2024ರಲ್ಲಿ ಮೇ ತಿಂಗಳವರೆಗು ಮೂರು ರಾಶಿಯವರ ಮೇಲೆ ಗುರು ಗ್ರಹದ ಸಂಪೂರ್ಣ ಆಶೀರ್ವಾದ ಇರುತ್ತದೆ. ತುಂಬ ಮಂಗಳಕರ ಗ್ರಹ ಅಂದ್ರೆ ಆದು, ಗುರು ಗ್ರಹ ನವಗ್ರಹಗಳಲ್ಲಿ. ಈ ಸಮಯದಲ್ಲಿ ಹೆಚ್ಚು ಬೆಳವಣಿಗೆ ಮತ್ತು ಸಾಕಷ್ಟು ಸಂಪತ್ತು ಕೈ ಸೇರುತ್ತದೆ. ಮನಸ್ಸಿನ ಎಲ್ಲಾ ಇಚ್ಚೆಗಳು ನೆರವೇರುತ್ತವೆ. ಈ ಅದೃಷ್ಟ ಇರುವ ರಾಶಿಗಳು ಯಾವುವು ಎಂಬುದನ್ನು ನೋಡೋಣ.

ಮೇಷ ರಾಶಿ:ಗುರು ಮೇಷ ರಾಶಿಯ ಪ್ರಥಮ ಮನೆಯಲ್ಲಿ ಇರುವುದರಿಂದ. ಮೇ ತಿಂಗಳವರೆಗೂ ಸಮಾಜದಲ್ಲಿ ಹೆಚ್ಚು ಗೌರವ ಸಿಗುತ್ತದೆ. ಮುಟ್ಟಿದೆಲ್ಲ ಬಂಗಾರ ಆಗುತ್ತದೆ. ಸಂಗಾತಿ ಜೊತೆಗಿನ ಸಂಬಂಧ ಬಲಗೊಳ್ಳುತ್ತದೆ ಮತ್ತು ಹೆಚ್ಚಿನ ಸಮಯ ಅವರಿಗೆ ನೀಡುವಿರಿ. ವಿಧ್ಯಾರ್ಥಿಗಳು ವ್ಯಾಸಂಗದಲ್ಲಿ ಹೆಚ್ಚಿನ ಪ್ರಗತಿ ಸಾಧಿಸುತ್ತಾರೆ. ವೃತ್ತಿಯಲ್ಲಿ ಉತ್ತಮ ಸುಧಾರಣೆ ಮತ್ತು ಕಾರ್ಯಕ್ಷಮತೆ ಹೆಚ್ಚುತ್ತದೆ. ಹೆಚ್ಚಿನ ಆದಾಯ ಬಂದಂತೆ ಉಳಿತಾಯ ಹೆಚ್ಚಾಗುತ್ತದೆ. ಮೇ ಒಂದರ ತನಕ ಈ ರಾಶಯವರಿಗೆ ಶುಭ ಕಾಲ. ವಿದೇಶದಲ್ಲಿ ವಿದ್ಯಾಭ್ಯಾಸ ಮಾಡುವ ಆಸೆ ಇರುವವರಿಗೆ ಒಳ್ಳೆ ಅವಕಾಶ ಈ ಸಮಯ.

ಕಟಕ ರಾಶಿ :ಕರ್ಕಾಟಕ ರಾಶಿಯಲ್ಲಿ ಗುರು ಹತ್ತನೇ ಮನೆಯಲ್ಲಿ ಸಂಚಾರ ಮಾಡುತ್ತಿರುವುದರಿಂದ ಉದ್ಯೋಗದಲ್ಲಿ ಒಳ್ಳೆ ಫಲ ದೊರಕುತ್ತದೆ. ವ್ಯಾಪಾರ ವ್ಯವಹಾರಗಳನ್ನು ಮಾಡುವವರಿಗೆ ವಿದೇಶದಿಂದ ಉತ್ತಮ ಪ್ರತಿಫಲ ಸಿಗುತ್ತದೆ. ಹೊಸ ವ್ಯಾಪಾರ ಶುರು ಮಾಡಿದರು ಒಳ್ಳೆ ಲಾಭ ಲಭಿಸುತ್ತದೆ ಮತ್ತು ಹೊಸ ಒಪ್ಪಂದಗಳು ಹೆಚ್ಚಾಗಿ ಸಿಗುತ್ತವೆ. ಗುರುವಿನ ದಯೆಯಿಂದ ಉದ್ಯೋಗ ನೀರೀಕ್ಷೆ ಮಾಡುವವರಿಗೆ ಮೇ ತಿಂಗಳ ಅಂತ್ಯದ ಒಳ್ಳೆಗೆ ಉದ್ಯೋಗ ಪ್ರಾಪ್ತಿಯಾಗುತ್ತದೆ. ತಂದೆಯ ಜೊತೆಗಿನ ಸಂಬಂಧ ಇನಷ್ಟು ಸುಧಾರಣೆ ಕಾಣುತ್ತದೆ.

ಸಿಂಹ ರಾಶಿ :ಸಿಂಹ ರಾಶಿಯವರ 9ನೇ ಮನೆಯಲ್ಲಿ ಗುರು ಗ್ರಹ ಸಂಚಾರ ಮಾಡುತ್ತಿರುವ ಕಾರಣ ಅವರ ಮೇಲೆ ಅದರ ಪ್ರಭಾವ ಹೆಚ್ಚಾಗಿ ಮತ್ತು ಸಂಪೂರ್ಣವಾಗಿ ಇರುತ್ತದೆ. ನಿಮ್ಮ ಎಲ್ಲಾ ಆಕಾಂಕ್ಷೆ ಮತ್ತು ಯೋಜನೆಗಳು ಈಡೇರುತ್ತವೆ. ವಿವಿಧ ಮೂಲಗಳಿಂದ ಹಣ ಗಳಿಕೆ ಮಾಡುವ ಎಲ್ಲಾ ಅವಕಾಶ ಇದೆ. ವ್ಯಾಪಾರದ ದೆಸೆಯಿಂದ ಹೊರದೇಶಕ್ಕೆ ಹೋಗುವ ಸಾಧ್ಯತೆ ಇದೆ. ದೇವರ ಕಾರ್ಯಗಳಿಗೆ ಹೆಚ್ಚಿನ ಹಣ ಖರ್ಚು ಮಾಡುವಿರಿ. ಎಲ್ಲಾ ರೀತಿಯ ರಂಗದಲ್ಲಿ ಕೂಡ ಯಶಸ್ಸು ಲಭಿಸುತ್ತದೆ. ಮೇ ತಿಂಗಳು ತುಂಬ ಚೆನ್ನಾಗಿ ಸಿಂಹ ರಾಶಿಯವರಿಗೆ ಚೆನ್ನಾಗಿ ಶುಭಫಲ ನೀಡುವ ತಿಂಗಳು. ಈ ಮೂರು ರಾಶಿಯವರಿಗೆ ಗುರು ಬಲ ಇರುವುದರಿಂದ ಒಳ್ಳೆ ರೀತಿ ಮಂಗಳ ಫಲಗಳನ್ನು ಅನುಭವಿಸುವರು. ಗುರು ಗ್ರಹ ಎಲ್ಲಾ ಕಡೆಯಿಂದ ಅನುಕೂಲಗಳನ್ನು ಅನುಗ್ರಹಿಸುವುದು.

Leave a Reply

Your email address will not be published. Required fields are marked *