ಹಳೆಯ ಸಿನಿಮಾಗಳು ಅರ್ಥಪೂರ್ಣವಾಗಿ ಇದ್ದು, ಒಂದೊಂದು ಸಂದೇಶಗಳನ್ನು ನೀಡುವ ಚಿತ್ರಗಳು. ಪದೆ ಪದೆ ಆ ಸಿನಿಮಾಗಳನ್ನು ನೋಡಿದರು ಅಥವಾ ಅವುಗಳ ಹಾಡುಗಳನ್ನು ಕೇಳಿದರು ಹೊಸ ಅನುಭವವನ್ನು ನೀಡುತ್ತದೆ. ಇನ್ನೂ ಹಳ್ಳಿಯ ಪಾತ್ರಗಳು ಎನ್ನುತ್ತಲೆ ನೆನಪಾಗುವುದೆ ಕನ್ನಡದ ಶ್ರೇಷ್ಠ ನಟಿ ಮಂಜುಳಾ. ಅವರ ಬಗ್ಗೆ ಕೆಲವು ವಿಷಯಗಳನ್ನು ನಾವು ತಿಳಿಯೋಣ.

ಮಂಜುಳಾ ಅವರು ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಸಮಯ ಅದು. ಡಾ.ರಾಜ್ ಕುಮಾರ್ ಅವರ ಬಂಗಾರದ ಪಂಜರ ಎನ್ನುವ ಸಿನಿಮಾದಲ್ಲಿ ಹೊಸ ಮುಖದ ಪರಿಚಯ ಮಾಡಿಸಲು ನಿರ್ಮಾಪಕ ಕೆ.ಸಿ.ಎನ್ ಗೌಡ ಅವರು ಹುಡುಕುತ್ತಿದ್ದರು. ಇದರ ವಿಚಾರವನ್ನು ಛಾಯಾಗ್ರಾಹಕರಾದ ಅಶ್ವಥ್ ಅವರ ಬಳಿ ಚರ್ಚಿಸಿ ಹೊಸ ಪ್ರತಿಭೆ ಇದ್ದರೆ ಪೋಟೋ ಕೊಡಲು ಹೇಳಿದ್ದರು. ಸಣ್ಣ ಪುಟ್ಟ ಪಾತ್ರ ಮಾಡುತ್ತಿದ್ದ ಮಂಜುಳಾ ಅವರು ಅಶ್ವಥ್ ಅವರ ಕಣ್ಣಿಗೆ ಬಿದ್ದು, ಮಂಜುಳಾ ಅವರ ಕೆಲವು ಫೋಟೊ ಸಂಗ್ರಹಿಸಿ ಕೆ.ಸಿ.ಎನ್ ಅವರ ಕಛೇರಿಗೆ ಹೋಗಾದ, ಯಾರದೊ ಜೊತೆ ಮಾತುಕತೆಯಲ್ಲಿ ನಿರ್ಮಾಪಕರು ನಿರತರಾಗಿರುವುದನ್ನು ನೋಡಿ ಅಲ್ಲಿಯೇ ಟೇಬಲ್ ಮೇಲೆ ಪೋಟೋ ಇಟ್ಟು ಹೋದರು ಅಶ್ವಥ್. ಆದರೆ ಫ್ಯಾನ್ ಗಾಳಿಗೆ ಟೇಬಲ್ ಮೇಲೆ ಇಟ್ಟ ಪೋಟೋ ಕವರ್ ಹೋಗಿ ಕಸದ ಬುಟ್ಟಿಯಲ್ಲಿ ಬಿದ್ದಿತ್ತು. ಇದನ್ನು ಕಂಡ ನಿರ್ಮಾಪಕರು ಅಪಶಕುನ ಇರಬಹುದು ಎಂದು ಪೋಟೋ ನೋಡದೆ, ಆರತಿಯವರನ್ನು ಬಂಗಾರದ ಪಂಜರ ಚಿತ್ರಕ್ಕೆ ಆಯ್ದುಕೊಂಡರು. ಆದರೆ ಅದೃಷ್ಟ ಕೈಹಿಡಿದಂತೆ ಅದೇ ವರ್ಷದಲ್ಲಿ ಮತ್ತೆ ರಾಜ್ ಕುಮಾರ್ ಅವರ ಜೊತೆ ಸಂಪತ್ತಿಗೆ ಸವಾಲ್ ಚಿತ್ರದಲ್ಲಿ ಮಂಜುಳ ಅಭಿನಯಿಸಿದರು. ಚಿತ್ರ ಸೂಪರ್ ಹಿಟ್ ಆಯಿತು. ಹೀಗೆ ಬದುಕಿದ ಮೂವತ್ತೆರಡು ವರ್ಷಗಳಲ್ಲಿ ಮಂಜುಳಾ ಕನ್ನಡದಲ್ಲಿ ಮೇರು ನಟಿಯಾಗಿ ಮಿಂಚಿದ್ದರು. ನಟಿ ಮಂಜುಳಾ ಅವರ ಮಗ ಅಭಿಷೇಕ್ ತಾನು ಕನ್ನಡದ ಮೇರು ನಟಿ ಮಂಜುಳಾ ಅವರ ಮಗ ಎಂದರೆ ಈಗಲೂ ಅಭಿಮಾನಿಗಳು ತುಂಬಾ ಪ್ರೀತಿ ನೀಡುತ್ತಾರೆ. ಆದರೆ ಅಮ್ಮನನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೆನೆ ಎನ್ನುತ್ತಾರೆ‌.

ನಟಿ ಮಂಜುಳಾ ಬದುಕಿನ ದಿನಗಳು ಕಡಿಮೆಯಾದರೂ ಅವರು ಗಳಿಸಿದ ಪ್ರೀತಿ, ಅಭಿಮಾನ ಅವರನ್ನು ಅಮರವಾಗಿಸಿದೆ. ಈಗೀನ ಎಷ್ಟೋ ನಟಿಯರಿಗೆ ನಟಿ ಮಂಜುಳಾ ಒಂದು ಮಾದರಿ. ಅವರ ನಟನೆ ನೋಡಿ ಕಲಿಯುವ ವಿಚಾರಗಳು ತುಂಬಾ ಇವೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!