K Annamalai Real Life Story: ಪ್ರಿಯ ವೀಕ್ಷಕರೇ ಕರ್ನಾಟಕದ ಸಿಂಗಂ ಎಂದೇ ಹೆಸರಾದ ಕುಪ್ಪುಸ್ವಾಮಿ ಅಣ್ಣಾಮಲೈ (K Annamalai) ಅಥವಾ K ಅಣ್ಣಾಮಲೈ ಅವರು ಲಕ್ಷಾಂತರ UPSC ಆಕಾಂಕ್ಷಿಗಳಿಗೆ ರೋಲ್ ಮಾಡಲ್ ಆಗಿದ್ದವರು. ಕೆಚ್ಚೆದೆಯ ಪ್ರಾಮಾಣಿಕ ಹಾಗೂ ಉತ್ತಮ ನಡತೆಯ ಅಧಿಕಾರಿಯಾಗಿದ್ದ ಶ್ರೀ ಅಣ್ಣಮಲೈ ಅವರ ಬಗ್ಗೆ ಈ ಒಂದು ಲೇಖನದಲ್ಲಿ ಇಂದು ಸಂಪೂರ್ಣವಾಗಿ ತಿಳಿದುಕೊಳ್ಳೋಣ.

ಅಣ್ಣಾಮಲೈರವರು (K Annamalai) 4 ಜೂನ್ 1984 ರಂದು ತಮಿಳುನಾಡಿನ ಕರೂರಿನ ಚಿನ್ನಾಥಪುರಂನ ಪಕ್ಕದ ಸೊಕ್ಕಂಪಟ್ಟಿಯಲ್ಲಿ ಒಂದು ರೈತ ಕುಟುಂಬದಲ್ಲಿ ಜನಿಸಿದರು. ಇವರ ತಂದೆಯ ಹೆಸರು ಕುಪ್ಪುಸ್ವಾಮಿ. ವೃತ್ತಿಯಲ್ಲಿ ರೈತರು. ಹಾಗೂ ತಾಯಿ ಪರಮೇಶ್ವರಿ.

ಅವರು ತಮ್ಮ ಆರಂಭಿಕ ಶಾಲಾ ಶಿಕ್ಷಣವನ್ನು ತಮಿಳುನಾಡಿನ ಕರೂರ್ (Karur, Tamilnadu) ನಲ್ಲಿ ಮುಗಿಸಿ, ನಂತರ ತಮಿಳುನಾಡಿನ ಕೊಯಿಮತ್ತೂರಿನಲ್ಲಿ PSG ಕಾಲೇಜ್ ಆಫೀಸ್ ಟೆಕ್ನಾಲಜಿ ಅಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ಮುಗಿಸುತ್ತಾರೆ. ಅದನ್ನು ಅನುಸರಿಸಿ, ಅಣ್ಣಾಮಲೈ ತನ್ನ ಮಾಸ್ಟರ್ ಆಫ್ ಬ್ಯುಸಿನೆಸ್ ಅಡ್ಮಿನಿಸ್ಟ್ರೇಷನ್ (MBA) ಅನ್ನು ಮಾರ್ಕೆಟಿಂಗ್ ಮತ್ತು ಸ್ಟ್ರಾಟಜಿಯಲ್ಲಿ ಪರಿಣತಿ ಪಡೆದರು ಮತ್ತು ಉತ್ತರ ಪ್ರದೇಶದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಲಕ್ನೋದಿಂದ (IIM ಲಕ್ನೋ) ಪದವಿ ಪಡೆದರು. ನಂತರ ಯುಪಿಎಸ್‌ಸಿಯಲ್ಲಿ ಉತೀರ್ಣರಾಗಿ ಪೋಲೀಸ್‌ ಸೇವೆಗೆ ಪ್ರವೇಶ ಪಡೆದರು

ಕರ್ನಾಟಕದ ಸಿಂಗಂ ಎಂದೇ ಜನಪ್ರಿಯರಾಗಿದ್ದ K ಅಣ್ಣಮಲೈ (K Annamalai) ಅವರು 2011ರಲ್ಲಿ ಭಾರತೀಯ ಪೊಲೀಸ ಸೇವೆಗೆ ಸೇರಿದರು. ಅವರು ೨೦೧೩ರ ಸೆಪ್ಟೆಂಬರ್‌ನಲ್ಲಿ ಕಾರ್ಕಳ ಉಪವಿಭಾಗದ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಉಡುಪಿ ಜಿಲ್ಲೆಯಲ್ಲಿ ಆರಂಭಿಸಿದರು. ನಂತರ ಅವರು ಜನವರಿ 1, 2015 ರಂದು ಅದೇ ಸ್ಥಳದಲ್ಲಿ ಪೊಲೀಸ್ ವರಿಷ್ಠಾಧಿಕಾರಿಯಾಗಿ ಬಡ್ತಿ ಪಡೆದರು ಮತ್ತು ಆಗಸ್ಟ್ 2016 ರವರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸಿದರು. ನಂತರ ಅವರನ್ನು ಕರ್ನಾಟಕದ ಚಿಕ್ಕಮಗಳೂರು ಜಿಲ್ಲೆಗೆ ವರ್ಗಾಯಿಸಲಾಯಿತು ಮತ್ತು ಜಿಲ್ಲಾ ಮುಖ್ಯ ಪೊಲೀಸ್ ವರಿಷ್ಠಾಧಿಕಾರಿಯಾಗಿ ಅಕ್ಟೋಬರ್ ೨೦೧೮ ರವರೆಗೆ ಮುಂದುವರೆಯಲಾಯಿತು.2018 ರಲ್ಲಿ ಅವರನ್ನು ಬೆಂಗಳೂರು ದಕ್ಷಿಣ ಪೊಲೀಸ್ ಉಪ ಆಯುಕ್ತರಾಗಿ ಬಡ್ತಿ ನೀಡಲಾಯಿತು.

2019ರಲ್ಲಿ ಅವರು ತಮ್ಮ ಪೊಲೀಸ್ (Police) ಹುದ್ದೆಗೆ ರಾಜೀನಾಮೆ ನೀಡಿದರು. ನಂತರ ಅವರು ತಮ್ಮ ತವರು ರಾಜ್ಯ ತಮಿಳುನಾಡಿಗೆ ಮರಳಿದರು. ಅವರು ನೈಸರ್ಗಿಕ ಕೃಷಿಯಲ್ಲಿ ಆಸಕ್ತಿ ಹೊಂದಿದ್ದರು ಮತ್ತು ಸಂಬಂಧಿತ ಕೆಲಸದಲ್ಲಿ ತೊಡಗಿದ್ದರು. ಬಳಿಕ, ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್) ಸಿದ್ಧಾಂತದಿಂದ ಸ್ಫೂರ್ತಿ ಪಡೆದು ರಾಜಕೀಯ ಪಕ್ಷವಾದ ಭಾರತೀಯ ಜನತಾ ಪಕ್ಷದ ಸದಸ್ಯರಾದರು

ಅವರು ತಮಿಳುನಾಡು 2021 ವಿಧಾನಸಭಾ ಚುನಾವಣೆಯಲ್ಲಿ ಅರವಕುರಿಚಿ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದರು ಮತ್ತು ಕಡಿಮೆ ಅಂತರದಿಂದ ಸೋತರು. ತಮಿಳು ನಾಡು ಬಾರತೀಯ ಜನತಾ ಪಕ್ಷದ ತಮಿಳುನಾಡು ರಾಜ್ಯ ಘಟಕದ ಅಧ್ಯಕ್ಷರಾಗಿದ್ದ ಎಲ್. ಮುರುಗನ್ ಕೇಂದ್ರ ಸಚಿವರಾದ ನಂತರ, ತೆರವಾದ ಸ್ಥಾನಕ್ಕೆ ಅಣ್ಣಾಮಲೈ ಅವರನ್ನು ಅಧ್ಯಕ್ಷರಾಗಿ ನೇಮಿಸಲಾಯ್ತು

ಕೆ ಅಣ್ಣಮಲೈ (K Annamalai) ಅವರು ನಾಯಕರಷ್ಟೇ ಅಲ್ಲದೆ ಒಬ್ಬ ನಿಪುಣೆ ಲೇಖಕ ಮತ್ತು ಉತ್ತಮ ವಾಗ್ಮಿ ಸಹ ಹೌದು. ಅವರು ಕಾಕಿಯನ್ನು ಮೀರಿ ಹೆಜ್ಜೆ ಹಾಕುವ’ ಎಂಬ ಪುಸ್ತಕದ ಲೇಖಕರು. ವೀಕ್ಷಕರಿಗೆ ಅಣ್ಣಮಲೈ ಎಂಬುವವರು ಕೇವಲ ಒಂಬತ್ತು ವರ್ಷಗಳ ಸೇವೆಯನ್ನು ಸಲ್ಲಿಸಿದರು ಸಹ ನಿಷ್ಠೆ, ಪ್ರಾಮಾಣಿಕ ಮತ್ತು ದಕ್ಷತೆಯಿಂದ ಸೇವೆ ಸಲ್ಲಿಸಿದರು. ಹೊರರಾಜ್ಯದಿಂದ ಬಂದವರು ಆದರೂ ಸಹ, ಅವರು ನಾನು ಒಬ್ಬ ಕನ್ನಡಿಗ ಎಂದು ಗರ್ವದಿಂದ ಹೇಳಿಕೊಂಡ ಅತ್ಯಂತ ಪ್ರಭಾವಿ ವ್ಯಕ್ತಿ.

ಇದನ್ನೂ ಓದಿ..ಸತತ 5 ಬಾರಿ MLA ಆದ್ರೂ ಸೈಕಲ್ನಲ್ಲೆ ಓಡಾಟ, ಹಳೆಯ ಚಿಕ್ಕ ಮನೆಯಲ್ಲೇ ವಾಸ

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!