ಅರ್ಜುನ್ ಸರ್ಜಾ ಅವರು ತಮ್ಮ ಬಾಲ್ಯದಿಂದಲೇ ಚಿತ್ರರಂಗದಲ್ಲಿ ಪ್ರವೇಶ ಮಾಡಿದರು. ಇವರು ಚಿಕ್ಕವರಿದ್ದಾಗಲೇ ಕರಾಟೆಯನ್ನು ಕಲಿತಿದ್ದರು. ಇವರು ಒಬ್ಬ ಅದ್ಭುತ ಕಲಾವಿದ ಎಂದು ಹೇಳಬಹುದು. ಹಾಗೆಯೇ ಇವರ ಶ್ರೀ ಮಂಜುನಾಥ ಸಿನೆಮಾ ಇವರ ನಟನೆಯಿಂದ ಬಹಳ ಚೆನ್ನಾಗಿ ಮೂಡಿ ಬಂದಿದೆ. ಅದರಲ್ಲಿ ಹಾಡುಗಳು ಬಹಳ ಚೆನ್ನಾಗಿ ಇವೆ. ಹಾಗೆಯೇ ಇವರಿಗೆ ಐಶ್ವರ್ಯ ಎನ್ನುವ ಮಗಳಿದ್ದಾಳೆ. ಆದ್ದರಿಂದ ನಾವು ಇಲ್ಲಿ ಅರ್ಜುನ್ ಸರ್ಜಾ ಅವರ ಮಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿಯೋಣ.
ಇವರು 1964ರಲ್ಲಿ ಆಗಸ್ಟ್15ರಂದು ಬೆಂಗಳೂರಿನಲ್ಲಿ ಜನಿಸಿದರು. ಇವರು ಮೂಲತಃ ಭಾರತೀಯರಾಗಿದ್ದಾರೆ. ಇವರಿಗೆ ಐಶ್ವರ್ಯ ಮತ್ತು ಅಂಜನಾ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರು ಪ್ರಸಿದ್ಧ ಕಲಾವಿದರಾದ ಶಕ್ತಿ ಪ್ರಸಾದ್ ರವರ ಮಗ. ಕನ್ನಡ ಚಿತ್ರರಂಗದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆತಮಿಳು ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. 2001ರಲ್ಲಿ ಇವರು ನಟಿಸಿದ ಶ್ರೀ ಮಂಜುನಾಥ ಸಿನೆಮಾ ಅದ್ಭುತವಾದ ಯಶಸ್ಸನ್ನು ಕಂಡಿತು.
ನಂತರದಲ್ಲಿ ತೆಲುಗು ಚಿತ್ರರಂಗದ ಕಡೆ ಸ್ವಲ್ಪ ಲಕ್ಷ್ಯ ವಹಿಸಿದರು. ತಮ್ಮ ಮಗಳು ಐಶ್ವರ್ಯ ಅವರನ್ನು ಪ್ರೇಮ ಬರಹ ಎಂಬ ಸಿನೆಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯ ಮಾಡಿದರು. ಈಗ ಅವರಿಗೆ 58ವರ್ಷ ಈಗಲೂ ಸಹ ಮೊದಲಿನ ದೇಹ ದಾರ್ಢ್ಯತೆಯನ್ನು ಉಳಿಸಿಕೊಂಡಿದ್ದಾರೆ.ಅರ್ಜುನ್ ಸರ್ಜಾ ಅವರಿಗೆ ಹೇಗಾದರೂ ಮಾಡಿ ಮಗಳನ್ನು ಕನ್ನಡದಲ್ಲಿ ನಟಿಯಾಗಿ ಮಾಡಬೇಕು ಎಂದು ಆಸೆ ಇತ್ತು. ಅದೇ ರೀತಿಯಾಗಿ ಅರ್ಜುನ್ ಸರ್ಜಾ ಅವರು ತಮ್ಮ ಮಗಳನ್ನು ಹಾಕಿಕೊಂಡು ಪ್ರೇಮಬರಹ ಎಂಬ ಸಿನಿಮಾವನ್ನು ಕೂಡ ಮಾಡುತ್ತಾರೆ.
ಈ ಸಿನಿಮಾಗೆ ನಿರ್ಮಾಪಕರಾಗಿ ಮತ್ತು ನಿರ್ದೇಶಕರಾಗಿ ಈ ಸಿನಿಮಾದ ಸಂಪೂರ್ಣ ಜವಾಬ್ದಾರಿಯನ್ನು ಅರ್ಜುನ್ ಸರ್ಜಾ ಅವರು ತೆಗೆದುಕೊಂಡರು. ಈ ಸಿನೆಮಾ ಐಶ್ವರ್ಯ ಅವರ ಮೊದಲ ಸಿನೆಮಾ ಆಗಿದೆ. ಇದರಲ್ಲಿ ಲಕ್ಷ್ಮೀಬಾರಮ್ಮ ಧಾರಾವಾಹಿ ಖ್ಯಾತಿಯ ಚಂದನ್ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಈ ಸಿನೆಮಾ ಯೋಧರ ಬಗ್ಗೆ ತಿಳಿಸುತ್ತದೆ. ಹಾಗೆಯೇ ನಟಿ ಐಶ್ವರ್ಯ ಅವರು ಕೂಡ ಬಹಳ ಅದ್ಭುತವಾಗಿ ತಮ್ಮ ನಟನೆಯನ್ನು ತೋರಿಸಿದ್ದಾರೆ ಎಂದು ಹೇಳಬಹುದು. ಹಾಗೆಯೇ ಇವರು ತಮ್ಮ ಚಿಕ್ಕ ವಯಸ್ಸಿನಲ್ಲಿ ಇರುವ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿದ್ದಾರೆ. ಅವುಗಳೆಲ್ಲ ಬಹಳ ಸುಂದರವಾಗಿ ಇವೆ.