ಪೊಲೀಸರು ಕಾನೂನನ್ನು ಜಾರಿಗೊಳಿಸಲು ನಾಗರಿಕರ ಸುರಕ್ಷತೆ ಆರೋಗ್ಯ ಮತ್ತು ಆಸ್ತಿಯನ್ನು ಖಚಿತಪಡಿಸಿಕೊಳ್ಳಲು ಮತ್ತು ಅಪರಾಧ ಮತ್ತು ನಾಗರಿಕ ಅಸ್ವಸ್ಥತೆಯನ್ನು ತಡಗಟ್ಟುವ ಉದ್ದೇಶದಿಂದ ರಾಜ್ಯದಿಂದ ಅಧಿಕಾರ ಪಡೆದ ವ್ಯಕ್ತಿಗಳ ಒಂದು ರಚಿತ ಸಂಸ್ಥೆಯಾಗಿದೆ .
ಅವರ ಕಾನೂನುಬದ್ಧ ಅಧಿಕಾರಗಳು ಬಂಧನ ಮತ್ತು ಹಿಂಸಾಚಾರದ ಏಕಸ್ವಾಮ್ಯದ ಮೂಲಕ ರಾಜ್ಯದಿಂದ ಕಾನೂನುಬದ್ಧಗೊಳಿಸಲಾದ ಬಲದ ಬಳಕೆಯನ್ನು ಒಳಗೊಂಡಿವೆ. ಕರ್ನಾಟಕ ಸರಕಾರವು ಉದ್ಯೋಗಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಖಾಲಿ ಇರುವ 12000 ಪೊಲೀಸ್ ಕಾನ್ಸ್ಟೇಬಲ್ ಮತ್ತು ಪೊಲೀಸ್ ಸಬ್ ಇನ್ಸ್ಪೆಕ್ಟರ್ ಹುದ್ದೆಗಳಿಗೆ ಬರ್ತಿಯನ್ನು ಶೀಘ್ರವೇ ಬರ್ತಿ ಮಾಡಲು ಸರಕಾರವು ಮುಂದಾಗಿದೆ ಎಂದು ಗೃಹ ಸಚಿವ ಆರಾಗ ಜ್ಞಾನೇಂದ್ರ ಮಾಹಿತಿ ನೀಡಿದ್ದಾರೆ
ಸಾಗರದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಸಚಿವರು ನಾಲ್ಕು ವರ್ಷಗಳ ಹಿಂದೆ 33 ಸಾವಿರ ಪೊಲೀಸ್ ಹುದ್ದೆಗಳು ಖಾಲಿ ಇದ್ದು ಇವಾಗ 12000 ಅಷ್ಟೆ ಹುದ್ದೆ ಖಾಲಿ ಇದೆ ಶೀಘ್ರವೇ ಆ ಹುದ್ದೆಯನ್ನು ಬರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ ಎಂದು ತಿಳಿಸಿದ್ದಾರೆ ಹೇಗೆ ಅರ್ಜಿ ಸಲ್ಲಿಸಬೇಕು ಎನ್ನುವುದರ ಮಾಹಿತಿ ಈ ಕೆಳಗಿನಂತೆ ಇದೆ.
ಈ ಹುದ್ದೆಗೆ ಲಿಂಗ ಬೇಧವಿಲ್ಲ ಪುರುಷರು ಮತ್ತು ಮಹಿಳೆಯರು ಇಬ್ಬರು ಅರ್ಜಿಯನ್ನು ಸಲ್ಲಿಸಬಹುದು ಅಭ್ಯರ್ಥಿಯ ವಯೋಮಿತಿ 18ರಿಂದ 27 ವರ್ಷದ ಒಳಗಿನವರು ಅರ್ಜಿ ಸಲ್ಲಿಸಲು ಅರ್ಹರು ಜನರಲ್ ಒಬಿಸಿ 2A 2B 3A 3B ಅಭ್ಯರ್ಥಿಗಳಿಗೆ 400 ರೂಪಾಯಿಗಳು ಮತ್ತು sc/ st ಅವರಿಗೆ 200 ರೂಪಾಯಿಗಳು ಇರುತ್ತದೆ ಹಣವನ್ನು ಆನ್ಲೈನ್ ಅಥವಾ ಆಫ್ಲೈನ್ ಎರಡು ವಿಧಗಳಲ್ಲಿ ಕೂಡ ಕಟ್ಟಬಹುದು ಪೊಲೀಸ್ ಹುದ್ದೆಯ ಅಧಿಕೃತ ವೆಬ್ಸೈಟ್ ಅಲ್ಲಿ ನಿಮ್ಮ ಸಂಪೂರ್ಣ ಮಾಹಿತಿಯನ್ನು ಬರ್ತಿ ಮಾಡಿ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬೇಕು
ಇನ್ನು ಈ ಹುದ್ದೆಗೆ PUC ITI joc ಅಲ್ಲಿ ಉತ್ತೀರ್ಣ ಆದಂತಹ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು ಅಗತ್ಯ ಇರುವ ಅಭ್ಯರ್ಥಿಗಳು ಈ ಒಂದು ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುವಂತೆ ಮನವಿ.