ಜ್ಯೋತಿಷ್ಯ ಖಗೋಳಶಾಸ್ತ್ರ ಹಾಗೂ ಜ್ಯೋತಿಷ್ಯಶಾಸ್ತ್ರವು ಸಾಂಪ್ರದಾಯಿಕ ಹಿಂದೂ ವ್ಯವಸ್ಥೆಯಾಗಿದೆ. ಹಿಂದೂ ಜ್ಯೋತಿಷ್ಯಶಾಸ್ತ್ರ ಅಂದರೆ ಭಾರತೀಯ ಜ್ಯೋತಿಷ್ಯ ಶಾಸ್ತ್ರ ಹೆಚ್ಚಿನ ಪ್ರಾಶಸ್ತ್ಯವನ್ನು ಹೊಂದಿದೆ. ಹಾಗೆಯೇ ವೈದಿಕ ಜ್ಯೋತಿಷ್ಯ ಶಾಸ್ತ್ರ ಎಂತಲೂ ಪರಿಚಿತವಾಗಿದೆ. ನಾವಿಂದು 2020 ಕನ್ಯಾ ರಾಶಿಯವರ ಫಲಾಫಲಗಳ ಬಗ್ಗೆ ತಿಳಿದುಕೊಳ್ಳೋಣ.

ಕನ್ಯಾ ರಾಶಿಯ ವ್ಯಕ್ತಿಗಳು ಹೊಸವರ್ಷದಲ್ಲಿ ಸರಾಸರಿ ಉತ್ತಮ ಅವಧಿಯನ್ನು ಹೊಂದಿರುತ್ತಾರೆ. ವೃತ್ತಿ ಕ್ಷೇತ್ರದಲ್ಲಿ ಸಾಕಷ್ಟು ಬದಲಾವಣೆಯನ್ನು ಕಾಣುತ್ತಾರೆ. ವರ್ಷದ ಅವಧಿಯ ಮುಂದುವರಿದಂತೆ ವ್ಯಕ್ತಿ ಜೀವನದಲ್ಲಿ ನಿಧಾನಗತಿಯ ವಿಕಸನವನ್ನು ಸಹ ಕಾಣುವರು. ವರ್ಷದ ಮಧ್ಯಭಾಗದಲ್ಲಿ ಸ್ಪಷ್ಟ ಫಲಿತಾಂಶವು ಗೋಚರಿಸುತ್ತದೆ. ಕೆಲವು ವಿಷಯಗಳಲ್ಲಿ ಸ್ಪಷ್ಟತೆಯನ್ನು ಕಂಡುಕೊಳ್ಳುವವರು ಕನ್ಯಾರಾಶಿಯವರು. ಆಸಕ್ತಿ ಕ್ಷೇತ್ರವನ್ನು ಬಿಟ್ಟು ಉಳಿದ ಕ್ಷೇತ್ರದಲ್ಲೂ ಸಹ ಸೂಕ್ತ ರೀತಿಯಲ್ಲಿ ಕೆಲಸವನ್ನು ನಿರ್ವಹಿಸುವರು. ನೂತನ ಕಾರ್ಯತಂತ್ರ ವಿಧಾನದಿಂದ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸುವರು.

2020 ವರ್ಷವೂ ಕನ್ಯಾ ರಾಶಿಯವರಿಗೆ ವರ್ಷದ ಆರಂಭವು ಸಾಕಷ್ಟು ಕೆಲಸಕಾರ್ಯಗಳನ್ನು ಒದಗಿಸಿಕೊಡುವುದು. ವೃತ್ತಿ ಕ್ಷೇತ್ರದಲ್ಲಿ ಹೊಂದಿರುವ ಮಹತ್ವದ ಗುರಿ ಹಾಗೂ ಯೋಜನೆಗಳು ಉತ್ತಮವಾಗಿ ನೆರವೇರುವುದು. ವಿಶೇಷವಾಗಿ ವ್ಯಾಪಾರ ಕ್ಷೇತ್ರದಲ್ಲಿ ಇರುವವರು ಆರ್ಥಿಕ ಪ್ರಗತಿಯನ್ನು ಹೊಂದುವರು. ಆದರೆ ಉದ್ಯೋಗಕ್ಕಾಗಿ ಸ್ಥಳ ಬದಲಾವಣೆ ಅಥವಾ ಉದ್ಯೋಗ ಬದಲಾವಣೆಗೆ ಸೂಕ್ತ ಸಮಯವಲ್ಲ ಎಂದು ಹೇಳಲಾಗುವುದು. ಅಂದುಕೊಂಡ ಕೆಲಸ ಸಾಧಿಸಲು ಉತ್ತಮ ಸಮಯ ಎಂದು ಹೇಳಲಾಗುವುದು.

ಹಾಗೆ ಕನ್ಯಾರಾಶಿಯವರ ಈ ವರ್ಷವು ಪ್ರೀತಿ ಪಾತ್ರರಿಂದ ಹಿಂದಿನ ವರ್ಷದಂತೆ ಈ ವರ್ಷವೂ ಯಥಾಸ್ಥಿತಿಯನ್ನು ತೋರುವರು. ಸಂಬಂಧದಲ್ಲಿ ಸ್ಥಿರತೆ ಹಾಗೂ ವಿಶ್ವಾಸವಿರುತ್ತದೆ. ಸಂಗಾತಿಗಳ ನಡುವೆ ಸಕಾರಾತ್ಮಕ ಭಾವನೆ ಇರುತ್ತದೆ. ಎಲ್ಲ ರೀತಿಯಲ್ಲೂ ಭದ್ರವಾದ ಭಾವನೆಯನ್ನು ತಳೆಯುವರು. ವರ್ಷದ ಮಧ್ಯ ಅವಧಿಯಲ್ಲಿ ಪ್ರೀತಿಯ ಪ್ರಮಾಣ ಕಡಿಮೆ ಆಗಬಹುದು. ಒಂಟಿಯಾಗಿ ಸ್ವಲ್ಪ ಸಮಯ ಕಳೆಯ ಬೇಕಾಗುವ ಸಾಧ್ಯತೆಗಳು ಇರುತ್ತದೆ.

2020 ಕನ್ಯಾ ರಾಶಿಯವರಿಗೆ ಉತ್ತಮವಾದ ಆರೋಗ್ಯ ಸ್ಥಿರತೆಯನ್ನು ಕಂಡುಕೊಳ್ಳಲು ನೆರವಾಗುತ್ತದೆ. ಹಾಗೂ ಈ ವರ್ಷದ ಮಧ್ಯಭಾಗದಲ್ಲಿ ಹಾಗೂ ಕೊನೆಯ ಸ್ವಲ್ಪ ಭಾಗದಲ್ಲಿ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಯವನ್ನು ಕಾಣಬಹುದು. ಈ ವರ್ಷದಲ್ಲಿ ಕನ್ಯಾ ರಾಶಿಯವರು ಭೀಕರ ಅನಾರೋಗ್ಯವನ್ನು ಕಾಣುವುದು ಅತಿ ವಿರಳ. ಈ ವರ್ಷದಲ್ಲಿನ ಕನ್ಯಾ ರಾಶಿಯವರು ಯಾವುದೇ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳುವಾಗ ಸ್ವಲ್ಪ ಯೋಚಿಸಿ ತೆಗೆದುಕೊಂಡರೆ ಉತ್ತಮ. ವ್ಯವಹಾರ ಹಾಗೂ ಕೆಲಸದ ಬಗ್ಗೆ ಅತಿಯಾದ ಚಿಂತನೆ ನಡೆಸಿ ಮತ್ತು ಮುಂದುವರೆಯಿರಿ.

ಒಡಹುಟ್ಟಿದವರು ಮತ್ತು ಸಂಬಂಧಿಕರು ಗಳೊಂದಿಗೆ ಉತ್ತಮ ಸಂಬಂಧವನ್ನು ಕಾಯ್ದುಕೊಳ್ಳಿ. ಯಾವುದೇ ರೀತಿಯ ಅನುಚಿತವಾದ ಹೂಡಿಕೆಗೆ ಮುಂದಾಗದಿರಿ. ಸೂಕ್ತ ಯೋಜನೆ ಹಾಗೂ ಚಿಂತನೆಯಿಂದ ಮಾತ್ರ ಮುಂದುವರಿಯಿರಿ. ಇಲ್ಲವಾದರೆ ನಷ್ಟ ಸಂಭವಿಸುವ ಸಾಧ್ಯತೆಗಳು ಇರುತ್ತದೆ. ಆದಷ್ಟು ವಿದ್ಯುತ್ ಉತ್ಪನ್ನಗಳಿಂದ ಹಾಗೂ ಬೆಂಕಿಯಿಂದ ದೂರವಿರಿ. ಹಾಗೂ ಗಣಪತಿಯ ದೇವಾಲಯಕ್ಕೆ ಆಗಾಗ ಭೇಟಿ ನೀಡಿ ವಿಶೇಷ ಪೂಜೆ ಹಾಗೂ ರಚನೆಯನ್ನು ಮಾಡಿಸಿ. ಬಡ ವಿದ್ಯಾರ್ಥಿಗಳಿಗೆ ಬೆಂಬಲವನ್ನು ನೀಡಬೇಕು. ಬಡವರಿಗೆ ದಾನವನ್ನು ಮಾಡಿದರೆ ಉತ್ತಮ ಆದಷ್ಟು ಕೇತುವಿನ ಜಪವನ್ನು ಮಾಡಬೇಕು. ಈ ವರ್ಷದಲ್ಲಿನ ಕನ್ಯಾ ರಾಶಿಯವರಿಗೆ ಹೊಂದುವಂತಹ ಬಣ್ಣ ಹಸಿರು ಮತ್ತು ನೀಲಿ. ಹೊಂದುವಂತಹ ಸಂಖ್ಯೆ 2,7 ಮತ್ತು 9.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!