Kannada Astrology: ರಾಶಿ ಭವಿಷ್ಯ ನಿಮ್ಮ ಮುಂದಿನ ಜೀವನದ ಶುಭ ಫಲ ಮತ್ತು ಅಶುಭ ಫಲಗಳ ಬಗ್ಗೆ ಮುಂಚಿತವಾಗಿಯೇ ಮಾಹಿತಿಯನ್ನು ಒದಗಿಸುತ್ತದೆ ಇದರಿಂದ ಬರುವ ಸಮಸ್ಯೆಗಳನ್ನು ಎದುರಿಸಲು ಪರಿಹಾರಗಳನ್ನು ಕಂಡುಕೊಳ್ಳಲು ಸಹಾಯಕವಾಗುತ್ತದೆ ದ್ವಾದಶ ರಾಶಿಗಳಲ್ಲಿ ಒಂದಾದ ಮಕರ ರಾಶಿಯ ದಾಂಪತ್ಯ ಜೀವನ ಮತ್ತು ಅವರಿಗೆ ಒದಗಬಹುದಾದ ಸಮಸ್ಯೆಗಳಿಗೆ ಕೆಲವೊಂದು ಪರಿಹಾರಗಳನ್ನು ಇಲ್ಲಿ ನಾವು ತಿಳಿಯೋಣ.

ಮಕರ ರಾಶಿಯ ಅಧಿಪತ್ಯ ಆಗಿರುವಂತಹ ಶನಿಮಹಾತ್ಮನಿಗೆ ಕರ್ಮ ಕಾರಕ ಮತ್ತು ಆಯುಷ್ಯಕಾರಕ ಎಂದು ಕರೆಯುತ್ತಾರೆ ಸಾಮಾನ್ಯವಾಗಿ ಮಕರ ರಾಶಿಯವರಿಗೆ ಮದುವೆಗೆ ವಿಳಂಬವಾಗುವ ಸಾಧ್ಯತೆಗಳಿವೆ ಮಕರ ರಾಶಿಯವರಿಗೆ ಸಪ್ತಮ ಸ್ಥಾನ ದಲ್ಲಿ ಕಟಕ ರಾಶಿ ಯಾಗಿರುವಂತಹ ಚಂದ್ರ ಮಕರ ರಾಶಿಗೆ ಶತ್ರು ಆಗುತ್ತಾನೆ. ಶನಿಗೆ ಚಂದ್ರ ಶತ್ರುವಾದರೆ ಚಂದ್ರನಿಗೆ ಶನಿ ಶತ್ರು ಅಲ್ಲ ಆದರೂ ಸಹ ಚಂದ್ರ ಬಾಧಕಾಧಿಪತಿಯು ಮತ್ತು ಮಾರಕಾಧಿಪತಿಯು ಆಗುತ್ತಾನೆ ಏರಿಳಿತವನ್ನು ತರುತ್ತಾನೆ.

ಮಕರ ರಾಶಿಯವರ ದಾಂಪತ್ಯ (Marriage) ಜೀವನವು ಸುಖಕರವಾಗಿರುತ್ತದೆ ಸತಿಪತಿ ಇಬ್ಬರು ಅನ್ಯೋನ್ಯವಾಗಿರುತ್ತಾರೆ ಇನ್ನು ಆರೋಗ್ಯದ ವಿಚಾರ ಬಂದರೆ ಸ್ವಲ್ಪ ಮಟ್ಟಿಗೆ ಏರುಪೇರಾಗುವ ಸಂದರ್ಭ ಬರಬಹುದುಮಕರ ರಾಶಿಯವರು ಲವ್ ಮ್ಯಾರೇಜ್ ಆಗುವ ಸಾಧ್ಯತೆಗಳು ಇರುತ್ತದೆ ಅವರು ಕೂಡ ಅನ್ಯೋನ್ಯವಾಗಿ ಇರುತ್ತಾರೆ ಮಕರ ರಾಶಿಯಲ್ಲಿ ಇರುವಂತಹ ಶನಿ ಮಹಾತ್ಮ ಶುಕ್ರನಿಗೆ ಮಿತ್ರ ಗ್ರಹ ವಾಗಿರುತ್ತಾನೆ ಅದೇ ರೀತಿ ಶುಕ್ರ ಗ್ರಹ ಯೋಗಾಧಿಪತಿಯು ಕೂಡ ಆಗಿರುತ್ತಾನೆ ಪ್ರೀತಿ ಪ್ರೇಮಕ್ಕೆ ಸಂಬಂಧಪಟ್ಟಂತಹ ಶುಕ್ರ ಗ್ರಹ ಮಕರ ರಾಶಿಯವರಿಗೆ ಬೆಂಬಲವಾಗಿರುತ್ತಾನೆ

ಭೂಮಿಗೆ ಸಂಬಂಧಪಟ್ಟ ವಿಷಯದಲ್ಲಿ ಗಂಡ ಹೆಂಡತಿಯ ಬಗ್ಗೆ ವ್ಯಾಜ್ಯ ಬರುವಂತಹ ಸಾಧ್ಯತೆಗಳಿವೆ ಏಕೆಂದರೆ ಮಕರ ರಾಶಿಯವರಿಗೆ ಮಕರ ರಾಶಿಯವರು ಮಕರ ರಾಶಿಯವರನ್ನು ಮದುವೆಯಾದರೆ ದಾಂಪತ್ಯ ಜೀವನದಲ್ಲಿ ತೊಂದರೆ ಬಂದಾಗ ಗಾಯತ್ರಿದೇವಿಯನ್ನ ಆರಾಧನೆ ಮಾಡಬೇಕು ಅಥವಾ ಶಿವ ಪಾರ್ವತಿ ದೇವಸ್ಥಾನಕ್ಕೆ ಸೋಮವಾರ ಹೋಗಿ ಬರುವುದರಿಂದ ಒಳ್ಳೆಯದಾಗುತ್ತದೆ

ಅನ್ನ ಸಂತರ್ಪಣೆ ಮಾಡುವಂತಹ ದೇವಸ್ಥಾನದಲ್ಲಿ ಅಕ್ಕಿ ಕೊಡುವಂಥದ್ದು ಅಥವಾ ಶನಿ ಮಹಾತ್ಮನ (Shani Mahathma) ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸುವುದರಿಂದ ಒಳ್ಳೆಯದಾಗುತ್ತದೆ ಹಾಗೆಯೇ ದಾಂಪತ್ಯ ಜೀವನದಲ್ಲಿ ತೊಂದರೆಗಳು ಬಂದಾಗ ಗಂಡ ಹೆಂಡತಿಯ ಜಾತಕವನ್ನು ಜ್ಯೋತಿಷಿಗಳಿಗೆ ತೋರಿಸಿ ಜಾತಕದಲ್ಲಿರುವ ದೋಷಗಳನ್ನು ಪರಿಹರಿಸಿಕೊಳ್ಳುವುದು ಉತ್ತಮ ಇದರಿಂದ ನಿಮ್ಮ ಮುಂದಿನ ಭವಿಷ್ಯದಲ್ಲಿ ಅಥವಾ ದಾಂಪತ್ಯ ಜೀವನದಲ್ಲಿ ಯಾವುದೇ ತೊಡಕುಗಳು ಎದುರಾಗುವುದಿಲ್ಲ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!