ಮನೆಯೂ ವಾಸ್ತು ಪ್ರಕಾರವಾಗಿ ಇರುವುದು ತುಂಬಾ ಮುಖ್ಯ ವಾಗಿದೆ ಮನೆಯೂ ವಾಸ್ತು ಪ್ರಕಾರವಾಗಿ ಇದ್ದರೆ ನಕರಾತ್ಮಕ ಶಕ್ತಿಗಳು ಮನೆಯ ಒಳಗೆ ಪ್ರವೇಶ ಮಾಡುವುದು ಇಲ್ಲ ಪ್ರತಿಯೊಂದು ರೂಮ್ ಗಳು ಸರಿಯಾದ ದಿಕ್ಕಿನಲ್ಲಿ ಇರುವುದು ಬಹಳ ಮುಖ್ಯ ವಾಸ್ತುಪುರುಷ ಬಲವಾಗಿದ್ದರೆ ಮನೆಯ ಎಲ್ಲಸದಸ್ಯರೂ ಆರೋಗ್ಯವಂತರಾಗಿ ವಿದ್ಯಾವಂತರಾಗಿ ಹಾಗೂ ಆರ್ಥಿಕವಾಗಿಯೂ ಪ್ರಬಲರಾಗಿರುತ್ತಾರೆ ಈಶಾನ್ಯದಿಕ್ಕಿಗೆ ವಾಸ್ತುಶಾಸ್ತ್ರದಲ್ಲಿ ಪ್ರಥಮ ಆದ್ಯತೆ ನೀಡುತ್ತಾರೆ.
ಈಶಾನ್ಯ ಎಂದರೆ ಪೂರ್ವ ಮತ್ತು ಉತ್ತರ ದಿಕ್ಕಿನ ಮಧ್ಯ ಭಾಗ ಈ ದಿಕ್ಕಿನಲ್ಲಿ ಭಾರ ಕಡಿಮೆ ಇರಬೇಕು. ಈಶಾನ್ಯ ದಿಕ್ಕಿನಲ್ಲಿ ದೇವರ ಮನೆ ಇರಬೇಕು. ಇದರಿಂದ ಮನೆಯ ಯಜಮಾನನಿಗೂ ಹಾಗೂ ಮನೆಯ ಗಂಡು ಮಕ್ಕಳಿಗೆ ಉತ್ತಮ ಲಾಭವಾಗುತ್ತದೆ ನಾವು ಈ ಲೇಖನದ ಮೂಲಕ ವಾಸ್ತು ಪ್ರಕಾರದ ಮೂಲಕ ಯಾವ ಯಾವ ದಿಕ್ಕಿನಲ್ಲಿ ಯಾವ ಯಾವ ರೂಂಗಳು ಇರಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಮನೆ ವಾಸ್ತು ಸರಿಯಾಗಿ ಇದ್ದರೆ ಮನೆಗೆ ಸಕಾರಾತ್ಮಕ ಶಕ್ತಿ ದೊರಕುತ್ತದೆ ಆಯುಷ್ಯ ಆರೋಗ್ಯ ಧನ ಸಂಪತ್ತು ಪ್ರತಿಯೊಂದರ ಮೇಲೆ ಪ್ರಭಾವ ಬೀರುತ್ತದೆ ಉತ್ತರ ದಿಕ್ಕಿನಲ್ಲಿ ಬಾಲ್ಕನಿ ಬಾತ್ರೂಂ ಎಂಟ್ರೆನ್ಸ್ ಗಾರ್ಡನ್ ಲಿವಿಂಗ್ ರೂಮ್ ಲಾಂಡ್ರಿ ದೇವಸ್ಥಾನ ಹಾಗೂ ಮೆಡಿಟೇಶನ್ ರೂಮ್ ಹೇಗೆ ಸ್ಟೋ ರೂಮ್ ಸಹ ಮಾಡಬಹುದು ಹಾಗೆಯೇ ಈಶಾನ್ಯ ದಿಕ್ಕನ್ನು ದೇವಾಮುಲೆ ಎಂದು ಕರೆಯುತ್ತಾರೆ .ಒಂದು ಭೂಮಿ ಪೂಜೆಯನ್ನು ಸಹ ಈಶಾನ್ಯ ದಿಕ್ಕಿನಲ್ಲಿ ಮಾಡುವುದು ಉತ್ತಮ ಈ ದಿಕ್ಕಿನಲ್ಲಿ ಮನೆಯ ಹಿರಿಯರಿಗೆ ಬೆಡ್ ರೂಮ್ ಅನ್ನು ಮಾಡಬಹುದು ನೀರಿನ ಟ್ಯಾಂಕ್ ಸಹ ಮಾಡಬಹುದು ದೇವರ ಕೋಣೆಯನ್ನು ಈ ದಿಕ್ಕಿನಲ್ಲಿ ಮಾಡುವುದು ಉತ್ತಮ ನೀರಿನ ಸೆಲೆ ಸಿಕ್ಕುವ ದಿಕ್ಕು ಇದಾಗಿದೆ ಈ ದಿಕ್ಕಿನಲ್ಲಿ ಬಾತ್ರೂಂ ಹಾಗೂ ಅತಿಥಿಗಳ ರೂಮ್ ಅನ್ನು ಮಾಡಬಾರದು ಅಡುಗೆಮನೆ ಮೆಕ್ಯಾನಿಕಲ್ ರೂಮ್ ಅನ್ನು ಮಾಡಬಾರದು ಹಾಗೆಯೇ ಪೂರ್ವ ದಿಕ್ಕಿನಲ್ಲಿ ಎಂಟ್ರೆನ್ಸ್ ಬಾಲ್ಕನಿ ಮೀಟಿಂಗ್ ರೂಮ್ ಪೂಜೆಯ ಕೋಣೆ ಮಾಡಬಹುದು
ಆಗ್ನೇಯ ದಿಕ್ಕನ್ನು ಅಗ್ನಿ ಮೂಲೆ ಎಂದು ಕರೆಯುತ್ತಾರೆ ಈ ದಿಕ್ಕಿನಲ್ಲಿ ಗ್ಯಾಸ್ ಒಲೆ ಯನ್ನು ಇಡಬಹುದಾಗಿದೆ ಅಡುಗೆ ಮನೆಯನ್ನು ಮಾಡಬಹುದಾಗಿದೆ ಮನೆಯ ಮೀಟರ್ ಬೋಲ್ಡ್ ಸಹ ಈ ದಿಕ್ಕಿನಲ್ಲಿ ಮಾಡಬಹುದು ಈ ದಿಕ್ಕಿನಲ್ಲಿ ಬಾತ್ರೂಂ ಮಲಗುವ ಕೋಣೆ ಹಾಗೆ ಎಂಟ್ರೆನ್ಸ್ ನೀರಿನ ಟ್ಯಾಂಕ್ ಅನ್ನು ಮಾಡಬಾರದು ದಕ್ಷಿಣ ದಿಕ್ಕಿನಲ್ಲಿ ದೊಡ್ಡವರಿಗೆ ಬೆಡ್ ರೂಮ್ ಅನ್ನು ಮಾಡವುದು ಸೂಕ್ತವಲ್ಲ ಸಣ್ಣ ಮಕ್ಕಳಿಗೆ ಮಾಡಬಹುದು ಊಟದ ಕೊಠಡಿ ಹಾಗೂಲೈಬ್ರರಿ ಯನ್ನೂ ಸಹ ಮಾಡಬಹುದು ನೈರುತ್ಯ ದಿಕ್ಕು ಅನ್ನು ಕುಬೇರ ಮೂಲೆ ಎಂದು ಕರೆಯುತ್ತಾರೆ.
ಅಲ್ಲಿ ಅಡುಗೆ ಮನೆ ಮಕ್ಕಳ ಬೆಡ್ ರೂಂ ಹಾಗೂ ಸ್ಟಡಿ ರೂಂ ಅನ್ನು ಮಾಡಬಾರದು ಹಾಗೆಯೇ ಪಶ್ಚಿಮ ದಿಕ್ಕಿನಲ್ಲಿ ಮಕ್ಕಳ ಬೆಡ್ ರೂಮ್ ಡೈನಿಂಗ್ ರೂಮ್ ಲಿವಿಂಗ್ ರೂಮ್ ಹಾಗೂ ಸ್ಟಡಿ ರೂಮ್ ಸಹ ಮಾಡಬಹುದಾಗಿದೆ ವಾಯವ್ಯ ದಿಕ್ಕಿನಲ್ಲಿ ಯಂಗ್ ಹೆಣ್ಣು ಮಕ್ಕಳಿಗೆ ಈ ದಿಕ್ಕಿನಲ್ಲಿ ರೂಮ್ ಮಾಡಬಹುದು ಗೆಸ್ಟ್ ರೂಮ್ ಸಹ ಮಾಡಬಹುದು ಹಾಗೆಯೇ ಗ್ಯಾರೇಜ್ ಸಹ ಮಾಡಬಹುದು ಹಾಗೆಯೇ ಈ ದಿಕ್ಕಿನಲ್ಲಿ ಬಾತ್ರೂಂ ಹಾಗೂ ಬಾಲ್ಕನಿಯನ್ನು ಮಾಡಬಾರದು .
ಈ ರೀತಿ ಸರಿಯಾದ ದಿಕ್ಕಿನಲ್ಲಿ ಮನೆ ನಿರ್ಮಾಣ ಮಾಡುವುದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿಗಳು ನೆಲೆಸುತ್ತದೆ ಭೂಮಿ ಖರೀದಿ ಮಾಡುವಾಗ ಪೂರ್ವ ಹಾಗೂ ಉತ್ತರ ದಕ್ಷಿಣ ದಿಕ್ಕಿನಲ್ಲಿ ಇರುವ ಭೂಮಿ ಖರೀದಿ ಮಾಡಬೇಕು ಹಾಗೆಯೇ ಚೌಕಾಕಾರದ ಆಯತ ಆಕಾರದ ಮತ್ತು ವೃತ್ತದ ಆಕಾರದ ಭೂಮಿಯನ್ನು ಖರೀದಿ ಮಾಡುವುದು ಉತ್ತಮ. ಪೂರ್ವ ದಿಕ್ಕಿನ ಭೂಮಿ ತುಂಬಾ ಒಳ್ಳೆಯದು ಭೂಮಿ ಖರೀದಿ ಮಾಡುವಾಗ ದಕ್ಷಿಣ ಹಾಗೂ ಪಶ್ಚಿಮ ಎತ್ತರವಾಗಿ ಇರಬೇಕು ಹಾಗೆಯೇ ಉತ್ತರ ಹಾಗೂ ಪೂರ್ವ ದಿಕ್ಕಿನ ಜಾಗಗಳು ಇಳಿಜಾರಿನಲ್ಲಿ ಇರಬೇಕು ಹೀಗೆ ಇದ್ದಾಗ ತುಂಬಾ ಒಳ್ಳೆಯದು ಮನೆಯ ಮಧ್ಯಭಾಗವನ್ನು ಬ್ರಹ್ಮ ಸ್ಥಾನ ಎಂದು ಕರೆಯುತ್ತಾರೆ ನೀರಿನ ಟ್ಯಾಂಕ್ ಮಾಡುವಾಗ ಮನೆಯ ಮಧ್ಯದಲ್ಲಿ ಇಡಬಾರದು ಮನೆಯ ಹೊರಗಡೆ ಲೈಟ್ ಕಲರ್ ಅನ್ನು ಹಾಕಬೇಕು ಬೆಡ್ ರೂಮ್ ಗೆ ಗುಲಾಬಿ ಬಣ್ಣ ಹಚ್ಚಬೇಕು ಹೀಗೆ ಪ್ರತಿಯೊಂದು ವಾಸ್ತು ಪ್ರಕಾರವಾಗಿ ಮಾಡುವುದು ತುಂಬ ಒಳ್ಳೆಯದು .