ನಟ- ನಟಿಯರು ತಮ್ಮ ಬರ್ತ್ ಡೇಯನ್ನು ವಿಜೃಂಭಣೆಯಿಂದ ಆಚರಿಸುವುದು ಸರ್ವೇ ಸಾಮಾನ್ಯ. ಆದರೆ ಲೂಸ್ ಮಾದ ಯೋಗಿ ಅವರು ತಮ್ಮ ಮಡದಿಯ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಿದ್ದಾರೆ. ಈ ಬಗ್ಗೆ ಕೆಲವು ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ಲೂಸ್ ಮಾದ ಎಂದೇ ಖ್ಯಾತಿಯಾದ ಯೋಗಿ ರಾವಣ, ಬಂಗಾರಿ ಮೊದಲಾದ ಸಿನಿಮಾಗಳಲ್ಲಿ ನಟಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಯೋಗಿ ಅವರು ನಟನೆಯ ಜೊತೆಗೆ ನಿರೂಪಕನಾಗಿಯೂ ಗುರುತಿಸಿಕೊಂಡಿದ್ದಾರೆ. ನಟ ಹಾಗೂ ನಿರೂಪಕ ಯೋಗಿ ತಮ್ಮ ಮಡದಿ ಸಾಹಿತ್ಯ ಅವರ ಹುಟ್ಟುಹಬ್ಬವನ್ನು ಸರಳವಾಗಿ ಸ್ನೇಹಿತರು ಹಾಗೂ ಕುಟುಂಬದವರೊಂದಿಗೆ ಆಚರಿಸಿದ್ದಾರೆ. ಹುಟ್ಟು ಹಬ್ಬವನ್ನು ಆಚರಿಸಿಕೊಂಡು ಪೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಯೋಗಿ ಹಾಗೂ ಸಾಹಿತ್ಯ ಅವರು ಪ್ರೀತಿಸಿ ಮದುವೆಯಾಗಿದ್ದಾರೆ, ಇವರಿಗೆ ಮುದ್ದಾದ ಹೆಣ್ಣು ಮಗಳಿದ್ದಾಳೆ. ಮೊದಲಿಗೆ ಸ್ನೇಹಿತರೊಂದಿಗೆ ಮನೆಯಲ್ಲಿ ಕೇಕ್ ಕತ್ತರಿಸಿ ಸಾಹಿತ್ಯ ಅರಸ್ ಅವರು ಸಂಭ್ರಮಿಸಿದ್ದಾರೆ. ಯೋಗಿ ಅವರು ತಮ್ಮ ಪತ್ನಿಯ ಬರ್ತ್ ಡೇ ಯನ್ನು ಕುಟುಂಬದೊಂದಿಗೆ ಹಾಗೂ ಸ್ನೇಹಿತರೊಂದಿಗೆ ಪ್ರತ್ಯೇಕವಾಗಿ ಸೆಲೆಬ್ರೇಟ್ ಮಾಡಿದರು. ನಂತರ ತಮ್ಮ ಕುಟುಂಬದೊಂದಿಗೆ ಮತ್ತೊಂದು ಸಲ ಕೇಕ್ ಕತ್ತರಿಸಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಯೋಗಿ ಅವರ ಎನರ್ಜಿಟಿಕ್ ಆಗಿರುವ ಅಮ್ಮನು ಧಾರವಾಹಿ, ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರದು ಸಂತೋಷದ ಕುಟುಂಬ ಹೀಗೆ ಸದಾಕಾಲ ಸಂತೋಷವಾಗಿರಲಿ ಹಾಗೂ ಚಿತ್ರರಂಗದಲ್ಲಿ ಹೆಚ್ಚಿನ ಸಾಧನೆ ಮಾಡಲಿ ಎಂದು ಆಶಿಸೋಣ.