ಅತ್ಯಂತ ಕುತೂಹಲಕಾರಿ ಕನ್ನಡದ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 8 ಜನರಲ್ಲಿ ಇಂಟ್ರೆಸ್ಟ ಮೂಡಿಸಿತ್ತು ಆದರೆ ಕೊರೋನ ವೈರಸ್ ದಿನೇ ದಿನೇ ವೇಗವಾಗಿ ಹರಡುತ್ತಿರುವ ಕಾರಣ ಬಿಗ್ ಬಾಸ್ ಸೀಸನ್ 8 ಶೋವನ್ನು 72 ದಿನಗಳಿಗೆ ಅಂತ್ಯ ಮಾಡಲಾಯಿತು. 10 ವಾರಗಳನ್ನು ಪೂರೈಸಿದ ಬಿಗ್ ಬಾಸ್ ಸ್ಪರ್ಧಿಗಳಲ್ಲಿ ಯಾರಿಗೆ ಎಷ್ಟು ಸಂಭಾವನೆ ಕೊಡಲಾಗಿದೆ ಎಂಬ ಪಕ್ಕಾ ಮಾಹಿತಿಯನ್ನು ಈ ಲೇಖನದಲ್ಲಿ ನೋಡೋಣ.

ಬಿಗ್ ಬಾಸ್ ಸ್ಪರ್ಧಿಗಳು 72 ದಿನಗಳು ಅಂದರೆ 10 ವಾರಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಇದ್ದರು. ಹೊರಗಡೆ ಉತ್ತಮ ಆದಾಯ ಗಳಿಸುವವರು ಬಿಗ್ ಬಾಸ್ ಮನೆಗೆ ಬರುವುದಿಲ್ಲ. ಸಿನಿಮಾ ಇಂಡಸ್ಟ್ರಿಯಲ್ಲಿ ಅವಕಾಶ ಕಳೆದುಕೊಂಡು ಮತ್ತೊಮ್ಮೆ ಜನರನ್ನು ತಲುಪಲು ಒಂದು ವೇದಿಕೆ ಬೇಕು ಎನ್ನುವವರು ಈ ಶೋಗೆ ಬರುತ್ತಾರೆ. ಎಲ್ಲರೂ ಬಿಗ್ ಬಾಸ್ ಮನೆಗೆ ಸಂಭಾವನೆಗಾಗಿ ಬರುವುದಿಲ್ಲ, ಜನರನ್ನು ತಲುಪಲು ವೇದಿಕೆ ಸಿಗುತ್ತದೆ ಎಂಬ ಕಾರಣಕ್ಕೆ ಬರುತ್ತಾರೆ. ಬಿಗ್ ಬಾಸ್ ಸ್ಪರ್ಧಿಗಳಿಗೆ ಅವರು ಮನೆಯಲ್ಲಿರುವಾಗ ಅವರು ಪಡೆದ ಜನಪ್ರಿಯತೆಯ ಆಧಾರದ ಮೇಲೆ ಸಂಭಾವನೆ ಸಿಗುತ್ತದೆ. ಶುಭಾ ಪೂಂಜಾ ಇವರು ಅನೇಕ ಕನ್ನಡ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದರು ಆದರೆ ನಂತರ ಸಿನಿಮಾಗಳಲ್ಲಿ ಅವಕಾಶ ಸಿಗಲಿಲ್ಲ, ಕೆಲವು ಸಿನಿಮಾಗಳಲ್ಲಿ ನಟಿಸುವುದು ಅನಿವಾರ್ಯವಾಯಿತು. ಶುಭಾ ಅವರಿಗೆ ವಾರಕ್ಕೆ ಐವತ್ತು ಸಾವಿರ ರೂಪಾಯಿ ಸಂಭಾವನೆ ಎಂದು ನಿಗದಿ ಮಾಡಲಾಗಿತ್ತು. ಅವರು 10 ವಾರ ಮನೆಯಲ್ಲಿ ಇದ್ದರು ಹೀಗಾಗಿ ಅವರಿಗೆ 5 ಲಕ್ಷ ರೂಪಾಯಿ ಆದಾಯ ಸಿಕ್ಕಿದೆ.

ನಿಧಿ ಸುಬ್ಬಯ್ಯ ಅವರು ಒಂದು ಸಮಯದಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದರು ಕನ್ನಡ ಮಾತ್ರವಲ್ಲದೆ ಇತರೆ ಭಾಷೆಗಳಲ್ಲಿ ಕೂಡ ನಟಿಸಿದ್ದರು ಅವರಿಗೂ ಇತ್ತೀಚೆಗೆ ಸಿನಿಮಾದಲ್ಲಿ ಅವಕಾಶ ಸಿಗಲಿಲ್ಲ ಹೀಗಾಗಿ ಬಿಗ್ ಬಾಸ್ ಮನೆಗೆ ಬಂದರು. ಅವರಿಗೂ ವಾರಕ್ಕೆ ಐವತ್ತು ಸಾವಿರ ರೂಪಾಯಿ ಸಂಭಾವನೆ ನಿಗದಿ ಮಾಡಲಾಗಿತ್ತು. 10 ವಾರ ಮನೆಯಲ್ಲಿ ಇದ್ದರು ಹಾಗಾಗಿ ಅವರಿಗೂ 5 ಲಕ್ಷ ರೂಪಾಯಿ ಆದಾಯ ನೀಡಲಾಗಿದೆ. ವೈಷ್ಣವಿ ಅವರು ಕಿರುತೆರೆ ಫೇಮಸ್ ನಟಿಯರಲ್ಲಿ ಒಬ್ಬರಾಗಿದ್ದರು. ಅವರು ನಟಿಸಿದ ಅಗ್ನಿಸಾಕ್ಷಿ ಧಾರಾವಾಹಿ ಮನೆ ಮಾತಾಗಿತ್ತು ಆದರೆ ಇತ್ತೀಚೆಗೆ ಅವರಿಗೂ ಅವಕಾಶ ಸಿಗಲಿಲ್ಲ. ಅವರಿಗೆ ವಾರಕ್ಕೆ ನಲವತ್ತು ಸಾವಿರ ರೂಪಾಯಿ ನಿಗದಿ ಮಾಡಿ, 10 ವಾರಕ್ಕೆ 4 ಲಕ್ಷ ರೂಪಾಯಿ ಆದಾಯ ಕೊಡಲಾಯಿತು. ಅರವಿಂದ್ ಕೆಪಿ ಅವರು ಮೋಟಾರ್ ರೇಸ್ ನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದಾರೆ ಆದರೆ ಅವರ ಜನಪ್ರಿಯತೆ ಬಹುಕಾಲ ಹಾಗೆಯೆ ಉಳಿಯಲಿಲ್ಲ ಅವರಿಗೆ ವಾರಕ್ಕೆ ಮೂವತ್ತು ಸಾವಿರ ರೂಪಾಯಿ ನಿಗದಿ ಮಾಡಲಾಗಿತ್ತು, ಅವರಿಗೆ 10 ವಾರಕ್ಕೆ ಮೂರು ಲಕ್ಷ ರೂಪಾಯಿ ಸಂಭಾವನೆ ಕೊಡಲಾಗಿದೆ.

ಶಮಂತ್ ಗೌಡ ಇವರ ಬಗ್ಗೆ ಎಲ್ಲರಿಗೂ ಗೊತ್ತಿರಲಿಲ್ಲ, ಅವರು ವೆಬ್ ಸಿರೀಸ್, ಆಲ್ಬಮ್ ಸಾಂಗ್ ಗಳ ಮೂಲಕ ಜನಪ್ರಿಯತೆ ಪಡೆದಿದ್ದರು ಆದರೆ ಅವರ ಜನಪ್ರಿಯತೆ ಸೋಷಿಯಲ್ ಮೀಡಿಯಾಕ್ಕೆ ಮಾತ್ರ ಸೀಮಿತವಾಗಿತ್ತು, ಅವರು ಸಂಭಾವನೆ ಆಸೆಗಾಗಿ ಬಿಗ್ ಬಾಸ್ ಗೆ ಬರಲಿಲ್ಲ ತಮ್ಮ ಬಗ್ಗೆ ಜನಪ್ರಿಯತೆ ಗಳಿಸಲು ಅವಕಾಶ ಎಂದು ಬಂದಿದ್ದಾರೆ. ಅವರಿಗೆ ಒಂದು ವಾರಕ್ಕೆ ಇಪ್ಪತ್ತೈದು ಸಾವಿರ ರೂಪಾಯಿ ನಿಗದಿ ಮಾಡಲಾಗಿತ್ತು, 10 ವಾರಕ್ಕೆ ಎರಡು ಲಕ್ಷದ ಐವತ್ತು ಸಾವಿರ ರೂಪಾಯಿ ಸಂಭಾವನೆ ಕೊಡಲಾಗಿದೆ. ಮಂಜು ಪಾವಗಡ ಅವರು ಮಜಾಭಾರತ ಮೂಲಕ ಫೇಮಸ್ ಆಗಿದ್ದರು. ಹೆಚ್ಚಿನ ಅವಕಾಶಕ್ಕಾಗಿ ಬಿಗ್ ಬಾಸ್ ಗೆ ಬರುತ್ತಾರೆ. ಅವರಿಗೆ ವಾರಕ್ಕೆ ಮೂವತ್ತು ಸಾವಿರ ರೂಪಾಯಿ ಸಂಭಾವನೆ ನಿಗದಿ ಮಾಡಲಾಗಿತ್ತು, 10 ವಾರಕ್ಕೆ ಮೂರು ಲಕ್ಷ ರೂಪಾಯಿ ಸಂಭಾವನೆ ಕೊಡಲಾಯಿತು. ದಿವ್ಯಾ ಸುರೇಶ್ ಅವರು ತೆಲುಗು ಸಿನಿಮಾ, ಕೆಲವು ಸೀರಿಯಲ್ ಗಳಲಿ ನಟಿಸಿ ತಮ್ಮ ಕ್ಷೇತ್ರದಲ್ಲಿ ಜನಪ್ರಿಯತೆ ಪಡೆದಿದ್ದರು. ಅವರಿಗೆ ವಾರಕ್ಕೆ ಮೂವತ್ತು ಸಾವಿರ ರೂಪಾಯಿಯಂತೆ, 10 ವಾರಕ್ಕೆ ಮೂರು ಲಕ್ಷ ರೂಪಾಯಿ ಆದಾಯ ಕೊಡಲಾಗಿದೆ. ಪ್ರಶಾಂತ ಸಂಬರ್ಗಿ ಅವರು ಬಹಳ ದಿನಗಳ ಹಿಂದೆ ಡ್ರಗ್ಸ್ ದಂಧೆಯ ಬಗ್ಗೆ ಮಾಹಿತಿಯನ್ನು ಬಯಲಿಗೆಳೆಯುವ ಮೂಲಕ ಸುದ್ದಿಯಲ್ಲಿದ್ದಾರೆ. ಸಾಮಾಜಿಕ ಹೋರಾಟದ ಮೂಲಕ ಜನಪ್ರಿಯತೆ ಪಡೆದಿದ್ದರು ಹಾಗೆ ಇವರು ಪ್ರೊಡ್ಯೂಸರ್ ಕೂಡ ಹೌದು. ಇವರಿಗೆ ವಾರಕ್ಕೆ ಮೂವತ್ತು ಸಾವಿರ ರೂಪಾಯಿ ನಿಗದಿಮಾಡಿ 10 ವಾರಕ್ಕೆ 3 ಲಕ್ಷ ರೂಪಾಯಿ ಸಂಭಾವನೆ ಕೊಡಲಾಗಿದೆ. ದಿವ್ಯ ಉರುಡುಗ ಇವರು ಕೆಲವು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿದ್ದರು. ಇವರಿಗೆ ವಾರಕ್ಕೆ ಮೂವತ್ತು ಸಾವಿರ ರೂಪಾಯಿ ನಿಗದಿಯಾಗಿತ್ತು. ಅವರು ಮೂರು ಲಕ್ಷ ರೂಪಾಯಿ ಸಂಭಾವನೆ ಪಡೆದಿದ್ದಾರೆ. ರಘು ಗೌಡ ಅವರು ಸೋಷಿಯಲ್ ಮೀಡಿಯಾಗಳಲ್ಲಿ ಕಾಮೆಡಿ ವಿಡಿಯೋಗಳನ್ನು ಮಾಡುತ್ತಿದ್ದರು ಅವರು ಜನಪ್ರಿಯರಾಗಿದ್ದರು. ಅವರು ಬಿಗ್ ಬಾಸ್ ವೇದಿಕೆ ಉತ್ತಮ ವೇದಿಕೆ ಎಂದು ಬಂದರು. ಅವರಿಗೆ ವಾರಕ್ಕೆ ಇಪ್ಪತೈದು ಸಾವಿರ ರೂಪಾಯಿ ನಿಗದಿಯಾಗಿತ್ತು, 10 ವಾರಕ್ಕೆ ಎರಡು ಲಕ್ಷದ ಇಪ್ಪತೈದು ಸಾವಿರ ರೂಪಾಯಿ ಸಂಭಾವನೆ ಪಡೆದಿದ್ದಾರೆ.

ಚಕ್ರವರ್ತಿ ಚಂದ್ರಚೂಡ ಅವರು ವೈಲ್ಡ್ ಕಾರ್ಡ್ ಎಂಟ್ರಿಯಾಗಿದ್ದು ಕೆಲವು ವಾರಗಳು ಮಾತ್ರ ಬಿಗ್ ಬಾಸ್ ಮನೆಯಲ್ಲಿ ಇದ್ದರು, ಅವರು ಪತ್ರಕರ್ತರು, ಸಾಮಾಜಿಕ ಹೋರಾಟಗಾರರು, ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ವಾರಕ್ಕೆ ಮೂವತ್ತು ಸಾವಿರ ರೂಪಾಯಿ ನಿಗದಿಯಾಗಿದೆ. ಪ್ರಿಯಾಂಕಾ ತಿಮ್ಮೇಶ್ ಅವರು ಗಣಪ ಸಿನಿಮಾ ಮೂಲಕ ಖ್ಯಾತಿ ಪಡೆದಿದ್ದಾರೆ ಅಲ್ಲದೆ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರಿಗೆ ವಾರಕ್ಕೆ ಮೂವತ್ತು ಸಾವಿರ ರೂಪಾಯಿ ನಿಗದಿಯಾಗಿತ್ತು. ಸುದೀಪ್ ಅವರಿಗೆ ಒಂದು ಎಪಿಸೋಡ್ ಗೆ 12 ಲಕ್ಷ ರೂಪಾಯಿ ನಿಗದಿಯಾಗಿದೆ. ಬೇರೆ ಬೇರೆ ಕ್ಷೇತ್ರದಿಂದ ಬಂದು ಬಿಗ್ ಬಾಸ್ ಮೂಲಕ ಜನಪ್ರಿಯತೆ ಗಳಿಸಿ ಜೀವನವನ್ನು ಕಟ್ಟಿಕೊಂಡವರು ಬಹಳಷ್ಟು ಜನರಿದ್ದಾರೆ. ಸಂಭಾವನೆಯೊಂದಿಗೆ ಹೆಸರನ್ನು ಗಳಿಸಿಕೊಳ್ಳುವ ವೇದಿಕೆಯೆಂದರೆ ಅದು ಬಿಗ್ ಬಾಸ್ ರಿಯಾಲಿಟಿ ಶೋ ಆಗಿದೆ. ಮುಂದಿನ ದಿನಗಳಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋ ಸಂಪೂರ್ಣ ಸಂಚಿಕೆಗಳೊಂದಿಗೆ ಮುಕ್ತಾಯವಾಗಲಿ ಎಂದು ಆಶಿಸೋಣ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!