ನಮ್ಮ ಭಾರತ ಹಲವಾರು ಶ್ರೇಷ್ಠ ವ್ಯಕ್ತಿಗಳನ್ನು ಮತ್ತು ಅವರ ಆದರ್ಶಗಳನ್ನು ನಮಗೆ ಉಡುಗೊರೆಯಾಗಿ ನೀಡಿದೆ. ಅಂತಹ ಮಹಾನ್ ವ್ಯಕ್ತಿಗಳಲ್ಲಿ ಚಾಣಕ್ಯ ಕೂಡ ಒಬ್ಬರು. ಅವರ ಮಾತುಗಳು, ನೀತಿಗಳು ಮತ್ತು ಕಟುವಾದ ಸತ್ಯಗಳು ಅತ್ಯಂತ ಅದ್ಭುತವಾಗಿದೆ. ಮನುಷ್ಯ ಇವುಗಳಿಂದ ತನ್ನ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಬಹುದಾಗಿದೆ. ಈ ಸಮಾಜದಲ್ಲಿ ಉತ್ತಮವಾಗಿ ಬದುಕಬೇಕು ಎಂದರೆ ಚಾಣಕ್ಯರ ನೀತಿಗಳನ್ನು ಪಾಲಿಸಬೇಕು. ಆದ್ದರಿಂದ ನಾವು ಇಲ್ಲಿ ಚಾಣಕ್ಯರ ನೀತಿಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಕಷ್ಟದಲ್ಲಿ ಇದ್ದವರಿಗೆ ಸಹಾಯ ಮಾಡಬೇಕು ಎಂದು ಎಲ್ಲರಿಗೂ ಮನೆಯಲ್ಲಿ ಹೇಳಿಕೊಟ್ಟಿರುತ್ತಾರೆ. ಸಹಾಯವನ್ನು ಹೇಗೆ ಬೇಕಾದರೂ ಮಾಡಬಹುದು. ಹಣದ ರೂಪದಲ್ಲಿ ಅಥವಾ ಬೇರೆ ಯಾವುದೇ ರೀತಿಯಲ್ಲೂ ಸಹಾಯ ಮಾಡಬಹುದು. ಇದು ಒಂದು ಒಳ್ಳೆಯ ಸಂಸ್ಕಾರ ಎಂದು ತಿಳಿಯಬಹುದು. ಆದರೆ ಸಹಾಯವನ್ನು ಎಲ್ಲರಿಗೂ ಮಾಡಬಾರದು. ಏಕೆಂದರೆ ಕೆಲವರಿಗೆ ಸಹಾಯ ಮಾಡಿದ್ದು ನೆನಪೇ ಇರುವುದಿಲ್ಲ. ಆದರೆ ಮೂರು ವ್ಯಕ್ತಿಗಳಿಗೆ ಸಹಾಯ ಮಾಡಬಾರದು ಎಂದು ಚಾಣಕ್ಯ ಅವರು ಹೇಳಿದ್ದಾರೆ.
ಮೊದಲನೆಯದಾಗಿ ಚಾಣಕ್ಯ ಅವರ ಪ್ರಕಾರ ಕೆಲವು ವಿಷಯಗಳಲ್ಲಿ ಮಹಿಳೆಯರಿಗೆ ಸಹಾಯ ಮಾಡಬಾರದು. ಪ್ರತಿಯೊಬ್ಬ ಮಹಿಳೆಯರು ಸಹಾಯಕ್ಕೆ ಯೋಗ್ಯ ಎನಿಸಿಕೊಂಡಿರುವುದಿಲ್ಲ. ಯಾವ ಮಹಿಳೆಯರು ತಮ್ಮ ತಪ್ಪು ಕೆಲಸಗಳಿಂದ ತೊಂದರೆಯಲ್ಲಿ ಸಿಲುಕಿರುತ್ತಾರೋ ಅವರ ಕೆಲಸವು ಕೆಟ್ಟದ್ದನ್ನು ಮಾಡುತ್ತದೆ. ಹಾಗೆಯೇ ಸಮಸ್ಯೆಗೆ ಬಲಿಯಾಗುತ್ತಾರೆ. ಇಂತಹ ಮಹಿಳೆಯರಿಂದ ದೂರ ಇರಬೇಕು. ಹಾಗೆಯೇ ಅವರಿಗೆ ಸಹಾಯ ಮಾಡದೇ ಇರುವುದು ಒಳಿತು.
ಎರಡನೆಯದಾಗಿ ಯಾವುದೇ ಕಾರಣವಿಲ್ಲದೆ ಚಿಕ್ಕ ವಿಷಯಗಳಿಗೆ ಬೇಸರ ಮಾಡಿಕೊಂಡು ಬದುಕುವ ವ್ಯಕ್ತಿಗಳಿಂದ ದೂರ ಇರುವುದು ಒಳ್ಳೆಯದು. ಇಂತಹವರಿಗೆ ಸಹಾಯ ಮಾಡಬಾರದು. ಒಂದು ವೇಳೆ ಸಹಾಯ ಮಾಡಿದರೂ ಕೂಡ ಅವರಿಗೆ ಖುಷಿ ಸಿಗುವುದಿಲ್ಲ. ಇವರು ಯಾವಾಗಲೂ ದುಃಖದಲ್ಲಿಯೇ ಇರುತ್ತಾರೆ. ಇದರಿಂದ ಉಳಿದವರು ಖುಷಿಯಾಗಿ ಇರಲು ಸಾಧ್ಯವಿಲ್ಲ.ಇಂತಹವರಲ್ಲಿ ನಕಾರಾತ್ಮಕ ಭಾವನೆಗಳು ಹೆಚ್ಚಾಗಿ ತುಂಬಿರುತ್ತವೆ. ಸಹಾಯ ಮಾಡಿದರೂ ಸಹ ಸಹಾಯ ಮಾಡಿದವರೇ ದೋಷಿಗಳಾಗುವ ಸಂಭವ ಹೆಚ್ಚು.
ಮೂರನೆಯದಾಗಿ ಮೂರ್ಖ ವ್ಯಕ್ತಿಗಳಿಗೆ ಸಹಾಯ ಮಾಡಬಾರದು. ಇವರಿಗೆ ಸಹಾಯ ಮಾಡಿದರೆ ಸಹಾಯ ಮಾಡಿದ ವ್ಯಕ್ತಿಯೇ ಮೂರ್ಖನಾಗುತ್ತಾನೆ. ಏಕೆಂದರೆ ಒಂದು ಬಾರಿ ಮೂರ್ಖರಿಗೆ ಸಹಾಯ ಮಾಡಿದರೆ ಅವರಿಗೆ ಅರ್ಥವಾಗುವುದಿಲ್ಲ. ಎರಡನೇ ಬಾರಿ ಸಹಾಯ ಮಾಡಿದರೂ ಕೂಡ ಅವರ ಮೂರ್ಖತೆ ಅವರನ್ನು ಮೂರ್ಖರನ್ನಾಗಿಯೇ ಮಾಡುತ್ತದೆ. ಹಾಗಾಗಿ ಇವರಿಗೆ ಎಷ್ಟು ಸಹಾಯ ಮಾಡಿದರೂ ಏನೂ ಪ್ರಯೋಜನವಿಲ್ಲ. ಏಕೆಂದರೆ ಕೊನೆಯದಾಗಿ ಎಲ್ಲವನ್ನೂ ನಾಶಮಾಡಿಕೊಳ್ಳುತ್ತಾರೆ.