ತಮ್ಮ ನಿರೂಪಣೆಯಿಂದ ಕನ್ನಡಿಗರ ಮನಸ್ಸು ಗೆದ್ದ ಸುಷ್ಮಾ ಅವರ ಊರು, ಅವರು ಪಟ್ಟ ಕಷ್ಟದ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ತನ್ನ ವಿಶಿಷ್ಟ ಮಾತಿನ ಶೈಲಿಯ ಮೂಲಕ ಜನರ ಮನ ಗೆದ್ದ ಆಂಕರ್ ಗಳಲ್ಲಿ ಸುಷ್ಮಾ ಕೂಡ ಒಬ್ಬರು. ಮೂಲತಃ ಚಿಕ್ಕ ಮಗಳೂರಿನ ಕೊಪ್ಪದವರಾಗಿದ್ದು. ಭವಿಷ್ಯ ಕಟ್ಟಿಕೊಳ್ಳಲು ಬೆಂಗಳೂರಿಗೆ ಬಂದರು. ಹೊಟ್ಟೆಪಾಡಿಗಾಗಿ ಬೆಂಗಳೂರಿಗೆ ಬಂದ ಸುಷ್ಮಾ ಅವರಿಗೆ ಮೊದಲು ಯಾರು ಅವಕಾಶ ಕೊಡಲಿಲ್ಲ. ಸುಷ್ಮಾ ಅವರಿಗೆ ಭರತನಾಟ್ಯ ಗೊತ್ತಿತ್ತು. ಮೊದಲು ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ ಸುಷ್ಮಾ ಸ್ನೇಹಿತರ ಸಹಾಯದಿಂದ ಭರತಾಂಜಲಿ ಸಂಸ್ಥೆಯ ನೃತ್ಯ ಕಲಾಮಂದಿರದಲ್ಲಿ ಭರತನಾಟ್ಯದ ಶೋ ನೀಡುವಾಗ ಇವರ ಅಂದ ಕಂಡು ಬೆರಗಾದ ಕೆಲವು ಸೀರಿಯಲ್ ನಿರ್ದೇಶಕರು ಧಾರಾವಾಹಿಗಳಲ್ಲಿ ಅವಕಾಶ ನೀಡಿದರು.
ಯಾವ ಜನ್ಮದ ಮೈತ್ರಿ ಧಾರಾವಾಹಿಯಲ್ಲಿ ಮೊದಲು ನಟಿಸಿದರು. ನಂತರ ಗುಪ್ತಗಾಮಿನಿ, ಸೊಸೆ ತಂದ ಸೌಭಾಗ್ಯ, ತರಲೆ ನನ್ನ ಮಕ್ಕಳು ಹೀಗೆ ಕೆಲವು ಧಾರಾವಾಹಿಯಲ್ಲಿ ಅಭಿನಯಿಸುತ್ತಾರೆ. ನಂತರ ನಿರೂಪಕಿಯಾಗಿ ಕೆಲವು ವರ್ಷ ಕೆಲಸ ಮಾಡುತ್ತಾರೆ. ನಂತರ ಹಾಗೆ ಸುಮ್ಮನೆ ನಿರ್ದೇಶಕರಾದ ಪ್ರೀತಮ್ ಗುಬ್ಬಿ ಅವರೊಂದಿಗೆ ಮದುವೆಯಾಗುತ್ತಾರೆ. ಕೆಲವು ವರ್ಷಗಳು ಜೀವನ ನಡೆಸಿದ್ದು ನಂತರ ಬೇರೆಯಾದರು. ಈಗ ಒಂಟಿ ಜೀವನ ನಡೆಸುತ್ತಿದ್ದಾರೆ. ನಂತರ ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ಜೀನ್ಸ್ ಕಾರ್ಯಕ್ರಮದಲ್ಲಿ ನಿರೂಪಣೆ ನಡೆಸಿಕೊಡುತ್ತಿದ್ದಾರೆ. ಅವರ ಜೀವನ ಸುಖಕರವಾಗಿರಲಿ ಎಂದು ಹಾರೈಸೋಣ.