ಟೈಗರ್ ಪ್ರಭಾಕರ್ ( ೧೯೪೮ – ಮಾರ್ಚ್ ೨೫, ೨೦೦೧) ಕನ್ನಡ, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ವಿವಿಧ ರೀತಿಯಪಾತ್ರಗಳಲ್ಲಿ ಗಮನಸೆಳೆದ ಪ್ರತಿಭಾನ್ವಿತರು.ಕನ್ನಡ ಚಿತ್ರರಂಗದ ಟೈಗರ್ ಎಂದೇ ಖ್ಯಾತರಾಗಿದ್ದ ಪ್ರಭಾಕರ್, ಕನ್ನಡ ಚಿತ್ರರಂಗ ಕಂಡ ಅಪರೂಪದ ಆಲ್ ರೌಂಡರ್ ಎಂದರೆ ತಪ್ಪಿಲ್ಲ. ಸಹ ನಟನಾಗಿ, ಪೋಷಕನಟನಾಗಿ, ಖಳ ನಾಯಕನಾಗಿ, ನಾಯಕ ನಟನಾಗಿ, ಛಾಯಾಗ್ರಾಹಕನಾಗಿ, ನಿರ್ಮಾಪಕನಾಗಿ, ನಿರ್ದೇಶಕನಾಗಿ ಕನ್ನಡ ಚಿತ್ರರಂಗದಲ್ಲಿ ತನ್ನದೇ ವಿಶಿಷ್ಟತೆ ಮೆರೆದ ವ್ಯಕ್ತಿ ಪ್ರಭಾಕರ್. ಯಾವುದೇ ಪಾತ್ರವಾಗಿರಲಿ, ಯಾವ ಪ್ರಮಾಣದ ಪಾತ್ರವೇ ಆಗಿರಲಿ, ಆ ಪಾತ್ರ ಸದಾ ಕಾಲ ನೆನಪಿನಲಿ ಉಳಿಯುವಂತೆ ನಟಿಸುತ್ತಿದ್ದ ನಟ. ಅಂತೆಯೇ ಸುಮಾರು 450 ಚಿತ್ರಗಳಲ್ಲಿ ನಟಿಸಿ ಮರೆಯಾಗಿದ್ದರೂ, ಇಂದಿಗೂ ಕನ್ನಡ ಚಿತ್ರ ರಸಿಕರ ಮನದಲ್ಲಿ ಅಚ್ಚಳಿಯದೇ ನೆನಪಿನಲ್ಲುಳಿದಿದ್ದಾರೆ ನಟ ಪ್ರಭಾಕರ್. ಪ್ರಚಂಡ ನಟ,ಸಾಹಸ ಚಕ್ರವರ್ತಿ ಎಂಬ ಬಿರುದಿಗೂ ಪಾತ್ರರಾಗಿದ್ದಾರೆ.ಆದರೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿದ ಬಿರುದು “ಟೈಗರ್”.
ಎಪ್ಪತ್ತರರ ದಶಕದ ‘ಕಾಡಿನ ರಹಸ್ಯ’ ಚಿತ್ರದಲ್ಲಿ ಅಭಿನಯಿಸುವ ಮೂಲಕ ಚಿತ್ರ ಜೀವನ ಆರಂಭಿಸಿದ ಪ್ರಭಾಕರ್ ಅವರಿಗೆ ಆಗ ಕೇವಲ 14ರ ಪ್ರಾಯ. ನಂತರ ಅನೇಕ ಚಿತ್ರಗಳಲ್ಲಿ ಚಿಕ್ಕ ಚಿಕ್ಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಾ, ಸಾಹಸ ದೃಶ್ಯಗಳಲ್ಲಿ ಸಹ ನಟನಾಗಿ ಗುರುತಿಸಿಕೊಳ್ಳುತ್ತಾ, ಹಂತ ಹಂತವಾಗಿ ನಟನಾ ಜೀವನದಲ್ಲಿ ಮೇಲೇರಿದ ಪ್ರಭಾಕರ್ ಕ್ರಮೇಣ ಖಳನಾಯಕನ ಸಹಾಯಕನಾಗಿ ನಂತರ ಖಳನಾಯಕರಲ್ಲಿ ಒಬ್ಬನಾಗಿ, ಆನಂತರ ಪ್ರಮುಖ ಖಳನಾಯಕನಾಗಿ ಅಭಿನಯಿಸತೊಡಗಿದರು. ಖಳನಾಯಕನಾದ ಮೇಲಂತೂ ತಮ್ಮದೇ ವಿಶಿಷ್ಟ ರೀತಿಯ ಸಂಭಾಷಣಾ ಶೈಲಿಯಿಂದ ಕನ್ನಡಿಗರ ಮನೆಮಾತಾದ ಪ್ರಭಾಕರ್, ಎಂಭತ್ತರ ದಶಕದಲ್ಲಿ ಕನ್ನಡ ಭಾಷೆಯಲ್ಲಿ ಮಾತ್ರವಲ್ಲದೇ, ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಚಿತ್ರಗಳಲ್ಲೂ ಬೇಡಿಕೆಯ ಖಳನಾಯಕನಾಗಿ ವಿಜ್ರಂಭಿಸಿದರು. ಪರಭಾಷೆಗಳಲ್ಲಿ ಅಭಿನಯಿಸುವಾಗ ಅವರು ಕನ್ನಡ ಪ್ರಭಾಕರ್ ಎಂದೇ ಹೆಸರಾಗಿದ್ದರು.ಎತ್ತರದ ನಿಲುವು, ಆಕರ್ಷಕ ಮೈಕಟ್ಟು ಹಾಗೂ ಜನಪ್ರಿಯ ಸಂಭಾಷಣಾ ಶೈಲಿಯಿಂದ ಆಗಲೇ ಸಾಕಷ್ಟು ಜನಪ್ರಿಯರಾಗಿದ್ದ ಪ್ರಭಾಕರ್, ನಂತರ ಕನ್ನಡ ಚಿತ್ರಗಳಲ್ಲಿ ನಾಯಕ ನಟನಿಗೆ ಸಮನಾದ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಾರಂಭಿಸಿ, ಕ್ರಮೇಣ ನಾಯಕ ನಟನಾಗಿ ಅಭಿನಯಿಸಲಾರಂಭಿಸಿದರು. ಬಹುತೇಕ ನಟ-ತಂತ್ರಜ್ನರ-ನಿರ್ಮಾಪಕರ-ನಿರ್ದೇಶಕರ ಮೆಚ್ಚಿನ ವ್ಯಕ್ತಿಯಾಗಿದ್ದ ಪ್ರಭಾಕರ್ ‘ವಿಘ್ನೇಶ್ವರನ ವಾಹನ’ ಚಿತ್ರದಲ್ಲಿ ದಲ್ಲಿ ಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ನಾಯಕ ನಟನಾಗಿ ಕಾಣಿಸಿಕೊಂಡರಲ್ಲದೇ, ಆ ಚಿತ್ರದಲ್ಲಿ ದ್ವಿಪಾತ್ರಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡರು. ನಂತರದ ‘ಜಿದ್ದು’ ಚಿತ್ರದ ಭಾರೀ ಯಶಸ್ಸು ಪ್ರಭಾಕರ್ ಗೆ ಸಾಕಷ್ಟು ಜನಪ್ರಿಯತೆ ತಂದು ಕೊಟ್ಟಿದ್ದಲ್ಲದೇ, ಅವರನ್ನು ಕನ್ನಡ ಚಿತ್ರರಂಗದ ಸ್ಟಾರ್ ನಾಯಕ ನಟರಲ್ಲೊಬ್ಬರನ್ನಾಗಿಸಿತು. ‘ಯಾರೀ ಸಾಕ್ಷಿ’ ಚಿತ್ರದ ಅವರ ಟೈಗರ್ ಹೆಸರಿನ ಪಾತ್ರ, ಪ್ರಭಾಕರ್ ರವರನ್ನು ಸಾಕಷ್ಟು ಜನಪ್ರಿಯಗೊಳಿಸಿದ್ದಲ್ಲದೇ, ಕನ್ನಡ ಚಿತ್ರರಂಗದಲ್ಲಿ ‘ಟೈಗರ್’ ಪ್ರಭಾಕರ್ ಎಂದೇ ಅವರ ಹೆಸರನ್ನು ಚಿರಸ್ಥಾಯಿಯಾಗಿಸಿತು.
ನಿರ್ದೇಶಕ ಜೋ ಸೈಮನ್ ಅವರು ಟೈಗರ್ ಪ್ರಭಾಕರ್ ಅವರೊಂದಿಗೆ ಕೆಲಸ ಮಾಡಿದ್ದರು, ಅವರು ಪ್ರಭಾಕರ ಅವರ ಬಗ್ಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಪ್ರಭಾಕರ್ ಅವರು ಕಾಡಿನ ರಾಜ ಸಿನಿಮಾದಲ್ಲಿ ನಟಿಸಿದ ನಂತರ ಪ್ರೀಮಿಯರ್ ಸ್ಟುಡಿಯೋದಲ್ಲಿ ಪರಿಚಯವಾದರು ಜೋ ಸೈಮನ್ ಅವರಾಗೇ ಪ್ರಭಾಕರ್ ಅವರನ್ನು ಮಾತನಾಡಿಸುತ್ತಾರೆ ಪರಿಚಯವಾಯಿತು ನಂತರ ಬೇರೆ ಬೇರೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಾರೆ, ಪ್ರಭಾಕರ್ ಅವರಿಗೆ ಕನ್ನಡ ಬರುತ್ತಿರಲಿಲ್ಲ ಅವರಿಗೆ ಸಿನಿಮಾಗಳಲ್ಲಿ ಡೈಲಾಗ್ ಹೇಳುವುದೆಂದರೆ ಕಷ್ಟ ಫೈಟ್ ಮಾಡುವುದೆಂದರೆ ಇಷ್ಟವಿತ್ತು.
ಜೋ ಸೈಮನ್ ಅವರು ಪ್ರಭಾಕರ್ ಅವರಿಗೆ ಡೈಲಾಗ್ ಹೇಳುವುದು, ಕನ್ನಡ ಕಲಿಸುತ್ತಾರೆ ನಂತರ ಸಹೋದರರ ಸವಾಲ್ ಹೀಗೆ ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಜೋ ಸೈಮನ್ ಅವರಿಗೆ ಕ್ಲೋಸ್ ಆದರು. ಜೋ ಸೈಮನ್ ಅವರ ಎಲ್ಲ ಸಿನಿಮಾಗಳಲ್ಲಿ ಪ್ರಭಾಕರ್ ಅವರು ನಟಿಸಿದರು. ಜಯಮಾಲಾ ಅವರೊಂದಿಗೆ ಕ್ಲೋಸ್ ಆಗಿದ್ದರು ನಂತರ ಜೋ ಸೈಮನ್ ಅವರ ಹತ್ತಿರ ಜಯಮಾಲಾ ಅವರನ್ನು ಮದುವೆಯಾಗುತ್ತೇನೆ ಎಂದು ಹೇಳಿದರು ನಂತರ ಜಯಮಾಲಾ ಅವರನ್ನು ಮದುವೆಯಾದರು. ಅವರಿಗೆ ಒಬ್ಬಳು ಮಗಳಿದ್ದಾಳೆ ಅವಳ ಹೆಸರು ಸೌಂದರ್ಯ. ಸ್ವಲ್ಪ ದಿನದ ನಂತರ ಜಯಮಾಲಾ ಅವರು ಬೇರೆಯಾದರು. ಪ್ರಭಾಕರ್ ಅವರ ಮನಸ್ಸು ಮಗುವಿನಂತ ಮನಸ್ಸು ಬಹಳ ಮೃದು ಸ್ವಭಾವದವರು. ಜಯಮಾಲಾ ಅವರು ಪ್ರಭಾಕರ್ ಅವರನ್ನು ಬಿಟ್ಟು ಹೋದಾಗ ಪ್ರಭಾಕರ್ ಅವರು ಅತ್ತಿದ್ದರು ಆಗ ಜೋ ಸೈಮನ್ ಸಮಾಧಾನ ಮಾಡಿದ್ದರು.
ಅವರು ಚೆನ್ನೈನಲ್ಲಿ ಇರುವಾಗ ಕಾಲಿನ ನರದ ಆಪರೇಷನ್ ಮಾಡುವಾಗ ಸರಿಯಾಗಿ ಆಪರೇಷನ್ ಮಾಡದೆ ಓಪನ್ ಆಗಿಬಿಟ್ಟಿದೆ ಅವರು ಅದನ್ನು ಯಾರಿಗೂ ತೋರಿಸುತ್ತಿರಲಿಲ್ಲ ಬ್ಯಾಂಡೇಜ್ ಸುತ್ತಿಕೊಳ್ಳುತ್ತಿದ್ದರು. ಪ್ರಭಾಕರ್ ಅವರ Mr. ವಾಸು ಎಂಬ ಹೊಸ ಸಿನಿಮಾ ಮಾಡುವಾಗ ಹೀರೋಯಿನ್ ಹಾಗೂ ನಿರ್ಮಾಪಕರಿಗೆ ಜಗಳವಾಗಿ ಸಿನಿಮಾ ಶೂಟಿಂಗ್ ಅರ್ಧದಲ್ಲಿ ನಿಂತುಹೋಯಿತು. ಆಗ ಜೋ ಸೈಮನ್ ಅವರು ಡಾಲಿ ಎಂಬವರನ್ನು ಹೀರೋಯಿನ್ನಾಗಿ ಕರೆತಂದು ಸಿನಿಮಾ ಮಾಡಲಾಯಿತು ಅದು ಹಿಟ್ಟಾಯಿತು.