವರು ಏನೆಲ್ಲಾ ಅರ್ಹತೆ ಅಥವಾ ವಿದ್ಯಾರ್ಹತೆಯನ್ನು ಹೊಂದಿರಬೇಕು ಅಂತ ನೋಡುವುದಾದರೆ, ಹುದ್ದೆಗಳಿಗೆ ಅನುಗುಣವಾಗಿ, ಎಸೆಸೆಲ್ಸಿ, ಪಿಯುಸಿ ಹಾಗೂ ಗ್ರ್ಯಾಜುಯೆಟ್ ಆಗಿರಬೇಕು.
ಅರ್ಜಿ ಸಲ್ಲಿಸುವವರಿಗೇ ವಯಸ್ಸಿನ ಮಿತಿ ಎಂದರೆ 18 ವರ್ಷ ಆಗಿರಬೇಕು ಹಾಗೂ 32 ವರ್ಷ ದಾಟಿರಬಾರದು. ಇನ್ನು ಆಯ್ಕೆಯ ಪ್ರಕ್ರಿಯೆ ಹೇಗೆ ಇರುವುದು ಅಂತ ನೋಡುವುದಾದರೆ, ಇಲ್ಲಿ ಲಿಖಿತ ಪರೀಕ್ಷೆಯ ರೂಪದಲ್ಲಿ ಹಾಗೂ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು. ಆಯ್ಕೆ ಆದಂತಹ ಅಭ್ಯರ್ಥಿಗಳಿಗೆ ವೇತನ ಎಷ್ಟು ನೀಡಬಹುದು ಎನ್ನುವುದನ್ನು ತಿಳಿಯುವುದಾದರೇ, ಆಯ್ಕೆ ಆದ ಅಭ್ಯರ್ಥಿಗಳಿಗೆ ಪ್ರತೀ ತಿಂಗಳು 9,300 ರೂಪಾಯಿ ಇಂದ 34,800 ರೂಪಾಯಿ ವರೆಗೆ ಹುದ್ದೆಗೆ ಅನುಗುಣವಾಗಿ ಪ್ರತೀ ತಿಂಗಳು ವೇತನವನ್ನು ನೀಡಲಾಗುತ್ತದೆ. ಉದ್ಯೋಗ ಇರುವ ಸ್ಥಳ ಕರ್ನಾಟಕ.
ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯು ಈ ಹುದ್ದೆಗಳಿಗೆ ಸಂಬಂಧಿಸಿದಂತೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದೆ ಹಾಗೂ ಇನ್ನೂ ಅತೀ ಶೀಘ್ರದಲ್ಲೇ ಉದ್ಯೋಗಕ್ಕೆ ಸಂಬಂಧಿಸಿದಂತೆ ಇನ್ನೂ ಹೆಚ್ಚಿನ ಮಾಹಿತಿಯನ್ನು ಬಿಡುಗಡೆಗೊಳಿಸಿ ಒದಗಿಸಲಿದೆ.