ಸರ್ಕಾರವು ಅನೇಕ ನೀತಿ ನಿಯಮಗಳನ್ನು ಜಾರಿಗೆ ತರುತ್ತದೆ. ಹಾಗೆಯೇ ಅದನ್ನು ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಕೂಡ ಮಾಡುತ್ತಾ ಹೋಗುತ್ತದೆ. ಅದರಲ್ಲೂ ನಮ್ಮ ಪ್ರಧಾನಮಂತ್ರಿ ಅದ ನರೇಂದ್ರ ಮೋದಿಯವರು ಪ್ರಧಾನಮಂತ್ರಿ ಹುದ್ದೆಗೆ ಬಂದ ಮೇಲೆ ಅನೇಕ ಬದಲಾವಣೆಗಳು ಆಗಿವೆ. ದುಡ್ಡಿನ ವಿಷಯದಲ್ಲಿ ಆಗಿರಬಹುದು ಹಾಗೆಯೇ ಎಲ್ಲಾ ರೀತಿಯ ಜನರಿಗೆ ಅನುಕೂಲ ಆಗುವಂತೆ ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಆದ್ದರಿಂದ ನಾವು ಇಲ್ಲಿ ಜನವರಿ ಒಂದರಿಂದ ಲೈಸನ್ಸ್ ಬಗ್ಗೆ ಹೊಸ ನಿಯಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.

ಈ ನಿಯಮವು ವಾಹನಗಳಿಗೆ ಸಂಬಂಧಿಸಿದೆ. ವಾಹನಗಳಿಗೆ ದಾಖಲಾತಿಯನ್ನು ವಾಹನ ಹೊಂದಿರುವ ಪ್ರತಿಯೊಬ್ಬ ಮನುಷ್ಯನೂ ಹೊಂದಿರುವುದು ಅತ್ಯವಶ್ಯಕ. ವಾಹನಗಳ ದಾಖಲಾತಿಗಳು ಡಿಸೆಂಬರ್ ತಿಂಗಳಿನ 31ರ ಒಳಗೆ ಅದರ ಅಂತಿಮ ದಿನಾಂಕವನ್ನು ಕಳೆದುಕೊಂಡಿದ್ದರೆ ಅದನ್ನು ರಿನಿವಲ್ ಮಾಡಿಸಬೇಕು. ದಾಖಲಾತಿಗಳು ಎಂದರೆ ಡಿ.ಎಲ್. ಮತ್ತು ಆರ್. ಸಿ. ಯನ್ನು ರಿನಿವಲ್ ಮಾಡಿಸಬೇಕು. ಇಲ್ಲವಾದಲ್ಲಿ ಅದಕ್ಕೆ ಸರಿಯಾದ ದಂಡವನ್ನು ತೆತ್ತಬೇಕಾಗುತ್ತದೆ.

ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕೇಂದ್ರ ಸರ್ಕಾರವು ಇದರ ದಿನಾಂಕವನ್ನು ಹಲವು ಬಾರಿ ವಿಸ್ತರಣೆ ಮಾಡಿದೆ. ಹಿಂದೆ ಮೇ ತಿಂಗಳಿನಿಂದ ಡಿಸೆಂಬರ್ ತಿಂಗಳಿನವರೆಗೆ ವಿಸ್ತರಣೆ ಮಾಡಿದೆ. ಆದರೆ ಈಗ ಲೈಸನ್ಸ್, ರಿಜಿಸ್ಟ್ರೇಷನ್ ಸರ್ಟಿಫಿಕೇಟ್, ಫಿಟ್ನೆಸ್ ಸರ್ಟಿಫಿಕೇಟ್ ಇದ್ದರೆ ಅಂತಿಮ ದಿನಾಂಕ ಮುಗಿದಿದ್ದರೆ ದಂಡವನ್ನು ಕಟ್ಟಬೇಕು. ಈ ಸಂದೇಶವನ್ನು ಕೇಂದ್ರ ಸರ್ಕಾರ ಮತ್ತು ಹೆದ್ದಾರಿ ಸಚಿವಾಲಯ ತಿಳಿಸಿದೆ. ಕಳೆದ ಒಂಭತ್ತು ತಿಂಗಳ ಹಿಂದೆ ದಾಖಲೆಗಳಿಗೆ ವಿನಾಯಿತಿಯನ್ನು ನೀಡಿದ್ದರು.

ಜನವರಿ ಒಂದರಿಂದ ಎಲ್ಲರಿಗೂ ಫಾಸ್ಟಾಕ್ ಕಡ್ಡಾಯವಾಗಿದೆ. ಇದನ್ನು ಎಲ್ಲಾ ರೀತಿಯ ನಾಲ್ಕು ಚಕ್ರ ಸೇರಿದಂತೆ ಎಲ್ಲಾ ವಾಹನಗಳಿಗೆ ಕಡ್ಡಾಯವೆಂದು ಕೇಂದ್ರ ಸಾರಿಗೆ ಸಚಿವರಾದ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ. ಇದರಿಂದ ಪ್ರಯಾಣಿಕರಿಗೆ ಬಹಳ ಸಹಾಯವಾಗುತ್ತದೆ. ಹಾಗೆಯೇ ಇದರಿಂದ ಇಂಧನ ಸಹ ಉಳಿಯುತ್ತದೆ. ಸಚಿವಾಲಯದಿಂದ ಫಾಸ್ಟಾಗ್ ಗಳ ಮೂಲಕ ಡಿಜಿಟಲ್ ಮತ್ತು ಐ.ಟಿ. ಆಧಾರಿತ ಶುಲ್ಕವನ್ನು ಪಾವತಿಸಲು ಅಧಿಸೂಚನೆ ಹೊರಡಿಸಿದ್ದರು. ಆದ್ದರಿಂದ ನಿಮ್ಮ ವಾಹನಗಳ ದಾಖಲೆಗಳನ್ನು ರಿನಿವಲ್ ಮಾಡಿಸಿಕೊಳ್ಳಿ. ಇಲ್ಲವಾದಲ್ಲಿ ದಂಡವನ್ನು ತೆರಬೇಕಾಗುತ್ತದೆ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!