ಕನ್ನಡ ಚಿತ್ರರಂಗದಲ್ಲಿ ತನ್ನದೇ ಆದ ಛಾಪು ಮೂಡಿಸಿದ ನಟಿ ಅರ್ಚನಾ ಇವರು ಮೂಲತಃ ಮರಾಠಿ ಜನಾಂಗದವರು ಹುಟ್ಟಿದ್ದು ಕರ್ನಾಟಕದಲ್ಲಿ ಕನ್ನಡವನ್ನು ಸುಲಲಿತವಾಗಿ ಮಾತನಾಡಿ ಕನ್ನಡಿಗರ ಜನರ ಮನದಲ್ಲಿ ಅಚ್ಚೊತ್ತಿದ್ದಾರೆ ಸಿಬಿಐ ಸತ್ಯ 2016 ಅವರ ಕೊನೆ ಸಿನಿಮಾ ಆಗಿದ್ದು ಆಮೇಲೆ ಅರ್ಚನಾ ಅವರು ಯಾವ ಸಿನಿಮಾ ಅಲ್ಲಿ ಕಾಣಿಸಿಕೊಂಡಿಲ್ಲ ಇದುಕ್ಕೆ ನಿಜವಾದ ಕಾರಣ ಏನೆಂದು ಈ ಲೇಖನ ಮೂಲಕ ನೋಡೋಣ.

ತಮ್ಮ 8ನೆ ತರಗತಿಯಲ್ಲಿ ಓದುತ್ತಿದ್ದಾಗ ಮುದ್ದು ಮುದ್ದಾಗಿಕಾಣುತ್ತಿದ್ದ ಅರ್ಚನಾ ಅವರಿಗೆ ಸಿನಿಮಾದಲ್ಲಿ ನಟಿಸಲು ಅವಕಾಶ ಒದಗಿ ಬಂದಿತ್ತುಎಂದು ಸಂದರ್ಶನ ಒಂದರಲ್ಲಿ ಹೇಳಿದ್ದಾರೆ. 1996 ರಲ್ಲಿ ಶಿವರಾಜಕುಮಾರ್ ಅವರ ಜೊತೆ ನಾಯಕಿಯಾಗಿ ಆದಿತ್ಯ ಸಿನಿಮಾ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದು ಅಷ್ಟೊಂದು ಹಿಟ್ ಆಗಿಲ್ಲ ಆದರೂ ಅರ್ಚನ ಅವರಿಗೆ ತಕ್ಕ ಮಟ್ಟಿಗೆ ಹೆಸರು ತಂದು ಕೊಟ್ಟಿತ್ತು.

ಸಾಲಾಗಿ ಅವಕಾಶಗಳು ಬರಲು ಶುರುವಾಗಿ ಈ ಹೃದಯ ನಿನಗಾಗಿ ಸಿನಿಮಾ ಮಾಡುತ್ತಾರೆ ಮೇಘ ಬಂತು ಮೇಘ ಸಿನಿಮಾ ಹಿಟ್ ಆಗಿದ್ದು ನಂತರ ಬಾಲಿವುಡ್ ಅಲ್ಲಿ ಫೂಲ್ ಔರ್ ಆಗ್ ಅಲ್ಲಿ ಮಿಥುನ್ ಚಕ್ರವರ್ತಿಯ ಜೊತೆ ನಟಿಯಾಗಿ ಅಭಿನಯ ಮಾಡ್ತಾರೆ ಮುಂದೆ ತೆಲುಗು ತಮಿಳ್ ಮಲಯಾಳಂ ಹೀಗೆ ಹಲವಾರು ಪರಭಾಷೆಯಲ್ಲಿ ನಟಿಸಿ ಕೊನೆಗೆ ಕನ್ನಡ ಚಿತ್ರರಂಗಕ್ಕೆ ವಾಪಸ್ಸು ಬರುತ್ತಾರೆ.

ನಂತರ ಕನ್ನಡದಲ್ಲಿ A ಸಿನಿಮಾ, ಮಾರಿ ಕಣ್ಣು ಹೋರಿ ಮ್ಯಾಗೆ , ನೀಲಂಬರಿ, ತಮಾಷೆಗಾಗಿ ಹಾಗೂ ಸಿಬಿಐ ಸತ್ಯ ಮೂವೀಗಳಲ್ಲಿ ಅಭಿನಯ ಮಾಡಿ ಸೈ ಎನಿಸಿಕೊಂಡಿದ್ದಾರೆ 2016ರಲ್ಲಿ ತೆರೆಕಂಡ ಯಜಮಾನ ಚಿತ್ರದಲ್ಲಿ ವಿಷ್ಣುವರ್ಧನ್ ಅವರ ಜೊತೆ ಓ ಮೈನ ಓ ಮೈನ ಏನಿದು ಮಾಯೆ ಎಂಬ ಸಂಗೀತ ಇಂದಿಗೂ ಮರೆಯಲು ಸಾಧ್ಯವಿಲ್ಲ. ಈ ಚಿತ್ರದಿಂದ ಅರ್ಚನಾ ಅವರಿಗೆ ಇನ್ನಷ್ಟು ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಒದಗಿ ಬಂತು ಮಾವ ಮಾವ ಮದುವೆ ಮಾಡು, ಯಾರಿಗೆ ಬೇಡ ದುಡ್ಡು ಎಂಬ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತಾರೆ. ಕೊನೆಗೆ ಅಭಿಜಿತ್ ಅವರ ಜೊತೆ 2016 ರಲ್ಲಿ ಸಿಬಿಐ ಸತ್ಯ ಕೊನೆಯ ಸಿನಿಮಾ ಅಲ್ಲಿ ಅಭಿನಯಿಸುತ್ತಾರೆ. ನಂತರ ಯಾವುದೇ ಸಿನಿಮಾದಲ್ಲಿ ಕಾಣಿಸಿಕೊಳ್ಳುವುದಿಲ್ಲ.

ಕೊನೆಗೂ ಅರ್ಚನಾ ಅವರ ಬಗ್ಗೆ ಕೆಲ ಮಾಹಿತಿ ಕಲೆ ಹಾಕಿದಾಗ ತಿಳಿದುಬಂದ ವಿಷಯವೆಂದರೆ ಅವರು ನಟಿಸಿರುವ ಎಲ್ಲ ಸಿನಿಮಾ ನೋಡಿದರೆ ಎಲ್ಲೂ ಈ ನಟಿ ಅಸಬ್ಯವಾಗಿ ಬಟ್ಟೆ ಹಾಕಿಲ್ಲ ದೇಹ ಮುಚ್ಚುವಂತೆ ಬಟ್ಟೆ ಹಾಕಿಕೊಂಡು ತಮ್ಮ ಸಿನಿಮಾ ಅಲ್ಲಿ ನಟಿಸಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಜನರು ತುಂಡು ಉಡುಗೆ ಬಟ್ಟೆಯ ಸಿನಿಮಾವನ್ನು ಜಾಸ್ತಿ ಇಷ್ಟ ಪಡುತ್ತಾರೆ. ನಿಜ ಇತ್ತೀಚಿನ ದಿನಗಳಲ್ಲಿ ಜಾಸ್ತಿ ಸಿನಿಮಾ ಅಲ್ಲಿ ತುಂಡು ಉಡುಗೆ, ತೆಳುವಾದ ಸೀರೆ ತಮ್ಮ ದೇಹವನ್ನು ಮುಚ್ಚಿಕೊಳ್ಳುತ್ತಾರೆ ಅಂತಹ ಚಿತ್ರ ಜಾಸ್ತಿ ದಿನ ಓಡುತ್ತದೆ.

ಹೀಗೆ ಅರ್ಚನಾ ಅವರಿಗೆ ಇಂಥ ಸಿನಿಮಾ ಅಲ್ಲಿ ಅಭಿನಯ ಮಾಡಲು ಸುತರಾಂ ಇಷ್ಟ ಇಲ್ಲದೆ ಅಂತ ಸಿನಿಮಾ ತಿರಸ್ಕರಿಸಿ ನನಗೆ ಗ್ಲಾಮರಸ್ ಹಾಗೂ ತೀರಾ ಅಸಹ್ಯ ಹುಟ್ಟಿಸುವ ಪಾತ್ರದಲ್ಲಿ ಅಭಿನಯಿಸಲು ಸಾಧ್ಯವಿಲ್ಲ ಎಂದು ನಿರಾಕರಿಸುತ್ತಾರೆ ಕ್ರಮೇಣ ಕನ್ನಡ ಚಿತ್ರ ರಂಗದಲ್ಲಿ ಅರ್ಚನಾ ಅವರಿಗೆ ಬೇಡಿಕೆ ಕಮ್ಮಿ ಆಗುತ ಬಂದು ಕೊನೆಗೆ ಯಾವುದೇ ಚಿತ್ರವು ಸಿಗುವುದಿಲ್ಲ. ಇತ್ತೀಚಿನ ವರದಿ ಪ್ರಕಾರ ಮೂಲತಃ ಮರಾಠಿ ಆಗಿದ್ದ ಇವರು ಇಂದು ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿರೇಖೆ ಒಂದು ನಗರದಲ್ಲಿ ತನ್ನ ಪತಿಯ ವ್ಯವಹಾರ ನೋಡಿಕೊಂಡು ಜೀವನ ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರ ರಂಗದಲ್ಲಿ ಜಾಸ್ತಿ ಗ್ಲಮರಸ್ ಮತ್ತು ಅಂಗ ಪ್ರದರ್ಶನ ಸಿನಿಮಾ ಬೇಡಿಕೆ ಇದ್ದು ಹೊಸ ಹೊಸ ನಟಿಯರು ಆಗಮನ ಮೂಲಕ ಹಲವಾರು ಹಳೆಯ ನಟಿಯರಿಗೆ ಅವಕಾಶ ಕಮ್ಮಿ ಆಗಿದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!