ರಮ್ಯಾ ಎಂದೇ ಪ್ರಖ್ಯಾತಿ ಪಡೆದಿರುವ ದಿವ್ಯ ಸ್ಪಂದನ ಭಾರತೀಯ ನಟಿ ಹಾಗೂ ರಾಜಕಾರಣಿ ಆಗಿದ್ದಾರೆ. ಇವರು ಆರ್.ಟಿ ನಾರಾಯಣ್ ಮತ್ತು ರಂಜಿತ ದಂಪತಿಗಳ ಪುತ್ರಿಯಾಗಿ 29 ನವೆಂಬರ್ 1982 ರಲ್ಲಿ ಜನಿಸಿದರು. ಇವರು ಪ್ರಾಥಮಿಕ ಶಿಕ್ಷಣವನ್ನು ಊಟಿಯಲ್ಲಿ ಮುಗಿಸಿದ್ದಾರೆ ಮತ್ತು ಪ್ರೌಢ ಶಿಕ್ಷಣವನ್ನು ಚನ್ನೈನಲ್ಲಿ ಪೂರ್ಣಗೊಳಿಸಿದ್ದಾರೆ. ನಂತರದಲ್ಲಿ ಸಿನಿಮಾರಂಗಕ್ಕೆ ಬಂದು ತಮ್ಮದೇ ಆದ ಶೈಲಿಯಲ್ಲಿ ನಟನೆ ಮಾಡಿ ಪ್ರಸಿದ್ಧಿ ಪಡೆದರು. ಆದ್ದರಿಂದ ನಾವು ಇಲ್ಲಿ ಇವರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.
2003 ರಲ್ಲಿ ಇವರು ಪುನೀತ್ ರಾಜ್ ಕುಮಾರ್ ಅಭಿನಯಿಸಿದ ಅಭಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದಲ್ಲಿ ನಾಯಕಿಯಾಗಿ ಸಿನಿಪಯಣ ಆರಂಭಿಸಿದರು. ಅಭಿ ಚಿತ್ರ ಭರ್ಜರಿ ಪ್ರದರ್ಶನ ಕಾಣುವ ಮೂಲಕ ರಮ್ಯರ ಸಿನಿಪಯಣಕ್ಕೆ ಭದ್ರ ಬುನಾದಿ ಹಾಕಿತು. ನಂತರ ಕನ್ನಡ ಚಿತ್ರರಂಗದ ದೊಡ್ಡ ದೊಡ್ಡ ಸ್ಟಾರ್ ನಟರ ಜೊತೆಯಲ್ಲಿ ಅಭಿನಯಿಸಿ ಸ್ಯಾಂಡಲ್ ವುಡ್ ಕ್ವೀನ್ ಆಗಿ ಹೊರ ಹೊಮ್ಮಿದರು. ಹೀಗೆ ಹಲವು ಕನ್ನಡ ಚಿತ್ರಗಳು ಮಾತ್ರವಲ್ಲದೆ ತೆಲುಗು, ತಮಿಳು ಚಿತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಆಗ ರಮ್ಯಾ ಅವರು ಯಾರದ್ದೋ ಜೊತೆ ದೇಶ ಸುತ್ತುತ್ತಿದ್ದಾರೆ ಎಂಬ ಸುದ್ದಿ ಹಬ್ಬಿತ್ತು.
ಆದರೆ ರಮ್ಯಾ ಅವರು ನಾನು ಯಾರದ್ದೋ ಜೊತೆ ತಿರುಗುತ್ತಿಲ್ಲ ಅವರು ನನ್ನ ಸ್ನೇಹಿತ ಮಾತ್ರ ಎಂದು ಹೇಳಿದ್ದಾರೆ. ಇವರು ತನನಂ ತನನಂ ಮತ್ತು ಸಂಜು ವೆಡ್ಸ್ ಗೀತಾ ಚಿತ್ರಗಳಿಗೆ ಎರಡು ಬಾರಿ ಬೆಸ್ಟ್ ಫಿಲಂಫೇರ್ ಪ್ರಶಸ್ತಿಯನ್ನು ಪಡೆದರು. ಹಾಗೆಯೇ 2011 ಮತ್ತು 12ರಲ್ಲಿ ಇವರು ರಾಜಕೀಯಕ್ಕೆ ಬರುತ್ತಾರೆ ಎಂದು ಸುದ್ದಿ ಹಬ್ಬಿತ್ತು. 2012ರಲ್ಲಿ ರಾಜಕೀಯ ಪಕ್ಷಕ್ಕೆ ಇವರು ಸೇರಿಕೊಂಡರು. ಈ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿಯಾಗಿದ್ದ ಜಾತ್ಯಾತೀತ ಜನತಾದಳ ಪಕ್ಷದ ಪುಟ್ಟರಾಜು ಅವರನ್ನು 67611 ಮತಗಳ ಅಂತರದಿಂದ ಸೋಲಿಸಿ ಪ್ರಥಮ ಪ್ರಯತ್ನದಲ್ಲೇ ಲೋಕಸಭೆಗೆ ಪ್ರವೇಶ ಮಾಡಿದ್ದರು.
ರಾಜ್ಯದಿಂದ ಕನ್ನಡ ನಟಿಯೊಬ್ಬರು ಲೋಕಸಭೆಗೆ ಪ್ರವೇಶ ಮಾಡಿರುವುದರಲ್ಲಿ ರಮ್ಯಾ ಮೊದಲಿಗರು ಎಂದು ಹೇಳಬಹುದು. ಆದ್ದರಿಂದ ಕಾಂಗ್ರೆಸ್ ನಲ್ಲಿ ಲೋಕಸಭಾ ಚುನಾವಣೆಯಲ್ಲಿ ನಿಂತುಕೊಂಡು ಗೆಲ್ಲುತ್ತಾರೆ. ಲೋಕಸಭೆಗೆ ಆಯ್ಕೆಯಾದ ಅತ್ಯಂತ ಕಿರಿಯ ವಯಸ್ಸಿನ ಸಂಸದೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ರಾಜಕೀಯಕ್ಕೆ ಬಂದಿದ್ದು ಸಂಚಲನ ಮೂಡಿಸುವ ವಿಚಾರವಾಗಿತ್ತು. ಈಗ ಅವರು ಚಿತ್ರರಂಗದಲ್ಲಿಯೂ ಸಕ್ರಿಯರಾಗಿಲ್ಲ. ಹಾಗೆಯೇ ರಾಜಕೀಯದಲ್ಲಿಯೂ ಕೂಡ ಸಕ್ರಿಯರಾಗಿಲ್ಲ. ಈಗ ವೇದಾಂತದ ಬಗ್ಗೆ ಒಲವು ಮೂಡಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿದ್ದಾರೆ.