ನಟ ವಿಷ್ಣುವರ್ಧನ್ ಅಭಿಮಾನಿಗಳಿಗೆ ಗುಡ್ ನ್ಯೂಸ್

0 11

ಕಳೆದ ಎರಡು ವರ್ಷಗಳಿಂದಲೂ ಕೋವಿಡ್ ಇರುವ ಕಾರಣ ಯಾವ ಕೆಲಸಗಳು ಸಾಗುತ್ತಿಲ್ಲ. ಅಭಿಮಾನಿಗಳ ಹಾಗೂ ಜನರ ಆರೋಗ್ಯ ಮುಖ್ಯ ಎಂದು ಭಾರತಿ ವಿಷ್ಣುವರ್ಧನ್ ಹೇಳಿದರು. ವಿಷ್ಣುವರ್ಧನ್ ಅವರ 12 ನೇ ಪುಣ್ಯ ಸ್ಮರಣೆ ಹಿನ್ನಲೆ ಮೈಸೂರಿನ ಉದ್ಬೂರಿನಲ್ಲಿರುವ ವಿಷ್ಣು ಸಮಾಧಿಗೆ  ಭೇಟಿ ನೀಡಿ ಮಾತನಾಡಿದ ಅವರು, ಕೊರೊನಾ ನಿಮಿತ್ತ ನಿಮ್ಮ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಿ. ಮೈಸೂರಿನಲ್ಲೆ ವಿಷ್ಣು ಸ್ಮಾರಕ ನಿರ್ಮಾಣ ಮಾಡಬೇಕು ಎಂಬುದಿತ್ತು ಅದರಂತೇ ನಿರ್ಮಾಣವಾಗಲಿದೆ.

ಮುಂದಿನ ಸಪ್ಟೆಂಬರ್ ನಲ್ಲಿ ಸ್ಮಾರಕ ನಿರ್ಮಾಣವಾಗಲಿದೆ. ಸ್ಮಾರಕದ ಶೇ 60 ರಷ್ಟು ಕಾಮಗಾರಿ ಮುಗಿದಿದೆ, ನಿಮ್ಮ ಆಸೆಯಂತೆ ಸ್ಮಾರಕ ನಿರ್ಮಾಣ ಆಗುತ್ತಿದೆ ಎಂದರು. ಇದೇ ವೇಳೆ ಭಾರತಿ ವಿಷ್ಣುವರ್ಧನ್ ಸೇರಿ ಆಪ್ತರು ವಿಷ್ಣು ಸ್ಮಾರಕಕ್ಕೆ ಪೂಜೆ ಸಲ್ಲಿಸಿದರು. ಅಳಿಯ ಅನಿರುದ್ಧ್ ಕೂಡ ಇದ್ದರು, ಅಭಿಮಾನಿಗಳ ಜೊತೆಗೂಡಿ ಪೂಜೆ ಸಲ್ಲಿಸಲಾಯಿತು. ಬಳಿಕ ಬಡ ವಿದ್ಯಾರ್ಥಿಗಳಿಗೆ ಪುಸ್ತಕ ಸಾಮಗ್ರಿಗಳನ್ನು ಭಾರತಿ ವಿಷ್ಣುವರ್ಧನ್ ವಿತರಣೆ ಮಾಡಿದರು.
 
ಮೈಸೂರಿನಲ್ಲಿ ಮಾತನಾಡಿದ ನಟ ಅನಿರುದ್ಧ್ ಈಗಾಗಲೇ ವಿಷ್ಣು ದಾದಾ ಸ್ಮಾರಕ ಕಾಮಗಾರಿ ಕೆಲಸ ಪ್ರಾರ೦ಭವಾಗಿದೆ, ಸರ್ಕಾರದಿಂದ ಸಂಪೂರ್ಣ ಬೆಂಬಲ ದೊರೆಯುತ್ತಿದೆ. ಸ್ಮಾರಕದಲ್ಲಿ ವಿಷ್ಣು ದಾದಾರ 700 ಕ್ಕೂ ಅಧಿಕ ಫೋಟೋ ಬಳಸಿ ಗ್ಯಾಲರಿ ನಿರ್ಮಾಣ ಮಾಡಲಾಗಿದೆ, ಇನ್ನೂ ಅನೇಕ ಆಶ್ಚರ್ಯಕರ ವಿಚಾರಗಳು ಇವೆ. ಅದನ್ನು ಈಗಲೇ ಹೇಳಲು ಸಾಧ್ಯವಿಲ್ಲ, ರಂಗಭೂಮಿ ಶಿಬಿರಗಳು ಸಹ ಇಲ್ಲಿ ನಡೆಯಲಿವೆ. ಇಂಡಿಯನ್ ಫಿಲ್ಮ್ ಟೆಲಿವಿಷನ್ ಇನ್‌ಸ್ಟಿಟ್ಯೂಟ್ ನ ಶಾಖೆಯನ್ನು ಇಲ್ಲಿ ಪ್ರಾರಂಭಿಸುವ ಪ್ರಯತ್ನ ಇದೆ, ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಸಹಯೋಗದಲ್ಲಿ ಈ ಕಾರ್ಯ ನಡೆಯಲಿದೆ ಎಂದು ಅನಿರುದ್ಧ್ ತಿಳಿಸಿದರು.

Leave A Reply

Your email address will not be published.