10ನೇ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಇದು ಒಂದು ಸುವರ್ಣ ಅವಕಾಶ ಸರ್ಕಾರಿ ನೌಕರಿ ಪಡೆಯುವುದಕ್ಕೆ. ಎಸ್ ಎಸ್ ಎಲ್ ಸಿ. ಓದಿರುವ ಜನರಿಗೆ ಯಾವುದೇ ರೀತಿಯ ಪರೀಕ್ಷೆ ಇರುವುದಿಲ್ಲ. ಆದರೆ ಪಿಯುಸಿ ಓದಿರುವ ಜನರಿಗೆ ಲಿಖಿತ ಪರೀಕ್ಷೆ ಇರುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನ್ಯಾಯಾಲಯದಲ್ಲಿ ಎರಡು ರೀತಿಯ ಕೆಲಸಕ್ಕೆ ಅರ್ಜಿಗೆ ಅಹ್ವಾನ ಮಾಡಲಾಗಿದೆ. ಒಂದು ಪ್ಯೂನ್ ಪೋಸ್ಟ್ ಎಸ್ ಎಸ್ ಎಲ್ ಸಿ. ಪಾಸಾದವರಿಗೆ, ಇನ್ನೊಂದು ಟೈಪಿಸ್ಟ್ ಪೋಸ್ಟ್ ಪಿಯುಸಿ ಪಾಸಾದವರಿಗೆ. ನೋಟಿಫಿಕೇಶನ್ ಬಿಡುಗಡೆ ಮಾಡಿ ಅರ್ಜಿಗೆ ಅಹ್ವಾನ ಮಾಡಲಾಗಿದೆ.
ವಿದ್ಯ ಅರ್ಹತೆ :- ಟೈಪಿಸ್ಟ್ ಹುದ್ದೆಗೆ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು ಅಥವಾ 3 ವರ್ಷ ಕಮರ್ಷಿಯಲ್ ಡಿಪ್ಲೊಮಾ ಪ್ರಾಕ್ಟಿಸ್ ಪರೀಕ್ಷೆಯಲ್ಲಿ ಪಾಸಾಗಿ ಇರಬೇಕು ಅಥವಾ ತತ್ಸಮಾನ ವಿದ್ಯ ಅರ್ಹತೆ. ಸಾರ್ವಜನಿಕ ಶಿಕ್ಷಣ ನಡೆಸುವ ಕನ್ನಡ ಮತ್ತು ಇಂಗ್ಲಿಷ್ ಬೆರಳಚ್ಚು ಮತ್ತು ಶೀಘ್ರ ಲಿಪಿಯ ಹಿರಿಯ ದರ್ಜೆ ಪರೀಕ್ಷೆಯಲ್ಲಿ ಪಾಸಾಗಿರಬೇಕು.ಇದರಲ್ಲಿ ಯಾವುದಾದರೂ ಒಂದು ವಿದ್ಯ ಅರ್ಹತೆ ಇದ್ದರೂ ಸಾಕು.
ಪ್ಯೂನ್ ಪೋಸ್ಟ್’ಗೆ 10ನೇ ತರಗತಿ ಪಾಸಗಿರಬೇಕು. ಕನ್ನಡ ಭಾಷೆಯನ್ನು ಕಡ್ಡಾಯವಾಗಿ ಓದಲು ಬರೆಯಲು ಬರಬೇಕು. ಎರಡು ಹುದ್ದೆಗಳ ಕನಿಷ್ಠ ವಯೋ ಮಿತಿ 18 ವರ್ಷ. ಇನ್ನು ಗರಿಷ್ಠ ವಯಸ್ಸು ಜನರಲ್ ಅಭ್ಯರ್ಥಿಗಳಿಗೆ 35 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 38 ವರ್ಷ ವಯಸ್ಸಿನ ಸಡಿಲಿಕೆ ಇದೆ ಮೀಸಲಾತಿ ಆಧಾರದ ಮೇಲೆ, ಪ. ಜಾತಿ / ಪ. ಪಂ, ಪ್ರ1 ಅಭ್ಯರ್ಥಿಗಳಿಗೆ 40 ವರ್ಷ.
ಅರ್ಜಿ ಸಲ್ಲಿಕೆ ಮಾಡುವ ಆರಂಭದ ದಿನಾಂಕ :- 16/02/2024.
ಅರ್ಜಿ ಸಲ್ಲಿಕೆ ಮಾಡುವ ಕೊನೆಯ ದಿನಾಂಕ :- 20/04/2024.
ಶುಲ್ಕ :-ಜನರಲ್ ಅಭ್ಯರ್ಥಿಗಳಿಗೆ ₹20೦, ಒಬಿಸಿ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ₹10೦, ಪ. ಜಾತಿ / ಪ. ಪಂ, ಪ್ರ1 ಅಭ್ಯರ್ಥಿಗಳಿಗೆ ಯಾವುದೇ ರೀತಿಯ ಶುಲ್ಕ ಇರುವುದಿಲ್ಲ.
ವೇತನ :-ಟೈಪಿಸ್ಟ್’ಗಳಿಗೆ ₹21,400 – ₹42,000 ರದವರೆಗೂ ವೇತನ ನೀಡಲಾಗುವುದು.
ಪ್ಯೂನ್ ಪೋಸ್ಟ್ ₹17,000 – ₹28,950 ರದವರೆಗೂ ವೇತನ ನೀಡಲಾಗುವುದು.
ಆಯ್ಕೆ ಪ್ರಕ್ರಿಯೆ :-ಪ್ಯುನ್ ಪೋಸ್ಟ್’ಗೆ 10ನೇ ತರಗತಿಯ ಅಂಕ ಪರಿಗಣಿಸಿ ಮೆರಿಟ್ ಲಿಸ್ಟ್ ಆಧಾರದ ಮೇಲೆ, ಶಾರ್ಟ್ ಲಿಸ್ಟ್ ಮಾಡಿ ಆಯ್ಕೆ ಪ್ರಕ್ರಿಯೆ ನಡೆಯುತ್ತದೆ. 10 ಅಂಕಗಳಿಗೆ ಸಾಮಾನ್ಯ ಜ್ಞಾನದ ಪ್ರಶ್ನೆ ಕೇಳುವರು ಮತ್ತು ನೇರ ಸಂದರ್ಶನದಲ್ಲಿ ಮೂಲಕ ಯಾರಿಗೆ ಹೆಚ್ಚು ಅಂಕ ಬರುವುದೋ ಅವರನ್ನು ಆಯ್ಕೆ ಮಾಡುವರು.
ಟೈಪಿಸ್ಟ್ ಪೋಸ್ಟ್’ಗೆ ಪಿಯುಸಿ ಅಥವಾ ತತ್ಸಮಾನ ಪರೀಕ್ಷೆಯ ಅಂಕಗಳನ್ನು ಪಡೆದು ಮೆರಿಟ್ ಲಿಸ್ಟ್ ಮಾಡುವರು. ಡಿಕ್ಟೇಷನ್ ಮಾಡಿ ಕನ್ನಡ ಮತ್ತು ಇಂಗ್ಲೀಷ್ ಬೆರಳಚ್ಚು ಪರೀಕ್ಷೆ ನಡೆಸುವರು ಅದು 100 ಅಂಕಕ್ಕೆ ಇರುತ್ತದೆ ಶೇಕಡ 50 ಅಂಕ ಗಳಿಸಲೇಬೇಕು.
ನೇಮಕಾತಿಯನ್ನು ನೇರ ಸಂದರ್ಶನ ಮಾಡಿ ಆಯ್ಕೆ ಮಾಡುವರು.
ಅರ್ಜಿ ಸಲ್ಲಿಕೆ ಮಾಡುವ ವಿಧಾನ :-ಈ ಅಫೀಷಿಯಲ್ ವೆಬ್ಸೈಟ್’ಗೆ ಭೇಟಿ ನೀಡಬೇಕು ಅದಕ್ಕೆ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ. https://bengalururural.dcourts.gov.in/online-recruitment ಈ ಲಿಂಕ್ ಬಳಕೆ ಮಾಡಿ ಹುದ್ದೆಗೆ ಅರ್ಜಿಯನ್ನು ಸಲ್ಲಿಕೆ ಮಾಡಬಹುದು. ಶುಲ್ಕವನ್ನು ಪಾವತಿ ಮಾಡಬಹುದು. ಎಲ್ಲಾ ರೀತಿಯ ಇತರೆ ಮಾಹಿತಿ ಈ ವೆಬ್ಸೈಟ್’ನಲ್ಲಿ ಸಿಗುತ್ತದೆ.