ಟ್ರಿಪ್ ಹೋಗೋದು ಎಂಜಾಯ್ ಮಾಡುವುದು ಅಂದರೆ ಯಾರಿಗೆ ತಾನೇ ಇಷ್ಟ ಇರುವುದಿಲ್ಲ. ಸಂಕ್ರಮಣಕ್ಕೆ ಟ್ರಿಪ್ ಹೋಗುವವರಿದ್ದಾರೆ, ದೀಪಾವಳಿಗೆ ಹೋಗುವವರಿದ್ದಾರೆ, ಸಂಡೆ ಬಂತಂದ್ರೆ ಹೋಗುವವರಿದ್ದಾರೆ. ಎಲ್ಲಿಗೆ ಟ್ರಿಪ್ ಹೋಗುವುದಾದರೂ 2-3 ದಿನದ ಟ್ರಿಪ್ ಗೆ ಹೋಗುವುದಾದರೆ ಪ್ಲಾನ್ ಮಾಡಿಕೊಳ್ಳಬೇಕು. ಹಾಗಾದರೆ ಟ್ರಿಪ್ ಗೆ ಹೋಗೊ ಪ್ಲಾನ್ ಹೇಗಿರಬೇಕು ಎಂದು ಈ ಲೇಖನದ ಮೂಲಕ ತಿಳಿಯೋಣ.
ಟ್ರಿಪ್ ಗೆ ಹೋಗುವುದಾದರೆ ಬ್ಯಾಗ್ ಪ್ಯಾಕ್ ಬ್ಯಾಗ್ ತೆಗೆದುಕೊಳ್ಳಬೇಕು ಲಗೇಜ್ ತೆಗೆದುಕೊಂಡೆ ಎಲ್ಲಾ ಕಡೆ ಓಡಾಡಲು ಆಗುವುದಿಲ್ಲ ಆದ್ದರಿಂದ ಈ ಬ್ಯಾಗ್ ಟ್ರಿಪ್ ಗೆ ಒಳ್ಳೆಯದು. ಬಹಳ ಕಂಪಾರ್ಟ್ಮೆಂಟ್ಸ್ ಇರುವ ಬ್ಯಾಗನ್ನು ತೆಗೆದುಕೊಳ್ಳಬೇಕು. ಅದರಲ್ಲಿ ಎಲ್ಲಾ ವಸ್ತುಗಳನ್ನು ನೀಟಾಗಿ ಹೊಂದಿಸಿಕೊಳ್ಳಬಹುದು. ಈ ಬ್ಯಾಗ್ ನ್ನು ಮಕ್ಕಳಿಗೆ ಕೊಟ್ಟರೆ ಅವರೆ ಅವರ ಬಟ್ಟೆಗಳನ್ನು ಪ್ಯಾಕ್ ಮಾಡುತ್ತಾರೆ ಅವರು ಚಿಕ್ಕ ವಯಸ್ಸಿನಿಂದಲೇ ಕಲಿತ ಹಾಗೆ ಆಗುತ್ತದೆ. ಟ್ರಿಪ್ ಗೆ ಹೋಗುವ ಹಿಂದಿನ ದಿನವೇ ಬ್ಯಾಕ್ ಪ್ಯಾಕ್ ಮಾಡಿಕೊಳ್ಳಬೇಕು. ಮೊದಲೇ ಬೇಕಾದ ಬಟ್ಟೆಗಳನ್ನು ನೀಟಾಗಿ ಮಡಚಿ ಇಟ್ಟುಕೊಳ್ಳಬೇಕು ನಂತರ ಒಂದೊಂದಾಗಿ ತುಂಬಬೇಕು. ಈ ಬ್ಯಾಗ್ ನಲ್ಲಿ ಲ್ಯಾಪ್ ಟಾಪ್, ವಾಲೆಟ್, ಮೊಬೈಲ್ ಇಟ್ಟುಕೊಳ್ಳಲು ಬೇರೆಬೇರೆ ಕಂಪಾರ್ಟ್ಮೆಂಟ್ಸ್ ಇರುತ್ತವೆ. ಸೀಕ್ರೆಟ್ ಲಾಕರ್ ಜಿಪ್ ಕೂಡ ಇದೆ. ಜರ್ನಿ ಮಾಡುವಾಗ ಟ್ಯಾಬ್ಲೆಟ್ಸ್ ತುಂಬಾ ಮುಖ್ಯ ಅದನ್ನು ಒಂದು ಸಣ್ಣ ಸ್ಲಿಂಗ್ ಬ್ಯಾಗ್ ನಲ್ಲಿ ಇಟ್ಟುಕೊಳ್ಳಬೇಕು. ಕಾರಲ್ಲಿ ಹೋಗುವುದಾದರೆ ಹಿಂದಿನ ದಿನವೇ ಕಾರನ್ನು ಕ್ಲೀನ್ ಮಾಡಿಟ್ಟುಕೊಳ್ಳಬೇಕು ಮತ್ತು ಪೆಟ್ರೋಲ್ ಹಾಕಿಸಬೇಕು. ಪೆಟ್ರೋಲ್ ಬಂಕ್ ಬಳಿ ಪೆಟ್ರೋಲ್ ಹಾಕುವಾಗ ಮೊಬೈಲ್ ಬಳಕೆ ಮಾಡಬಾರದು. ಒಂದು ವೇಳೆ ಬಸ್ಸಿನಲ್ಲಿ, ಟ್ರೇನಲ್ಲಿ ಹೋಗುವುದಾದರೆ ಟಿಕೆಟ್ ರಿಸರ್ವ್ ಆಗಿರುವುದನ್ನು ಕನಫರ್ಮ್ ಮಾಡಿಕೊಳ್ಳಬೇಕು. ಬಸ್, ಟ್ರೇನಲ್ಲಿ ಐಡಿ ಕಾರ್ಡ್ ಚೆಕ್ ಮಾಡುವುದರಿಂದ ಅದನ್ನೆಲ್ಲ ಇಟ್ಟುಕೊಂಡಿರುವುದನ್ನು ನೋಡಿಕೊಳ್ಳಬೇಕು. ಹಿಂದಿನ ದಿನ ರಾತ್ರಿ ಮನೆಯನ್ನು ಕೂಡ ಕ್ಲೀನ್ ಮಾಡಬೇಕು. ಇಡೀ ಮನೆಯನ್ನು ಕ್ಲೀನ್ ಮಾಡದೆ ಇದ್ದರೂ ಕಿಚನ್ ಮಾತ್ರ ಕ್ಲೀನ್ ಮಾಡಬೇಕು ಮತ್ತು ಡಸ್ಟಬಿನ್ ನಲ್ಲಿರುವ ಕಸವನ್ನು ಕ್ಲೀನ್ ಮಾಡಿ ಹೋಗಬೇಕು.
ಪಾತ್ರೆಗಳನ್ನು ರಾತ್ರಿಯೇ ತೊಳೆದು ಕ್ಲೀನ್ ಮಾಡಿರಬೇಕು. ಕೆಲವು ಥಿಂಗ್ಸ್ ಗಳನ್ನು ಬೆಳಗ್ಗೆ ಪ್ಯಾಕ್ ಮಾಡಿಕೊಳ್ಳಬೇಕಾಗುತ್ತದೆ ಅವುಗಳನ್ನು ಬರೆದಿಟ್ಟುಕೊಳ್ಳಬೇಕು. ಬೆಳಗ್ಗೆ ಹೊರಡುವ ಮುನ್ನ ಆ ವಸ್ತುಗಳನ್ನು ಹಾಕಿದ್ದೀವ ಎಂದು ಚೆಕ್ ಮಾಡಬೇಕು. ಮಹಿಳೆಯರು ಜರ್ನಿ ಮಾಡುವಾಗ ಹೆಚ್ಚು ಮೇಕಪ್ ಹಾಕುವುದು ಸೂಕ್ತವಲ್ಲ. ಹೊರಡುವ ಅರ್ಧ ಗಂಟೆ ಮೊದಲೇ ರೆಡಿ ಆದರೆ ಒಳ್ಳೆಯದು ಎಲ್ಲ ಐಟಮ್ಸ್ ಹಾಕಿಕೊಳ್ಳಲು ಆಗುತ್ತದೆ. ಬಾಥ್ ರೂಮ್ ಐಟಮ್ಸ್ ಇಟ್ಟುಕೊಳ್ಳಲು ಒಂದು ಟ್ರಾನ್ಸಫರಂಟ್ ಜಿಪ್ ಇರುವ ಪೌಚ್ ಬಳಸಬೇಕು ಅದರಲ್ಲಿ ಬ್ರಶ್, ಪೇಸ್ಟ್, ಶಾಂಪೂ ಇದೆಲ್ಲವನ್ನು ಹಾಕಬೇಕು. ಸ್ನಾಕ್ಸ್ ತೆಗೆದುಕೊಳ್ಳುವುದು ಉತ್ತಮ. ಹೀಗೆ ಹಿಂದಿನ ದಿನವೇ ಪ್ಲಾನ್ ಮಾಡಿಕೊಂಡು ಅದರಂತೆ ಮಾಡಿದರೆ ಯಾವುದೇ ಟೆನ್ಷನ್ ಇಲ್ಲದೇ ಆರಾಮಾಗಿ ಟ್ರಿಪ್ ಗೆ ಹೋಗಬಹುದು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ ಟ್ರಿಪ್ ಎಂಜಾಯ್ ಮಾಡಿ.