ಮನುಷ್ಯನ ದೇಹವೂ ಕೂಡ ಒಂದು ರೀತಿಯ ರಹಸ್ಯವನ್ನು ಹೊಂದಿದೆ ಹೇಳಬಹುದು. ನಮಗೆ ಅದರ ಬಗೆಗೆ ಅಷ್ಟಾಗಿ ತಿಳಿದಿಲ್ಲ. ಸಂಶೋಧನೆ ಮಾಡುತ್ತಾ ಹೋದಷ್ಟು ಹೊಸ ವಿಚಾರಗಳು ತೆರೆಯುತ್ತಲೆ ಹೋಗುತ್ತಿವೆ. ಅದರಲ್ಲಿ ಕೆಲವು ಬೆನ್ನಲ್ಲಿ ಬಿಳುವ ಗುಳಿ ಏಕೆ ಬೀಳುತ್ತದೆ?, ಕಣ್ಣುಗಳು ಗುರುತಿಸಬಲ್ಲ ಬಣ್ಣಗಳೆಷ್ಟು? ಇಂತಹ ಹಲವಾರು ಪ್ರಶ್ನೆಗಳ ಉತ್ತರ ಹಾಗೂ ಮನುಷ್ಯನ ದೇಹದ ಹಲವಾರು ಸಂಗತಿಗಳ ಬಗೆಗೆ ಈ ಮಾಹಿತಿಯ ಮೂಲಕ ನಾವು ತಿಳಿಯೋಣ.
ಮನುಷ್ಯನು ತಿಂದ ಆಹಾರ ಜೀರ್ಣವಾಗಲೂ ಮುಖ್ಯ ಕಾರಣ ಬಾಯಲ್ಲಿರುವ ಎಂಜಲು. ಸಾರ್ವಜನಿಕ ಸ್ಥಳಗಳಲ್ಲಿ ಆಕಸ್ಮಿಕವಾಗಿ ಬಾಯಿಂದ ಎಂಜಲು ಹೊರಗೆ ಬಂದರೆ ಸೂತ್ತಲೂ ಇರುವವರು ಅಸಹಜವಾಗಿ,ಅಸಹ್ಯವಾಗಿ ನೋಡುತ್ತಾರೆ. ಆದರೆ ಪುಟ್ಟ ಮಗು ಬಾಯಲ್ಲಿ ಎಂಜಲು ಬಂದಾಗ ಅದ್ಭುತದಂತೆ ನೋಡುತ್ತೇವೆ, ಖುಷಿ ಪಡುತ್ತೇವೆ. ಹಾಗಾದರೆ ನಮ್ಮ ದೇಹದಲ್ಲಿ ಎಂಜಲಿನ ಉತ್ಪತ್ತಿಯ ಪ್ರಮಾಣ ಎಷ್ಟು ಎಂದು ಗೊತ್ತಾ. ಒಂದು ದಿನಕ್ಕೆ ಒಬ್ಬ ಮನುಷ್ಯನ ಬಾಯಲ್ಲಿ ಉತ್ಪತ್ತಿಯಾಗುವ ಎಂಜಲಿನ ಪ್ರಮಾಣ ಒಂದು ಬಿಯರ್ ಬಾಟಲ್ ನಷ್ಟು. ಒಬ್ಬ ಮನುಷ್ಯನ ಜೀವಿತಾವಧಿಯಲ್ಲಿ ಉತ್ಪತ್ತಿಯಾಗುವ ಎಂಜಲಿನ ಪ್ರಮಾಣ ಸುಮಾರು ಎರಡು ದೊಡ್ಡ ಈಜುಕೊಳದಷ್ಟು. ಪೋಲಿಸ್ ನಾಯಿಗಳು ಅಪರಾಧ ನಡೆದ ಜಾಗದಲ್ಲಿ ನೋಡಿ ಅಪರಾಧಿ ಕಂಡು ಹಿಡಿಯುವುದು ನಮಗೆ ಗೊತ್ತು ಹಾಗಾದರೆ ನಾಯಿಗಳು ಹೇಗೆ ಕಂಡು ಹಿಡಿಯುತ್ತವೆ ಎಂಬ ಪ್ರಶ್ನೆಗೆ ಉತ್ತರ ಮನುಷ್ಯನ ದೇಹದ ವಾಸನೆ. ಮನುಷ್ಯನ ದೇಹದ ವಾಸನೆ ಒಬ್ಬರಿಗಿಂತ ಒಬ್ಬರದು ಭಿನ್ನವಾಗಿರುತ್ತವೆ. ನಮ್ಮ ಮೆದುಳಿಗೆ ನೋವಾದರೆ ನಮಗೆ ತಿಳಿಯುವುದಿಲ್ಲ. ಈ ಸಂಗತಿ ತಿಳಿದಿದೆಯಾ. ದೇಹದ ಯಾವುದೇ ಕಡೆ ನೋವಾದರೂ ತಕ್ಷಣವೇ ನಮ್ಮ ಅರಿವಿಗೆ ಬರುತ್ತದೆ. ನಮ್ಮ ದೇಹದ ಇಂದ್ರಿಯದ ಸಂದೇಶ ಮೆದುಳಿಗೆ ತಲುಪಿದಾಗಲೆ ನಮಗೆ ನೋವಿನ ತೀವ್ರತೆಯ ಅರಿವು ಆಗುವುದು. ಮೆದುಳು ತನ್ನಗಾದ ನೋವನ್ನು ರವಾನಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮೆದುಳಿಗೆ ಏನೆ ನೋವಾದರೂ ನಮ್ಮ ಅರಿವಿಗೆ ಅದು ಬರುವುದಿಲ್ಲ. ಮೆದುಳಿನ ಆಪರೇಷನ್ ಸಮಯದಲ್ಲಿಯೂ ಕೂಡ ಅನಸ್ತೆಷೀಯಾ ನೀಡದೆಯೆ ಸರ್ಜರಿ ಮಾಡುತ್ತಾರೆ. ಯಾಕೆಂದರೆ ಮೆದುಳಿನಲ್ಲಿ ಆಗುತ್ತಿರುವ ನೋವು ನಮಗೆ ತಿಳಿಯುವುದಿಲ್ಲ.
ನಮ್ಮ ಬೆರಳುಗಳ ಅಚ್ಚು ಹೇಗೆ ಬೇರೆಯವರೊಂದಿಗೆ ಹೊಂದಿಕೆ ಆಗುವುದಿಲ್ಲವೊ ಹಾಗೆಯೆ ನಮ್ಮ ನಾಲಗೆಯ ಅಚ್ಚು ಕೂಡ ಬೇರೆ ಯಾರೊಂದಿಗೂ ಹೊಲಿಕೆ ಆಗುವುದಿಲ್ಲ. ನಮ್ಮ ಮೆದುಳು ಜಗತ್ತಿನ ಅತಿ ವೇಗದ ರೈಲಿಗಿಂತಲೂ ಅಧಿಕ ಪಟ್ಟು ವೇಗವಾಗಿ ಕೆಲಸ ಮಾಡುತ್ತದೆ. ಸೂಕ್ಷ್ಮವಾಗಿ ಗಮನಿಸಿ ಸಾಮಾನ್ಯವಾಗಿ ನಾವು ತಿನ್ನವ ಸಂದರ್ಭದಲ್ಲಿ ಉಸಿರಾಡಲು ಸಾಧ್ಯವಿಲ್ಲ. ಆದರೆ ಏಳು ತಿಂಗಳ ಸಮಯದ ವರೆಗೂ ಪುಟ್ಟ ಮಕ್ಕಳು ತಿನ್ನುವ ಸಮಯದಲ್ಲಿ ಉಸಿರಾಡುವ ಶಕ್ತಿಯನ್ನು ಹೊಂದಿದ್ದಾರೆ. ಒಬ್ಬ ಮನುಷ್ಯನ ದೇಹದಲ್ಲಿ ಏಳು ಬಾರ್ ಮಾಡುವಷ್ಟು ಕೊಬ್ಬಿನಾಂಶ ಇದೆ. ಒಂಭೈನೂರು ಪೆನ್ಸಿಲ್ ತಯಾರಿಸುವಷ್ಟು ಕಾರ್ಬನ್ ಇದೆ. ಒಂದು ಮನುಷ್ಯನ ದೇಹದಲ್ಲಿ ಇರುವ ನೀರು ಇಪ್ಪತ್ತೆರಡು ಬ್ಯಾರೆಲ್ ಗಳು ತುಂಬುವಷ್ಟು ಇದೆ. ಇದನ್ನು ನಂಬಲೆ ಬೇಕಾದ ಸತ್ಯ. ಕೆನ್ನೆಯಲ್ಲಿ ಬೀಳುವ ಗುಳಿಯಂತೆಯೆ ಸೊಂಟದಲ್ಲಿ ಕೂಡ ಎರಡು ಗುಳಿ ಬೀಳುತ್ತವೆ. ಇದು ಮನುಷ್ಯನ ದೇಹದ ಸಾಮಾನ್ಯ ರಚನೆ ಅಷ್ಟೆ. ಚರ್ಮವನ್ನು ಸೊಂಟಕ್ಕೆ ಸಂಪರ್ಕಿಸುವ ಅಸ್ತಿರಜ್ಜುಗಳು ಈ ರೀತಿಯ ಗುಳಿ ಬೀಳಲು ಕಾರಣ. ಹೆಚ್ಚಾಗಿ ಇದು ಮಹಿಳೆಯರಲ್ಲಿ ಕಾಣಬಹುದು. 19,312 ಕಿಲೋ ಮೀಟರ್ ಚಲಿಸಿದ ಪ್ರಮಾಣದಲ್ಲಿ ನಮ್ಮ ದೇಹದ ರಕ್ತ ಸಂಚಲನೆ ಆಗುತ್ತಿರುತ್ತದೆ. ಹತ್ತು ಲಕ್ಷ ಬಣ್ಣಗಳನ್ನು ನಮ್ಮ ಕಣ್ಣು ಗುರುತಿಸುತ್ತದೆ. ನಾವು ಸೀನುವ ವೇಗ ಗಂಟೆಗೆ 107 ಕಿಲೋಮೀಟರ್. ಕಣ್ಣಿನ ಕಾರ್ನಿಯಾ ಭಾಗವು ಗಾಳಿಯಿಂದಲೆ ಆಕ್ಸಿಜನ್ ತೆಗೆದುಕೊಳ್ಳುತ್ತದೆ. ದೇಹದಲ್ಲಿ ರಕ್ತ ಸಂಚಾರವಾಗದ ಒಂದೆ ಒಂದು ಭಾಗ ಕಾರ್ನಿಯಾ. ಕಂಪ್ಯೂಟರ್ ನ ಲಕ್ಷಾಂತರ ಟೆರ್ರಾ ಬೈಟ್ ಗಳಿಗಿಂತಲೂ ಹೆಚ್ಚು ಮೆಮೊರಿ ಪವರ್ ನಮ್ಮ ಮೆದುಳಿಗೆ ಇದೆ.
ನಮ್ಮ ದೇಹದಲ್ಲಿ ಇರುವ ಕೂತುಹಲಕಾರಿ ವಿಷಯಗಳ ಪರಿಚಯ ನಮಗೆ ಇರುವುದಿಲ್ಲ. ಇದನ್ನು ಬೇರೆ ಯಾವುದೋ ಮಾಧ್ಯಮದ ಮೂಲಕ ನಮಗೆ ತಿಳಿದಾಗ ದಿಗ್ಬ್ರಾಂತಿಗೆ ಒಳಗಾಗುತ್ತೆವೆ. ಇಲ್ಲಿ ಇರುವುದು ಕೇವಲ ಬೆರಳೆಣಿಕೆಯಷ್ಟು ಮಾತ್ರವೇ. ಇನ್ನೂ ಹಲವಾರು ಸಂಗತಿಗಳು ಅನಾವರಣ ಆಗದಿರುವುದು ಇದೆ.