ಶಿವರಾತ್ರಿಯಂದು ಶಿವನ ಆರಾಧನೆ ಮಾಡಿದ ಪ್ರತಿಯೊಬ್ಬರಿಗೂ ಭಗವಂತ ಒಳ್ಳೆಯದನ್ನು ಮಾಡುತ್ತಾನೆ. ಶಿವರಾತ್ರಿಯ ದಿನ ದೈವಸಂಕುಲದ ಜೊತೆಗೆ ಗ್ರಹಗಳಲ್ಲಿ ಅನೇಕ ಬದಲಾವಣೆಗಳಾಗುತ್ತದೆ, ಈ ಬದಲಾವಣೆಯಿಂದ ಕೆಲವು ರಾಶಿಯವರಲ್ಲಿ ಸಹ ಬದಲಾವಣೆಯಾಗುತ್ತದೆ. ಹಾಗಾದರೆ ಶಿವರಾತ್ರಿಯ ನಂತರ ಬದಲಾವಣೆಯಾಗಲಿರುವ ರಾಶಿಗಳು ಯಾವುವು ಎಂಬುದನ್ನು ಈ ಲೇಖನದಲ್ಲಿ ನೋಡೋಣ.
ಶಿವರಾತ್ರಿಯ ನಂತರ ಗ್ರಹದಲ್ಲಿ ಅನೇಕ ಬದಲಾವಣೆ ಆಗುತ್ತದೆ. ಮಹಾಶಿವರಾತ್ರಿ ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗೂ ಸಂಬಂಧಿಸಿದೆ. ಮಹಾ ಶಿವರಾತ್ರಿ ಯಾವುದೆ ಜಾತಿ ಭೇದ ಇಲ್ಲದೆ ಮನುಷ್ಯರ ಮೇಲೆ, ಗ್ರಹಗಳ ಮೇಲೆ ಪ್ರಭಾವ ಬೀರುತ್ತದೆ. ಅಂದು ದೈವಸಂಕುಲ ಸ್ತಬ್ಧವಾಗಿರುತ್ತದೆ. ಶಿವನು ತನ್ನ ಧ್ಯಾನ ವ್ಯವಸ್ಥೆಗೆ ಹೋದಾಗ ಶಿವಕಾರ್ಯ, ಶಿವತತ್ವ ಸಾವಿರಪಟ್ಟು ಹಿಂದಿನಕ್ಕಿಂತ ಹೆಚ್ಚು ಪರಿಣಾಮ ಬೀರುತ್ತದೆ ಆಗ ಗ್ರಹ ಮಂಡಲ ಛಿದ್ರವಾಗುತ್ತದೆ, ಬದಲಾವಣೆಯಾಗುತ್ತದೆ.
ರಾಹು-ಕೇತುಗಳು ಬದಲಾವಣೆ ಹಂತವನ್ನು ತಲುಪುತ್ತದೆ. ಶಿವರಾತ್ರಿ ನಂತರ ಕೆಲವು ರಾಶಿಗೆ ಶುಭವಾಗುತ್ತದೆ ಇನ್ನು ಕೆಲವು ರಾಶಿಯವರಿಗೆ ಕೆಲವು ತೊಂದರೆಗಳು ಬರಬಹುದು. ಶಿವರಾತ್ರಿ ನಂತರ ವೃಷಭ ರಾಶಿಯವರಿಗೆ ಚೆನ್ನಾಗಿ ಯೋಗವಿದೆ. ವಿಶೇಷವಾಗಿ ವಿವಾಹವಾಗದೆ ಇರುವವರಿಗೆ ಲಗ್ನ ಯೋಗವಿದೆ. ಧನ, ಧಾನ್ಯ, ಸಂಪತ್ತು, ಸಮೃದ್ಧಿ, ಮನೆ, ಕಟ್ಟಡ ನಿರ್ಮಾಣ ಮಾಡುತ್ತಾರೆ. ಕೋರ್ಟ್ ಕೇಸ್ ಇದ್ದರೆ ಹಣ ಗೊಂದಲವಿದ್ದರೆ ನಿವಾರಣೆಯಾಗುತ್ತದೆ, ಕೊಟ್ಟಿರುವ ಹಣ ವಾಪಸ್ ಬರದೆ ಇದ್ದರೆ ಈ ಸಮಯದಲ್ಲಿ ಬರಬಹುದಾಗಿದೆ.
ವೃಷಭ ರಾಶಿಯವರ ಸ್ಥಾನಮಾನದಲ್ಲಿ ಉನ್ನತ ಬದಲಾವಣೆಯಾಗುತ್ತದೆ. ವೃಷಭ ರಾಶಿಯವರು ಎಪ್ರಿಲ್ 19ರವರೆಗೆ ದೇವಿಯ ದರ್ಶನ, ಪೂಜೆ ಮಾಡಬೇಕು ಇದರಿಂದ ಈ ರಾಜರ ಸಕಲ ಇಷ್ಟಾರ್ಥಗಳು ಈಡೇರುತ್ತವೆ. ಕರ್ಕರಾಶಿಯವರಿಗೆ ಶಿವರಾತ್ರಿ ನಂತರ ಉತ್ತಮ ಬದಲಾವಣೆಯಾಗಲಿದೆ. ಈ ರಾಶಿಯವರಿಗೆ ಧನಾಗಮ ಆಗಲಿದೆ ಈ ರಾಶಿಯವರಿಗೆ ಗುರು ಬಲ ಚೆನ್ನಾಗಿರುವುದರಿಂದ ಮಾಡುತ್ತಿರುವ ಉದ್ಯೋಗದಲ್ಲಿ ಲಾಭ ಲಭಿಸುತ್ತದೆ. ಹೊಸ ಕೆಲಸಕಾರ್ಯಗಳಿಗೆ ಕೈ ಹಾಕುವುದಿದ್ದರೆ ಎಪ್ರೀಲ್ ನಂತರ ಜಯ ಸಿಗುತ್ತದೆ. ಶಿವರಾತ್ರಿಯ ನಂತರ ಕನ್ಯಾ ರಾಶಿಯವರಿಗೆ ಉತ್ತಮ ಲಾಭ, ಯೋಗ ಲಭಿಸಲಿದೆ. ಸಂತಾನವಿಲ್ಲದ ದಂಪತಿಗಳಿಗೆ ಈ ಸಮಯದಲ್ಲಿ ಸಂತಾನಪ್ರಾಪ್ತಿ ಆಗುವ ಸಂಭವವಿದೆ.
ಕನ್ಯಾ ರಾಶಿಯವರ ಜೀವನದಲ್ಲಿ ಕಳೆದುಕೊಂಡಂತಹ ಸ್ನೇಹಿತರು, ಬೇಕಾದವರು ಮತ್ತೆ ಸಿಗಲಿದ್ದಾರೆ. ಶಿವರಾತ್ರಿ ನಂತರ ಹೊಸ ವಾಹನಗಳ ಖರೀದಿ ಮಾಡುವ ಸಂಭವವಿದೆ ಚಿತ್ರರಂಗಕ್ಕೆ ಸಂಬಂಧಿಸಿದವರಿಗೆ ಉನ್ನತ ಸ್ಥಾನಕ್ಕೆ ಹೋಗುವ ಅವಕಾಶಗಳು ಸಿಗುತ್ತದೆ. ರಾಜಕೀಯದಲ್ಲಿರುವ ಕನ್ಯಾರಾಶಿಯವರಿಗೆ ಸ್ವಲ್ಪ ಬದಲಾವಣೆಯಾಗುತ್ತದೆ. ಬಿಸಿನೆಸ್ ವ್ಯಾಪಾರ ಮಾಡುತ್ತಿರುವವರಿಗೆ ದೊಡ್ಡ ಪ್ರಮಾಣದ ಲಾಭ ದೊರೆಯುತ್ತದೆ.
ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮ ಯೋಗವಿದೆ. ಕನ್ಯಾ, ವೃಷಭ, ಕರ್ಕಾ ರಾಶಿಯವರು ಶಿವನ ಸ್ಮರಣೆ, ಆರಾಧನೆ ಮಾಡಿದರೆ ಇನ್ನೂ ಹೆಚ್ಚಿನ ಯೋಗ, ನೆಮ್ಮದಿ ಸಿಗಲಿದೆ. ಈ 3 ರಾಶಿಯವರು ತಪ್ಪದೆ ಈ ಲೇಖನವನ್ನು ಓದಿ ಜೊತೆಗೆ ನಿಮ್ಮ ಸ್ನೇಹಿತರು ಹಾಗೂ ನಿಮ್ಮ ಸಂಬಂಧಿಕರಿಗೂ ತಿಳಿಸಿ.