ಬೆತ್ತಲಾಗೋಕೆ ‘ಬಿಗ್ ಬಾಸ್’ ಮನೆಗೆ ಬಂದೆ, ಸುಳ್ಳಿನ ದ್ವೇಷಿ, ಕುತಂತ್ರಗಳ ಅಪ್ಪ ಎಂದ ಚಕ್ರವರ್ತಿ ಚಂದ್ರಚೂಡ್ ಯಾರು? ನಿನ್ನೆಯಷ್ಟೇ ಬಿಗ್ ಬಾಸ್ ಸೀಸನ್ ಎಂಟರಲ್ಲಿ ವೈಲ್ಡ್ ಕಾರ್ಡ್ ಮೂಲಕ‌ ಹೊಸ ಸದಸ್ಯರ ಎಂಟ್ರಿಯಾಗಿದ್ದು ಮನೆಮಂದಿಯೆಲ್ಲಾ ಶಾಕ್ ಆಗಿರೋದಂತೂ ಸತ್ಯ. ಅದರಲ್ಲೂ ಪ್ರಶಾಂತ್ ಸಂಬರ್ಗಿ ಎಲ್ಲರಿಗಿಂತ ತುಸು ಹೆಚ್ಚೇ ಗೊಂದಲದಲ್ಲಿ ಇದ್ದಾರೆ ಎನ್ನಬಹುದು. ಇದಕ್ಕೆ ಕಾರಣವೂ ಇದೆ. ಇನ್ನು ಈ ಬಿಗ್ ಬಾಸ್ ವೈಲ್ಡ್ ಕಾರ್ಡ್ ಎಂಟ್ರಿ ನಿಜಕ್ಕೂ ಯಾರು. ಎಂಬ ವಿಚಾರ ಎಲ್ಲರಲ್ಲಿಯೂ ಸಣ್ಣ ಕುತೂಹಲವೊಂದನ್ನು ಮೂಡಿಸಿದೆ. ಬಿಗ್ ಬಾಸ್ ಕನ್ನಡ ಸೀಸನ್ 8ರ ಮನೆಗೆ ವೈಲ್ಡ್ ಕಾರ್ಡ್ ಎಂಟ್ರಿಯಾಗಿ ಬಂದ ಚಂದ್ರಚೂಡ್ ಯಾರು? ಏನು ಮಾಡುತ್ತಿದ್ದರು? ಎಂಬ ಬಗ್ಗೆ ಕೆಲವರಿಗೆ ಮಾಹಿತಿ ಇಲ್ಲ. ಇನ್ನು ಬೆತ್ತಲಾಗೋಕೆ ಬಂದಿರುವೆ ಎಂದು ಹೇಳಿರುವ ಚಕ್ರವರ್ತಿ ಬಗ್ಗೆ ತಿಳಿದುಕೊಳ್ಳಲು ಅನೇಕರಿಗೆ ಕುತೂಹಲವಿದೆ.

ಚಕ್ರವರ್ತಿ ಚಂದ್ರಚೂಡ್ ಇವರು ವೃತ್ತಿಯಲ್ಲಿ ಬರಹಗಾರ ಹಾಗೂ ಪತ್ರಕರ್ತ, ಸಾಮಾಜಿಕ ಹೋರಾಟಗಾರ ಹೀಗೆ ಸಾಕಷ್ಟು ಕೆಲಸಗಳನ್ನು ಮಾಡುತ್ತಿರುತ್ತಾರೆ. ಆದರೆ ಈ ಹಿಂದೆ ಇವರು ಸುದ್ದಿಯಾಗಿದ್ದು ಮಾತ್ರ ಮದುವೆ ವಿಚಾರಕ್ಕೆ. ಹೌದು ಕನ್ನಡದ ಖ್ಯಾತ ನಟಿ ಶೃತಿ ಅವರೊಡನೆ ಎರಡನೇ ಮದುವೆಯಾದ ವ್ಯಕ್ತಿ ಮತ್ಯಾರೂ ಅಲ್ಲ ಇವರೇ ಚಂದ್ರಚೂಡ. ಹೌದು ಶೃತಿ ಹಾಗೂ ಮಹೇಂದರ್ ಅವರು ದೂರಾದ ನಂತರ ಶೃತಿ ಅವರು ಅದ್ಧೂರಿಯಾಗಿ ಚಕ್ರವರ್ತಿ ಚಂದ್ರಚೂಡ್ ಅವರೊಡನೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಆದರೆ ಅದಾಗಲೇ ಚಕ್ರವರ್ತಿ ಚಂದ್ರಚೂಡ್ ಅವರಿಗೆ ಮಂಜುಳ ಎಂಬುವವರ ಜೊತೆ ಮದುವೆಯಾಗಿತ್ತು. ಆದರೆ ಶೃತಿ ಅವರನ್ನು ಮದುವೆಯಾಗುವ ಸಮಯದಲ್ಲಿ ಮಂಜುಳ ಅವರ ಅನುಮತಿ ಪಡೆದಿರಲಿಲ್ಲ. ಈ ಕಾರಣಕ್ಕೆ ಮಂಜುಳ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಆನಂತರ ಶೃತಿ ಹಾಗೂ ಚಂದ್ರಚೂಡ್ ಅವರು ಇಬ್ಬರೂ ಸಹ ಸಮ್ಮತಿಸಿ ಕೋರ್ಟ್ ಗೆ ಹಾಜರಾಗಿ ತಮ್ಮ ಮದುವೆಯನ್ನು ಅಸಿಂಧು ಮಾಡಿಕೊಂಡರು. ಈ ರೀತಿ ಎರಡು ಬಾರಿ ವೈವಾಹಿಕ ಜೀವನದಲ್ಲಿ ಸೋತ ಚಂದ್ರಚೂಡ ಅವರು ಮತ್ತೆ ಮದುವೆಯಾಗುವ ಪ್ರಯತ್ನ ಮಾಡಲಿಲ್ಲ. ಚಿಕ್ಕಮಗಳೂರು ಜಿಲ್ಲೆಯ ದೇವನೂರಿನಲ್ಲಿ ಜನನ ಚಂದ್ರಚೂಡ್ ಅವರ ಕಾವ್ಯನಾಮ (ತಂಗಿ ಹೆಸರು ಚೂಡಾಮಣಿ. ಹೀಗಾಗಿ ತಾವೇ ಅವರಿಗೆ ಚಂದ್ರಚೂಡ್ ಅಂತ ಹೆಸರಿಟ್ಟುಕೊಂಡಿದ್ದಾರೆ) 10ನೇ ತರಗತಿಂಯಿಂದ ಬರೆಯುತ್ತಿದ್ದಾರೆ. ಆಂಧ್ರದ ಪವಾಡ ಪುರುಷರ ಬಗ್ಗೆ ಪವಾಡ ಪುರುಷ ಅಲ್ಲ, ಸಾಮಾನ್ಯ ಮನುಷ್ಯ ಅಂತ ಪುಸ್ತಕ ಬರೆದರು. ತೆಲುಗು ಭಾಷೆಗೆ ಭಾವಾನುವಾದ ಆಗಿ ತೆಲುಗಿಗೆ ಪ್ರಕರಣ ದಾಖಲಾಯ್ತು. 14 ದಿನ ಕತ್ತಲೆ ಕೊಠಡಿಯಲ್ಲಿದ್ದರು. ಹೀಗಾಗಿ 96 ದಿನಗಳ ಕಾಲ ಜೈಲಿನಲ್ಲಿ ಕಾಲ ಕಳೆದರು.

ಇನ್ನು ಕೆಲ ಹೋರಾಟಗಳನ್ನು ಮಾಡಿ 136 ದಿನಗಳ ಕಾಲ ಜೈಲು ವಾಸ ಅನುಭವಿಸಿದ್ದಾರೆ.ರಾಜೇಂದ್ರ ಸಿಂಗ್, ಅಣ್ಣ ಹಜಾರೆ ಅವರ ನೀರಿನ ಚಳುವಳಿಯಲ್ಲಿ ಭಾಗಿಯಾದರು. ಜಲ ಜನ ಕ್ರಾಂತಿ ಎಂಬ ಪುಸ್ತಕ ಬರೆದರು. ಅದಕ್ಕೆ ರಾಷ್ಟ್ರೀಯ ಮಟ್ಟದ ಪರಿಸರ ಪ್ರಶಸ್ತಿ ಕೂಡ ಸಿಕ್ಕಿತು. ವೈವಾಹಿಕ ಜೀವನದಲ್ಲಿ ಎರಡು ಬಾರಿ ಸೋತರು. ತಾಯಿ, ಮಗಳು, ಮಾಧ್ಯಮ, ಸ್ನೇಹಿತರು ಯಾರೂ ಇವರನ್ನು ಮಾತನಾಡಿಸುತ್ತಿರಲಿಲ್ಲ.

ಕಾಲಿ ಶಿಲುಬೆ ಎಂಬ ಪದ್ಯಗಳ ಸಂಗ್ರಹವಿರುವ ಪುಸ್ತಕ ಬರೆದರು. ಚಂದ್ರಚೂಡ್ ಅವರು ಅವರದ್ದೇ ಆದ ಸಮಾಧಿ ಕಟ್ಟಿ ಅಲ್ಲಿಯೇ ಆ ಪುಸ್ತಕ ರಿಲೀಸ್ ಮಾಡಿದ್ದರು. ಸಮಾಧಿಗೆ ದುಡ್ಡು ಕಟ್ಟಬೇಕು ಎಂದಾದಾಗ ಅದನ್ನು ಬಿಟ್ಟರು. ಎಲ್ಲರ ಮೇಲೆ ಬರೆದ ಹಾಗಲ್ಲ, ಸಿನಿಮಾ ಮಾಡು ಅಂತ ನಿರ್ದೇಶಕರು ಅವಮಾನ ಮಾಡಿದ್ದರು. ಹೀಗಾಗಿ 2 ಸಿನಿಮಾ ನಿರ್ದೇಶನ ಮಾಡಿದ್ದರು. 15 ಸಿನಿಮಾಗಳಲ್ಲಿ ನಟಿಸಿದ್ದಾರೆ. 40 ಸಿನಿಮಾ ಬರೆದಿದ್ದಾರೆ. ಪ್ರಶಾಂತ್ ಸಂಬರಗಿ ಅವರ ನಿರ್ಮಾಣದಲ್ಲಿ ಚಂದ್ರಚೂಡ್ ನಟನೆಯ ಸಿನಿಮಾ ಮೂಢಿಬರಬೇಕಿತ್ತು. ಆದರೆ ನಿರ್ದೇಶಕರು ವಿಧಿವಶರಾಗಿದ್ದರಿಂದ ಈ ಸಿನಿಮಾ ಮುಂದಕ್ಕೆ ಹೋಗಿದೆ.

ಇಷ್ಟೇ ಅಲ್ಲದೆ ಇವರು ತಮ್ಮ ನಾಲ್ಕನೇ ಪುಸ್ತಕ ಬರೆಯುತ್ತಿದ್ದಾರೆ. ಅದನ್ನು ಶೀಘ್ರದಲ್ಲಿಯೇ 200 ಅಘೋರಿಗಳು ರಿಲೀಸ್ ಮಾಡಲಿದ್ದಾರಂತೆ. ಹೆಚ್ಚು ಕೇಸ್‌ಗಳನ್ನು ಹೊಂದಿರುವ ಪತ್ರಕರ್ತ ಇವರು. ಎಲ್ಲರ ಮೇಲೆ ಬರೆದಿದ್ದಾರೆ. 40ಕ್ಕೂ ಅಧಿಕ ಪ್ರಕರಣಗಳಿವೆ, ಅದರಲ್ಲಿ ಇನ್ನು ಒಂದು ಪ್ರಕರಣ ಕ್ಲಿಯರ್ ಆಗಬೇಕಿದೆಯಂತೆ. ಬೆತ್ತಲಾದಷ್ಟು ಮನುಷ್ಯ ಮಾನವನಾಗಬೇಕು. ರಾಜಕಾರಣಿಯಾಗಬೇಕು, ಇಲ್ಲ ಅಘೋರಿಯಾಗಬೇಕು, ಶೂನ್ಯದೆಡೆಗೆ ಸಾಗಬೇಕು. ಹೀಗಾಗಿ ಬಿಗ್ ಬಾಸ್‌ ಮನೆಗೆ ಬಂದೆ ಎಂದು ಚಕ್ರವರ್ತಿ ಚಂದ್ರಚೂಡ್ ಅವರು ಹೇಳಿದ್ದಾರೆ.

ಎರಡು ಬಾರಿ ನಾನು ವೈವಾಹಿಕ ಜೀವನದಲ್ಲಿ ಸೋತೆ ಎಂಬ ವಿಚಾರವನ್ನು ಬಿಗ್ ಬಾಸ್ ಮನೆಯಲ್ಲಿಯೂ ಸಹ ಹೇಳಿಕೊಂಡರು. ಇನ್ನು ಪ್ರಶಾಂತ್ ಸಂಬರ್ಗಿ ಹಾಗೂ ಚಂದ್ರಚೂಡ ಅವರಿಗೆ ಮೊದಲಿನಿಂದಲೂ ಸಂಬಂಧವಿದೆ. ಹೌದು ಈ ಇಬ್ಬರೂ ಬಹಳ ಆತ್ಮೀಯರು ಹೌದು. ಪ್ರಶಾಂತ್ ಸಂಬರ್ಗಿ ಅವರ ಎಲ್ಲಾ ವಿಚಾರಗಳು ಚಂದ್ರಚೂಡ ಅವರಿಗೆ ತಿಳಿದಿದೆ. ಅವರ ಪಾಸಿಟಿವ್ ನೆಗಟಿವ್ ಎಲ್ಲವೂ ಸಹ ಚಂದ್ರಚೂಡ ಅವರಿಗೆ ಗೊತ್ತಿದೆ.‌ ಅಷ್ಟೇ ಅಲ್ಲದೇ ಪ್ರಶಾಂತ್ ಸೇರು ಎಂದರೆ ಚಂದ್ರಚೂಡ ಸವಾಸೇರು ಎನ್ನುವ ವ್ಯಕ್ತಿ. ಮಾತಿನ ಮಲ್ಲನೂ ಹೌದು. ಈ ಹಿಂದೆ ಚಂದ್ರಚೂಡ ಅವರು ಬರೆದ ಕತೆ ಸಿನಿಮಾ ಆಗುತಿತ್ತು ಅದನ್ನು ಪ್ರಶಾಂತ್ ಸಂಬರ್ಗಿ ಅವರೇ ನಿರ್ಮಾಣ ಮಾಡುತ್ತಿದ್ದರು. ಆದರೆ ಸಿನಿಮಾದ ನಿರ್ದೇಶಕರು ಇಲ್ಲವಾದ ಬಳಿಕ ಸಿನಿಮಾ ನಿಂತಿತ್ತು. ಇನ್ನು ಅದಾಗಲೆ ಮನೆಗೆ ಬಂದ ಕೆಲವೇ ಗಂಟೆಗಳಲ್ಲಿ ಮನೆಮಂದಿಗೆಲ್ಲಾ ಅಂಕಗಳನ್ನು ಕೊಟ್ಟು ವಿವರಣೆ ನೀಡಿರುವ ಚಂದ್ರಚೂಡ ಶಂಕರ್ ಅಶ್ವತ್ಥ್ ಅವರಿಗೆ ಸೊನ್ನೆ. ರಾಜೀವ್ ಅವರಿಗೆ ಒಂದು. ಶುಭ ಪೂಂಜಾರಿಗೆ ಎರಡು ವಿಶ್ವನಾಥ್ ಗೆ ಅರ್ಧ ಶಮಂತ್ ಗೆ ಅರ್ಧ ಹೀಗೆ ಎಲ್ಲರಿಗೂ ಮುಖಕ್ಕೆ ಹೊಡೆದಂತೆ ಎರಡರ ಒಳಗೆ ಅಂಕ ಕೊಟ್ಟು ಮನೆಯ ಸ್ಪರ್ಧಿಗಳು ಮುಖ ಮುಖ ನೋಡಿಕೊಳ್ಳುವಂತೆ ಮಾಡಿದ್ದಾರೆ. ಒಟ್ಟಿನಲ್ಲಿ ಇನ್ನೆರೆಡು ದಿನ ಮನೆಯ ತುಂಬೆಲ್ಲಾ ಚಂದ್ರಚೂಡರದ್ದೇ ಚರ್ಚೆ ಎಂದರೂ ತಪ್ಪಾಗಲಾರದು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!