ಗ್ರಾಮ ಪಂಚಾಯತಿಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ದ್ವಿತೀಯ ಪಿಯುಸಿ ಉತ್ತೀರ್ಣರಾದವರು ಅರ್ಜಿ ಸಲ್ಲಿಸಬಹುದು. ಹಾಸನ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ನೇಮಕಾತಿ. ಅರ್ಜಿ ಸಲ್ಲಿಸುವ ಜನರು 22/04/2024 ಈ ದಿನಾಂಕದ ಒಳಗೆ ಕನಿಷ್ಠ 18 ವರ್ಷ ಪೂರೈಸಿರಬೇಕು.
ವಯೋಮಿತಿ :-ಸಾಮಾನ್ಯ ಅಭ್ಯರ್ಥಿಗಳಿಗೆ ಗರಿಷ್ಠ 35 ವರ್ಷ, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ ಗರಿಷ್ಠ 38 ವರ್ಷ, ಪ. ಜಾತಿ / ಪ. ಪಂ. / ಪ್ರ1 ಗರಿಷ್ಠ  40 ವರ್ಷ.

ವೇತನ :-ಆಯ್ಕೆಯಾದ ಅರ್ಹರಿಗೆ ಮಾಸಿಕ ₹15,196 ವೇತನ ನೀಡಲಾಗುವುದು
ಆಯ್ಕೆ ಮಾಡುವ ವಿಧಾನ :- ಶೈಕ್ಷಣಿಕ ಅರ್ಹತೆಯ ಮೆರಿಟ್ ಆಧಾರದ ಮೇಲೆ ಮತ್ತು ರೋಸ್ಟರ್ ಮೀಸಲಾತಿ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ಒಂದು ವೇಳೆ ಇಬ್ಬರು ಅಥವಾ ಹೆಚ್ಚಿನ ಅಭ್ಯರ್ಥಿಗಳು ಒಂದೇ ಅಂಕಗಳು ಹೊಂದಿದ್ದರೆ ವಯಸ್ಸಿನಲ್ಲಿ ಹಿರಿಯರಾದವರನ್ನು ಆಯ್ಕೆಗೆ ಪರಿಗಣಿಸಲಾಗುವುದು.

ಅರ್ಜಿ ಸಲ್ಲಿಕೆ ಮಾಡುವ ವಿಧಾನ :-ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಜಿಲ್ಲಾ ಪಂಚಾಯಿತಿ ಅಧಿಕೃತ ವೆಬ್’ಸೈಟ್ಗೆ ಭೇಟಿ ನೀಡಿ ಆನ್’ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು. ವೆಬ್ಸೈಟ್ ಲಿಂಕ್ : https://hassan.nic.in/en/notice/online-recruitment/

ಅರ್ಜಿ ಶುಲ್ಕ :-ಸಾಮಾನ್ಯ ಅಭ್ಯರ್ಥಿಗಳಿಗೆ – ₹500, 2ಎ, 2ಬಿ, 3ಎ, 3ಬಿ ಅಭ್ಯರ್ಥಿಗಳಿಗೆ – ₹300, ಪ. ಜಾತಿ / ಪ. ಪಂ. / ಪ್ರ1,  ಮಾಜಿ ಸೈನಿಕ ಅಭ್ಯರ್ಥಿಗಳಿಗೆ – ₹200, ಅಂಗವಿಕಲ ಅಭ್ಯರ್ಥಿಗಳಿಗೆ – ₹100.

ಶುಲ್ಕ ಪಾವತಿ ಮಾಡುವ ವಿಧಾನ :- ಮುಖ್ಯ ಲೆಕ್ಕಾಧಿಕಾರಿ, ಜಿಲ್ಲಾ ಪಂಚಾಯತ್ ಹಾಸನ ಇವರ ಬ್ಯಾಂಕ್ ಕಥೆಗೆ ಜಮಾ ಮಾಡಿ ಅಥವಾ ಆಧಿಸೂಚನೆಯಲ್ಲಿ ನೀಡಿರುವ QR ಕೋಡ್ ಸ್ಕ್ಯಾನ್ ಮಾಡಿ ಶುಲ್ಕ ಪಾವತಿ ಮಾಡಬಹುದು.

ಹುದ್ದೆಯ ಹೆಸರು : ಗ್ರಾಮ ಪಂಚಾಯಿತಿ ಗ್ರಂಥಾಲಯ ಮತ್ತು ಮಾಹಿತಿ ಕೇಂದ್ರಗಳ ಮೇಲ್ವಿಚಾರಕರು.
ಹುದ್ದೆಗಳ ಸಂಖ್ಯೆ : ಒಟ್ಟು 12 ಹುದ್ದೆಗಳಿಗೆ ಅರ್ಜಿ ಅಹ್ವಾನ ಮಾಡಲಾಗಿದೆ.
ಉದ್ಯೋಗ ಸ್ಥಳ : ಆಯ್ಕೆಯಾದ ಅರ್ಹ ವ್ಯಕ್ತಿಗಳು ಹಾಸನ ಜಿಲ್ಲೆಯ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ನಿರ್ವಹಿಸಬೇಕು.

ವಿದ್ಯ ಅರ್ಹತೆ : ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಇರಬೇಕು, ಸರ್ಟಿಫಿಕೇಟ್ ಕೋರ್ಸ್ ಇನ್ ಲೈಬ್ರರಿ ಸೈನ್ಸ್ ಪ್ರಮಾಣ ಪತ್ರ ಪಡೆದಿರಬೇಕು ಮತ್ತು ಕನಿಷ್ಠ 03 ತಿಂಗಳು ಕಂಪ್ಯೂಟರ್ ಕೋರ್ಸ್’ನಲ್ಲಿ ಉತ್ತೀರ್ಣರಾಗಿರಬೇಕು.

ಅರ್ಜಿ ಸಲ್ಲಿಕೆ ಮಾಡುವ ದಿನಾಂಕ :-
ಅರ್ಜಿ ಸಲ್ಲಿಕೆ ಮಾಡಲು ಆರಂಭದ ದಿನಾಂಕ : 22/02/2024.
ಅರ್ಜಿ ಸಲ್ಲಿಕೆ ಮಾಡಲು ಕೊನೆ ದಿನಾಂಕ : 22/03/2024.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅರ್ಹ ವ್ಯಕ್ತಿಗಳು ಸಂಬಂಧಪಟ್ಟ ಗ್ರಾಮ ಪಂಚಾಯಿತಿ ವ್ಯಪ್ತಿಯಲ್ಲಿ ನಿವಾಸ ಲಭ್ಯತೆ ಇಲ್ಲದೆ ಇದ್ದರೆ ಆಯಾ ತಾಲೂಕು ಪಂಚಾಯ್ತಿ ವ್ಯಾಪ್ತಿಯಲ್ಲಿ ಬೇರೆ ಗ್ರಾಮ ಪಂಚಾಯಿತಿಯ ಅಭ್ಯರ್ಥಿಗಳನ್ನು  ಆಯ್ಕೆಗೆ ಪರಿಗಣಿಸಲಾಗುವುದು.

Leave a Reply

Your email address will not be published. Required fields are marked *