ಗ್ರಾಮೀಣ ಭಾಗದಲ್ಲಿ ಕೆಲವರಿಗೆ ತಮ್ಮದೇ ಆದ ಸ್ವಂತ ಉದ್ಯೋಗವನ್ನು ಪ್ರಾರಂಭಿಸಬೇಕು ಎಂಬ ಆಸೆ ಇರುತ್ತದೆ ಆದರೆ ಯಾವ ಉದ್ಯೋಗ ಮಾಡಬೇಕು ಅದರಿಂದ ಹೇಗೆ ಲಾಭ ಗಳಿಸಬೇಕು ಎಂಬುದರ ಬಗ್ಗೆ ಗೊಂದಲ ಇರುತ್ತದೆ ಹಾಗಾಗಿ ನಾವು ಇಂದು ಕಡಿಮೆ ಬಂಡವಾಳದ ಉತ್ತಮವಾದ ಉದ್ಯಮದ ಬಗ್ಗೆ ತಿಳಿದುಕೊಳ್ಳೋಣ. ಈ ಉದ್ಯಮಕ್ಕೆ ಬಂಡವಾಳ ಎಷ್ಟು ಬೇಕು ಯಾವರಿತಿಯ ಯಂತ್ರೋಪಕರಣ ಬೇಕು ಲಾಭ ಎಸ್ಟು ಸಿಗುತ್ತದೆ ಮಾರ್ಕೆಟಿಂಗ್ ಮಾಡುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿದುಕೊಳ್ಳೋಣ.
ಹಳ್ಳಿಯಲ್ಲೇ ಇದ್ದು ಲಕ್ಷಗಟ್ಟಲೆ ಆದಾಯ ಪಡೆಯುವ ಉದ್ಯೋಗ ಎಂದರೆ ತೆಂಗಿನಕಾಯಿ ಸಿಪ್ಪೆಯನ್ನು ತೆಗೆಯುವುದು ಮತ್ತು ಮಾರಾಟ ಮಾಡುವುದು. ಆದರೆ ಈ ಉದ್ಯೋಗ ಕೆಲವು ಪ್ರದೇಶಗಳಲ್ಲಿ ಮಾತ್ರ ಯಶಸ್ವಿಯಾಗುತ್ತದೆ. ಯಾವ ಪ್ರದೇಶದಲ್ಲಿ ತೆಂಗು ಹೆಚ್ಚು ಬೆಳೆಯುತ್ತಾರೆ ಅಲ್ಲಿ ಈ ಉದ್ಯೋಗವನ್ನು ಮಾಡಬಹುದು. ತೆಂಗಿನ ಕಾಯಿಯನ್ನು ಎಲ್ಲರೂ ಪ್ರತಿದಿನ ಬಳಸುತ್ತಿರುತ್ತೇವೆ.
ದಿನ ನಿತ್ಯದ ಅಡುಗೆಯಲ್ಲಿ ಬಳಸುತ್ತಾರೆ ದೇವರ ಪೂಜೆಗೆ ಸಿಹಿ ತಿಂಡಿಗಳನ್ನು ತಯಾರಿಸಲು ಬಳಸುತ್ತಾರೆ ಕೊಬ್ಬರಿ ಎಣ್ಣೆ ತಯಾರಿಸಲು ಬಳಸುತ್ತಾರೆ. ಹಾಗಾಗಿ ಪ್ರತಿ ದಿನ ಕಾಯಿಗೆ ಬೇಡಿಕೆ ಇದ್ದೆ ಇರುತ್ತದೆ. ಹಾಗಾಗಿ ನೀವು ಈ ಉದ್ಯಮವನ್ನು ಆರಂಭ ಮಾಡಿದರೆ ಒಳ್ಳೆಯ ಆದಾಯವನ್ನು ಗಳಿಸಬಹುದು.
ನೀವು ಈ ಉದ್ಯೋಗವನ್ನು ಆರಂಭಿಸುವ ಮೊದಲು ನಿಮಗೆ ತೆಂಗಿನಕಾಯಿ ಸಿಪ್ಪೆ ತೆಗೆಯುವ ಯಂತ್ರ ಬೇಕಾಗುತ್ತದೆ. ಇದರ ಬೆಲೆ ಒಂದುಲಕ್ಷ ದಿಂದ ಐದುಲಕ್ಷದವರೆಗೆ ಇರುತ್ತದೆ. ಯಂತ್ರದ ಗಾತ್ರದ ಮೇಲೆ ಬೆಲೆ ನಿರ್ಧರಿತ ಆಗಿರುತ್ತದೆ. ಇದಕ್ಕೆ ಉತ್ತಮ ಗುಣಮಟ್ಟದ ಮೋಟಾರ್ಸ್ ಬೇಕಾಗಿರುವುದರಿಂದ ಎರಡು ಎಚ್ ಪಿ ಐದು ಎಚ್ ಪಿ ಏಳು ಎಚ್ ಪಿ ಯಂತ್ರಗಳು ಇರುತ್ತದೆ ಹಾಗಾಗಿ ಬೆಲೆಗಳಲ್ಲಿ ಹೆಚ್ಚು ಕಡಿಮೆ ಇರುತ್ತದೆ. ನೀವು ಒಂದು ದಿನಕ್ಕೆ ಎಷ್ಟು ಉತ್ಪನ್ನ ಮಾಡಬೇಕು ಅದುಂಕೊಂಡಿರುತ್ತಿರೊ ಅದರ ಮೇಲೆ ನೀವು ಯಂತ್ರವನ್ನು ಆಯ್ಕೆ ಮಾಡಿಕೊಳ್ಳಬೇಕು.
ಇನ್ನು ಇದಕ್ಕೆ ಮುಖ್ಯವಾಗಿ ಬೇಕಾಗಿರುವುದು ತೆಂಗಿನಕಾಯಿ ನೀವು ಉದ್ಯೋಗವನ್ನು ಪ್ರಾರಂಭಿಸುವ ಮೊದಲು ಎಲ್ಲಿ ಹೆಚ್ಚು ತೆಂಗಿನಕಾಯಿ ಬೆಳೆಯುತ್ತಾರೆ ಆ ಪ್ರದೇಶವನ್ನು ಆಯ್ಕೆ ಮಾಡಿಕೊಳ್ಳಬೇಕು ಹಾಗೆ ಮಾಡಿದಾಗ ಪ್ರತಿ ದಿನ ನಿಮಗೆ ಕೆಲಸ ಇರುತ್ತದೆ. ತೆಂಗಿನ ಕಾಯಿ ದೊರೆಯದ ಪ್ರದೇಶದಲ್ಲಿ ಈ ಉದ್ಯೋಗವನ್ನು ನೀವು ಪ್ರಾರಂಭಿಸಿದರೆ ನಿಮಗೆ ಯಾವುದೇ ಲಾಭ ದೊರೆಯುವುದಿಲ್ಲ ಯಾಕೆಂದರೆ ನಿಮಗೆ ಪ್ರತಿದಿನ ತೆಂಗಿನ ಕಾಯಿ ದೊರೆಯುವುದಿಲ್ಲ.
ಇನ್ನು ನೀವು ತೆಂಗಿನ ಕಾಯಿ ದೊರೆಯುವ ಪ್ರದೇಶದಿಂದ ಆಮದು ಮಾಡಿಕೊಳ್ಳುತ್ತೇವೆ ಎಂದರೆ ಇದಕ್ಕೆ ಸಾರಿಗೆ ವೆಚ್ಚ ತಗಲುತ್ತದೆ. ಇದರಿಂದಾಗಿ ಹೆಚ್ಚಿನ ಲಾಭ ದೊರೆಯುವುದಿಲ್ಲ ಹಾಗಾಗಿ ನೀವು ತೆಂಗಿನ ತೋಟ ಇರುವ ಕಡೆ ಉದ್ಯೋಗ ಪ್ರಾರಂಭಿಸಿದರೆ ಒಳ್ಳೆಯದು. ಇನ್ನು ನೀವು ಉದ್ಯಮ ಪ್ರಾರಂಭಿಸುವ ಸ್ಥಳದಲ್ಲಿ ಇರುವ ರೈತರ ಜೊತೆ ತೆಂಗಿನ ಕಾಯಿಯನ್ನು ನಿಮಗೆ ಪೂರೈಕೆ ಮಾಡುವಂತೆ ಅವರ ಜೊತೆಗೆ ಕೆಲವು ವರ್ಷದ ಒಪ್ಪಂದ ಮಾಡಿಕೊಳ್ಳಬೇಕು.
ನಂತರ ಕೆಲಸವನ್ನು ಪ್ರಾರಂಭಿಸಬೇಕು ಇದಕ್ಕೆ ಇಬ್ಬರು ಕೆಲಸಗಾರರ ಅವಶ್ಯಕತೆ ಇರುತ್ತದೆ. ಈ ಯಂತ್ರಕ್ಕೆ ತೆಂಗಿನ ಕಾಯಿಯನ್ನು ಹಾಕಿದಾಗ ಅದು ಮೇಲಿನ ಸಿಪ್ಪೆಯನ್ನು ತೆಗೆದು ಕೆಳಗೆ ಹಾಕುತ್ತದೆ ಈ ಯಂತ್ರ ಒಂದು ಗಂಟೆಗೆ ಎರಡುನೂರಾ ಐವತ್ತು ತೆಂಗಿನ ಕಾಯಿಗಳ ಸಿಪ್ಪೆಯನ್ನು ತೆಗೆಯುತ್ತದೆ. ಅಂದರೆ ದಿನಕ್ಕೆ ನಾಲ್ಕು ಗಂಟೆ ಕೆಲಸ ಮಾಡಿದರೂ ಒಂದು ಸಾವಿರ ತೆಂಗಿನಕಾಯಿ ಸಿಪ್ಪೆಯನ್ನು ತೆಗೆಯಬಹುದು.
ಇನ್ನು ಇದರಿಂದ ಆದಾಯ ಹೇಗೆ ದೊರೆಯುತ್ತದೆ ಎಂಬುದನ್ನು ನೋಡುವುದಾದರೆ ಹೋಲ್ ಸೇಲ್ ಆಗಿ ರೈತರಿಂದ ಒಂದು ಸಿಪ್ಪೆ ತೆಂಗಿನಕಾಯಿ ಏಳು ರೂಪಾಯಿಗೆ ಸಿಗುವ ಸಾಧ್ಯತೆ ಇರುತ್ತದೆ ಇನ್ನು ವಾಹನ ವೆಚ್ಚ ಕರೆಂಟ್ ಬಿಲ್ ಗೆ ಮೂರು ರೂಪಾಯಿಯನ್ನು ತೆಗೆದರೆ ಒಂದು ಸಿಪ್ಪೆ ತೆಂಗಿನಕಾಯಿಯನ್ನು ಕಾಯಿಯಾಗಿ ಪರಿವರ್ತಿಸಲು ಹತ್ತು ರೂಪಾಯಿವರೆಗೆ ಖರ್ಚಾಗುತ್ತದೆ.
ಮಾರುಕಟ್ಟೆಯಲ್ಲಿ ಆ ಕಾಯಿಗಳನ್ನು ಗಾತ್ರದ ಆಧಾರದ ಮೇಲೆ ಇಪ್ಪತ್ತು ರುಪಾಯಿಗಳವರೆಗೂ ಮಾರಾಟ ಮಾಡುತ್ತಾರೆ ನೀವು ಹೋಲ್ ಸೇಲ್ ಆಗಿ ಇಪ್ಪತ್ತೈದು ರೂಪಾಯಿಗಳ ವರೆಗೆ ಮಾರಾಟ ಮಾಡಬಹುದು. ಇದರಿಂದ ನಿಮಗೆ ಒಂದು ಕಾಯಿಯ ಮೇಲೆ ಐದು ರೂಪಾಯಿ ಲಾಭ ಸಿಗುತ್ತದೆ.
ನೀವು ಒಂದು ದಿನಕ್ಕೆ ಒಂದು ಸಾವಿರ ತೆಂಗಿನ ಕಾಯಿ ಸಿಪ್ಪೇತೆಗೆದು ಮಾರಾಟ ಮಾಡಿದರೆ ನಿಮಗೆ ಐದುಸಾವಿರ ಲಾಭ ದೊರೆಯುತ್ತದೆ. ನೀವು ತಿಂಗಳಲ್ಲಿ ಇಪ್ಪತ್ತು ದಿನ ಕೆಲಸ ಮಾಡಿದರು ಲಕ್ಷ ಆದಾಯ ಪಡೆಯಬಹುದು. ಇನ್ನು ಕಾಯಿಯ ಸಿಪ್ಪೆಯನ್ನು ಮಾರುವುದರಿಂದ ಅದರಿಂದಲೂ ಲಾಭ ಗಳಿಸಬಹುದು.
ಈ ಕಾಯಿ ಸಿಪ್ಪೆಗಳನ್ನು ಸೋಫಾ ತಯಾರಿಸುವ ಕಂಪನಿಗಳಿಗೆ ಕೂಲರ್ ತಯಾರಿಸುವ ಕಂಪನಿಗಳಿಗೆ ಪೂರೈಕೆ ಮಾಡಬಹುದು. ಒಂದು ಕೇಜಿ ಕಾಯಿ ಸಿಪ್ಪೆಗೆ ಒಂಬತ್ತು ರೂಪಾಯಿಗಳವರೆಗು ಸಿಗುತ್ತದೆ. ಸಿಪ್ಪೆಯನ್ನು ಬೇರ್ಪಡಿಸಿದ ನಂತರ ಸಿಗುವ ಪುಡಿಯನ್ನು ಕೊಕೊನಟ್ ಫಿಟ್ ಎನ್ನುತ್ತಾರೆ.
ಇದಕ್ಕೂ ಕೂಡ ಮಾರುಕಟ್ಟೆಯಲ್ಲಿ ತುಂಬಾ ಬೇಡಿಕೆ ಇದೆ. ಇದನ್ನು ನರ್ಸರಿಗಳಲ್ಲಿ ಬಳಸುತ್ತಾರೆ ಇದನ್ನು ಮಾರಾಟ ಮಾಡಬಹುದು. ಇನ್ನು ಕೆಲವು ಕಂಪನಿಯವರು ಕೊಕೊನಟ್ ಬ್ರಿಕ್ಸ್ ಗಳನ್ನು ತಯಾರಿಸುತ್ತಾರೆ ಆದ್ದರಿಂದ ಒಂದು ಕೇಜಿ ಕೊಕೊಪೌಡರ್ ಗೆ ಹನ್ನೆರಡು ರೂಪಾಯಿ ದೊರೆಯುತ್ತದೆ ಈ ರೀತಿ ಮಾಡುವುದರಿಂದ ಹೆಚ್ಚಿನ ಆದಾಯವನ್ನು ಗಳಿಸಬಹುದು.
ಇನ್ನು ತೆಂಗಿನಕಾಯಿಗಳನ್ನು ದಿನನಿತ್ಯ ಎಲ್ಲರೂ ಬಳಸುವುದರಿಂದ ಅದನ್ನು ಮಾರಾಟ ಮಾಡುವುದಕ್ಕೆ ತೊಂದರೆ ಆಗುವುದಿಲ್ಲ. ಮಾರಾಟ ಮಾಡುವುದಕ್ಕೆ ನೀವು ಕೆಲವು ಸ್ಥಳಗಳನ್ನು ಆಯ್ಕೆ ಮಾಡಿಕೊಂಡರೆ ಅವರೆ ಬಂದು ನಿಮಗೆ ಆರ್ಡರ್ ಕೊಡುತ್ತಾರೆ. ನೋಡಿದಿರಲ್ಲ ಸ್ನೇಹಿತರೆ ಈ ಒಂದು ಉದ್ಯಮದಿಂದ ಯಾವೆಲ್ಲ ರೀತಿಯ ಆದಾಯವನ್ನು ಪಡೆಯಬಹುದು ಎಂಬುದನ್ನು ನೀವು ಕೂಡ ಈ ರೀತಿಯ ಉದ್ಯೋಗವನ್ನು ಪ್ರಾರಂಭಿಸಿ ಆದಾಯವನ್ನು ಪಡೆಯಬಹುದು.