ಹಿಂದೂ ಸಂಪ್ರದಾಯದಲ್ಲಿ ವೈದಿಕ ಶಾಸ್ತ್ರವನ್ನು ನಂಬುತ್ತಾರೆ ಆದರೆ ಕೆಲವರಿಗೆ ಈ ಶಾಸ್ತ್ರದ ಮೇಲೆ ನಂಬಿಕೆ ಇರುವುದಿಲ್ಲ. ವೈದಿಕ ಶಾಸ್ತ್ರವು ತನ್ನದೆ ಆದ ಪ್ರಾಮುಖ್ಯತೆಯನ್ನು ಹೊಂದಿದೆ ಈ ಶಾಸ್ತ್ರದಲ್ಲಿ ನಕ್ಷತ್ರ, ರಾಶಿಯ ಬಗ್ಗೆ ತಿಳಿದುಕೊಳ್ಳಬಹುದು ಅದೇ ರೀತಿ ಮೃಗಶಿರ ನಕ್ಷತ್ರದಲ್ಲಿ ಜನಿಸಿದವರ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದಲ್ಲಿ ತಿಳಿದುಕೊಳ್ಳೋಣ.

ವೈದಿಕ ಜ್ಯೋತಿಷ್ಯದಲ್ಲಿ ಒಟ್ಟು 28 ನಕ್ಷತ್ರಗಳನ್ನು ಉಲ್ಲೇಖಿಸಲಾಗಿದೆ. ಈ ಎಲ್ಲ ನಕ್ಷತ್ರಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ. ಆಯಾ ನಕ್ಷತ್ರದಲ್ಲಿ ಜನಿಸಿದವರು ಬೇರೆ ಬೇರೆ ರೀತಿಯ ಸ್ವಭಾವ, ಗುಣ, ಯೋಗಗಳನ್ನು ಹೊಂದಿರುತ್ತಾರೆ. ನಕ್ಷತ್ರಗಳ ಪರಿಣಾಮದಿಂದಾಗಿ ವ್ಯಕ್ತಿಗೆ ಒಳಿತು ಕೆಡಕುಗಳಾಗುತ್ತವೆ ಎಂದು ಪಂಡಿತರು ಹೇಳುತ್ತಾರೆ. ಜ್ಯೋತಿಷಿಗಳು ಐದು ನಕ್ಷತ್ರಗಳನ್ನು ಅತ್ಯಂತ ಶುಭ ಎಂದು ಗುರುತಿಸಿದ್ದಾರೆ ಅಂದರೆ ಈ ನಕ್ಷತ್ರಗಳಲ್ಲಿ ಜನಿಸಿದವರಿಗೆ ಒಳ್ಳೆಯದಾಗುತ್ತದೆ. ಈ ನಕ್ಷತ್ರದವರು ಜೀವನದಲ್ಲಿ ಏನನ್ನಾದರೂ ಸಾಧಿಸುತ್ತಾರೆ ಎಂದು ನಂಬಲಾಗಿದೆ. ವೈದಿಕ ಜ್ಯೋತಿಷ್ಯದ ಪ್ರಕಾರ ಮೃಗಶಿರಾ ನಕ್ಷತ್ರ ಐದನೇ ಸ್ಥಾನದಲ್ಲಿದೆ ಈ ನಕ್ಷತ್ರವನ್ನು ಬ್ರಹ್ಮನ ಸ್ವರೂಪ ಎಂದು ಕರೆಯಲಾಗುತ್ತದೆ. ಒಮ್ಮೆ ಬ್ರಹ್ಮದೇವನಿಗೆ ಅವನ ಮಗಳ ಮೇಲೆ ಮೋಹವಾಗುತ್ತದೆ. ಇದರಿಂದ ಪರಶಿವನಿಗೆ ತೀವ್ರ ಕೋಪ ಬಂತು. ಆಗ ಬ್ರಹ್ಮದೇವನಿಗೆ ಶಿವನು ಬಾಣ ಹೂಡಿದನು ಆಗ ಬ್ರಹ್ಮ ಅದರಿಂದ ತಪ್ಪಿಸಿಕೊಳ್ಳಲು ಆಗಸದತ್ತ ಓಡಿದ ನಂತರ ಮೃಗಶಿರಾ ನಕ್ಷತ್ರದಲ್ಲಿ ಅವಿತುಕೊಂಡನು. ಪರಶಿವನ ಕೋಪ ಕಡಿಮೆ ಮಾಡಲು ಜಿಂಕೆಯ ಅವತಾರ ತಾಳಿದನು. ದಂತಕಥೆಗಳ ಪ್ರಕಾರ ಶಿವನ ಬಾಣವನ್ನು ಕ್ಷಮಿಸುವ ಗುಣವು ಮೃಗಶಿರಾ ನಕ್ಷತ್ರಕ್ಕಿದೆ. ಈ ನಕ್ಷತ್ರದಲ್ಲಿ ಬ್ರಹ್ಮನು ಮಲಗಿದ್ದಾನೆ ಎಂದು ನಂಬಲಾಗಿದೆ.

ಜ್ಯೋತಿಷ್ಯದ ಪ್ರಕಾರ, ಪ್ರತಿ ನಕ್ಷತ್ರವು ಒಂದಲ್ಲ ಒಂದು ಗ್ರಹದ ಅಧಿಪತ್ಯದಲ್ಲಿರುತ್ತದೆ. ಅದು ಆ ನಕ್ಷತ್ರದಲ್ಲಿ ಜನಿಸಿದವರ ಮೇಲೆ ಪರಿಣಾಮ ಬೀರುತ್ತದೆ. ಮಂಗಳನನ್ನು ಮೃಗಶಿರಾ ನಕ್ಷತ್ರದ ಅಧಿಪತಿ ಎಂದು ಪರಿಗಣಿಸಲಾಗಿದೆ. ಈ ನಕ್ಷತ್ರದಲ್ಲಿ ಜನಿಸಿದವರ ಮೇಲೆ ಮಂಗಳನ ನೇರ ಪರಿಣಾಮ ಬೀರಲಿದೆ. ಜ್ಯೋತಿಷ್ಯದ ಪ್ರಕಾರ ಈ ನಕ್ಷತ್ರದಲ್ಲಿ ಜನಿಸಿದವರು ಪ್ರೀತಿಯಲ್ಲಿ ಅಚಲ ನಂಬಿಕೆಯನ್ನು ಹೊಂದಿರುತ್ತಾರೆ ಅಲ್ಲದೆ ಅವರು ಸುಸ್ಥಿರ ಕೆಲಸದ ಮೇಲೆ ಹೆಚ್ಚು ಅವಲಂಬಿತರಾಗಿರುತ್ತಾರೆ. ಈ ನಕ್ಷತ್ರದಲ್ಲಿ ಜನಿಸಿದವರು ತಮಗೆ ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿ ಮುಗಿಸುತ್ತಾರೆ. ಅವರು ಆಕರ್ಷಕ ವ್ಯಕ್ತಿತ್ವ ಮತ್ತು ರೂಪವನ್ನು ಹೊಂದಿರುತ್ತಾರೆ, ಅವರು ಯಾವಾಗಲೂ ಧೈರ್ಯವನ್ನು ಹೊಂದಿರುತ್ತಾರೆ, ಸ್ವಚ್ಛ ಹೃದಯದವರಾಗಿರುತ್ತಾರೆ ಮತ್ತು ಎಲ್ಲರನ್ನೂ ಪ್ರೀತಿಸುತ್ತಾರೆ ಆದರೆ ಯಾರಾದರೂ ಮೋಸ ಮಾಡಿದರೆ ಅವರು ಎಂದಿಗೂ ಕ್ಷಮಿಸುವುದಿಲ್ಲ. ವೈಯಕ್ತಿಕ ಜೀವನದಲ್ಲಿ ಉತ್ತಮ ಸ್ನೇಹಿತರಾಗಿರುತ್ತಾರೆ. ಪ್ರೀತಿಯಲ್ಲಿ ಅಚಲ ನಂಬಿಕೆ ಹೊಂದಿರುತ್ತಾರೆ. ಇವರ ವೈವಾಹಿಕ ಜೀವನ ಸುಖಕರವಾಗಿರುತ್ತದೆ. ಒಟ್ಟಿನಲ್ಲಿ ಮೃಗಶಿರ ನಕ್ಷತ್ರದಲ್ಲಿ ಜನಿಸಿದವರು ಅದೃಷ್ಟವಂತರು, ಭಾಗ್ಯಶಾಲಿಗಳು ಆಗಿರುತ್ತಾರೆ ಅವರ ಜೀವನ ಸುಖದಿಂದ ಕೂಡಿರುತ್ತದೆ. ಈ ಮಾಹಿತಿಯನ್ನು ಮೃಗಶಿರ ನಕ್ಷತ್ರದಲ್ಲಿ ಜನಿಸಿದವರಿಗೆ ತಪ್ಪದೆ ತಿಳಿಸಿ.

Leave a Reply

Your email address will not be published. Required fields are marked *