ಬ್ಲಾಕ್ ಅಂಡ್ ವೈಟ್ ಕಾಲದಿಂದ ಹಿಡಿದು ಇಂದಿನವರೆಗೂ ಕನ್ನಡ ಚಿತ್ರರಂಗದಲ್ಲಿ ಚಾಲ್ತಿಯಲ್ಲಿರುವ ಜನಪ್ರಿಯ ನಟ ಪ್ರಣಯ ರಾಜ ಶ್ರೀನಾಥ್. 1967ರಲ್ಲಿ ತೆರೆಕಂಡ ಲಗ್ನ ಪತ್ರಿಕೆ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ನಟ ಶ್ರೀನಾಥ್, ಐದು ದಶಕಗಳಿಂದ ಮನರಂಜನಾ ಕ್ಷೇತ್ರದಲ್ಲಿ ತಮ್ಮದೇ ಆದ ಸಾಧನೆ ಮಾಡಿದ್ದಾರೆ.ತೆರೆ ಮೇಲೆ ಪ್ರಣಯ ರಾಜ ಅಂತಲೇ ಖ್ಯಾತಿ ಪಡೆದಿರುವ ನಟ ಶ್ರೀನಾಥ್ ನಿಜ ಜೀವನದಲ್ಲೂ ಪ್ರಣಯದಲ್ಲಿ ರಾಜನೇ! ನಾಲ್ಕನೇ ಕ್ಲಾಸ್ ನಲ್ಲಿರುವಾಗಲೇ ಕ್ಲಾಸ್ ಮೇಟ್ ಹುಡುಗಿಯನ್ನ ಇಷ್ಟಪಟ್ಟಿದ್ದ ಶ್ರೀನಾಥ್, ಬಾಲಿವುಡ್ ನಟಿ ಆಶಾ ಪರೇಖ್ ಗೆ ಮನಸೋತು ಬಾಂಬೆಗೆ ಹೊರಟ ಘಟನೆ ಬಹುಶಃ ನಮಗ್ಯಾರಿಗೂ ಗೊತ್ತಿಲ್ಲ. ಪ್ರಣಯ ರಾಜ ಶ್ರೀನಾಥ್ ಅವರ ಪತ್ನಿ ಯಾರು ಗೊತ್ತಾ!? ಇವರ ಮಕ್ಕಳು ಹೇಗಿದ್ದಾರೆ, ಏನ್ ಮಾಡ್ತಾ ಇದ್ದಾರೆ ಎನ್ನುವುದರ .ಸಾಹಿತಿ ಇಲ್ಲಿದೆ.
70ರ ದಶಕದಲ್ಲಿ ಹೆಂಗೆಳೆಯರ ಫೇವರೆಟ್ ಆಗಿದ್ದ ನಟರಲ್ಲಿ ಒಬ್ಬರು ಶ್ರೀನಾಥ್. ಇವರು 1943 ರಲ್ಲಿ ಮೈಸೂರಿನಲ್ಲಿ ಜನಿಸಿದರು. ನಟನೆ ಶುರು ಮಾಡುವ ಮೊದಲು ನಾಟಕಗಳಲ್ಲಿ ಅಭಿನಯಿಸಿದ್ದರು ಶ್ರೀನಾಥ್. ಇವರ ನಿಜವಾದ ಹೆಸರು ನಾರಾಯಣ ಸ್ವಾಮಿ, ಕನ್ನಡ ಚಿತ್ರರಂಗದ ಖ್ಯಾತ ನಟ ಸಿ.ಆರ್.ಸಿಂಹ ಶ್ರೀನಾಥ್ ಅವರ ಅಣ್ಣ. 1967 ರಲ್ಲಿ ಲಗ್ನ ಪತ್ರಿಕೆ ಸಿನಿಮಾದಲ್ಲಿ ಚಿಕ್ಕ ಪಾತ್ರ ಒಂದರಲ್ಲಿ ನಟಿಸಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ 1969 ರಲ್ಲಿ ಮಧುರ ಮಿಲನ ಸಿನಿಮಾ ಮೂಲಕ ನಾಯಕ ನಟನಾದರು. 70 ಹಾಗು 80ರ ದಶಕದಲ್ಲಿ ಹಲವಾರು ಯಶಸ್ವಿ ಸಿನಿಮಾಗಳಲ್ಲಿ ನಟಿಸಿದ್ದರು ಶ್ರೀನಾಥ್. ಚಿತ್ರಬ್ರಹ್ಮ ಎಂದೇ ಖ್ಯಾತಿಯಾಗಿರುವ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಇವರ ಗುರುಗಳು. 350ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಶ್ರೀನಾಥ್ ಅವರು ನಟಿಸಿದ್ದು, ಇವರ ಕೆರಿಯರ್ ನ ಬೆಸ್ಟ್ ಸಿನಿಮಾ ಶುಭಮಂಗಳ ಆಗಿದೆ. ಬೆಸುಗೆ, ಕಿಲಾಡಿ ಜೋಡಿ, ಮಯೂರ, ಎರಡು ರೇಖೆಗಳು, ಪಾವನ ಗಂಗಾ ಸೇರಿದಂತೆ ನೂರಾರು ಒಳ್ಳೆಯ ಕಥೆ ಇರುವ ಸಿನಿಮಾಗಳಲ್ಲಿ ಶ್ರೀನಾಥ್ ಅಭಿನಯಿಸಿದ್ದಾರೆ. ಶ್ರೀನಾಥ್ ಹಾಗು ಮಂಜುಳಾ ಅವರ ಜೋಡಿ ಆಗಿನ ಕಾಲದಲ್ಲಿ ಬಹಳ ಜನಪ್ರಿಯತೆ ಗಳಿಸಿತ್ತು. ತಮ್ಮ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರಿಗಾಗಿ ಮಾನಸ ಸರೋವರ ಸಿನಿಮಾದಲ್ಲಿ ನಟಿಸುವುದರ ಜೊತೆಗೆ ಆ ಸಿನಿಮಾವನ್ನು ನಿರ್ಮಾಣ ಕೂಡ ಮಾಡಿದ್ದರು ಶ್ರೀನಾಥ್.
ಹೆಚ್ಚಾಗಿ ಲವ್ ಸ್ಟೋರಿ ಹಾಗೂ ಪ್ರೀತಿ ಭರಿತ ಸಿನಿಮಾಗಳಲ್ಲಿ ನಟಿಸಿದ್ದರಿಂದ ಶ್ರೀನಾಥ್ ಅವರಿಗೆ ಪ್ರ-ಣಯರಾಜ ಎಂದು ಬಿರುದು ನೀಡಲಾಗಿದೆ. ಇವರ ನಟನೆಗೆ ಫಿಲ್ಮ್ ಫೇರ್ ಅವಾರ್ಡ್, ಕರ್ನಾಟಕ ಸ್ಟೇಟ್ ಅವಾರ್ಡ್, ಲೈಫ್ ಟೈಮ್ ಅಚೀವ್ಮೆಂಟ್ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ದೊರಕಿದೆ. ನಾಯಕನಟನಾಗಿ ಹಲವಾರು ಸಿನಿಮಾಗಳಲ್ಲಿ ನಟಿಸಿದ್ದ ಶ್ರೀನಾಥ್ ಅವರು 80ರ ದಶಕ ಮುಗಿಯುವ ಸಮಯದಿಂದ ಪೋಷಕ ಪಾತ್ರಗಳಲ್ಲಿ ನಟಿಸಲು ಆರಂಭಿಸಿದರು. ನಟನೆ, ನಿರ್ಮಾಣದ ಜೊತೆ ನಿರೂಪರಾಗಿ ಕೂಡ ಕೆಲಸ ಮಾಡಿದ್ದಾರೆ, ಶ್ರೀನಾಥ್ ಅವರು ನಿರೂಪಣೆ ಮಾಡುತ್ತಿದ್ದ ಆದರ್ಶ ದಂಪತಿಗಳು ಕಾರ್ಯಕ್ರಮ ಬಹಳ ಜನಪ್ರಿಯತೆ ಗಳಿಸಿತ್ತು. ಶ್ರೀನಾಥ್ ಅವರ ವೈಯಕ್ತಿಕ ಜೀವನದ ವಿಷಯಕ್ಕೆ ಬರುವುದಾದರೆ. ಇವರ ಪತ್ನಿಯ ಹೆಸರು ಗೀತಾ ಶ್ರೀನಾಥ್. ಶ್ರೀನಾಥ್ ಗೀತ ದಂಪತಿಗೆ ಇಬ್ಬರು ಮಕ್ಕಳು, ಒಂದು ಗಂಡು ಮತ್ತು ಒಂದು ಹೆಣ್ಣು. ಶ್ರೀನಾಥ್ ಅವರ ಮಗ ರೋಹಿತ್, ಪಲ್ಲವಿ ಅನುಪಲ್ಲವಿ, ಮಾಲ್ಗುಡಿ ಡೇಸ್ ಸೇರಿದಂತೆ ಹಲವಾರು ಕನ್ನಡ ಸಿನಿಮಾಗಳಲ್ಲಿ ಇವರು ಬಾಲನಟನಾಗಿ ನಟಿಸಿದ್ದಾರೆ.
ರೋಹಿತ್ ಅವರ ಪತ್ನಿಯ ಹೆಸರು ಮಂಗಳ. ಇವರಿಗೆ ಒಬ್ಬ ಮಗಳಿದ್ದು ಪ್ರಸ್ತುತ ರೋಹಿತ್ ಅವರು ಬೆಂಗಳೂರಿನಲ್ಲಿ ನೆಲೆಸಿದ್ದು, ಸ್ವಂತ ಬ್ಯುಸಿನೆಸ್ ಮಾಡುತ್ತಿದ್ದಾರೆ. ಶ್ರೀನಾಥ್ ಅವರ ಮುದ್ದಿನ ಮಗಳು ಅಮೂಲ್ಯ, ಇವರು ಬೆಂಗಳೂರಿನ ನ್ಯಾಷನಲ್ ಜೈನ್ ಕಾಲೇಜಿನಲ್ಲಿ ಓದಿ ಈಗ ಅಮೆರಿಕಾದಲ್ಲಿ ಸೆಟಲ್ ಆಗಿದ್ದಾರೆ. ಅಮೂಲ್ಯ ಅವರ ಪತಿಯ ಹೆಸರು ದೀಪಕ್. ಇವರು ಅಮೆರಿಕಾದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ. ಇವರಿಗೆ ಮೂವರು ಹೆಣ್ಣುಮಕ್ಕಳಿದ್ದಾರೆ. ಮಗಳನ್ನು ನೋಡಲು ವರ್ಷಕ್ಕೊಮ್ಮೆ ಅಥವಾ ಎರಡು ವರ್ಷಕ್ಕೊಮ್ಮೆ ಶ್ರೀನಾಥ್ ಅವರು ಅಮೆರಿಕಾಗೆ ಹೋಗಿ ಬರುತ್ತಾರೆ.