ಖ್ಯಾತ ಗಾಯಕ ಎಸ್.ಪಿ. ಬಾಲಸುಬ್ರಹ್ಮಣ್ಯಂ ನೇತೃತ್ವದಲ್ಲಿ ಈ ಮೊದಲು ಪ್ರಸಾರವಾಗಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮ ಅನೇಕ ಕಲಾವಿದರಿಗೆ ವೇದಿಕೆ ಆಗಿತ್ತು. ಈಗ ಈ ಕಾರ್ಯಕ್ರಮ ಮತ್ತೆ ಆರಂಭಗೊಂಡಿದೆ. ಕಲರ್ಸ್ ಕನ್ನಡ ವಾಹಿನಿಯು ಹೊಸ ರೀತಿಯಲ್ಲಿ ಈ ಶೋವನ್ನಿ ಆರಂಭ ಮಾಡಿದ್ದು ಸಾಕಷ್ಟು ಪ್ರತಿಭೆಗಳಿಗೆ ವೇದಿಕೆ ಆಗಿದೆ. ಇದರಲ್ಲಿ ಎಲ್ಲರ ಗಮನ ಸೆಳೆದಿದ್ದು ಸೂರ್ಯಕಾಂತ್ ಹೆಸರಿನ ಸ್ಪರ್ಧಿ. ಆಗಸ್ಟ್ 22 ಭಾನುವಾರ ನಡೆದ ಎಪಿಸೋಡ್ನಲ್ಲಿ ವೇದಿಕೆ ಏರಿದ ಅವರು, ಎಲ್ಲರ ಹೃದಯ ಗೆದ್ದರು. ತನ್ನ ಸಮಸ್ಯೆಯನ್ನು ಮೆಟ್ಟಿನಿಂತು ಕನ್ನಡಿಗರ ಮನ ಗೆದ್ದಿದ್ದಾರೆ ಈ ಸೂರ್ಯಕಾಂತ್. ಹಾಗಾದರೆ ಈ ಸೂರ್ಯಕಾಂತ್ ಅವರಿಗೆ ಒಂದು ಎಪಿಸೋಡಿಗೆ ವಾಹಿನಿ ಕೊಡುತ್ತಿರುವ ಸಂಭಾವನೆ ಎಷ್ಟು? ಅದನ್ನ ನಾವು ಈ ಲೇಖನದ ಮೂಲಕ ತಿಳಿದುಕೊಳ್ಳೋಣ.
ನಮ್ಮ ಕಿರುತೆರೆಯಲ್ಲಿ ಪ್ರಸಾರವಾಗುವ ಹಲವಾರು ಕಾರ್ಯಕ್ರಮಗಳು ಇಲ್ಲಿಯವರೆಗೆ ಅದೆಷ್ಟೋ ಹಳ್ಳಿಯ ಯುವ ಪ್ರತಿಭೆಗಳಿಗೆ ಅವಕಾಶ ನೀಡಿ ಕರ್ನಾಟಕದ ಜನತೆಯ ಮನಸ್ಸಿನಲ್ಲಿ ಉಳಿಯುವಂತೆ ಮಾಡಿದ್ದಾರೆ. ಹೀಗಾಗಿ ಇಂದಿನವರೆಗೆ ಅದೆಷ್ಟೋ ಪ್ರತಿಭೆಗಳು ಕನ್ನಡ ಪ್ರೇಕ್ಷಕರ ಮನಸು ಗೆಲ್ಲುವಂತೆ ಮಾಡಿದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಎದೆತುಂಬಿ ಹಾಡುವೆನು ಸಿಂಗಿಂಗ್ ಶೋನಲ್ಲಿ ಪರಿಚಿತರಾಗಿರುವ ಸೂರ್ಯಕಾಂತ್ ಈಗ ಕರ್ನಾಟಕದ ಮೂಲೆಮೂಲೆಯಲ್ಲೂ ಮನೆಮಾತಾಗಿದ್ದಾರೆ. ಸೂರ್ಯಕಾಂತ್ ಅವರು ಕಲಬುರಗಿ ಜಿಲ್ಲೆಯ ಗಡಿಲಿಂಗದಹಳ್ಳಿಯವರು. ವೃತ್ತಿಯಲ್ಲಿ ಗಾಯಕ.
ಇವರು ಹಲವಾರು ಆಡಿಶನ್ ಗಳಲ್ಲಿ ಪಾಸಾಗಿ ಮುಖ್ಯ ವೇದಿಕೆಗೆ ತೇರ್ಗಡೆಯಾಗಿ ಬಂದಿದ್ದಾರೆ. ಇನ್ನು ರಾಜೇಶ್ ಕೃಷ್ಣನ್ ಅವರು ಇವರಿಗೆ ತಮ್ಮ ಹೆಸರನ್ನು ಹೇಳಲು ಕೇಳಿದಾಗ ಅವರಿಗೆ ತಮ್ಮ ಹೆಸರನ್ನು ಕೂಡ ಸರಿಯಾಗಿ ಹೇಳಲು ಬರುತ್ತಿರಲಿಲ್ಲ. ಎದೆ ತುಂಬಿ ಹಾಡುವೆನು ವೇದಿಕೆಯ ಮೇಲೆ ರವೀಂದ್ರ ಹಂದಿಗನೂರು ಅವರು ಸಂಗೀತ ಸಂಯೋಜನೆ ಮಾಡಿದ ‘ಮೂಕನಾಗಬೇಕು ಜಗದೊಳು..’ ತತ್ವಪದವನ್ನು ಸೂರ್ಯಕಾಂತ್ ಹಾಡಿದ್ದಾರೆ. ಸೂರ್ಯಕಾಂತ್ ಸಾಮಾನ್ಯರಂತೆ ಇದ್ದಿದ್ದರೆ ಬಹುಶಃ ವೀಕ್ಷಕರಿಗೆ ಇಷ್ಟರ ಮಟ್ಟಿಗೆ ಹತ್ತಿರವಾಗುತ್ತಿರಲಿಲ್ಲವೇನೋ. ಆದರೆ, ಅವರು ಮಾತನಾಡುವಾಗ ತೊದಲುತ್ತಾರೆ. ಈ ಸಮಸ್ಯೆ ಮಧ್ಯೆಯೂ ಅವರಲ್ಲಿ ಹಾಡಬೇಕು ಎನ್ನುವ ಛಲ ಅದಮ್ಯವಾಗಿದೆ. ಹೀಗಾಗಿ, ಅದು ಸಮಸ್ಯೆ ಎಂದೇ ಅವರಿಗೆ ಅನಿಸಿಲ್ಲ. ಈ ಉಗ್ಗು ಸಮಸ್ಯೆಯನ್ನು ಅದಮಿಟ್ಟು ಸೂರ್ಯಕಾಂತ್ ಅದ್ಭುತವಾಗಿ ಹಾಡಿದ್ದಾರೆ.
ರವೀಂದ್ರ ಹಂದಿಗನೂರು ಅವರು ಅದ್ಭುತ ಗಾಯಕರು, ಸಂಗೀತ ಸಂಯೋಜಕರು. ಅವರ ಹಾಡನ್ನು ಹಾಡಬೇಕು ಎಂದರೆ ಒಂದು ವಾರ ವಾರ್ಮ್ಅಪ್ ಬೇಕು. ನೀವು ಹಾಡಿ ಕೇಳೋಣ’ ಎಂದರು ರಾಜೇಶ್ ಕೃಷ್ಣನ್. ‘ಮೂಕನಾಗಬೇಕು ಜಗದೊಳು..’ ಎಂದು ಅದ್ಭುತವಾಗಿ ಹಾಡುವ ಮೂಲಕ ಸೂರ್ಯಕಾಂತ್ ಎಲ್ಲರ ಗಮನಸೆಳೆದರು. ಇವರ ಹಾಡು ಈಗಾಗಲೇ 30 ಲಕ್ಷ ವೀಕ್ಷಣೆ ಗಿಂತಲೂ ಅಧಿಕ ವೀಕ್ಷಣೆಯನ್ನು ಪಡೆದು ಕರ್ನಾಟಕ ರಾಜ್ಯದಾದ್ಯಂತ ಎಲ್ಲಾ ಪ್ರೇಕ್ಷಕರ ಮನಗೆದ್ದಿದೆ. ಸೂರ್ಯಕಾಂತ್ ಹಾಡಿದ ಹಾಡು ಕೇಳಿ ರಾಜೇಶ್ ಕೃಷ್ಣನ್ ಭಾವುಕರಾದರು.
‘ಸೂರ್ಯಕಾಂತ್ ಗೆಲ್ಲೋಕೂ ಮುಂಚೆನೇ ಗೆದ್ದಾಯ್ತು. ಸೂರ್ಯಕಾಂತ್ ಪ್ರತಿಭೆ ಎದೆ ತುಂಬಿ ಹಾಡುವೆನು ಅಷ್ಟೇ ಅಲ್ಲಾ ಇಡೀ ಕರ್ನಾಟಕಕ್ಕೇ ಹೆಮ್ಮೆ’ ಎನ್ನುವ ಕ್ಯಾಪ್ಶನ್ ಅಡಿಯಲ್ಲಿ ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಹಂಚಿಕೊಂಡಿದೆ. ಎಸ್.ಪಿ ಬಾಲಸುಬ್ರಹ್ಮಣ್ಯಂ ಅವರು ಅಭಿಮಾನಿ ಬಳಗದ ಜತೆಗೆ ದೊಡ್ಡ ಶಿಷ್ಯವರ್ಗವನ್ನೂ ಹೊಂದಿದ್ದಾರೆ. ನೇರವಾಗಿ ಹಾಗೂ ಪರೋಕ್ಷವಾಗಿ ಸಾಕಷ್ಟು ಮಂದಿ ಅವರಿಂದ ಹಲವು ವಿಚಾರಗಳನ್ನು ಕಲಿತಿದ್ದಾರೆ.
ಈ ಕಾರಣಕ್ಕೆ ಎಸ್ಪಿಬಿ ಎಂದರೆ ಎಲ್ಲರಿಗೂ ಅಪಾರ ಗೌರವ. ಅವರು ನಡೆಸಿಕೊಡುತ್ತಿದ್ದ ‘ಎದೆ ತುಂಬಿ ಹಾಡುವೆನು’ ಕಾರ್ಯಕ್ರಮದ ಎರಡನೇ ಇನ್ನಿಂಗ್ಸ್ ಮತ್ತೆ ಆರಂಭಿಸಲಾಗಿದೆ. ಈ ವೇದಿಕೆ ಸಾಕಷ್ಟು ಭಾವನಾತ್ಮಕ ಕ್ಷಣಗಳಿಗೆ ಸಾಕ್ಷಿಯಾಗುತ್ತಿದೆ. ಇದರ ಜತೆಗೆ ಎಸ್ಪಿಬಿ ಅವರನ್ನು ನೆನಪಿಸಿಕೊಳ್ಳುವ ಕೆಲಸ ಕೂಡ ಆಗುತ್ತಿದೆ.
ಜಡ್ಜ್ಗಳು ಎಸ್ಪಿಬಿ ಅವರನ್ನು ನೆನೆನೆನೆದು ಕಣ್ಣೀರು ಹಾಕುತ್ತಿದ್ದಾರೆ. ಇನ್ನು ಸೂರ್ಯಕಾಂತ ರವರಿಗೆ ಎದೆ ತುಂಬಿ ಹಾಡುವೆನು ಸಿಂಗಿಂಗ್ ಶೋನಲ್ಲಿ ಹಾಡಲು ಎಷ್ಟು ಸಂಭಾವನೆ ಪಡೆದಿದ್ದಾರೆ ಗೊತ್ತ ಸ್ನೇಹಿತರೆ. ಬನ್ನಿ ಈ ಕುರಿತಂತೆ ನಾವು ನಿಮಗೆ ವಿವರವಾಗಿ ಹೇಳುತ್ತೇವೆ. ಹೌದು ಸ್ನೇಹಿತರೆ ಸೆನ್ಸೇಷನಲ್ ಸ್ಟಾರ್ ಆಗಿರುವ ಸೂರ್ಯಕಾಂತ್ ರವರು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ಪ್ರತಿಯೊಂದು ಎಪಿಸೋಡಿಗೆ ಹಾಡಲು ಬರೋಬರಿ ಹತ್ತರಿಂದ ಹದಿನೈದು ಸಾವಿರ ಸಂಭಾವನೆ ಪಡೆಯುತ್ತಿದ್ದಾರೆ ಎಂಬ ಸುದ್ದಿ ಕೇಳಿ ಬರುತ್ತಿದೆ.
ಶಿರಡಿ ಸಾಯಿಬಾಬಾ ಜ್ಯೋತಿಷ್ಯ ಶಾಸ್ತ್ರಂ ನಂಬಿ ಕರೆ ಮಾಡಿದವರಿಗೆ ವಿಶೇಷ ಸಾಂತ್ವಾನ, ಸಮಸ್ಯೆ ಸಮಸ್ಯೆ ಸಮಸ್ಯೆ ಚಿಂತಿಸಬೇಡಿ, ಅಸಾಧ್ಯವಾದದ್ದು ಇಲ್ಲಿ ಸಾಧ್ಯ ಸಮಸ್ಯೆಗಳಾದ ವಿದ್ಯೆ ಉದ್ಯೋಗ ವ್ಯಾಪಾರ ಆರೋಗ್ಯ ದಾಂಪತ್ಯ ಗಂಡ-ಹೆಂಡತಿಯರ ಕಲಹ ಪ್ರೀತಿಯಲ್ಲಿ ನಂಬಿ ಮೋಸ ಇಷ್ಟಪಟ್ಟವರು ನಿಮ್ಮಂತೆ ಆಗಲು ಕೋರ್ಟ್ ಕೇಸ್ ಜಮೀನು ಸ್ತ್ರೀ ಮತ್ತು ಪುರುಷ ವಶೀಕರಣ ಶತ್ರು ಕಾಟ ಮಾಟ-ಮಂತ್ರ ಇನ್ನು ಮುಂತಾದ ಸಮಸ್ಯೆಗಳಿಗೆ ಅತಿ ಶೀಘ್ರದಲ್ಲಿ ಪರಿಹಾರಅಸಾಧ್ಯ ಆಗುವ ಸಮಸ್ಯೆಗಳಿಗೆ ಸಾಧ್ಯವಾಗಿ ತೋರಿಸುವುದು ಶ್ರೀ ಶಿರಡಿ ಸಾಯಿಬಾಬಾ ಜ್ಯೋತಿಷ್ಯಶಾಸ್ತ್ರನಿಮ್ಮ ನಂಬಿಕೆಗೆ ಇಲ್ಲಿ ಮೋಸವಿಲ್ಲ 9611844430