ಹಿರಿಯ ನಟ ದತ್ತಣ್ಣ ಅವರ ಜೀವನದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.
ದತ್ತಣ್ಣ ಅವರ ಹೆಸರು ಹರಿಹರ ಗುಂಡೂರಾವ್ ದತ್ತಾತ್ರೇಯ. ಇವರು 1942 ರಲ್ಲಿ ಚಿತ್ರದುರ್ಗದಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೇ ಇವರು ಶಿಸ್ತನ್ನು ಪಾಲಿಸುತ್ತಿದ್ದರು ಮೆಟ್ರಿಕ್ಯುಲೇಷನ್ ನಲ್ಲಿ ಇವರೇ ಪ್ರಥಮ. ಆಗಿನ ಶಿಕ್ಷಣ ವ್ಯವಸ್ಥೆ ಸಮರ್ಥವಾಗಿದೆ ಎಂದು ಹೇಳಿಕೊಂಡಿದ್ದಾರೆ. ಇವರು ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ಮಾಡಿದ್ದಾರೆ. ನಂತರ ಸಣ್ಣ ಪುಟ್ಟ ಕೆಲಸ ಮಾಡುತ್ತಿದ್ದು ಏರ್ ಫೋರ್ಸ್ ಸೇರಿದರು ನಂತರ ME ಮಾಡಿದರು. ಪ್ರೌಢಶಾಲೆಯಲ್ಲಿಯೇ ರಂಗಭೂಮಿಯ ಗೀಳು ಇತ್ತು ಅದು ನಂತರವೂ ಮುಂದುವರೆಯಿತು. ಹಲವಾರು ನಾಟಕಗಳಲ್ಲಿ ಅಭಿನಯಿಸಿದ್ದಾರೆ, ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ.
ಮೊದಲ ಸಿನಿಮಾ ಹಿಂದಿಯಲ್ಲಿ ಮಾಡಿದ್ದರು. ನಂತರ 1988 ರಲ್ಲಿ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ ಅವರಿಗೆ ರಾಜ್ಯ ಪ್ರಶಸ್ತಿ ಲಭಿಸಿದೆ. ಕಲಾವಿದನಿಗೆ ಪ್ರತಿಯೊಂದು ಪಾತ್ರವೂ ಮಹತ್ವಪೂರ್ಣವಾದದ್ದು ಹೆಚ್ಚು, ಕಡಿಮೆ ಇರುವುದಿಲ್ಲ ಎಂದು ದತ್ತಣ್ಣ ಹೇಳಿದರು. ಕಲೆ ಎನ್ನುವುದು ನಿಂತ ನೀರಲ್ಲ ಅದು ಹರಿಯುತ್ತಿರುತ್ತದೆ. ಹಳಬರಾದ ನಂತರ ಹೊಸಬರು ಬರುತ್ತಾರೆ. ಹೊಸ ನಿರ್ದೇಶಕರು ನಿರ್ದೇಶನದ ಕಲೆಯ ಜೊತೆಗೆ ಹೊಸ ವಿಷಯವನ್ನು ಪ್ರಸ್ತುತಪಡಿಸುತ್ತಾರೆ ಸಮಾಜ ಬದಲಾಗುತ್ತಿದೆ ಅದಕ್ಕೆ ತಕ್ಕಂತೆ ನಿರ್ದೇಶಕರು ಯೋಚಿಸುತ್ತಾರೆ ಬದಲಾವಣೆ ನಿರಂತರ ಎಂದು ಹೇಳಿದರು.
ದತ್ತಣ್ಣ ಅವರಿಗೆ ಎರಡು ರಾಷ್ಟ್ರ ಪ್ರಶಸ್ತಿ ಲಭಿಸಿದೆ. ಇವರು ನೀರದೋಸೆ, ತೋತಾಪುರಿ ಸಿನಿಮಾಗಳಲ್ಲಿ ನಟಿಸಿದ್ದಾರೆ ಎರಡು ಸಿನಿಮಾದ ಪಾತ್ರ ವಿಭಿನ್ನವಾಗಿದೆ. ತೋತಾಪುರಿ ಸಿನಿಮಾದಲ್ಲಿ ಕೋಮು ವೈಷಮ್ಯದ ಬಗ್ಗೆ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾರೆ ಎಂದು ಹೇಳಿದರು. ನೈಜತೆಗೆ ಹತ್ತಿರವಿರುವ ಪಾತ್ರಗಳನ್ನು ದತ್ತಣ್ಣ ಆಯ್ಕೆ ಮಾಡುತ್ತಾರೆ ಅಲ್ಲದೇ ಅವರಿಗೆ ಅದೇ ರೀತಿಯ ಪಾತ್ರಗಳೇ ಸಿಕ್ಕಿವೆ ಎಂದು ಅವರು ಹೇಳಿದರು. ಇತ್ತೀಚಿಗೆ ಬ್ರಹ್ಮಚಾರಿ ಎಂಬ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಸಿನಿಮಾದಲ್ಲಿ ಅನುಭವಿಸುವ ಕೆಲವು ದೈಹಿಕ ಸಮಸ್ಯೆಯನ್ನು ಹೇಳಿಕೊಳ್ಳಲು ಆಗುವುದಿಲ್ಲ ಆದರೆ ಹೇಳಿಕೊಂಡರೆ ಪರಿಹಾರವಾಗುತ್ತದೆ ಹೇಳಿಕೊಳ್ಳದೆ ಇದ್ದರೆ ಏನಾಗುತ್ತದೆ ಎಂಬ ಪ್ರಸ್ತಾಪವಿದೆ ಉತ್ತಮ ಸಂದೇಶ ಹೊಂದಿದೆ ಎಂದು ದತ್ತಣ್ಣ ಹೇಳಿದರು.
ಅವರಿಗೆ 77 ವರ್ಷ ಅವರು ಬ್ರಹ್ಮಚಾರಿಯಾಗಿ ಉಳಿದಿದ್ದಾರೆ ಮೊದಲಿನಿಂದಲೂ ಸ್ವತಂತ್ರವಾಗಿ ಬದುಕಬೇಕು ಎನ್ನುವುದು ಅವರ ಆಸೆಯಾಗಿತ್ತು. ಕ್ಷಣಿಕ ಸುಖಕ್ಕಾಗಿ ಮದುವೆ ಮಾಡಿಕೊಳ್ಳುವುದು ನನಗೆ ಬೇಡವಾಗಿತ್ತು ಸ್ವತಂತ್ರ ಬದುಕನ್ನು ಬದುಕಲು ಇಷ್ಟಪಟ್ಟೆ ಹಾಗೆ ಬದುಕಿದೆ ಎಂದು ತಮ್ಮ ಮಾತನ್ನು ಹಂಚಿಕೊಂಡರು. ಇದುವರೆಗೂ ಮದುವೆ ಆಗಬೇಕಿತ್ತು ಎಂಬ ಕೊರಗು ಅವರಿಗೆ ಬರಲಿಲ್ಲ. ಕೊನೆಗಾಲಕ್ಕೆ ಬೇಕು ಎಂಬ ಕಾರಣಕ್ಕೆ ಮದುವೆ ಆಗಲು ಇಷ್ಟವಿಲ್ಲ ಕಾರ್ಪೋರೇಶನ್ ಹೆಣ ಆಗುತ್ತೇನೆ ಎಂದು ಹೇಳಿದರು. ಅವರ ವಿದ್ಯಾರ್ಥಿಗಳು ಯಾವಾಗ ಬೇಕಾದರೂ ನಮ್ಮ ಮನೆಗೆ ಬನ್ನಿ ಎಂದು ಹೇಳಿದ್ದಾರಂತೆ. ದತ್ತಣ್ಣ ಅವರ ಜೀವನದ ಪಯಣದಲ್ಲಿ ಎಲ್ಲವೂ ದಕ್ಕಿಲ್ಲದಿದ್ದರೂ ಸಾಕಷ್ಟು ಸಿಕ್ಕಿದೆ ಪ್ರಶಸ್ತಿಗಳು, ಸ್ನೇಹಿತರು, ಕಲಿಕೆ ಸಿಕ್ಕಿವೆ ಇದೆಲ್ಲಾ ಕೊಟ್ಟಿರುವ ಸಮಾಜಕ್ಕೆ ಏನಾದರೂ ಕೊಡಬೇಕು ಎಂದು ದತ್ತಣ್ಣ ಅವರು ತಮ್ಮ ಮನದ ಮಾತುಗಳನ್ನು ಹಂಚಿಕೊಂಡರು.