Jio Petrol Pump Dealership: ನಮ್ಮಲ್ಲಿ ಹಲವರಿಗೆ ಸ್ವಂತ ಬ್ಯುಸಿನೆಸ್ ಮಾಡುವ ಆಸೆ, ಒಳ್ಳೆಯ ಐಡಿಯಾ ಇದ್ದರು ಕೂಡ ಕಾರಣಾಂತರಗಳಿಂದ ಬ್ಯುಸಿನೆಸ್ ಮಾಡಲು ಸಾಧ್ಯ ಆಗಿರುವುದಿಲ್ಲ. ಇನ್ನು ಹಲವರಿಗೆ ಹೊಸ ಬ್ಯುಸಿನೆಸ್ ಶುರು ಮಾಡಲು ಹಣದ ಸಮಸ್ಯೆ ಇರುತ್ತದೆ. ಒಂದು ವೇಳೆ ನೀವು ಬ್ಯುಸಿನೆಸ್ ಮಾಡಬೇಕು ಅಂದುಕೊಂಡಿದ್ದರೆ, ಪೆಟ್ರೋಲ್ ಪಂಪ್ ಓಪನ್ ಮಾಡುವುದು ಒಳ್ಳೆಯ ಆಯ್ಕೆ ಎಂದು ಹೇಳಬಹುದು. ಏಕೆಂದರೆ ಈಗಿನ ಕಾಲದಲ್ಲಿ ವಾಹನಗಳ ಸಂಖ್ಯೆ ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿದೆ..
ಹಾಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಬಳಕೆ ಮಾಡುವವರ ಸಂಖ್ಯೆ ಹೆಚ್ಚುವುದರ ಜೊತೆಗೆ ಬೇಡಿಕೆ ಕೂಡ ಜಾಸ್ತಿ ಆಗುತ್ತಿದೆ. ಜೊತೆಗೆ ಆಟೋಮೋಟಿವ್ ಇಂಡಸ್ಟ್ರಿ ಜೊತೆಗೆ ಒಳ್ಳೆಯ ಸಂಬಂಧ ಕೂಡ ಇರುವುದರಿಂದ ಲಾಭ ಪಡೆಯುವ ಒಳ್ಳೆಯ ಬ್ಯುಸಿನೆಸ್ ಇದಾಗಿದ್ದು, ನೀವು ಕೂಡ ಶುರು ಮಾಡಬಹುದು. ಈ ಬ್ಯುಸಿನೆಸ್ ನಲ್ಲಿ ನೀವು ಮುಂದುವರಿಯಬೇಕು ಎಂದು ಅನ್ನಿಸಿದರೆ ರಿಲಯನ್ಸ್ ಜಿಯೋ ಪಂಪ್ ಇಂದ ನಿಮಗೆ ಉತ್ತಮವಾದ ಆಯ್ಕೆ ಸಿಗುತ್ತಿದೆ. ಈ ಬ್ಯುಸಿನೆಸ್ ಶುರು ಮಾಡಲು ಎಷ್ಟು ಬಂಡವಾಳ ಬೇಕು ಮತ್ತು ಇನ್ನಿತರ ಮಾಹಿತಿಯನ್ನು ತಿಳಿಸಿಕೊಡುತ್ತೇವೆ ನೋಡಿ.
ಇಂಡಿಯನ್ ಆಯಿಲ್ (IOCL), ಭಾರತ್ ಪೆಟ್ರೋಲಿಯಂ (BPCL), ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (HPCL ಈ ಎಲ್ಲಾ ಖ್ಯಾತ ಆಯ್ಲ್ ಸಂಸ್ಥೆಗಳ ಜೊತೆಗೆ ರಿಲಯನ್ಸ್ ಜಿಯೋ ವತಿಯಿಂದ ಪೆಟ್ರೋಲ್ ಪಂಪ್ ಡೀಲರ್ಶಿಪ್ ಪಡೆಯುವ ಅವಕಾಶ ಕೊಡುತ್ತಿದೆ. ಇದನ್ನು ಪಡೆಯಲು ನೀವು ಅರ್ಜಿ ಸಲ್ಲಿಸಬೇಕು, ಜಿಯೋ BP ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಿ, ನಿಮ್ಮ ಹೆಸರು, ಫೋನ್ ನಂಬರ್ ಇಮೇಲ್ ಐಡಿ ಸೇರಿದಂತೆ ಇನ್ನಿತರ ಮಾಹಿತಿ ನೀಡುವ ಮೂಲಕ ಅಪ್ಲಿಕೇಶನ್ ಹಾಕಬಹುದು.
Jio Petrol Pump Dealership
ಜಿಯೋ BP ಪೆಟ್ರೋಲ್ ಪಂಪ್ ಶುರು ಮಾಡಲು ಅಗತ್ಯವಿರುವ ಬಂಡವಾಳ ಎಷ್ಟು ಎಂದು ನೋಡುವುದಾದರೆ, ನಿಮ್ಮ ಬಳಿ ಇದಕ್ಕಾಗಿ 800 ಅಡಿ ಚದರಗಳಷ್ಟು ಭೂಮಿ ಇರಬೇಕು. ಇದಕ್ಕಾಗಿ 3 ಪಂಪ್ ಮ್ಯಾನೇಜರ್ ಅಗತ್ಯವಿರುತ್ತದೆ. ಜೊತೆಗೆ ರೆಸ್ಟ್ ರೂಮ್ ಕೂಡ ಇರಬೇಕು. ಪೆಟ್ರೋಲ್ ಪಂಪ್ ಶುರು ಮಾಡಲು 70 ಲಕ್ಷ ಶುಲ್ಕವನ್ನು ಶುರುವಿನಲ್ಲಿ ಪಾವತಿ ಮಾಡಬೇಕಾಗುತ್ತದೆ. ಪೆಟ್ರೋಲ್ ಪಂಪ್ ಪಾರ್ಟ್ನರ್ಶಿಪ್ ಮಾಡಲು ಇವರು ಏಜೆನ್ಟ್ ಗಳನ್ನು ಇಟ್ಟಿಲ್ಲ ಎಂದು ಅಧಿಕೃತವಾಗಿಯೇ ತಿಳಿಸಿದ್ದಾರೆ.
ಈ ರೀತಿಯಾಗಿ ಪೆಟ್ರೋಲ್ ಪಂಪ್ ಡೀಲರ್ಶಿಪ್ ನಿಮಗೆ ಸಿಕ್ಕು ನೀವು ಅದನ್ನು ಶುರು ಮಾಡಿದ ಬಳಿಕ, ನಿಮ್ಮ ಹಣಗಳಿಕೆ ಎಷ್ಟು ಪೆಟ್ರೋಲ್ ಮಾರಾಟ ಮಾಡುತ್ತೀರಿ ಎನ್ನುವುದರ ಮೇಲೆ ಅವಲಂಬಿಸಿರುತ್ತದೆ. ಕಮಿಷನ್ ಮೇಲೆ ನಿಮಗೆ ಆದಾಯ ಸಿಗಲಿದ್ದು, 1 ಲೀಟರ್ ಪೆಟ್ರೋಲ್ ಗೆ 2 ರಿಂದ 5 ರೂಪಾಯಿ ಕಮಿಷನ್ ಸಿಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ಮಾರಾಟ ಜಾಸ್ತಿಯಾದಷ್ಟು ನಿಮ್ಮ ಆದಾಯ ತಿಂಗಳಿಗೆ ಲಕ್ಷಕ್ಕಿಂತ ಹೆಚ್ಚಾಗಬಹುದು.
ರಿಲಯನ್ಸ್ ಜಿಯೋ ಪೆಟ್ರೋಲ್ ಪಂಪ್ ಡೀಲರ್ಶಿಪ್ ಗೆ
https://partners.jiobp.in/ ಈ ವೆಬ್ಸೈಟ್ ಗೆ ಭೇಟಿ ನೀಡುವ ಮೂಲಕ ಅಪ್ಲಿಕೇಶನ್ ಹಾಕಬಹುದು. ಈಗಿನ ಟ್ರೆಂಡ್ ನಲ್ಲಿ ಹೆಚ್ಚಿನ ಲಾಭ ತಂದುಕೊಡುವ ಬ್ಯುಸಿನೆಸ್ ಇದು, ದಿನದಿಂದ ದಿನಕ್ಕೆ ಪೆಟ್ರೋಲ್ ಡೀಸೆಲ್ ಬಳಕೆ ಹೆಚ್ಚಾಗಿದೆ, ಜೊತೆಗೆ ಬೇಡಿಕೆ ಕೂಡ ಜಾಸ್ತಿಯಾಗುತ್ತಿದೆ. ಹಾಗಾಗಿ ನೀವು ಉತ್ತಮವಾದ ಆದಾಯ ಗಳಿಸಲು ಬಯಸಿದರೆ, ಈ ಬ್ಯುಸಿನೆಸ್ ಶುರು ಮಾಡಬಹುದು. ಅರ್ಜಿ ಸಲ್ಲಿಸಿ ಜಿಯೋ ಜೊತೆಗೆ ಹೊಸ ಪ್ರಯಾಣ ಶುರು ಮಾಡಿ.
ಇದನ್ನೂ ಓದಿ Udyoga Mela 2023: ಅಕ್ಟೋಬರ್ 16ರಂದು ದಾವಣಗೆರೆಯಲ್ಲಿ ಬೃಹತ್ ಉದ್ಯೋಗಮೇಳ, ಆಸಕ್ತರು ಭಾಗವಹಿಸಿ