ಕೆಲವೊಮ್ಮೆ ಜನರು ಎಷ್ಟೆ ದುಡ್ಡಿನ ಸಮಸ್ಯೆ ಇರಲಿ, ಬಂಗಾರಕ್ಕೆ ಇನ್ವೆಸ್ಟ್ ಮಾಡಿಯೆ ಮಾಡುತ್ತಾರೆ. ಮನೆ, ಆಸ್ತಿ ಅಂತ ಸುಲಭವಾಗಿ ಮಾಡಿಕೊಳ್ಳುತ್ತಾರೆ ಅದು ಹೇಗೆ ಎನ್ನುವ ಪ್ರಶ್ನೆ ಮೂಡುತ್ತದೆ. ಸೇವಿಂಗ್ಸ್ ಅನ್ನುವುದು ಒಂದು ಕಲೆ ಆದರೆ ಹುಟ್ಟುವ ರಾಶಿ ಮೇಲೂ ದುಡ್ಡು ಉಳಿಸುವ ಗುಣ ಬಂದಿರುತ್ತದೆ ಎಂದರೆ ತಪ್ಪಾಗಲಾರದು. ಕೆಲವು ರಾಶಿಯವರು ಹಣ ಉಳಿಸುವುದಿಲ್ಲ ಆ ರಾಶಿಗಳು ಯಾವುವು ಎಂಬುದನ್ನು ನೋಡೋಣ.
ಲಕ್ಷ್ಮಿ ಕೆಲವರಿಗೆ ಅದು ಹೇಗೆ ಒಲಿಯುತ್ತಾಳೋ ಗೊತ್ತಾಗುವುದಿಲ್ಲ. ಮತ್ತೆ ಹಲವರಿಗೆ ಆ ಕಲೆ ರಕ್ತಗತವಾಗಿಯೆ ಒಲಿದಿರುತ್ತದೆ. ಕೆಲವರ ಮನೆಯಲ್ಲಿ ಕಾಲು ಮುರಿದುಕೊಂಡು ಬೀಳುವ ಲಕ್ಷ್ಮಿ, ಮತ್ತೆ ಕೆಲವರಿಗೆ ಮರುಭೂಮಿಯ ಮರಿಚೀಕೆಯಾಗುತ್ತಾಳೆ. ಮನುಷ್ಯ ಹುಟ್ಟುವ ರಾಶಿ ಮೇಲೆ ಕೈಯಲ್ಲಿ ದುಡ್ಡು ನಿಲ್ಲುತ್ತದೆ ಎನ್ನುವುದು ನಂಬಿಕೆ. ಕೆಲವು ರಾಶಿಯವರಿಗೆ ದುಡ್ಡು ಉಳಿಸಲು ಸಾಧ್ಯವಾಗುತ್ತದೆ.
ಧನಸ್ಸು ಈ ರಾಶಿಯವರಿಗೆ ಹಣ ಉಳಿಸುವುದು ಅಷ್ಟು ಸುಲಭವಲ್ಲ. ಉಳಿಸಿದರೂ ವೇಸ್ಟ್ ಅಂತ ಯೋಚಿಸೊ ಜಾಯಮಾನ ಇವರದ್ದು. ಹಣ ಬಂದ ಕೂಡಲೆ ಹೇಗೆ ಖರ್ಚು ಮಾಡಬೇಕೆಂಬುವುದೆ ಇವರ ಚಿಂತೆ. ಹಣ ಕೂಡಿಡಬೇಕು, ಕಷ್ಟ ಬಂದಾಗ ಕೈಯಲ್ಲಿ ದುಡ್ಡಿರಬೇಕು ಎನ್ನುವ ಭಯ ಇವರಿಂದ ಬಹಳ ದೂರ. ಸೇವಿಂಗ್ಸ್ ಅನ್ನುವುದು ಇವರ ಡಿಕ್ಷನರಿಯಲ್ಲಿಯೆ ಇಲ್ಲ. ಇದೆ ಮೆಂಟಾಲಿಟಿಯಿಂದ ಇವರಿಗೂ ಖರ್ಚೂ ಬರುವುದು ಹೆಚ್ಚು. ಹಲವೆಡೆ ಹಣ ಹೂಡುತ್ತಾರೆ ಹಾಗೆಯೆ ದುಡ್ಡು ಕೈ ಸೇರುತ್ತದೆ. ಹಾಗಂಥ ಅಷ್ಟೆ ಬೇಗ ಖಾಲಿಯೂ ಆಗುತ್ತದೆ. ಕೈಯಲ್ಲಿ ದುಡ್ಡಿರುವುದು ಕಡಿಮೆ. ಕೂಡಿಡೋದು ಅಂದರೆ ಇವರಿಗೆ ಅಲರ್ಜಿ. ಗಣೇಶನನನ್ನು ಸ್ತುತಿಸಿದರೆ ಇವರ ಕೈಯಲ್ಲಿ ಸ್ವಲ್ಪ ಹಣ ಉಳಿಯುವಂತಾಗಬಹುದು.
ಇನ್ನು ಮೀನ ರಾಶಿಯವರು ಉದಾರಿಗಳು, ವಿಶಾಲ ಹೃದಯಿಗಳು ಅದರಿಂದಲೆ ದಾನ ಮಾಡುವ ಬುದ್ಧಿಯೂ ಹೆಚ್ಚು. ಇನ್ನು ಕೂಡಿಡುವ ಮನಸ್ಸು ಎಲ್ಲಿಂದ ಬರುತ್ತದೆ, ಕೊಟ್ಟಿದ್ದು ತನಗೆ ಬಚ್ಚಿಟ್ಟಿದ್ದು ಪರರಿಗೆ ಎನ್ನುವ ಚಿಂತನೆ ಇವರದ್ದು. ತಮಗೆ ಉಳಿಸಿಕೊಂಡು, ಕಷ್ಟ ಕಾಲದಲ್ಲಿ ನೆರವಿಗೆ ಬರುವಂತೆ ಒಂದಿಷ್ಟು ನಿಧಿಯನ್ನು ಇಟ್ಟು, ಇನ್ನೊಬ್ಬರಿಗೆ ದಾನ ಮಾಡಿದರೆ ಅರ್ಥವಿರುತ್ತದೆ ಆದರೆ ಇವರು ತಮಗಿಲ್ಲದಿದ್ದರು ದಾನ ಮಾಡುತ್ತಾರೆ.
ಕಷ್ಟ ಎಂದಾಗ ಕೈ ಹಿಡಿಯುವವರು ಯಾರು ಎಂಬುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ಆದರೆ ಇವರ ಅದೃಷ್ಟ ಅಥವಾ ಕಷ್ಟದಲ್ಲಿ ಇರುವವರಿಗೆ ದಾನ ಮಾಡುವ ಬುದ್ಧಿಯಿಂದ ಏನೊ ಇವರಿಗೂ ಹಾಗೆಯೆ ಕೈ ಹಿಡಿಯಲು ಮುಂದಾಗುತ್ತಾರೆ. ಈ ರಾಶಿಯವರನ್ನು ಸುಲಭವಾಗಿ ನಂಬಬಹುದು. ಆದರೆ ಕಷ್ಟ ಬಂದಾಗ ಇನ್ನೊಬ್ಬರ ಸಹಾಯ ಪಡೆಯುವ ಬದಲು ನಿಮ್ಮ ಹಣವನ್ನೆ ಕಷ್ಟಕ್ಕೂ ಉಳಿಸಿಕೊಂಡರೆ ಒಳ್ಳೆಯದು. ದುರ್ಗಾ ದೇವಿ ಆರಾಧನೆಯಿಂದ ಮೀನ ರಾಶಿಯವರು ಹಣವನ್ನು ಉಳಿಸುವಂತಾಗುತ್ತದೆ.
ವೃಶ್ಚಿಕ ರಾಶಿಯವರಿಗೆ ವಿಚಿತ್ರ ಖಯಾಲಿ ಇರುತ್ತದೆ. ತಮಗೆ ಇಷ್ಟವಾದ ಹವ್ಯಾಸಗಳಿಗೆ ಹಿಂದೂ ಮುಂದು ನೋಡದೆ ಹಣ ಸುರಿಯುತ್ತಾರೆ. ಟ್ರಾವೆಲ್ಲಿಂಗ್ ಜೊತೆ ಕಾರಿನ ಹುಚ್ಚಿದೆ ಅಂದಿಟ್ಟುಕೊಳ್ಳಿ, ಮನೆಯಲ್ಲಿ ನಿಲ್ಲಿಸಲು ಜಾಗ ಇದೆಯೋ, ಇಲ್ಲವೋ ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಾರನ್ನು ಕೊಳ್ಳುತ್ತಾರೆ. ಕೊಂಡ ಮೇಲೆ ಹೀಗೆ ಮಾಡಿದ್ದು ವರ್ಥ್ ಆಗುತ್ತದೆಯಾ ಎಂದು ಯೋಚಿಸುತ್ತಾರೆ. ಆಗ ಇವರ ಹತ್ತಿರ ಉತ್ತರ ಇರುವುದಿಲ್ಲ. ಸಂಗೀತ ಕೇಳುವ ಹುಚ್ಚಿದ್ದರೆ, ಎಲ್ಲಿಯೆ ಕಚೇರಿ ಆಗಲಿ ಹೋಗುತ್ತಾರೆ, ಇಲ್ಲವೆ ಆಲ್ಬಂಗಳಿಗೆ ವ್ಯಯಿಸುತ್ತಾರೆ.
ಬರ್ಡ್ ವಾಚಿಂಗ್ ಹುಚ್ಚಿದೆ ಅಂದರೆ ಸರಿ, ಕೈಯಲ್ಲೊಂದು ಕ್ಯಾಮೆರಾ ಹಿಡಿದು ದಕ್ಷಿಣ ಆಫ್ರಿಕಾಕ್ಕೂ ಹೋಗಿ, ಒಂದೆರಡು ಪಕ್ಷಿಗಳ ಫೋಟೊ ತೆಗೆದುಕೊಂಡು ಬರುತ್ತಾರೆ. ಅದೆ ದುಡ್ಡು ಉಳಿಸಿದರೆ ಕಷ್ಟಕ್ಕೆ ಆಗುತ್ತದೆ ಎಂದು ಯೋಚಿಸುವ ವ್ಯವಧಾನವೆ ಇವರಿಗೆ ಇರುವುದಿಲ್ಲ. ದುಡ್ಡು ಚೆಲ್ಲುವ ವಿಷಯದಲ್ಲಿ ನಿಮ್ಮನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕಂದರೆ, ರಿಸ್ಟ್ರಿಕ್ಷನ್ಸ್ ಹಾಕಿಕೊಳ್ಳಿ ಜೊತೆಗೆ ಮುಖ್ಯವಾಗಿ ಶಿವನ ಪ್ರಾರ್ಥನೆ ಮಾಡಬೇಕು ಇದರಿಂದ ಕಷ್ಟಗಳಿಂದ ಪಾರಾಗಲು ನೆರವಾಗುತ್ತದೆ.
ಕಟಕ ರಾಶಿಯವರು ಮಾತ್ರ ಭವಿಷ್ಯದ ಎಲ್ಲ ಖರ್ಚು ವೆಚ್ಚಗಳನ್ನೂ ಕೂಡಿ, ಕಳೆದರೂ ಕೈಯಲ್ಲಿ ಸ್ವಲ್ಪ ಹಣ ಇರುವಂತೆ ನೋಡಿಕೊಳ್ಳುತ್ತಾರೆ. ಆದರೆ, ಮುಂಜಾಗೃತಾ ಕ್ರಮದಿಂದಲೊ ಏನೊ, ಇವರಿಗೆ ಅಂಥ ಕಷ್ಟದ ಸಮಯವೆ ಬರುವುದಿಲ್ಲ. ಅನಗತ್ಯ ವಸ್ತುಗಳನ್ನು ಕೊಳ್ಳುವಾಗ ಯೋಚಿಸಿ ಸಾಕು. ಅದು ಬಿಟ್ಟು ಹೆಂಡತಿ ಆಸೆಯಿಂದ ಏನೋ ಒಂದು ಸೀರೆ ಕೊಳ್ಳುತ್ತೇನೆ ಅಂದರೂ ಸೇವಿಂಗ್ಸ್ ನ ಮಹತ್ವದ ಭಾಷಣ ಮಾಡುವ ಅಗತ್ಯವಿಲ್ಲ ಎನ್ನುವುದನ್ನು ನೆನಪಿನಲ್ಲಿಡಿ. ಕೆಲವೊಮ್ಮೆ ಸಿಕ್ಕಾಪಟ್ಟೆ ಶಾಪಿಂಗ್ ಮಾಡುವ ಅಭ್ಯಾಸವೂ ಇವರಿಗಿರುತ್ತದೆ.
ಆದರೆ ಕೈಯಲ್ಲಿ ದುಡ್ಡು ಕಡಿಮೆಯಾಗುತ್ತಿದ್ದಂತೆ, ಸಿಕ್ಕಾಪಟ್ಟೆ ಟೆನ್ಶನ್ ಮಾಡಿಕೊಳ್ಳುತ್ತಾರೆ. ಯಾಕಾದರೂ ಅಷ್ಟು ದುಡ್ಡು ಖಾಲಿ ಮಾಡಿದಿನೊ ಎಂದು ಹಲಬುವ ಸ್ವಭಾವ ಇವರಿಗೆ ಇರುತ್ತದೆ. ಒಟ್ಟಿನಲ್ಲಿ ಸುಖಾ ಸುಮ್ನೆ ದುಡ್ಡಿನ ವಿಷಯದಲ್ಲಿ ನೆಮ್ಮದಿ ಹಾಳು ಮಾಡಿಕೊಳ್ಳುವ ಗುಣ ಇವರದ್ದು. ದೇವಿ ಸ್ತುತಿಯಿಂದ ಹಣ ಉಳಿಸಬಹುದು. ಈ ರಾಶಿಯವರ ಚಂಚಲ ಬುದ್ಧಿಯನ್ನು ಹಿಡಿತದಲ್ಲಿಡಿಲು ಆ ದೇವಿಗೆ ಮಾತ್ರ ಸಾಧ್ಯ.
ಕನ್ಯಾ ಸ್ವಲ್ಪ ಬಾಹ್ಯ ಸೌಂದರ್ಯ ಆರಾಧಕರು. ಎಲ್ಲವೂ ಪರ್ಫೆಕ್ಟ್ ಆಗಿರಬೇಕು ಅಂತ ಬಯಸುತ್ತಾರೆ. ಹಾಕುವ ಒಳ ಉಡುಪಿನಿಂದ ಹಿಡಿದು, ಬಟ್ಟೆ, ಚಪ್ಪಲಿಯೂ ಬ್ರಾಂಡೆಂಡ್ ಬೇಕು ಅಂತ ಆಶಿಸುತ್ತಾರೆ. ಅದಕ್ಕೆ ಎಷ್ಟೆ ದುಡ್ಡಾದರೂ ಸರಿ, ವ್ಯಯಿಸುತ್ತಾರೆ. ಇದರಿಂದಾನೆ ದುಡ್ಡಿನ ಕೊರತೆ ಈ ರಾಶಿಯವರನ್ನು ಕಾಡುತ್ತದೆ. ಹಾಸಿಗೆ ಇದ್ದಷ್ಟು ಕಾಲು ಚಾಚುವುದು ಇವರಿಗೆ ಆಗಿ ಬರುವುದಿಲ್ಲ. ಈ ಗುಣದಿಂದಲೆ ಸಂಕಷ್ಟಕ್ಕೆ ಸಿಲುಕಿ ಕೊಳ್ಳುತ್ತಾರೆ. ಅನಂತ ಪದ್ಮನಾಭನ ಧ್ಯಾನದಿಂದ ದುಬಾರಿ ವೆಚ್ಚಕ್ಕೊಂದು ಕಡಿವಾಣ ಬೀಳುವ ಸಾಧ್ಯತೆ ಇರುತ್ತದೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ, ನಿಮ್ಮ ರಾಶಿ ಯಾವುದು ಎಂಬುದನ್ನು ನೋಡಿಕೊಳ್ಳಿ, ಹಣ ಉಳಿಸುವ ರಾಶಿಯಾಗಿದ್ದಲ್ಲಿ ಖುಷಿಪಡಿ.