ಸಾಧನೆ ಮಾಡಲು ವಯಸ್ಸಿನ ಮಿತಿ ಇರುವುದಿಲ್ಲ ಪ್ರತಿಯೊಬ್ಬರಿಗೂ ಸಾಧನೆ ಮಾಡುವ ಸಾಮರ್ಥ್ಯ ಇರುತ್ತದೆ. ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಯುವಕನೊಬ್ಬ ಎಲ್ಲರೂ ಹುಬ್ಬೇರಿಸುವಂತ ಸಾಧನೆ ಮಾಡಿದ್ದಾನೆ. ಅವನು ಮಾಡಿದ ಸಾಧನೆ ಯಾವುದು, ಅದಕ್ಕಾಗಿ ಅವನು ಪಟ್ಟ ಶ್ರಮದ ಬಗ್ಗೆ ಮಾಹಿತಿಯನ್ನು ಈ ಲೇಖನದ ಮೂಲಕ ತಿಳಿಯೋಣ.

ನಮ್ಮ ದೇಶದಲ್ಲಿ ಎಷ್ಟೋ ಮಂದಿ ಪ್ರತಿಭಾವಂತ ಯುವಕರು ಇದ್ದಾರೆ ಹಳ್ಳಿಗಳಲ್ಲೂ ಕೂಡ ಪ್ರತಿಭಾವಂತ ವಿದ್ಯಾರ್ಥಿಗಳು ಇದ್ದಾರೆ ಆದರೆ ಅವರು ಸೂಕ್ತ ಮಾರ್ಗದರ್ಶನದಿಂದ ವಂಚಿತರಾಗಿದ್ದಾರೆ. ಅವರಿಗೆ ಸರಿಯಾದ ಅವಕಾಶ ಮತ್ತು ಪ್ರೋತ್ಸಾಹ ದೊರೆತರೆ ತಮ್ಮ ಪ್ರತಿಭೆಯಿಂದ ಏನನ್ನಾದರೂ ಕೂಡ ಸಾಧಿಸುವ ಸಾಮರ್ಥ್ಯವನ್ನು ಪಡೆದುಕೊಂಡಿದ್ದಾರೆ.

ಸಾಮಾನ್ಯ ಕುಟುಂಬದಿಂದ ಬಂದ ಪ್ರತಿಭಾವಂತ ವಿದ್ಯಾರ್ಥಿಯು ಸಾಧನೆಯನ್ನು ಮಾಡಿದ್ದಾನೆ. ಆತ ತನ್ನ ಪ್ರತಿಭೆಯಿಂದ ಇಡೀ ವಿಶ್ವವೇ ಇಂದು ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಆ ಯುವಕ ರಾಜಸ್ಥಾನದ ದೌಸ ಜಿಲ್ಲೆಯ ಬಂಡಿಕೂಯಿ ಇಲಾಖೆಯ ಚಾಂದ ಬಾವಡಿ ಎನ್ನುವಲ್ಲಿ ವಾಸವಾಗಿದ್ದಾನೆ. ಯುವಕ ಚೇತ ರಾಮ್ ಚೀಚೆ ಈತನು ಐಟಿಐ ಡಿಗ್ರಿ ಪಡೆದಿದ್ದಾನೆ. ಕಾಲೇಜು ದಿನಗಳಲ್ಲಿ ಹೆಲಿಕಾಪ್ಟರ್ ಒಂದನ್ನು ಸಿದ್ಧಪಡಿಸಬೇಕು ಎನ್ನುವ ಕನಸನ್ನು ಕಟ್ಟಿಕೊಂಡಿದ್ದನು. ಅವನು ಈಗ ಆ ಕನಸನ್ನು ನನಸು ಮಾಡಿದ್ದಾನೆ.

ಈ ಸಾಧನೆ ಮಾಡಲು ಆತ ಬಹಳ ಶ್ರಮ ವಹಿಸಿದ್ದಾನೆ. ಚೇತಾರಾಮ್ ಒಂದು ವರ್ಷ ಕಠಿಣ ಶ್ರಮ ವಹಿಸಿ ಸುಮಾರು ಎಂಟು ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿ ಹೆಲಿಕಾಪ್ಟರ್ ಒಂದನ್ನು ಸಿದ್ಧಪಡಿಸಿದ್ದಾನೆ. ಅಲ್ಲದೇ ತನಗೆ ಸರ್ಕಾರದಿಂದ ಅನುಮತಿ ದೊರೆತರೆ ತಾನು ಸಿದ್ಧ ಪಡಿಸಿರುವ ಹೆಲಿಕಾಪ್ಟರನ್ನು 20 ಅಡಿಗಳ ಎತ್ತರದವರೆಗೆ ಹಾರಿಸಿ ತೋರಿಸುವುದಾಗಿ ಕೂಡಾ‌ ಹೇಳಿದ್ದಾನೆ. ಚೇತ ರಾಮ್ ತನ್ನ ಹೆಲಿಕಾಪ್ಟರ್ ವಿಷಯದ ಕುರಿತಾಗಿ ಮಾತನಾಡುತ್ತಾ ತನ್ನ ಈ ಕನಸನ್ನು ನನಸು ಮಾಡಲು ತನ್ನ ತಂದೆ ಬಹಳ ಸಹಕಾರ ಮತ್ತು ಪ್ರೋತ್ಸಾಹವನ್ನು ನೀಡಿದ್ದಾರೆ ಎಂದು ತಿಳಿಸಿದ್ದಾನೆ.

ಮೊದಲಿಗೆ ಚೇತಾ ರಾಮ್ ಹೆಲಿಕಾಪ್ಟರ್ ತಯಾರಿಸಲು ಬೈಕ್ ನ ಸಿಂಗಲ್ ಪೆಟ್ರೋಲ್ ಇಂಜಿನನ್ನು ಬಳಸಿದನು ಆದರೆ ಅದರಿಂದ ಪ್ರಯೋಜನ ಆಗಲಿಲ್ಲ ನಂತರ ಡೀಸೆಲ್ ಇಂಜಿನ್ ಬಳಸಿದ್ದಾನೆ. ಆಗಲೂ ಕೂಡಾ ಹೆಲಿಕಾಪ್ಟರ್ ನಲ್ಲಿ ಕಂಪನ ಉಂಟಾಯಿತು ಸಫಲತೆ ದೊರಕಲಿಲ್ಲ ನಂತರ ಆತ ಹೋಂಡಾ ಸಿಬಿಜೆಡ್ ಬೈಕ್ ನ ಎರಡು ಇಂಜಿನ್ ಗಳನ್ನು ಅಳವಡಿಸಿ ಹೆಲಿಕ್ಯಾಪ್ಟರ್ ನ ಆಕಾರವನ್ನು ಕೂಡ ಸ್ವಲ್ಪ ಬದಲಿಸಿದ ನಂತರ ಯಶಸ್ಸನ್ನು ಪಡೆದುಕೊಂಡಿದ್ದಾನೆ. ಚೇತಾ ರಾಮ್ ಸಿದ್ಧಪಡಿಸಿರುವ ಈ ಹೆಲಿಕಾಪ್ಟರ್ ಸದ್ಯಕ್ಕೆ ಎಲ್ಲರ ಗಮನವನ್ನು ಸೆಳೆಯುತ್ತಿದೆ. ಇಷ್ಟು ಚಿಕ್ಕ ವಯಸ್ಸಿಗೆ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಅವನ ಸಾಧನೆ ಬಹಳಷ್ಟು ಜನರಿಗೆ ಮಾದರಿಯಾಗಿದೆ. ಸಾಧನೆಗೆ ಸಾಧಿಸುವ ಛಲ ಮುಖ್ಯ ಎಂದು ಯುವಕ ತೋರಿಸಿಕೊಟ್ಟನು. ಈ ಮಾಹಿತಿಯನ್ನು ತಪ್ಪದೇ ಎಲ್ಲರಿಗೂ ತಿಳಿಸಿ.

WhatsApp Group Join Now
Telegram Group Join Now

Leave a Reply

Your email address will not be published. Required fields are marked *

error: Content is protected !!