ಸರ್ಕಾರ ಜನರಿಗೆ ಉಪಯೋಗವಾಗುವ ಹಲವು ಯೋಜನೆಗಳನ್ನು ಜಾರಿಗೆ ತರುತ್ತದೆ ಅದರಂತೆ ಎಲ್ಐಸಿ ಮಕ್ಕಳಿಗೆ ಒಂದು ನೂತನ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಪ್ರಯೋಜನಗಳು ಹಾಗೂ ಇನ್ನಿತರ ಸಂಪೂರ್ಣ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ಎಲ್ಐಸಿ ಚಿಕ್ಕಮಕ್ಕಳಿಗೆ ಜೀವನ್ ತರುಣ್ ಯೋಜನೆ ಎಂಬ ಹೊಸ ಯೋಜನೆಯನ್ನು ಜಾರಿಗೆ ತಂದಿದೆ. ಮಕ್ಕಳ ಶಿಕ್ಷಣ, ಮದುವೆ ಮುಂತಾದ ಪ್ರಮುಖ ಉದ್ದೇಶಗಳಿಗೆ ಹಣ ಸೇವ್ ಮಾಡಲು ಈ ಯೋಜನೆ ಸಹಾಯಕಾರಿಯಾಗಿದೆ. ಈ ಯೋಜನೆಗೆ ಮಗುವಿನ ವಯಸ್ಸು ಕನಿಷ್ಠ 90 ದಿನಗಳು, ಗರಿಷ್ಠ 12 ತಿಂಗಳು ಇರಬೇಕು. ಹಣ ಕಟ್ಟುವವರು ಪೇರೆಂಟ್ಸ್ ಆಗಿದ್ದು ಅವರಿಗೆ ಕನಿಷ್ಠ 18 ವರ್ಷ, ಗರಿಷ್ಠ 55 ವರ್ಷ ಆಗಿರಬೇಕು ಅವರು ತಮ್ಮ ಮಗುವಿಗೆ ಈ ಯೋಜನೆಯಲ್ಲಿ ಹಣ ಸೇವ್‌ ಮಾಡಬಹುದು. ಅಜ್ಜ, ಅಜ್ಜಿ ಸಹ ತಮ್ಮ ಮೊಮ್ಮಕ್ಕಳಿಗೆ ಈ ಯೋಜನೆಯಲ್ಲಿ ಅಪ್ಲೈ ಮಾಡಬಹುದು. ಈ ಯೋಜನೆಗೆ ಕೆಲವು ದಾಖಲಾತಿಗಳು ಬೇಕಾಗುತ್ತದೆ ಅವುಗಳೆಂದರೆ ಪೇರೆಂಟ್ಸ್ ಮತ್ತು ಮಗುವಿನ ಏಜ್ ಪ್ರೂಫ್, ಆಧಾರ ಕಾರ್ಡ್, ಇನಕಮ್ ಸರ್ಟಿಫಿಕೇಟ್, ಫೋಟೊ ಬೇಕಾಗುತ್ತದೆ.

ಎಲ್ಐಸಿ ಏಜೆಂಟ್ ಅಥವಾ ಆಫೀಸ್ ನಲ್ಲಿ ಪಾಲಿಸಿಯನ್ನು ಪರ್ಚೇಸ್ ಮಾಡಬೇಕಾಗುತ್ತದೆ. ಈ ಪಾಲಿಸಿಯನ್ನು ಪರ್ಚೇಸ್ ಮಾಡಿದ ನಂತರ ಮಗುವಿಗೆ 25 ವರ್ಷ ಆದಾಗ ಈ ಪಾಲಿಸಿ ಮೆಚ್ಯೂರಿಟಿ ಆಗುತ್ತದೆ. ಐದು ವರ್ಷದ ಮಗುವಿಗೆ ಪಾಲಿಸಿ ಮಾಡಿದರೆ 25 ವರ್ಷ ಆದಾಗ 25 ವರ್ಷದಲ್ಲಿ 5 ವರ್ಷವನ್ನು ಲೆಸ್ ಮಾಡುತ್ತಾರೆ ಆಗ 20ವರ್ಷ ಆಗುತ್ತದೆ, ಪ್ರೀಮಿಯಂ ಕಟ್ಟಲು ಐದು ವರ್ಷ ಲೆಸ್ ಮಾಡುತ್ತಾರೆ ಇದರಿಂದ 15 ವರ್ಷ ಪ್ರೀಮಿಯಂ ಕಟ್ಟಬೇಕು. ಈ ಪಾಲಿಸಿಯನ್ನು ಕನಿಷ್ಠ 75,000 ರೂ ಗೆ ಪರ್ಚೇಸ್ ಮಾಡಬಹುದು, ಗರಿಷ್ಟ ಎಷ್ಟು ಬೇಕಾದ್ರೂ ಮಾಡಬಹುದು. 1,90,000ರೂ ಒಳಗೆ ಪರ್ಚೇಸ್ ಮಾಡಿದರೆ ಯಾವುದೇ ಡಿಸ್ಕೌಂಟ್ ಇರುವುದಿಲ್ಲ, 2 ಲಕ್ಷದಿಂದ 4,90,000ರೂ ಒಳಗೆ ಪರ್ಚೇಸ್ ಮಾಡಿದರೆ 2% ಡಿಸ್ಕೌಂಟ್ ಇರುತ್ತದೆ, 5 ಲಕ್ಷಕ್ಕಿಂತ ಹೆಚ್ಚು ಪಾಲಿಸಿ ಪರ್ಚೇಸ್ ಮಾಡಿದರೆ 3% ಡಿಸ್ಕೌಂಟ್ ಇರುತ್ತದೆ. ಪ್ರೀಮಿಯಂ ವರ್ಷಕ್ಕೆ, ಅರ್ಧವರ್ಷ, ಕಾಲು ವರ್ಷ, ತಿಂಗಳಿಗೆ ಕಟ್ಟಬಹುದು. ವರ್ಷಕ್ಕೆ ಪ್ರೀಮಿಯಂ ಕಟ್ಟುವುದಾದರೆ 2%, ಅರ್ಧ ವರ್ಷಕ್ಕೆ ಪ್ರೀಮಿಯಂ ಕಟ್ಟಿದರೆ 1% ಡಿಸ್ಕೌಂಟ್ ಇರುತ್ತದೆ. ಪಾಲಿಸಿ ಪರ್ಚೇಸ್ ಮಾಡಿ ಸ್ವಲ್ಪ ವರ್ಷದ ನಂತರ ಪ್ರೀಮಿಯಂ ಕಟ್ಟದೆ ಇದ್ದರೆ ಪಾಲಿಸಿ ಲ್ಯಾಪ್ಸ್ ಆಗುತ್ತದೆ ಆಗ 2 ವರ್ಷದ ಒಳಗೆ ದಂಡವನ್ನು ತುಂಬಿ ಪ್ರೀಮಿಯಂ ಮತ್ತು ರಿಮೇನಿಂಗ್ ಬ್ಯಾಲೆನ್ಸ್ ಕಟ್ಟಿದರೆ ಪಾಲಿಸಿ ಮುಂದುವರೆಯುತ್ತದೆ.

ಪಾಲಿಸಿ ಪರ್ಚೇಸ್ ಮಾಡಲು ಎಲ್ಐಸಿ ಆಫೀಸ್ ಗೆ ಹೋದಾಗ ಒಂದು ಬಾಂಡ್ ಕೊಡುತ್ತಾರೆ ನಂತರ 15 ದಿನ ಸಮಯ ಕೊಡುತ್ತಾರೆ. 15 ದಿನದಲ್ಲಿ ಬೇಡವೆನಿಸಿದರೆ ಬಾಂಡ್ ವಾಪಸ್ ನೀಡಿ ಕಟ್ಟಿರುವ ಹಣವನ್ನು ವಾಪಸ್ ಪಡೆದು ಕ್ಯಾನ್ಸಲ್ ಮಾಡಿಕೊಳ್ಳಬಹುದು. ಕಟ್ಟುವ ಪ್ರೀಮಿಯಂ ಹತ್ತುವರ್ಷದ ಒಳಗಿದ್ದರೆ ಎರಡು ವರ್ಷದ ನಂತರ ಕ್ಯಾನ್ಸಲ್ ಮಾಡಿಕೊಳ್ಳಬೇಕು. ಒಂದುವೇಳೆ ಕಟ್ಟುವ ಪ್ರೀಮಿಯಂ ಹತ್ತು ವರ್ಷಕ್ಕಿಂತ ಹೆಚ್ಚಿದ್ದರೆ 3 ವರ್ಷದ ನಂತರ ಕ್ಯಾನ್ಸಲ್ ಮಾಡಿಕೊಳ್ಳಬಹುದು. ಈ ಯೋಜನೆಯಲ್ಲಿ ಟ್ಯಾಕ್ಸ್ ಫ್ರೀ ಇರುತ್ತದೆ. ಮಗುವಿಗೆ ವಯಸ್ಸು ಹೆಚ್ಚಿದ್ದರೆ ಪ್ರೀಮಿಯಂ ಹಣವನ್ನು ಹೆಚ್ಚು ತುಂಬಬೇಕು, ವಯಸ್ಸು ಕಡಿಮೆ ಇದ್ದರೆ ಕಡಿಮೆ ಹಣವನ್ನು ತುಂಬ ಬೇಕಾಗುತ್ತದೆ. ಪಾಲಿಸಿ ಮೆಚ್ಯೂರಿಟಿ ಆಗುವ ಮೊದಲು ಅವಶ್ಯವಾಗಿ ಹಣ ಬೇಕೆಂದರೆ ಮನಿ ಬ್ಯಾಕ್ ವ್ಯವಸ್ಥೆ ಇದೆ.

ಒಂದು ವರ್ಷದ ಮಗುವಿಗೆ 5 ಲಕ್ಷದ ಪಾಲಿಸಿ ಪರ್ಚೇಸ್ ಮಾಡಿದರೆ ಪಾಲಿಸಿ ಟರ್ಮ್ 24 ವರ್ಷ ಪ್ರೀಮಿಯಂ ಕಟ್ಟುವುದು ಕೇವಲ 19 ವರ್ಷ. ಆಪ್ಷನ್ 1 ಸೆಲೆಕ್ಟ್ ಮಾಡಿಕೊಂಡರೆ 22,499 ರೂ ಕಟ್ಟಬೇಕು, ಇವರಿಗೆ ಮನಿ ಬ್ಯಾಕ್ ಬರುವುದಿಲ್ಲ. ಮಗುವಿಗೆ 25 ವರ್ಷ ಆದಾಗ 12,51,000 ರೂ ಬರುತ್ತದೆ. ಆಪ್ಷನ್ 2 ಸೆಲೆಕ್ಟ್ ಮಾಡಿಕೊಂಡರೆ 5% ಮನಿ ಬ್ಯಾಕ್ ಇದೆ, 23,062ರೂ ಪ್ರೀಮಿಯಂ ಕಟ್ಟಬೇಕು, ಇವರಿಗೆ ಐದು ವರ್ಷ 25,000ರೂ ಮನಿ ಬ್ಯಾಕ್ ಬರುತ್ತದೆ, ಪಾಲಿಸಿ ಮೆಚ್ಯೂರಿಟಿ ಆದಾಗ 11,26,000ರೂ ಬರುತ್ತದೆ. ಆಪ್ಷನ್ 3 ಸೆಲೆಕ್ಟ್ ಮಾಡಿಕೊಂಡರೆ 10% ಮನಿ ಬ್ಯಾಕ್ ಇದೆ, ಇವರು 23,659ರೂ ಪ್ರೀಮಿಯಂ ಕಟ್ಟಬೇಕು, ಐದು ವರ್ಷ 50,000ರೂ ಬರುತ್ತದೆ, ಪಾಲಿಸಿ ಮೆಚ್ಯೂರಿಟಿ ಆದಾಗ 10,01,000ರೂ ಬರುತ್ತದೆ. ಆಪ್ಷನ್ 4 ಸೆಲೆಕ್ಟ್ ಮಾಡಿಕೊಂಡರೆ 15% ಮನಿ ಬ್ಯಾಕ್ ಬರುತ್ತದೆ, ಇವರು 24,189ರೂ ಪ್ರೀಮಿಯಂ ಕಟ್ಟಬೇಕು, ಐದು ವರ್ಷ 75,000ರೂ ಬರುತ್ತದೆ, ಮತ್ತು ಪೊಲಿಸಿ ಮೆಚ್ಯೂರಿಟಿ ಆದಾಗ 8,76,000ರೂ ಬರುತ್ತದೆ.

ಈ ಪಾಲಿಸಿಯಲ್ಲಿ ಪೇರೆಂಟ್ಸ್ ಹಣ ಕಟ್ಟುವುದರಿಂದ ಪೇರೆಂಟ್ಸ್ ಗೆ ಏನಾದರೂ ಆದರೆ ನೆಕ್ಸ್ಟ್ ಪ್ರೀಮಿಯಂ ಕಟ್ಟದೆ ಪಾಲಿಸಿ ಲ್ಯಾಪ್ಸ್ ಆಗುತ್ತದೆ ಆದ್ದರಿಂದ ಪಿಡಬ್ಲ್ಯೂಡಿ ರೈಡರ್ ಆಡ್ ಮಾಡಿಕೊಂಡರೆ ಪಾಲಿಸಿ ಲ್ಯಾಪ್ಸ್ ಆಗುವುದಿಲ್ಲ ಮತ್ತು ಮೆಚ್ಯೂರಿಟಿ ಹಣವು ಬರುತ್ತದೆ. ಮಗು ಸತ್ತರೆ ಸಹ ಮಗು 8 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನಲ್ಲಿ ಸತ್ತರೆ ತಕ್ಷಣ ಇನ್ಸೂರೆನ್ಸ್ ಕವರೇಜ್ ಪ್ರಾರಂಭವಾಗುತ್ತದೆ. ಮಗು 8 ವರ್ಷದ ಒಳಗಿದ್ದರೆ 2 ವರ್ಷದ ನಂತರ ಇನ್ಸೂರೆನ್ಸ್ ಕವರೇಜ್ ಪ್ರಾರಂಭವಾಗುತ್ತದೆ. ಪಾಲಿಸಿ ಪರ್ಚೇಸ್ ಮಾಡಿ 4-5 ತಿಂಗಳಿಗೆ ಮಗು ಸತ್ತರೆ ಕೊಟ್ಟಿರುವ ಹಣ ವಾಪಸ್ ಬರುತ್ತದೆ. ಡೆತ್ ಬೆನಿಫಿಟ್ ಎಂದು ಬೋನಸ್ ಸೇರಿಸಿ ಕೊಡುತ್ತಾರೆ. ಈ ಮಾಹಿತಿಯನ್ನು ತಪ್ಪದೆ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!