ರಾಶಿಯಲ್ಲಿ ಹನ್ನೆರಡು ರಾಶಿಗಳಿವೆ. ಪ್ರತಿಯೊಂದು ರಾಶಿಗಳು ಅದರದೇ ಆದ ಗುಣಗಳನ್ನು ಹೊಂದಿದೆ. ಹಾಗೆಯೇ ರಾಶಿಗೆ ತಕ್ಕಂತೆ ಇಪ್ಪತ್ತೇಳು ನಕ್ಷತ್ರಗಳು ಸಹ ಇವೆ. ಎಲ್ಲರ ರಾಶಿಗಳು ಹಾಗೂ ನಕ್ಷತ್ರಗಳು ಒಂದೇಯಾಗಿರುವುದಿಲ್ಲ. ಬೇರೆ ಬೇರೆ ಆಗಿರುತ್ತದೆ. ನಾವು ಇಲ್ಲಿ ಕಟಕ ರಾಶಿಯ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಕರ್ಕಾಟಕ ರಾಶಿಯವರ ಮೊದಲನೇ ಗುಣ ಎಂದರೆ ನಿಷ್ಠೆ. ಇವರು ಬಹಳ ನಿಷ್ಠಾವಂತರು.ನಂಬಿಕೆಗೆ ಅರ್ಹರು. ಇವರು ಮೋಸ ಮಾಡುವುದಿಲ್ಲ. ನಂಬಿಕೆಯ ಇನ್ನೊಂದು ಹೆಸರೇ ಕರ್ಕಾಟಕ ರಾಶಿಯವರು ಎಂದು ಹೇಳಬಹುದಾಗಿದೆ. ಇವರಿಗೆ ಫೀಲಿಂಗ್ಸ್ ಜಾಸ್ತಿ. ಇವರಿಗೆ ಭಾವನೆಗಳು ಜಾಸ್ತಿ.ಬೇರೆಯವರನ್ನು ಬಹಳ ಎಚ್ಚರಿಕೆಯಿಂದ ನೋಡಿಕೊಳ್ಳುತ್ತಾರೆ. ಹಾಗೆ ಇವರು ಪ್ರಯಾಣವನ್ನು ಇಷ್ಟಪಡುತ್ತಾರೆ.ಮನೆಯ ವ್ಯಕ್ತಿಗಳ ಜೊತೆ ತುಂಬಾ ಹತ್ತಿರದ ಸಲುಗೆ ಇಟ್ಟುಕೊಂಡಿರುತ್ತಾರೆ. ನೆಂಟರ ಜೊತೆ ಬಹಳ ಚೆನ್ನಾಗಿ ಬೆರೆಯುತ್ತಾರೆ.

ಆದರೆ ಇವರು ಸೆಂಟಿಮೆಂಟಲ್ ಫೂಲ್ಸ್. ಬೇರೆಯವರನ್ನು ಬಹಳ ಬೇಗ ನಂಬುತ್ತಾರೆ. ಆತುರ ಜಾಸ್ತಿ. ಸಹನೆ ಕಡಿಮೆ.ತುಂಬಾ ಮಾತನಾಡುತ್ತಾರೆ. ನಂಬಿಕೆಗೆ ಅರ್ಹಅಲ್ಲದವರನ್ನು ದೂರ ಇಡುತ್ತಾರೆ.ಸ್ವಲ್ಪ ಆಲಸ್ಯದ ಪ್ರಕೃತಿ ಹೊಂದಿರುತ್ತಾರೆ. ನಿದ್ದೆ ತುಂಬಾ ಮಾಡುತ್ತಾರೆ. ಹಾಗೆಯೇ ತುಂಬಾ ಹಗಲುಗನಸು ಕಾಣುತ್ತಾರೆ. ನೆಗಡಿ, ಕಫಗಳು ಜಾಸ್ತಿ ಇರುತ್ತವೆ. ಅದೇ ರೀತಿಯಲ್ಲಿ ಲಂಗ್ಸ್,ಅಸ್ತಮಾಗಳು ಸಹ ಕಂಡುಬರುತ್ತದೆ. ಇವರಿಗೆ ಏನಾದರೂ ಸಿಗಬೇಕೆಂದರೆ ಒಂದೇ ಬಾರಿ ಸಿಗುವುದಿಲ್ಲ. ಎರಡೆರಡು ಅವಕಾಶಗಳು ಇರುತ್ತವೆ.ಕೆಲವರಿಗೆ ಮೊದಲ ಅವಕಾಶದಲ್ಲಿ ಗೆಲುವು ಸಿಕ್ಕರೆ ಇನ್ನು ಕೆಲವರಿಗೆ ಎರಡನೇ ಅವಕಾಶದಲ್ಲಿ ಗೆಲುವು ಸಿಗುತ್ತದೆ.

ಒಂದು ಹೆಜ್ಜೆ ಮುಂದಿಟ್ಟರೆ ಇನ್ನೊಂದು ಹೆಜ್ಜೆ ಹಿಂದಿಡುತ್ತಾರೆ.ಯಾರಾದರೂ ಒಬ್ಬರು ಪ್ರೋತ್ಸಾಹ ನೀಡಿದರೆ ಇವರು ಇತಿಹಾಸವನ್ನೇ ಸ್ರಷ್ಟಿಸುತ್ತಾರೆ.ನಿಮ್ಮ ಮನೆಯಲ್ಲಿ ಕರ್ಕಾಟಕ ರಾಶಿಯವರು ಹುಟ್ಟಿದರೆ ಒಂದು ಸ್ವಂತ ಮನೆಯ ಯೋಗ ಸಿಗುತ್ತದೆ. ಯಾವುದೇ ಮನೆಯಲ್ಲಿ ಈ ರಾಶಿಯವರು ಇದ್ದರೆ ಅವರು ಬಹಳ ಅದ್ರಷ್ಟವಂತರು.

ಹಾಗೆಯೇ ಈ ರಾಶಿಯವರು ನೀರಿಗೆ, ಟ್ರಾನ್ಸ್ ಪೋರ್ಟಷನ್,ಫುಡ್ ರಿಲೇಟೆಡ್, ರಫ್ತು, ಆಮದು ಸಂಬಂಧಿಸಿದಂತಹ ಕೆಲಸಗಳು ಚೆನ್ನಾಗಿ ಕೂಡುತ್ತವೆ.ಇವರಿಗೆ ಮದುವೆಗೆ ನೋಡುವುದಾದರೆ ವೃಶ್ಚಿಕ, ಮೀನ, ಸಿಂಹ ರಾಶಿಯವರು ತುಂಬಾ ಚೆನ್ನಾಗಿ ಕೂಡಿಬರುತ್ತದೆ.ಯಾವುದೇ ವಿಘ್ನ ಉಂಟಾಗುವುದಿಲ್ಲ. ಈ ರಾಶಿಯ ಅದ್ರಷ್ಟ ಸಂಖ್ಯೆಗಳೆಂದರೆ 1,3,5,6. ಇನ್ನು ಪಾರ್ಟ್ನರ್ ಶಿಪ್ ವಿಷಯದಲ್ಲಿ 7. ಇನ್ನು ವರ್ಣಗಳ ಬಗ್ಗೆ ಹೇಳುವುದಾದರೆ ಆದಷ್ಟು ಹಸಿರು ಬಣ್ಣ ಒಳ್ಳೆಯದು. ಬಿಳಿ, ಕೇಸರಿ ಇವುಗಳನ್ನು ಬಳಸಬಹುದಾಗಿದೆ.ಕಪ್ಪುಬಣ್ಣದ ಡ್ರೆಸ್ಗಳನ್ನು ಆದಷ್ಟು ಬಳಸಬೇಡಿ.ಇವರು ಬಿಸಿಬಿಸಿಯಾದ ಪದಾರ್ಥವನ್ನು ಇಷ್ಟಪಡುತ್ತಾರೆ.

ಅತಿಯಾದ ನಿಷ್ಠೆ ಮತ್ತು ಅತಿಯಾದ ನಂಬಿಕೆ ಇವರ ದೋಷ ವಾಗಿದೆ. ಬೇರೆಯವರು ಇವರನ್ನು ಬಹು ಸುಲಭವಾಗಿ ಮೋಸಮಾಡಿ ಬಿಡುತ್ತಾರೆ. ಆದ್ದರಿಂದ ಎಚ್ಚರಿಕೆಯಿಂದಿರಬೇಕು.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!