ನಿಮ್ಮ ಮಕ್ಕಳಿಗೆ ನಾಟಿ ಔಷಧಿ ಕೊಡುವ ಮುನ್ನ ಈ ಸುದ್ದಿ ಓದಿ..

0 21,361

Kannada News: ಕೆಲವೊಮ್ಮೆ ನಾವು ಒಂದು ನಂಬಿಕೆ ಇಂದ ಮಕ್ಕಳಿಗೆ ಒಳ್ಳೆಯದಾಗಲಿ ಎಂದು ಮಾಡುವ ಕೆಲಸವೇ ನಮ್ಮ ಮಕ್ಕಳಿಗೆ ತೊಂದರೆ ಉಂಟು ಮಾಡಬಹುದು. ಹಾಗಾಗಿ ಮಕ್ಕಳಿಗೆ ಯಾವುದೇ ಔಷಧಿ ಕೊಡುವುದಕ್ಕಿಂತ ಮೊದಲು ಅದರ ಬಗ್ಗೆ ಸರಿಯಾಗಿ ತಿಳಿದುಕೊಂಡು ನಂತರ ಕೊಡಬೇಕು. ಇತ್ತೀಚೆಗೆ ನಡೆದಿರುವ ಒಂದು ಘಟನೆ ಈ ಮಾತಿಗೆ ಉದಾಹರಣೆ ಎನ್ನುವ ಹಾಗಿದೆ.

ತಂದೆ ತಾಯಿ ತಮ್ಮ 7 ವರ್ಷದ ಮಗನಿಗೆ ನಾಟಿ ಔಷಧಿ ಕೊಡಿಸಿದ್ದು, ಔಷಧಿ ಸೇವನೆ ನಂತರ 7 ವರ್ಷದ ಹುಡುಗ ಮೃತಪಟ್ಟಿದ್ದಾನೆ. ಅಷ್ಟೇ ಅಲ್ಲದೆ ಅದೇ ನಾಟಿ ಔಷಧಿ ಸೇವಿಸಿದ ಹುಡುಗನ ತಂದೆ ಮತ್ತು ಸಹೋದರಿ ಇಬ್ಬರನ್ನು ಕೂಡ ಆಸ್ಪತ್ರೆಗೆ ಸೇರಿಸಲಾಗಿದೆ. ಈ ಘಟನೆ ನಡೆದಿರುವುದು ಚಿಕ್ಕಬಳ್ಳಾಪುರ ಜಿಲ್ಲೆಯ ನಲ್ಲಗುಟ್ಟ ಪಾಳ್ಯದಲ್ಲಿ. 7 ವರ್ಷದ ಈ ಹುಡುಗನ ಹೆಸರು ವೇದೇಶ್.

ಬಾಲಕನ ತಾಯಿ ಹೆಸರು ಶಶಿಕಲಾ, ತಂದೆಯ ಹೆಸರು ಶ್ರೀನಿವಾಸ್. ಶ್ರೀನಿವಾಸ್ ಅವರು ತಾವು ನಾಟಿ ಔಷಧಿ ಕುಡಿದು, ತಮ್ಮ ಮಗಳು ವೈಶಾಲಿ ಮತ್ತು ಮಗ ವೇದೇಶ್ ಇಬ್ಬರಿಗೂ ಕೂಡ ಕುಡಿಸಿದ್ದಾರೆ. ಔಷಧಿ ತೆಗೆದುಕೊಂಡ ಬಳಿಕ ಮೂವರ ಆರೋಗ್ಯದಲ್ಲಿ ಏರು ಪೇರು ಉಂಟಾಗಿದೆ. ಬಳಿಕ ಮೂವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ. ಅಪ್ಪ ಮಗಳಿಗೆ ಚಿಕಿತ್ಸೆ ಕೊಡಲಾಗುತ್ತಿದ್ದು ಅವರಿಬ್ಬರು ಬದುಕುಳಿದಿದ್ದಾರೆ..

ಆದರೆ ಮಗ 7 ವರ್ಷದ ವೇದೇಶ್, ಇಹಲೋಕ ತ್ಯಜಿಸಿದ್ದಾನೆ. ಔಷಧಿ ಕುಡಿದ ನಂತರ ವೇದೇಶ್ ದೇಹದಲ್ಲಿ ಗುಳ್ಳೆಗಳು ಕಂಡುಬಂದಿವೆ, ಅವರ ಗ್ರಾಮದ ಸತ್ಯನಾರಾಯಣ ಎನ್ನುವ ವ್ಯಕ್ತಿ ನಾಟಿ ಔಷಧಿ ಕೊಟ್ಟಿದ್ದರು ಎಂದು ಹೇಳಲಾಗುತ್ತಿದೆ. ಮೂವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುವ ಸಮಯದಲ್ಲೇ ವೇದೇಶ್ ಇಹಲೋಕ ತ್ಯಜಿಸಿದ್ದಾನೆ.

ಇದನ್ನೂ ಓದಿ: Gruhalakshmi Scheme: ಗೃಹಲಕ್ಷ್ಮಿ ಯೋಜನೆಯ ಹಣ ಇನ್ನು ಅಕೌಂಟ್ ಗೆ ಬಂದಿಲ್ಲ ಅಂದ್ರೆ ಈ ಕೆಲಸ ಮಾಡಿ, ಒಂದೇ ಸಾರಿ 4000 ಬರುತ್ತೆ

Leave A Reply

Your email address will not be published.